For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಉಂಟಾಗುವ ಹೆರಿಗೆ ನೋವಿನ ಲಕ್ಷಣಗಳು

By Super
|

ತಮ್ಮ ಮೊದಲ ಮಗುವಿನ ಗರ್ಭಧಾರಣೆಯ ಸಮಯದಲ್ಲಿ ಮಹಿಳೆಯರು ಹೆರಿಗೆಯ ಲಕ್ಷಣಗಳಿಂದ ಆತಂಕಕ್ಕೊಳಗಾಗುತ್ತಾರೆ. ಈ ಸಮಯದಲ್ಲಿ ಒಮ್ಮೊಮ್ಮೆ ಆತಂಕ ಹೆಚ್ಚಾಗಿ ಮಹಿಳೆಯರು ಒತ್ತಡಕ್ಕೆ ಒಳಗಾಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಗೊಂದಲಗಳು ಸರ್ವೇ ಸಾಮಾನ್ಯ.

ಪ್ರಸವ (ಹೆರಿಗೆ) ಎ೦ಬುದು ಪ್ರತಿಯೋರ್ವ ಗರ್ಭಿಣಿ ಸ್ತ್ರೀಯು ಕಾತರದಿ೦ದ ಎದುರು ನೋಡುವ ಸ೦ಗತಿಯಾಗಿರುತ್ತದೆ ಹಾಗೂ ಆ ಕ್ಷಣವನ್ನು ನೆನೆದು ಆಕೆಯು ರೋಮಾ೦ಚನಗೊಳ್ಳುತ್ತಾಳೆ. ಪ್ರಸವದ ಆರ೦ಭವೆ೦ಬುದರ ಅರ್ಥವೇನೆ೦ದರೆ, 9 ತಿ೦ಗಳುಗಳ ಕಾಲದ ಆ ಕಠಿಣ ಅವಧಿಯ ನ೦ತರ, ನಿಮ್ಮ ಸ೦ತಸದ, ಕನಸಿನ ನಿಧಿಯೊ೦ದು ಮಗುವಿನ ರೂಪದಲ್ಲಿ ಈ ಪ್ರಪ೦ಚಕ್ಕೆ ಕಾಲಿಡುತ್ತಿದೆಯೆ೦ದರ್ಥ.

ಹಾಗಾಗಿ ಪ್ರಸವದ ಅವಧಿಯು ಸಮೀಪಿಸುತ್ತಿದೆ ಎನ್ನುವುದರ ಸೂಚನೆಗಳನ್ನು ನೀವು ಗ್ರಹಿಸಲು ಸಮರ್ಥರಾಗಿದ್ದರೆ, ನೀವು ಅದಕ್ಕೆ ಸೂಕ್ತ ರೀತಿಯಲ್ಲಿ ತಯಾರಿ ನಡೆಸಬಹುದು. ಬನ್ನಿ ನಿಮ್ಮ ಹೆರಿಗೆಯ ದಿನ ಸಮೀಪಿಸುತ್ತಿದೆ ಎಂಬುದನ್ನು ನಿಮಗೆ ತಿಳಿಯಪಡಿಸುವ ಕೆಲವೊಂದು ಲಕ್ಷಣಗಳನ್ನು ಇಲ್ಲಿ ನೀಡಲಾಗಿದೆ. ಅದರತ್ತ ಗಮನ ಹರಿಸಿ.

ಶಿಶುವು ಜಾರಿದ೦ತಹ ಅನುಭವ
ಹೊಟ್ಟೆಯಲ್ಲಿನ ಶಿಶುವು ಗರ್ಭಕೋಶದೊಳಗೆ ಕೆಳಮುಖವಾಗಿ ಚಲಿಸಲಾರ೦ಭಿಸುತ್ತದೆ ಹಾಗೂ ನೀವೇ ಸ್ವತ: ಭ್ರೂಣದ ತಲೆಯು ನಿಮ್ಮ ಗರ್ಭಕ೦ಠದ ಭಾಗದಲ್ಲಿರುವುದನ್ನು ಅನುಭವಿಸಬಹುದು. ಈ ಸೂಚನೆಯು ಮು೦ದಿನ ಒ೦ದು ವಾರದ ಅವಧಿಯಲ್ಲಿ ಪ್ರಸವವು ಸ೦ಭವಿಸುತ್ತದೆ ಎ೦ಬುದರ ಮುನ್ಸೂಚನೆಯಾಗಿದೆ.

ಪದೇ ಪದೇ ಸ೦ಭವಿಸುವ ಮೂತ್ರವಿಸರ್ಜನೆ
ನೀವು ಗರ್ಭಿಣಿ ಎ೦ದಾದೊಡನೆಯೇ ಪದೇ ಪದೇ ಮೂತ್ರವಿಸರ್ಜನೆಗೊಳ್ಳುವುದು ನಿಮ್ಮ ಅನುಭವಕ್ಕೆ ಬರುತ್ತದೆ. ನಿಮ್ಮ ಗರ್ಭಾವಸ್ಥೆಯ ಕೊನೆಯ ಎರಡು ವಾರಗಳ ಅವಧಿಯಲ್ಲ೦ತೂ ನೀವು ಅಕ್ಷರಶಃ ಶೌಚಾಲಯದಲ್ಲಿಯೇ ಕಾಲಕಳೆಯಬೇಕಾದಷ್ಟು ಪ್ರಮಾಣದಲ್ಲಿ ಮೂತ್ರವಿಸರ್ಜನೆಯಾಗಲಾರoಭಿಸುತ್ತದೆ. 6 ತಿಂಗಳ ಗರ್ಭಾವಸ್ಥೆ: ದೇಹದ ಬದಲಾವಣೆ

ವಾಕರಿಕೆ
ನಿಮ್ಮ ಗರ್ಭಾವಸ್ಥೆಯ ಸಮಯದಲ್ಲಿ ಕೆಲವು ಮಹಿಳೆಯರಿಗೆ ವಾಕರಿಕೆ ಉಂಟಾಗುವ ಪೃವೃತ್ತಿಯ ರೋಗಲಕ್ಷಣ ಕಂಡುಬರುತ್ತದೆ. ಗರ್ಭಾವಸ್ಥೆಯ ಸಮಯದಲ್ಲಿ ನೀವೇನೂ ತಿಂದರೂ ಅದು ವಾಂತಿಯಾಗುತ್ತದೆ. ಸಾಮಾನ್ಯವಾಗಿ ಇಂತಹ ಲಕ್ಷಣಗಳು ಹೆದರಿಕೆ, ನೋವು ಮತ್ತು ಹಾರ್ಮೋನ್‌ಗಳ ಮಿಶ್ರಣದಿಂದ ಈ ರೀತಿ ಉಂಟಾಗುತ್ತದೆ.

ನಡುಕ
ನಿಮಗೆ ಶೀತವಿಲ್ಲದಿದ್ದರೂ ಹೆರಿಗೆಯ ಪೂರ್ವ ದಿವಸಗಳಲ್ಲಿ ಸಣ್ಣ ರೀತಿಯ ನಡುಕ ನಿಮ್ಮ ದೇಹವನ್ನು ಆವರಿಸುತ್ತದೆ. ಗರ್ಭಾವಸ್ಥೆಯ ಸಮಯದಲ್ಲಿ ಹೆಚ್ಚಿನ ಮಹಿಳೆಯರು ಅನುಭವಿಸುವ ಸಾಮಾನ್ಯ ಲಕ್ಷಣವಾಗಿದೆ.

ರಕ್ತಸ್ರಾವ
ಪ್ರಸವ ಕಾಲವು ಸಮೀಪಿಸುತ್ತಿದೆ ಎ೦ದು ಸೂಚಿಸುವ ಮತ್ತೊ೦ದು ಸಾಮಾನ್ಯವಾದ ಸ೦ಕೇತವೇನೆ೦ದರೆ, ನಿಮ್ಮ ಯೋನಿಯಿ೦ದ ಉ೦ಟಾಗುವ ರಕ್ತಸ್ರಾವ ಅಥವಾ ಹೆಚ್ಚಿದ ಯೋನಿಯ ಸ್ರಾವ. ಈ ಅ೦ಶವು ನಿಮ್ಮ ಶರೀರವು ಮಗುವಿನ ಜನನಕ್ಕೆ ಅಣಿಯಾಗುತ್ತದೆ ಎ೦ದು ಸೂಚಿಸುತ್ತದೆ.

ಬೆನ್ನುನೋವು
ಕೆಲವು ಮಹಿಳೆಯರಿಗೆ, ಹೆರಿಗೆಗೆ ದಿನ ಹತ್ತಿರವಾಗುತ್ತಿದ್ದಂತೆ ದೇಹದ ಕೆಳಭಾಗದಲ್ಲಿ ನಿರಂತರವಾಗಿ ನೋವು ಉಂಟಾಗುತ್ತದೆ. ಇದೊಂದು ಸಾಮಾನ್ಯ ಲಕ್ಷಣವಾಗಿದ್ದು ನಿಮ್ಮ ವೈದ್ಯರ ಸಲಹೆಯಂತೆ ಪ್ಯಾರಾಸಿಟಮ‌ಲ್‌ ಮಾತ್ರೆಯನ್ನು ತೆಗೆದುಕೊಳ್ಳುವುದು ಇದಕ್ಕೆ ಉತ್ತಮ ಉಪಶಮನವಾಗಿದೆ.

English summary

Signs and symptoms of labor during pregnancy

The main sign that you are in first stage of labour is the start of regular contractions. Every pregnant woman feels her contraction pain differently, Take a look at some of these ways in which you can make out when you are going into labour with these signs.
X
Desktop Bottom Promotion