For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗುವುದನ್ನು ನಿಯಂತ್ರಿಸಲು ಟಿಪ್ಸ್

|

ಗರ್ಭಿಣಿಯಾಗಿರುವಾಗ ಎಲ್ಲಾ ಸ್ತ್ರೀಯರು ಸಾಮಾನ್ಯವಾಗಿ ದಪ್ಪಗಾಗುವ ಲಕ್ಷಣವನ್ನು ತೋರುತ್ತಾರೆ. ಗರ್ಭಿಣಿಯಾದ ಹೆಂಗಸು ದಪ್ಪಗಾಗುವುದು ಸಹಜ, ಇದು ಗರ್ಭಾವಧಿಯ ಅಡ್ಡಪರಿಣಾಮಗಳಲ್ಲಿ ಸಹ ಒಂದು. ಅದರಲ್ಲೂ ಕೆಲವು ಹೆಂಗಸರು ಈ ವೇಳೆಯಲ್ಲಿ ದಪ್ಪಗಾಗುವುದರ ಜೊತೆಗೆ, ದಪ್ಪಗಾದುದಕ್ಕೆ ಕುರುಹಾಗಿ ಕಲೆಗಳನ್ನು, ಅಂದರೆ ಸ್ಟ್ರೆಚ್ ಮಾರ್ಕ್‌ಗಳನ್ನು ಸಹ ಹೊಂದಿರುತ್ತಾರೆ. ಈ ಅಂಕಣದಲ್ಲಿ ನಾವು ಗರ್ಭಾವಧಿಯಲ್ಲಿ ಉಂಟಾಗುವ ಸ್ಥೂಲ ಕಾಯವನ್ನು ಪರಿಹರಿಸಿಕೊಳ್ಳುವ ಕುರಿತು ಕೆಲವು ಸಲಹೆಗಳನ್ನು ನೀಡುತ್ತಿದ್ದೇವೆ. ಇದರ ಜೊತೆಗೆ ಈ ಅವಧಿಯಲ್ಲಿ ಸ್ಥೂಲಕಾಯ ಬರುವ ಕುರಿತು ಕೆಲವೊಂದು ಮಿಥ್ಯಗಳು ಸಹ ಇವೆ.

ಅವುಗಳ ಕುರಿತಾಗಿ ಸಹ ನಾವು ಇಂದು ಚರ್ಚಿಸುತ್ತಿದ್ದೇವೆ. ನಾವು ಆ ಎಲ್ಲ ಅಂತೆ ಕಂತೆಗಳಿಂದ ಆಚೆಗೆ ನಿಮ್ಮನ್ನು ಕರೆದೊಯ್ಯುವ ಜೊತೆಗೆ, ಈ ಬಗೆಯ ಸ್ಥೂಲತೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ಬಗೆಯನ್ನು ನಾವು ಇಲ್ಲಿ ವಿವರಿಸುತ್ತಿದ್ದೇವೆ. ಬನ್ನಿ ಹಾಗಾದರೆ ನಾವು ಪರಿಣಾಮಕಾರಿಯಾಗಿ ತೂಕ ಇಳಿಸಿಕೊಳ್ಳುವ ವಿಧಾನಗಳನ್ನು ತಿಳಿದುಕೊಳ್ಳೋಣ. ಈ ಕೆಳಕಂಡ ಅಂಶಗಳನ್ನು ಪಾಲಿಸುವ ಮೂಲಕ ನೀವು ನಿಮ್ಮ ದೇಹದಲ್ಲಿ ಹೆಚ್ಚಾಗಿರುವ ತೂಕವನ್ನು ಇಳಿಸಿಕೊಳ್ಳಿ. ಆ ಸಲಹೆಗಳು ಈ ಕೆಳಕಂಡಂತಿವೆ ಓದಿಕೊಳ್ಳಿ.. ಗರ್ಭಧಾರಣೆ ವೇಳೆ ಸೂಕ್ತ ನಿದ್ರೆಗಾಗಿ ಆರು ವಿಧಾನಗಳು

ನಿಮ್ಮ ವೈದ್ಯರಿಗೆ ತಿಳಿಸಿ

Tips To Deal With Weight Gain During Pregnancy

ನಿಮ್ಮ ಬೆಳವಣಿಗೆಗಳ ಕುರಿತು ನಿಮ್ಮ ವೈದ್ಯರಿಗೆ ತಿಳಿಸಿ, ವಿಶೇಷವಾಗಿ ತೂಕ ಹೆಚ್ಚಾಗುತ್ತಿರುವುದನ್ನು ತಿಳಿಸಲು ಮರೆಯಲೇಬೇಡಿ. ಈ ನಿಟ್ಟಿನಲ್ಲಿ ನಿಮ್ಮ ವೈದ್ಯರು ನಿಮಗೆ ಅಗತ್ಯ ಸಲಹೆಗಳನ್ನು ನೀಡಬಹುದು. ಹಾಗೆಂದು ಪ್ರತಿ ಕಿಲೋ ಗ್ರಾಂ ಹೆಚ್ಚಾದಾಗಲು ಅವರಿಗೆ ತಿಳಿಸುವ ಅಗತ್ಯವಿಲ್ಲ. ಒಂದು ಬೆಳವಣಿಗೆಯ ವರದಿಯನ್ನು ಅವರಿಗೆ ನೀಡಿ. ಸಂಕ್ಷಿಪ್ತವಾಗಿ ಅವರಿಗೆ ವಿವರಿಸಿ. ಅವರು ಅರ್ಥ ಮಾಡಿಕೊಳ್ಳುತ್ತಾರೆ.

ಮತ್ತೊಬ್ಬ ಗರ್ಭಿಣಿಯ ಜೊತೆಗೆ ಮಾತನಾಡಿ

ಇದು ಒಳ್ಳೆಯ ಸಲಹೆ. ನಿಮಗೆ ತೂಕ ಹೆಚ್ಚಾಗುತ್ತಿರುವ ಕುರಿತು ದೃಢವಾದಾಗ, ಆ ವಿಷಯವನ್ನು ನಿಮ್ಮ ಓರಗೆಯ ಗರ್ಭಿಣಿ ಹೆಂಗಸಿನ ಜೊತೆಗೆ ಹಂಚಿಕೊಳ್ಳಿ. ಇದರಿಂದ ನಿಮಗೆ ಪರಿಸ್ಥಿತಿ ಮನದಟ್ಟಾಗಬಹುದು ಮತ್ತು ನಿಮ್ಮ ಕೆಲವೊಂದು ಸಂಶಯಗಳು ಸಹ ನಿವಾರಣೆಯಾಗಬಹುದು. ಒಂದು ವೇಳೆ ನಿಮಗೆ ಯಾವುದಾದರು ಭೀತಿ ಅಥವಾ ಭಯವಿದ್ದಲ್ಲಿ ಅದು ಸಹ ನಿವಾರಣೆಯಾಗಬಹುದು. ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆ ನಡೆಸುವುದು ಸುರಕ್ಷಿತವೇ?

ಸರಿಯಾಗಿ ಊಟ ಮಾಡಿ

ಇದು ಸಹ ಬಹುಮುಖ್ಯವಾದ ಅಂಶ. ಈ ಕುರಿತಾಗಿ ನಿಮ್ಮ ವೈದ್ಯರು ಮೊದಲು ಮಾತನಾಡುತ್ತಾರೆ. ಅದರಲ್ಲೂ ಗರ್ಭಿಣಿ ಹೆಂಗಸು ಸರಿಯಾಗಿ ಊಟ ಮಾಡುವುದರಿಂದ ತಾಯಿ ಮತ್ತು ಮಗು ಇಬ್ಬರಿಗು ಒಳ್ಳೆಯ ಆರೋಗ್ಯ ಲಭಿಸುತ್ತದೆ. ಹೀಗೆ ನೀವು ಸೇವಿಸುವ ಆಹಾರವು ನೇರವಾಗಿ ನಿಮ್ಮ ದೇಹದ ತೂಕವನ್ನು ಅಧಿಕಗೊಳಿಸುತ್ತದೆ ಎಂಬುದು ಸುಳ್ಳಲ್ಲ.

ಲಘು ವ್ಯಾಯಾಮಗಳು

ಇದು ಒಳ್ಳೆಯ ಸಲಹೆ, ಆದರೆ ತುಂಬಾ ಜನ ಇದನ್ನು ಉದಾಸೀನ ಮಾಡುತ್ತಾರೆ. ಲಘು ವ್ಯಾಯಾಮಗಳು ಗರ್ಭಿಣಿಯಾಗಿರುವಾಗ ತುಂಬಾ ಪ್ರಮುಖ ಕಾರ್ಯಗಳನ್ನು ಮಾಡುತ್ತದೆ. ಇದು ನಿಮ್ಮ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಮಗುವಿನ ಅಂಗಾಂಗಗಳು ಬೆಳವಣಿಗೆಯಾಗಲು ಸಹಕರಿಸುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ವ್ಯಾಯಾಮ ಮಾಡುವುದನ್ನು ಮರೆಯಲು ಹೋಗಬೇಡಿ.

English summary

Tips To Deal With Weight Gain During Pregnancy

Weight gain during pregnancy is a common phenomenon most women face. In fact, weight gain is one of the foremost side effects of pregnancy among other side effects that women face. There are several myths that exist about weight gain during pregnancy.
X
Desktop Bottom Promotion