For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಕಾಣುವ ಕೀಲು ನೋವಿಗೆ 7 ಕಾರಣಗಳು.

By Viswanath S
|

ಈ ವಿಷಯ ನಿಜಕ್ಕೂ ಅದೆಷ್ಟು ಗಂಭೀರ! ಓರ್ವ ಮಹಿಳೆಯ ಜೀವಮಾನದಲ್ಲಿ ಗರ್ಭಧಾರಣೆಯಾಗುವುದು ಒಂದು ರೋಮಾಂಚಕಾರಿ ಹಂತ ಮತ್ತು ಆ ಸಮಯದಲ್ಲಿ ಅವಳಿಗೆ ಅನೇಕ ಹೊಸ ಹೊಸ ವಿಷಯಗಳ ಅನುಭವಗಳಾಗುತ್ತವೆ. ಆದರೆ ಅದೇ ಸಮಯದಲ್ಲಿ ಮತ್ತೊಂದು ದುರಾದೃಷ್ಟ ಸಂಗತಿಗಳಲ್ಲಿ ಮಹಿಳೆಗೆ ಮುಜುಗರ ಮತ್ತು ಅಸ್ವಸ್ಥತೆ ಉಂಟಾಗುವುದು. ಇಂತಹ ತೊಂದರೆಗಳಲ್ಲಿ ಕೀಲು ನೋವು ಕೂಡ ಒಂದು. ಕೀಲುನೋವು ಗರ್ಭಧರಿಸಿರುವ ಮಹಿಳೆಯರಲ್ಲಿ ಒಂದು ಅತ್ಯಂತ ಸಾಮಾನ್ಯ ದೂರು.

ಗರ್ಭಧಾರಣೆಯ ಸಮಯದಲ್ಲಿ ಬೆನ್ನು ನೋವು ಬರುತ್ತದೆಯೆಂದು ನಮಗನಿಸಿದರೂ ದೇಹದ ಇತರ ಭಾಗಗಳಲ್ಲಿಯೂ ಕೂಡ ನೋವಿನ ಅನುಭವವಾಗುತ್ತದೆ, ಮಹಿಳೆಗೆ ಕೆಲವು ಕೀಲುಗಳಲ್ಲಿ, ಅಂದರೆ ಮೊಣಕೈ, ಬೆರಳುಗಳು, ಮಂಡಿಗಳು, ಸೊಂಟ ಮತ್ತು ಕಣಕಾಲುಗಳಲ್ಲಿ ನೋವು ಮತ್ತು ಬಿಗಿತದ ಅನುಭವವಾಗುತ್ತದೆ.

ಪ್ರತಿ ಮಹಿಳೆಯ ಆರೋಗ್ಯದ ಸ್ಥಿತಿಯನ್ನು ಅವಲಂಬಿಸಿ ಕೀಲುನೋವು ಬರಲು ಭಿನ್ನ ಭಿನ್ನ ಕಾರಣಗಳಿರುತ್ತವೆ. ಆದರೂ ಸಹ ಗರ್ಭಧಾರಣೆಯಾದಾಗ ಕೆಲವು ಸಾಮಾನ್ಯ ಕೀಲುನೋವುಗಳು ಒಟ್ಟಾರೆ ದೈಹಿಕ ಸ್ಥಿತಿಗೆ ಅನುಗುಣವಾಗಿ ಬರುತ್ತವೆ. ದೇಹದ ತೂಕ ಬದಲಾವಣೆ ಮತ್ತು ತೂಕವು ಕೆಲಭಾಗದಲ್ಲಿ ಮಾತ್ರ ಹೆಚ್ಚಾಗುವುದರಿಂದಲೂ ಕೀಲುನೋವು ಬರಲು ಕಾರಣಗಳಲ್ಲಿ ಒಂದು ಮುಖ್ಯ ಕಾರಣವಾದರೆ, ಹಾರ್ಮೋನ್ ಬದಲಾವಣೆಗಳಿಂದ ಕೂಡ ಈ ಕಾರಣಗಳಿಗೆ ಸೇರಬಹುದು. ಇಲ್ಲಿ ನೀವು ಗರ್ಭಧಾರಣೆಯಾಗಿದ್ದಾಗ ಕೆಲವು ಸಾಮಾನ್ಯ ನೋವುಗಳ ಕಾರಣಗಳನ್ನು ವಿಮರ್ಶಿಸಿದ್ದೇವೆ ಹಾಗೂ ನೀವು ಅನುಭವಿಸಬಹುದಾದ ನೋವುಗಳ ಬಗ್ಗೆ ಗುರುತಿಸಲು ಸಹಾಯವಾಗಬಹುದು.

Top 7 Reasons For Joint Pain During Pregnancy

ಗರ್ಭಾವಸ್ಥೆಯಲ್ಲಿ ಒತ್ತಡ ನಿಯಂತ್ರಣ ಕೆಲ ಟಿಪ್ಸ್

ತೂಕ ಹೆಚ್ಚಾಗುವುದು:
ಗರ್ಭಧಾರಣೆಯಾದಾಗ ಕೀಲುನೋವು ಬರುವುದಕ್ಕೆ ದೇಹದ ತೂಕ ಹೆಚ್ಚಾಗುವುದು ಒಂದು ಮುಖ್ಯಕಾರಣ. ತೂಕ ಹೆಚ್ಚಾದಾಗ ಮೈಭಾರವನ್ನು ಸಹಿಸಬೇಕಾಗಿರುವುದರಿಂದ ಸೊಂಟ, ಮಂಡಿಗಳು ಮತ್ತು ಕಣಕಾಲುಗಳಲ್ಲಿ ಕೀಲುನೋವು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ.

ದೇಹದಲ್ಲಿ ನೀರು(ದ್ರವ) ಸೇರುವುದು:
ಗರ್ಭಾವಸ್ಥೆಯಲ್ಲಿ ದೇಹದಲ್ಲಿ ನೀರಿನಾಂಶ ಹೆಚ್ಚಾಗುವುದು ಕೀಲುನೋವಿಗೆ ಕಾರಣವಾಗುತ್ತದೆ. ಇದರಿಂದ ಸಾಮಾನ್ಯವಾಗಿ ಮುಂಗೈಮಣಿಕಟ್ಟಿನ ಮೇಲೆ ಹೆಚ್ಚು ಒತ್ತಡವಿರುವುರಿಂದ ಪರಿಣಾಮಬೀರುವುದು. ಹಾಗೆಯೇ ಇದೇ ಕಾರಣದಿಂದ ಕೈಗಳಿಗೂ ನೋವು ವಿಸ್ತರಿಸಬಹುದು.

ಮಲಗುವ ಭಂಗಿ:
ನಿಮ್ಮ ದೇಹದಲ್ಲಾಗುವ ಬದಲಾವಣೆಗಳಿಗೆ ಸಂಬಂಧವಿಲ್ಲದ ಕೆಲವು ಅಂಶಗಳಲ್ಲಿ ನೀವು ಮಲಗುವ ಭಂಗಿಯಿಂದಲೂ ಕೂಡ ಕೀಲುನೋವಿಗೆ ಕಾರಣವಾಗುತ್ತದೆ. ನೀವು ಇಡೀ ರಾತ್ರಿ ಎಡಮಗ್ಗುಲಲ್ಲಿ ಮಲಗುವುದರಿಂದ ಸಹಜವಾಗಿ ಸೊಂಟದಲ್ಲಿ ನೋವು ಮತ್ತು ಜೋಮುನಿಂದ ಎದ್ದೇಳುತ್ತೀರಿ.

ಥೈರಾಯ್ಡ್:
ಗರ್ಭಾವಸ್ಥೆಯ ಆರಂಭದಲ್ಲಿ ಥೈರಾಯ್ಡ್ (ಹೈಪೋಥೈರಾಯಿಡಿಸಂ) ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತೊಂದು ಮುಖ್ಯವಾದ ಅಂಶ. ಇದೂ ಕೂಡ ಗರ್ಭಿಣಿಯರಲ್ಲಿ ಕೀಲುನೋವು ಕಾಣಿಸಿಕೊಳ್ಳಲು ಗೊತ್ತಿರುವ ಕಾರಣ.

ಗರ್ಭಾವಸ್ಥೆಯಲ್ಲಿ ನಿಪ್ಪಲ್ ಆರೈಕೆ ಮಾಡಲು ಟಿಪ್ಸ್

ಹಾರ್ಮೋನ್ ಬದಲಾವಣೆ:
ಗರ್ಭಾವಸ್ಥೆಯಲ್ಲಿ ಶ್ರೋಣಿಯ (ಪೆಲ್ವಿಕ್) ಅಸ್ತಿರಜ್ಜುಗಳು (ಲಿಗಮೆಂಟ್ಸ್) ಮತ್ತು ಸ್ನಾಯುಗಳು ಸಡಿಲಗೊಳ್ಳಲು ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಆದರೆ ಇದರ ಜೊತೆಗೆ ಇತರ ಅಸ್ತಿರಜ್ಜುಗಳು ಮತ್ತು ಮಂಡಿಯಸುತ್ತ ಇರುವ ಸ್ನಾಯುಗಳೂ ಕೂಡ ಸಡಿಲವಾಗಿ ಮಂಡಿನೋವಿಗೆ ಕಾರಣವಾಗುತ್ತದೆ.

ಉದ್ಯೋಗಕ್ಕೆ ಸಂಬಂಧಪಟ್ಟ ಅಂಶಗಳು:
ಇತ್ತೀಚಿನದಿನಗಳಲ್ಲಿ ಮಹಿಳೆಯರು ಗರ್ಭಿಣಿಯಾಗಿ ಒಂಬತ್ತನೇ ತಿಂಗಳವರೆಗೆ ಉದ್ಯೋಗ ಮಾಡುತ್ತಿರುತ್ತಾರೆ. ನಿಮ್ಮ ಕೆಲಸ ದೀರ್ಘ ಸಮಯ ಕೂತು ಅಥವ ನಿಂತುಮಾಡಬೇಕಾಗಿದ್ದರೆ ಬೆನ್ನು, ಮಂಡಿಗಳು ಮತ್ತು ಕಣಕಾಲುಗಳಲ್ಲಿ ನೋವಿಗೆ ಕಾರಣವಾಗುತ್ತದೆ.

ಗರ್ಭಾವಸ್ಥೆಯಲ್ಲಿ ಏಕೆ ಸ್ಕ್ಯಾನಿಂಗ್ ಮಾಡಿಸಬೇಕು?

ಹಿಂದಿನ ವೈದ್ಯಕೀಯ ತಪಾಸಣೆಗಳ ದಾಖಲೆಗಳು:
ಗರ್ಭಧಾರಣೆಯ ಅವಧಿಯುದ್ದಕ್ಕೂ ಕೀಲುನೋವು ಮುಂದುವರೆಯುವುದಕ್ಕೆ ಹಲವಾರು ವೈದ್ಯಕೀಯ ಕಾರಣಗಳಿವೆ. ಸಂಧಿವಾತ ಮತ್ತು ಬೆನ್ನುಹುರಿಯ ಸಮಸ್ಯೆಗಳು ಈ ಪರಿಸ್ಥಿತಿಯನ್ನು ಒಳಗೊಂಡಿವೆ. ನಿಮ್ಮ ವೈದ್ಯಕೀಯ ದಾಖಲೆಗಳಲ್ಲಿ ಇಂತಹ ಕೀಲುನೋವುಗಳನ್ನು ಒಳಗೊಂಡಿದ್ದರೆ ವೈದ್ಯರಿಂದ ಸೂಕ್ತ ಸಲಹೆಗಳನ್ನು ಪಡೆದು ಪರಿಹರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಗರ್ಭಾಧಾರಣೆಯ ಸಮಯದಲ್ಲಿ ಇಂತಹ ನೋವುಗಳು ಸಾಮಾನ್ಯವಾಗಿದ್ದು ಅದು ತಾನಾಗಿಯೇ ಪರಿಹರಿಸಿದರೂ ಕೆಲವು ಸಂದರ್ಭಗಳಲ್ಲಿ ವೈದ್ಯಕೀಯ ನೆರವು ಅಗತ್ಯವಾಗಿರುತ್ತದೆ. ಗರ್ಭಾವಸ್ತೆಯಲ್ಲಿ ಬರುವ ನೋವಿಗೆ ಕೆಲವು ಸಾಮಾನ್ಯ ಕಾರಣಗಳೂ ಗೊತ್ತಿದ್ದರೂ, ಆದಷ್ಟು ಬೇಗ ವೈದ್ಯರ ಸಲಹೆ ಪಡೆಯುವುದು ಅತ್ಯಂತ ಸೂಕ್ತ.

English summary

Top 7 Reasons For Joint Pain During Pregnancy

It is true! Pregnancy is the most exciting phase of a woman’s life where she experiences many things that are entirely new for her. But, the dark side of this is that these experiences include many factors that offer uneasiness and discomfort to the woman.
X
Desktop Bottom Promotion