For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರೇ ವಿಟಮಿನ್‌ನಿಂದ ಆಗುವ ಅಡ್ಡ ಪರಿಣಾಮಗಳ ಬಗೆ ತಿಳಿದಿದೆಯೇ?

By Arpitha Rao
|

ಮಹಿಳೆ ಗರ್ಭಿಣಿಯಾದಾಗ ಮಗುವಿನ ಬೆಳವಣಿಗೆ ಮತ್ತು ಆರೋಗ್ಯಕ್ಕಾಗಿ ಸಾಕಷ್ಟು ಪೌಷ್ಟಿಕತೆಯ ಅವಶ್ಯಕತೆ ಇರುತ್ತದೆ. ಸಾಕಷ್ಟು ಹಣ್ಣು,ತರಕಾರಿ, ಆಹಾರಗಳನ್ನು ತೆಗೆದುಕೊಳ್ಳುವುದರಿಂದ ಅಗತ್ಯ ಪೌಷ್ಟಿಕಾಂಶವನ್ನು ತೆಗೆದುಕೊಳ್ಳಬಹುದು. ಅಗತ್ಯ ಪೌಷ್ಟಿಕಾಂಶ ತೆಗೆದುಕೊಳ್ಳಲು ನಿಮಗೆ ಎಷ್ಟು ಪೌಷ್ಟಿಕಾಂಶದ ಅಗತ್ಯವಿದೆ ಎಂಬುದನ್ನು ಮೊದಲು ತಿಳಿದುಕೊಂಡಿರಬೇಕು ಏಕೆಂದರೆ ಅಧಿಕ ಪೌಷ್ಟಿಕಾಂಶತೆ ಆರೋಗ್ಯವನ್ನು ಹದಗೆಡಿಸಬಹುದು.

ನೀವರಿಯಬೇಕಾದ ಗರ್ಭಾವಸ್ಥೆಯ ಚಿಕನ್‌ಫಾಕ್ಸ್ ಅಪಾಯಗಳು!

"ಗರ್ಭಿಣಿ ಮಹಿಳೆಗೆ ಅಗತ್ಯ ಜೀವಸತ್ವಗಳು" ಎಂಬ ಲೇಖನದಲ್ಲಿ ಅಗತ್ಯ ಜೀವಸತ್ವಗಳ ಬಗ್ಗೆ ಮಾಹಿತಿ ತಿಳಿಸಲಾಗಿದೆ.ನೀವು ಸಾಕಷ್ಟು ಜೀವಸತ್ವಗಳನ್ನು ಹಣ್ಣು ಮತ್ತು ತರಕಾರಿಗಳ ಮೂಲಕ ತೆಗೆದುಕೊಳ್ಳುತ್ತಿದ್ದರೆ ಚಿಂತಿಸುವ ಅಗತ್ಯವಿಲ್ಲ ಏಕೆಂದರೆ ಇದು ಯಾವುದೇ ರೀತಿಯ ಅಡ್ಡ ಪರಿಣಾಮ ನೀಡುವುದಿಲ್ಲ.

ಆದರೆ ನೀವು ಗರ್ಭವತಿಯಾದಾಗ ವಿಟಮಿನ್ ಮಾತ್ರೆಗಳು ಅಥವಾ ಪುಡಿಯನ್ನು ತೆಗೆದುಕೊಳ್ಳುತ್ತಿದರೆ ಮೊದಲು ವೈದ್ಯರಲ್ಲಿ ಕೇಳಿ ಸೂಕ್ತವಾದುದನ್ನು ತೆಗೆದುಕೊಳ್ಳಬೇಕು.ವಿಟಮಿನ್ ಮಾತ್ರೆಗಳ ಅಡ್ಡ ಪರಿಣಾಮದಿಂದ ಗರ್ಭಿಣಿ ಮಹಿಳೆ ಮತ್ತು ಆಕೆಯ ಮಗು ಇಬ್ಬರಿಗೂ ತೊಂದರೆಯಾಗುವ ಸಾಧ್ಯತೆ ಇರುತ್ತದೆ.ವಿಟಮಿನ್ ಅತಿಯಾದಾಗ ಆಗುವ ಅಡ್ಡ ಪರಿಣಾಮಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.

ಜನನ ನಿಯಂತ್ರಣದ ಬಳಿಕ ಗರ್ಭಧರಿಸಬಹುದೇ?

1.ವಿಟಮಿನ್ ಎ:

1.ವಿಟಮಿನ್ ಎ:

ವಿಟಮಿನ್ ಎ ಯನ್ನು ಅಧಿಕ ಪ್ರಮಾಣದಲ್ಲಿ ತೆಗೆದುಕೊಳ್ಳುವುದರಿಂದ ಜನ್ಮ ದೋಷಗಳು ಮತ್ತು ಪಿತ್ತಜನಕಾಂಗದ ಗಂಭೀರ ಅಸ್ವಸ್ಥತೆ ಕಾಣಿಸಿಕೊಳ್ಳಬಹುದು. ಅದ್ದರಿಂದ ಸ್ತ್ರೀ ರೋಗ ತಜ್ಞರಲ್ಲಿ ಸರಿಯಾದ ಸಲಹೆ ಪಡೆದು ಅಗತ್ಯ ವಿಟಮಿನ್ ತೆಗೆದುಕೊಳ್ಳುವುದು ಉತ್ತಮ.

2.ಫ಼ೊಲಿಕ್ ಆಸಿಡ್:

2.ಫ಼ೊಲಿಕ್ ಆಸಿಡ್:

ಫ಼ೊಲಿಕ್ ಆಸಿಡ್ ಅಧಿಕವಾದರೆ ಹೊಟ್ಟೆ ಉರಿ,ಅತಿಸಾರ,ದದ್ದು,ನಿದ್ರಾಹೀನತೆ,ಕಿರಿಕಿರಿ,ಗೊಂದಲ,ವಾಕರಿಕೆ,ಹೊಟ್ಟೆ ತೊಳಸುವುದು,ಚರ್ಮದ ಕಿರಿಕಿರಿ,ವರ್ತನೆಯಲ್ಲಿ ಬದಲಾವಣೆ ಇವುಗಳೆಲ್ಲಾ ಆಗಬಹುದು.ಸಂಶೋಧನೆಯ ಪ್ರಕಾರ ಅಧಿಕ ಫ಼ೊಲಿಕ್ ಆಸಿಡ್ ಸೇವನೆಯಿಂದ ಹೃದಯ ರೋಗ ಇರುವವರಿಗೆ ಹೃದಯಾಘಾತ ಆಗಬಹುದು ಅಥವಾ ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

3.ವಿಟಮಿನ್ ಬಿ ೧:

3.ವಿಟಮಿನ್ ಬಿ ೧:

ವಿಟಮಿನ್ ಬಿ ೧ ನ ಅಧಿಕ ಸೇವನೆಯಿಂದ ಚರ್ಮದ ತುರಿಕೆ,ಅಲರ್ಜಿ ತೊಂದರೆಗಳು, ತಳಮಳ, ನಿದ್ರಾಹೀನತೆ, ಹೃದಯ ಬಡಿತ, ನೀಲಿ ಬಣ್ಣದ ತುಟಿಗಳು, ಎದೆ ನೋವು, ಉಸಿರಾಟದ ತೊಂದರೆ, ರಕ್ತ ವಾಂತಿ ಅಥವಾ ಕೆಮ್ಮುವಿಕೆ ಕಾಣಿಸಿಕೊಳ್ಳಬಹುದು.ವಿಟಮಿನ್ ಬಿ ೧ ನ ಅಧಿಕ ಸೇವನೆಯಿಂದ ಹೃದಯ ಮತ್ತು ಮೆದುಳಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.ವಿಟಮಿನ್ ಬಿ ಯನ್ನು ಅಧಿಕವಾಗಿ ತೆಗೆದುಕೊಳ್ಳುವುದರಿಂದ ದೀರ್ಘಾವದಿಯ ರಕ್ತದೊತ್ತಡದ ಸಮಸ್ಯೆ ಕಾಣಿಸಿಕೊಳ್ಳಬಹುದು.

4.ವಿಟಮಿನ್ ಬಿ ೬:

4.ವಿಟಮಿನ್ ಬಿ ೬:

ವಿಟಮಿನ್ ಬಿ ೬ ಪರಮಾನ್ ಅಧಿಕವಾದಾಗ ಮರಗೆಟ್ಟುವಿಕೆ,ನರಗಳ ತೊಂದರೆ ಕಾನಿಸಿಕೊಳ್ಳುತ್ತದೆ.ಜೊತೆಗೆ ಎದೆಯುರಿ,ಚರ್ಮದ ಸಮಸ್ಯೆಗಳು,ವಾಕರಿಕೆ ಇಂತಹ ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತದೆ.

5.ವಿಟಮಿನ್ ಬಿ ೧೨:

5.ವಿಟಮಿನ್ ಬಿ ೧೨:

ವಿಟಮಿನ್ ಬಿ ೧೨ ನ ಅಧಿಕ ಸೇವನೆಯಿಂದಾಗಿ ಕ್ಯಾನ್ಸರ್ ರೋಗ ಬರುವ ಸಾಧ್ಯತೆ ಅಧಿಕವಾಗಿರುತ್ತದೆ.ವಿಟಮಿನ್ ಬಿ ೧೨ ರಕ್ತ ಕಣಗಳ ವಿಭಜನೆ ಮಾಡುತ್ತದೆ ಆದರೆ ಇದು ಹಾನಿಕಾರಕ ಮತ್ತು ಒಳ್ಳೆಯ ಜೀವಕೋಶಗಳ ವಿಭಜನೆ ಮಾಡುವುದಿಲ್ಲ ಆದ್ದರಿಂದ ಕ್ಯಾನ್ಸರ್ ಜೀವಕಣಗಳು ಬೆಳೆಯುವ ಸಾಧ್ಯತೆ ಇರುತ್ತದೆ.ಜೊತೆಗೆ ಅನುಚಿತ ಹೃದಯ ಬಡಿತ ಮತ್ತು ದೇಹದ ಬೇರೆ ಭಾಗಗಳಲ್ಲಿ ತುರಿಕೆಗಳು,ಸಾಮಾನ್ಯ ತಲೆನೋವು,ತಲೆ ತಿರುಗುವಿಕೆ ಕಾಣಿಸಿಕೊಳ್ಳಬಹುದು.ಗರ್ಭಾವಸ್ಥೆಯಲ್ಲಿ ಅಧಿಕ ವಿಟಮಿನ್ ತೆಗೆದುಕೊಳ್ಳುವುದರಿಂದ ರಕ್ತ ಕ್ಯಾನ್ಸರ್ ಬರುವ ಸಾಧ್ಯತೆ ಇದ್ದು ವೈದ್ಯರ ಸಲಹೆಯ ಮೇರೆಗೆ ಮಾತ್ರ ವಿಟಮಿನ್ ಮಾತ್ರೆಗಳನ್ನು ಸೇವಿಸಿ.ರಾಷ್ಟ್ರೀಯ ಅರೋಗ್ಯ ಸಂಸ್ಥೆ ಪ್ರಕಾರ ಲೆಬೆರ್ ಡಿಸೀಸ್ ಇರುವವರು ವಿಟಮಿನ್ ಬಿ ೧೨ ತೆಗೆದುಕೊಳ್ಳುವುದರಿಂದ ನರಹಾನಿ ಸಂಭವಿಸುತ್ತದೆ ಮತ್ತು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

6.ವಿಟಮಿನ್ ಸಿ:

6.ವಿಟಮಿನ್ ಸಿ:

ಸಂಶೋಧನೆಯ ಪ್ರಕಾರ ಅಧಿಕ ಪ್ರಮಾಣದ ವಿಟಮಿನ್ ಸಿ ಸೇವನೆಯಿಂದ ಕಿಡ್ನಿ ಕಲ್ಲು ಆಗುವ ಸಂಭವ ಹೆಚ್ಚು.ವಿಟಮಿನ್ ಸಿ ಯಿಂದ ನಿಮ್ಮ ದೇಹದಲ್ಲಿ ಅಕ್ಸಡೆಲ್ ಪ್ರಮಾಣ ಅಧಿಕವಾಗುತ್ತದೆ.ಅಕ್ಸಡೆಲ್ ನಮ್ಮ ದೇಹದಿಂದ ಮೂತ್ರದ ಮೂಲಕ ಹೊರ ಬರುತ್ತದೆ ಆದರೆ ವಿಟಮಿನ್ ಅಧಿಕವಾದಾಗ ದೇಹ ಇದನ್ನು ಹೊರಹಾಕುವುದಿಲ್ಲ ಆಗ ಕಿಡ್ನಿ ಕಲ್ಲು ಆಗುವ ಸಂಭವ ಅಧಿಕವಾಗುತ್ತದೆ.

7.ವಿಟಮಿನ್ ಡಿ:

7.ವಿಟಮಿನ್ ಡಿ:

ವಿಟಮಿನ್ ಡಿ ಯ ಅಧಿಕ ಸೇವನೆಯಿಂದ ರಕ್ತದಲ್ಲಿ ಕ್ಯಾಲ್ಸಿಯಂ ಪ್ರಮಾಣ ಅಧಿಕವಾಗುತ್ತದೆ.ರಕ್ತದಲ್ಲಿ ಕ್ಯಾಲ್ಸಿಯಂ ಪ್ರಮಾಣ ಅಧಿಕವಾದರೆ ಹಸಿವು ಆಗದಿರುವಿಕೆ,ವಾಂತಿ,ವಾಕರಿಕೆಗಳು ಸಂಭವಿಸಬಹುದು.ಜೊತೆಗೆ ಹೃದಯಾಘಾತ ಆಗುವ ಸಂಭವವಿರುತ್ತದೆ.ಜೊತೆಗೆ ಕಿಡ್ನಿ ತೊಂದರೆ,ಪದೇ ಪದೇ ಮೂತ್ರ ವಿಸರ್ಜನೆ ಇನ್ನಿತರ ತೊಂದರೆಗಳು ಕೂಡ ಸಂಭವಿಸಬಹುದು.ವಿಟಮಿನ್ ಡಿ ಅಧಿಕ ಪ್ರಮಾಣದ ಸೇವನೆ ಶಾಶ್ವತ ಕಿಡ್ನಿ ವೈಫ಼ಲ್ಯ ಮಾಡುವ ಸಾಧ್ಯತೆ ಕೂಡ ಇದೆ.ಜೊತೆಗೆ ಇದರಿಂದ ಹೃದಯ ಸ್ತಂಭನ,ನಿರ್ಜಲೀಕರಣ,ಹೊಟ್ಟೆಯಲ್ಲಿ ಅಧಿಕ ಅಸಹಜ ರಕ್ತದ ಉಪ್ಪು (ಎಲೆಕ್ಟ್ರೋಲೈಟ್) ನ ಹೆಚ್ಚಳದಿಂದ ಸಾವು ಕೂಡ ಸಂಭವಿಸಬಹುದು.ಆದ್ದರಿಂದ ಗರ್ಭಿಣಿಯಾದಾಗ ವಿಟಮಿನ್ ಮಾತ್ರೆ ತೆಗೆದುಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ.

8.ವಿಟಮಿನ್ ಇ:

8.ವಿಟಮಿನ್ ಇ:

ಜೀವಸತ್ವ ಇ ಯ ಅಧಿಕ ಸೇವನೆಯಿಂದ ಗರ್ಭಿಣಿ ಮತ್ತು ಹೊಟ್ಟೆಯಲ್ಲಿರುವ ಮಗು ಇಬ್ಬರಿಗೂ ಅರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು ಆದ್ದರಿಂದ ಅದರ ಸೇವನೆಯ ಮೊದಲು ವೈದ್ಯರ ಸಲಹೆ ಪಡೆದುಕೊಳ್ಳಿ.

English summary

Side effects of vitamin overdose during pregnancy

During pregnancy a woman required healthy and nutrient (Vitamins, proteins, minerals etc) rich diet for the development of healthy and strong baby.
Story first published: Saturday, May 17, 2014, 15:51 [IST]
X
Desktop Bottom Promotion