For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಹೆರಿಗೆ ಲಕ್ಷಣಗಳು

By Manohar.V
|

ತಮ್ಮ ಮೊದಲ ಮಗುವಿನ ಗರ್ಭದಾರಣೆಯ ಸಮಯದಲ್ಲಿ ಮಹಿಳೆಯರು ಹೆರಿಗೆಯ ಲಕ್ಷಣಗಳಿಂದ ಆತಂಕಕ್ಕೊಳಗಾಗುತ್ತಾರೆ. ಈ ಸಮಯದಲ್ಲಿ ಒಮ್ಮೊಮ್ಮೆ ಆತಂಕ ಹೆಚ್ಚಾಗಿ ಮಹಿಳೆಯರು ಒತ್ತಡಕ್ಕೆ ಒಳಗಾಗುತ್ತಾರೆ. ಈ ಸಮಯದಲ್ಲಿ ಗೊಂದಲಗಳು ಸರ್ವೇ ಸಾಮಾನ್ಯ. ಮಗು ಆಗಮಿಸುವ ಸಮಯದಲ್ಲಿ ಹೆಚ್ಚಿನ ಮಹಿಳೆಯರು ಹೆರಿಗೆ ನೋವಿಗಂಜಿ ಆಸ್ಪತ್ರೆಯಲ್ಲಿ ಮುಂಚಿತವಾಗಿ ದಾಖಲಾಗುವುದಕ್ಕೆ ಒತ್ತು ನೀಡುತ್ತಾರೆ. ಗರ್ಭಾವಸ್ಥೆಯ ಸಮಯದಲ್ಲಿನ ಹೆರಿಗೆ ನೋವಿನ ಲಕ್ಷಣಗಳು ನಿಮ್ಮ ಅರಿವಿಗೆ ಬರುವಂತೆ ಬೋಲ್ಡ್‌ಸ್ಕೈ ನಿಮಗೆ ಸಹಾಯ ಮಾಡುತ್ತದೆ.

ಹೆರಿಗೆಯ ಮೊದಲ ಹಂತದಲ್ಲಿ ಉಂಟಾಗುವ ಲಕ್ಷಣವೆಂದರೆ ನಿಯಮಿತ ಕುಗ್ಗುವಿಕೆಯಾಗಿದೆ. ಪ್ರತಿಯೊಬ್ಬ ಮಹಿಳೆಯು ತಮ್ಮ ಕುಗ್ಗುವಿಕೆಯ ನೋವನ್ನು ಭಿನ್ನವಾಗಿ ಅನುಭವಿಸುತ್ತಾಳೆ. ಆದರೆ ಹೆರಿಗೆಯ ಮೊದಲ ಹಂತದಲ್ಲಿ ನೋವಿನ ತೀಕ್ಷಣತೆಯನ್ನು ಹೆಚ್ಚಾಗಿಸುವ ಅಸಾಮಧಾನವನ್ನುಂಟು ಮಾಡುವ ಸೆಳೆತವಾಗಿ ಇದು ಮಾರ್ಪಡಬಹುದು.

ಮೊದಲ ಹಂತದಲ್ಲಿ, ಸಾಮಾನ್ಯವಾಗಿ ಕುಗ್ಗುವಿಕೆಯು 30 ರಿಂದ 60 ಸೆಕುಂಡುಗಳಷ್ಟು ದೀರ್ಘವಾಗಿ ಇರುತ್ತದೆ ಮತ್ತು 20 ನಿಮಿಷಗಳ ಮಧ್ಯಂತರಕ್ಕೆ ಬರುತ್ತದೆ. ಆದರೂ ಇದು ಮಹಿಳೆಯರಲ್ಲಿ ಭಿನ್ನವಾಗಿರುತ್ತದೆ. ಹೆರಿಗೆ ನೋವಿನ ಸಮಯದಲ್ಲಿ ಗರ್ಭಕೊಶವು ಸೊನ್ನೆಯಿಂದ ಹತ್ತು ಸೆಂಟಿಮೀಟರ್‌ ವರೆಗೆ ವಿಕಸನಗೊಳ್ಳುತ್ತದೆ ಮತ್ತು ಪರಿವರ್ತನೆಯ ಸಮಯದಲ್ಲಿ ಪೂರ್ಣವಾಗಿ ವಿಕಸನಗೊಳ್ಳುತ್ತದೆ.

ನಿಮ್ಮ ಹೆರಿಗೆಯ ದಿನ ಸಮೀಪಿಸುತ್ತಿದೆ ಎಂಬುದನ್ನು ನಿಮಗೆ ತಿಳಿಯಪಡಿಸುವ ಕೆಲವೊಂದು ಲಕ್ಷಣಗಳನ್ನು ಇಲ್ಲಿ ನೀಡಲಾಗಿದೆ. ಅದರತ್ತ ಗಮನ ಹರಿಸಿ.

1. ವಿಸರ್ಜನೆ:

1. ವಿಸರ್ಜನೆ:

ನಿಮ್ಮ ಹೆರಿಗೆಯ ದಿನಾಂಕ ಹತ್ತಿರವಾಗುತ್ತಿದ್ದಂತೆ, ನೀವು ಗಮನ ಹರಿಸಬೇಕಾದ ಅಂಶವೆಂದರೆ ಹೆಚ್ಚುವರಿ ಯೋನಿ ವಿಸರ್ಜನೆ ಯಾಗಿದೆ. ಹೆರಿಗೆಯ ಸಮಯದಲ್ಲಿ ಉಂಟಾಗುವ ಮೊದಲ ಲಕ್ಷಣ ಇದಾಗಿದೆ. ಹೆರಿಗೆ ದಿನ ಸಮೀಪವಾಗುತ್ತಿದ್ದಂತೆ ಗರ್ಭಕೋಶವು ಮೆತ್ತಗಾಗಲು ಪ್ರಾರಂಭವಾಗುವ ಸಮಯದಲ್ಲಿ ಈ ಅಂಶ ಕಂಡುಬರುತ್ತದೆ.

2.ಬೆನ್ನುನೋವು:

2.ಬೆನ್ನುನೋವು:

ಕೆಲವು ಮಹಿಳೆಯರಿಗೆ, ಹೆರಿಗೆಗೆ ದಿನ ಹತ್ತಿರವಾಗುತ್ತಿದ್ದಂತೆ ದೇಹದ ಕೆಳಭಾಗದಲ್ಲಿ ನಿರಂತರವಾಗಿ ನೋವು ಉಂಟಾಗುತ್ತದೆ. ಇದೊಂದು ಸಾಮಾನ್ಯ ಲಕ್ಷಣವಾಗಿದ್ದು ನಿಮ್ಮ ವೈದ್ಯರ ಸಲಹೆಯಂತೆ ಪ್ಯಾರಾಸಿಟಮ‌ಲ್‌ ಮಾತ್ರೆಯನ್ನು ತೆಗೆದುಕೊಳ್ಳುವುದು ಇದಕ್ಕೆ ಉತ್ತಮ ಉಪಶಮನವಾಗಿದೆ.

3.ಸೆಳೆತಗಳು:

3.ಸೆಳೆತಗಳು:

ಗರ್ಭಾವಸ್ಥೆಯ ಸಮಯದಲ್ಲಿ ಉಂಟಾಗುವ ಇನ್ನೊಂದು ಹೆರಿಗೆ ಲಕ್ಷಣವೆಂದರೆ ಹೊಟ್ಟೆಯಲ್ಲಿ ಕಿಬ್ಬೊಟ್ಟೆ ಸೆಳೆತವಾಗಿದೆ. ಬಿಸಿ ನೀರ ಸ್ನಾನವು ಈ ನೋವನ್ನು ಹೋಗಲಾಡಿಸುತ್ತದೆ.

4.ಗರ್ಭದ ಒಳಕವಚದ ನೀರಿನ ಸೋರಿಕೆ:

4.ಗರ್ಭದ ಒಳಕವಚದ ನೀರಿನ ಸೋರಿಕೆ:

ಗರ್ಭದ ಒಳಕವಚದಲ್ಲಿರುವ ನೀರಿನಿಂದಾವೃತವಾದ ಚೀಲದಲ್ಲಿ ನಿಮ್ಮ ಮಗುವು ತೇಲುತ್ತಾ ಎಲ್ಲಾ ಅಪಾಯಗಳಿಂದ ರಕ್ಷಣೆಯನ್ನು ಪಡೆಯುತ್ತದೆ. ಮಗುವು ಜನ್ಮತಾಳುವುದಕ್ಕಿಂತ ಮುಂಚೆ ಚೀಲವು ಛಿದ್ರಗೊಳ್ಳುತ್ತದೆ. ಇದನ್ನೇ ನೀರಿನ ಸೋರಿಕೆ ಎಂದು ಕರೆಯಲಾಗುತ್ತದೆ. ಗರ್ಭಾವಸ್ಥೆಯ ಸಮಯದಲ್ಲಿ ನಿಮ್ಮಲ್ಲಿ ಉಂಟಾಗುವ ಸಾಮಾನ್ಯ ಲಕ್ಷಣ ಇದಾಗಿದೆ.

5.ವಿಚಲಿತಗೊಳ್ಳುವ ಹೊಟ್ಟೆ:

5.ವಿಚಲಿತಗೊಳ್ಳುವ ಹೊಟ್ಟೆ:

ನಿಮ್ಮ ಹೊಟ್ಟೆಯ ಅಸಾಮಾಧಾನದಿಂದ ನೀವು ಬಳಲುತ್ತಿರುವಿರಿ ಎಂದಾದರೆ ನಿಮ್ಮ ಸಂತೋಷವನ್ನು ಹೆಚ್ಚಿಸುವ ದೊಡ್ಡ ಉಡುಗೊರೆಗಾಗಿ ನಿಮ್ಮ ದೇಹ ಸಿದ್ಧಗೊಳ್ಳುತ್ತಿದೆ ಎಂದಾಗಿದೆ. ಹೆರಿಗೆಯ ಸಾಮಾನ್ಯ ಲಕ್ಷಣ ಇದಾಗಿದ್ದು ಕರುಳನ್ನು ಹೆಚ್ಚಾಗಿ ತೆರೆದುಕೊಳ್ಳಲು ಪ್ರಚೋದಿಸುವ ಪ್ರೊಸ್ಟಗ್ಲೇಂಡಿಯನ್‌ನ ಇರುವಿಕೆಯಿಂದ ಹೊಟ್ಟೆಯಲ್ಲಿ ವೈಪರೀತ್ಯಗಳುಂಟಾಗುತ್ತದೆ.

6.ವಾಕರಿಕೆ:

6.ವಾಕರಿಕೆ:

ನಿಮ್ಮ ಗರ್ಭಾವಸ್ಥೆಯ ಸಮಯದಲ್ಲಿ ಕೆಲವು ಮಹಿಳೆಯರಿಗೆ ವಾಕರಿಕೆ ಉಂಟಾಗುವ ಪೃವೃತ್ತಿಯ ರೋಗಲಕ್ಷಣ ಕಂಡುಬರುತ್ತದೆ. ಗರ್ಭಾವಸ್ಥೆಯ ಸಮಯದಲ್ಲಿ ನೀವೇನೂ ತಿಂದರೂ ಅದು ವಾಂತಿಯಾಗುತ್ತದೆ. ಕಾತರಿಸುವಿಕೆ, ಹೆದರಿಕೆ, ನೋವು ಮತ್ತು ಹಾರ್ಮೋನ್‌ಗಳ ಮಿಶ್ರಣದಿಂದ ಈ ರೀತಿ ಉಂಟಾಗುತ್ತದೆ.

7.ಕುಗ್ಗುವಿಕೆಗಳು:

7.ಕುಗ್ಗುವಿಕೆಗಳು:

ಗರ್ಭಾವಸ್ಥೆಯಲ್ಲಿ ಉಂಟಾಗುವ ಒಂದು ಸಾಮಾನ್ಯ ಲಕ್ಷಣ ಇದಾಗಿದೆ. ಗರ್ಭಾಶಯದ ಬಿಗಿತ ಮತ್ತು ಸಡಿಲತೆಯನ್ನು ಗರ್ಭಿಣಿ ಸ್ತ್ರೀ ಈ ಸಮಯದಲ್ಲಿ ಅನುಭವಿಸುತ್ತಾಳೆ. ಆಕೆಯ ಜೀವನದ ಸುಮಧುರ ಕ್ಷಣಕ್ಕಾಗಿ ದೇಹ ಸಿದ್ಧವಾಗುತ್ತಿದೆ ಎಂಬುದರ ಸೂಚನೆ ಇದಾಗಿದೆ.

8. ಸಣ್ಣ ಹಗುರತೆ:

8. ಸಣ್ಣ ಹಗುರತೆ:

ಹೆರಿಗೆಯ ದಿನ ಸಮೀಪವಾಗುತ್ತಿದ್ದಂತೆ ನಿಮ್ಮ ಹೊಟ್ಟೆಯಲ್ಲಿ ಸಣ್ಣ ಹಗುರತೆಯನ್ನು ನೀವು ಅನುಭವಿಸುವಿರಿ. ನಿಮಗೆ ಮುಂಚಿಗಿಂತ ಹಗರವಾಗಿ ಉಸಿರಾಡಲು ಸಹಾಯಕವಾಗುವಂತೆ ನಿಮ್ಮ ಮಗುವು ಸೊಂಟದತ್ತ ಹೊರಳುತ್ತದೆ ಮತ್ತು ಅಲ್ಲೇ ನೆಲೆ ನಿಲ್ಲುತ್ತದೆ.

9.ನಡುಕ:

9.ನಡುಕ:

ನಿಮಗೆ ಶೀತವಿಲ್ಲದಿದ್ದರೂ ಹೆರಿಗೆಯ ಪೂರ್ವ ದಿವಸಗಳಲ್ಲಿ ಸಣ್ಣ ರೀತಿಯ ನಡುಕ ನಿಮ್ಮ ದೇಹವನ್ನು ಆವರಿಸುತ್ತದೆ. ಗರ್ಭಾವಸ್ಥೆಯ ಸಮಯದಲ್ಲಿ ಹೆಚ್ಚಿನ ಮಹಿಳೆಯರು ಅನುಭವಿಸುವ ಸಾಮಾನ್ಯ ಲಕ್ಷಣವಾಗಿದೆ.

10.ಆಹಾರದ ಬಯಕೆಗಳು:

10.ಆಹಾರದ ಬಯಕೆಗಳು:

ಗರ್ಭಾವಸ್ಥೆಯ ಅವಧಿಯಲ್ಲಿ ಆಹಾರದ ಮೇಲಿನ ಒಲವು ಹೆಚ್ಚುತ್ತದೆ. ಹೆರಿಗೆಯ ಸಮಯದಲ್ಲಿ ವಿಪರೀತ ಹಸಿವು ನಿಮ್ಮನ್ನು ಕಾಡುತ್ತದೆ.

English summary

Signs Of Labour During Pregnancy

For women who are pregnant for their first baby at the time of confinement, they usually wonder what are the signs of labour. This can be quite confusing at this moment since during this period many women undergo stress at its peak.
Story first published: Thursday, January 2, 2014, 14:06 [IST]
X
Desktop Bottom Promotion