For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿರುವ ಗರ್ಭಿಣಿಯರಿಗೆ ಸೂಕ್ತ ಸಲಹೆಗಳು

|

ತಾಯಿಯಾಗಲು ಹೊರಟಿರುವ ಸ್ತ್ರೀಯು ತನಗೆ ಸೂಕ್ತವಾದ ಆರೋಗ್ಯಕಾರಿ ಆಹಾರ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಆಕೆಯು ತನ್ನ ದೇಹಕ್ಕೆ ಅತ್ಯಗತ್ಯವಾದ ಪೋಷಕಾಂಶಗಳನ್ನು ಸೇವಿಸಬೇಕಾದುದು ಅತ್ಯಂತ ಮುಖ್ಯವಾದ ಅಂಶ. ಇದರ ಅರ್ಥ ತಾಯಿ ಏನು ಸೇವಿಸುತ್ತಾಳೊ ಅದನ್ನೆ ಮಗು ಸಹ ಪಡೆಯುತ್ತದೆ.

ಗರ್ಭಿಣಿ ಸ್ತ್ರೀಗೆ ಇನ್‍ಫೆಕ್ಷನ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದು ಆಕೆಯನ್ನು ಮತ್ತಷ್ಟು ಸೊರಗಿದಂತೆ ಕಾಣುವಂತೆ ಮಾಡುತ್ತದೆ. ಆಗಾಗ ಗರ್ಭಿಣಿ ಇರುವ ಸ್ಥಳವನ್ನು ಆದಷ್ಟು ಸ್ವಚ್ಛವಾಗಿಡಬೇಕು. ಆಕೆಯ ಸುತ್ತ ಒಂದು ನಿರ್ಮಲ ಮತ್ತು ನಿಶ್ಕಲ್ಮಷವಾದ ವಾತಾವರಣವನ್ನು ನಿರ್ಮಿಸಬೇಕಾದುದು ಅತ್ಯಾವಶ್ಯಕ. ನಿಮ್ಮ ಗರ್ಭಾವಧಿಯನ್ನು ಖುಷಿಯಿಂದ ಅನುಭವಿಸಿ. ನಿಮ್ಮ ಕುರಿತು ಉತ್ತಮ ಕಾಳಜಿಯನ್ನು ತೆಗೆದುಕೊಳ್ಳುವುದನ್ನು ಮರೆಯಬೇಡಿ.

ಹೆರಿಗೆಯ ನಂತರ ಶುಚಿತ್ವವನ್ನು ಕಾಪಾಡಿಕೊಳ್ಳುವುದು ಹೇಗೆ?

Top Useful Information About Pregnancy

ಇದರಲ್ಲಿ ತಾಯಿಯು ಮೊದಲ ಮೂರು ತಿಂಗಳು ಅತ್ಯಂತ ಜಾಗರೂಕತೆಯನ್ನು ತೆಗೆದುಕೊಳ್ಳಬೇಕಾದುದು ಅತ್ಯಾವಶ್ಯಕ. ಏಕೆಂದರೆ ಈ ಅವಧಿಯಲ್ಲಿ ಗರ್ಭಪಾತದ ಸಾಧ್ಯತೆ ಹೆಚ್ಚಿರುತ್ತದೆ. ಗರ್ಭಿಣಿಯಾಗಿರುವ ಸ್ತ್ರೀಯು ಮೊದಲ ಮೂರು ತಿಂಗಳು ಸಾಧ್ಯವಾದಷ್ಟು ವಿಶ್ರಾಂತಿಯನ್ನು ಪಡೆಯಬೇಕಾದುದು ಅತ್ಯಗತ್ಯ. ಈ ತಿಂಗಳುಗಳು ಗರ್ಭಾವಧಿಯಲ್ಲಿ ಅತ್ಯಂತ ಕಠಿಣ ಕಾಲವಾಗಿರುತ್ತದೆ. ಏಕೆಂದರೆ ಈ ಅವಧಿಯಲ್ಲಿ ಗರ್ಭಿಣಿಯ ದೇಹದಲ್ಲಿ ತೀವ್ರತರದ ಬದಲಾವಣೆಗಳು ಕಂಡುಬರುತ್ತವೆ.

ವ್ಯಾಯಾಮ
ತಾಯಿಯಾಗಲು ಹೊರಟಿರುವ ಸ್ತ್ರೀಯು ಪ್ರತಿದಿನವು ಅಗತ್ಯ ಪ್ರಮಾಣದ ವ್ಯಾಯಾಮವನ್ನು ಮಾಡಬೇಕು. ವ್ಯಾಯಾಮದಿಂದ ಹಲವಾರು ಪ್ರಯೋಜನಗಳಿವೆ. ಮೊದಲಿಗೆ ಮೊದಲ ಮೂರು ತಿಂಗಳು ನಿರಂತರ ವ್ಯಾಯಾಮ ಮಾಡುವುದರಿಂದ ಗರ್ಭಪಾತದ ಸಾಧ್ಯತೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಎರಡನೆಯದಾಗಿ ಗರ್ಭಾವಧಿಯಲ್ಲಿ ತಾಯಿಯ ದೇಹದ ತೂಕವು ಗಣನೀಯವಾಗಿ ಏರಿಕೆ ಕಾಣುತ್ತದೆ. ವ್ಯಾಯಾಮ ಮಾಡುವುದರಿಂದ ಆಕೆಯು ತೂಕವನ್ನು ಹತೋಟಿಯಲ್ಲಿಡಬಹುದು.

ಧೂಮಪಾನ ಮತ್ತು ಮಧ್ಯಪಾನದಿಂದ ದೂರವಿರಿ
ಗರ್ಭಿಣಿಯು ಧೂಮಪಾನವನ್ನು ಅಥವಾ ಮಧ್ಯಪಾನವನ್ನು ಸೇವಿಸುವುದರಿಂದ ದೂರವಿರಬೇಕು. ಈ ಎರಡು ಅಂಶಗಳು ಮಗುವಿಗೆ ತೀವ್ರತರದ ಹಾನಿಯನ್ನುಂಟು ಮಾಡುತ್ತವೆ. ಒಂದು ವೇಳೆ ತಾಯಿಯು ಮಧ್ಯಪಾನ ಸೇವಿಸಿದರೆ, ಮಗುವು ಇದರಿಂದ ಅತಿ ಅಪಾಯವನ್ನು ಎದುರಿಸಬೇಕಾಗುತ್ತದೆ. ಮಧ್ಯಪಾನವು ಹುಟ್ಟುವ ಮಗುವಲ್ಲಿ ಹಲವಾರು ನ್ಯೂನತೆಗಳನ್ನು ಉಂಟು ಮಾಡುತ್ತದೆ. ಹಾಗಾಗಿ ತಾಯಿಯು ತಾನು ಸೇವಿಸುವ ಅಂಶಗಳ ಬಗ್ಗೆ ಅತಿ ಜಾಗರೂಕಳಾಗಿರಬೇಕಾದುದು ಅತ್ಯಾವಶ್ಯಕ.

ಗರ್ಭಾವಸ್ಥೆಯಲ್ಲಿ ಮಹಿಳೆ ಮಾಡುವ 5 ಸಾಮಾನ್ಯ ತಪ್ಪುಗಳು

ತಾಯ್ತನದ ಬಗ್ಗೆ ನಿಮ್ಮವರ ಬಳಿ ಮಾತನಾಡಿ
ನಿಮಗೆ ನಿಮ್ಮ ವಯಸ್ಸಿನ ಸ್ನೇಹಿತರಿದ್ದರೆ ಅಥವಾ ಸಂಬಂಧಿಕರಿದ್ದರೆ ಅವರ ಜೊತೆಗೆ ನೀವು ತಾಯಿಯಾಗತ್ತಿರುವ ಕುರಿತು ಮಾತನಾಡಿ. ಅವರ ಅನುಭವವನ್ನು ಕೇಳಿ ಮತ್ತು ಅವರಿಂದ ಮಾಹಿತಿ ಪಡೆಯಿರಿ. ನೀವು ಒಮ್ಮೆ ತಾಯಿಯಾಗಿರುವುವರಿಂದ ಮಾಹಿತಿ ಪಡೆದರೆ ಅದರಿಂದ ನಿಮಗೆ ನೆಮ್ಮದಿ ಮತ್ತು ಙ್ಞಾನ ಎರಡು ದೊರೆಯುತ್ತದೆ. ಆಗ ನಿಮಗೆ ಗೊತ್ತಿಲ್ಲದಿರುವ ಹಲವು ಮಾಹಿತಿಗಳು ದೊರೆಯುವ ಸಾಧ್ಯತೆ ಇದೆ.

ಔಷಧಿಗಳನ್ನು ತೆಗೆದುಕೊಳ್ಳಬೇಡಿ
ನಿಮಗೆ ವಾಂತಿ ಮತ್ತು ಆಯಾಸವ ಇತ್ಯಾದಿಗಳು ಆಗುತ್ತಿದ್ದರೆ ಔಷಧಿಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ. ಒಂದು ವೇಳೆ ನಿಮಗೆ ಔಷಧಿಯು ತೀರ ಅಗತ್ಯವಿದ್ದಲ್ಲಿ ಪ್ರಕೃತಿದತ್ತ ಔಷಧಿಗಳನ್ನು ಉಪಯೋಗಿಸಿ. ಅಲ್ಲದೆ ಇಂತಹ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಲು ಮರೆಯಬೇಡಿ

ಎತ್ತರವಾದ ತಲೆದಿಂಬುಗಳನ್ನು ಬಳಸಿ
ಗರ್ಭಿಣಿಯು ಮಲಗಲು ಸ್ವಲ್ಪ ಎತ್ತರವಾದ ತಲೆದಿಂಬನ್ನು ಬಳಸಬೇಕು. ಒಂದೊಮ್ಮೆ ಸಾಧ್ಯವಾದರೆ ಗರ್ಭಿಣಿಯು ಸ್ತ್ರೀ ಗರ್ಭಿಣಿಯರಿಗಾಗಿಯೇ ವಿಶೇಷವಾಗಿ ರೂಪಿಸಲ್ಪಟ್ಟ ಹಾಸಿಗೆಯನ್ನು ಬಳಸುವುದು ಸೂಕ್ತ. ಇದು ಸಾಧ್ಯವಾಗದಿದ್ದ ಪಕ್ಷದಲ್ಲಿ ಆಕೆಯು ತನ್ನ ತಲೆದಿಂಬನ್ನು ಸ್ವಲ್ಪಮಟ್ಟಿಗೆ ಏರಿಸುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಆಕೆಗೆ ಸ್ವಲ್ಪ ಆರಾಮ ದೊರೆಯುತ್ತದೆ.

ಒಳ್ಳೆಯ ಪುಸ್ತಕಗಳನ್ನು ಓದಿ
ತಾಯಿಯಾಗುವ ಕನಸು ಕಾಣುತ್ತಿರುವ ಸ್ತ್ರೀಯು ಒಳ್ಳೆಯ ಮತ್ತು ಸಕಾರಾತ್ಮಕ ಮನೋಭಾವವನ್ನು ಬೆಳೆಸುವ ಪುಸ್ತಕಗಳನ್ನು ಓದಬೇಕು. ಒಂದು ವೇಳೆ ನೀವು ಹೆಚ್ಚಾಗಿ ಪುಸ್ತಕಗಳನ್ನು ಓದುತ್ತಿದ್ದಲ್ಲಿ ವಿಷಾದದಿಂದ ಕೂಡಿದ ಮತ್ತು ಖಿನ್ನತೆಯನ್ನುಂಟು ಮಾಡುವ ಪುಸ್ತಕಗಳನ್ನು ಓದಬೇಡಿ.
ಮಕ್ಕಳ ಜನನ ಮತ್ತು ಬೆಳವಣಿಗೆಯ ಕುರಿತಾದ ಪುಸ್ತಕಗಳನ್ನು ಓದಿ. ಅಲ್ಲದೆ ನೀವು ಗರ್ಭಿಣಿಯರು ಓದಲು ಇರುವ ಹಲವಾರು ಪುಸ್ತಕಗಳನ್ನು ಓದಬಹುದು. ಇದರಿಂದ ನಿಮಗೆ ಗೊತ್ತಿಲ್ಲದ ಅನೇಕ ಮಾಹಿತಿ ಮತ್ತು ಜ್ಞಾನ ದೊರೆಯುತ್ತದೆ.

English summary

Top Useful Information About Pregnancy

A woman who is pregnant is advised to take the maximum rest in the first three months of her pregnancy. Those are probably the most difficult months of her pregnancy as her body undergoes many changes.
Story first published: Thursday, July 31, 2014, 17:53 [IST]
X
Desktop Bottom Promotion