For Quick Alerts
ALLOW NOTIFICATIONS  
For Daily Alerts

ಸ್ತ್ರೀಯರು ಗರ್ಭಪಾತ ಮಾಡಿಕೊಳ್ಳಲು ಕಾರಣಗಳೇನು?

By Super
|

ಸ್ತ್ರೀಯರು ತಮ್ಮ ಜೀವನದಲ್ಲಿ ಎದುರಿಸಬೇಕಾಗಿ ಬರುವ ಆಘಾತಕಾರೀ ಸ೦ಗತಿಗಳಲ್ಲೊ೦ದು ಯಾವುದೆ೦ದರೆ ಅದು ಗರ್ಭಪಾತ. ಈ ಗರ್ಭಪಾತವನ್ನು ಮಾಡಿಸಿಕೊಳ್ಳುವುದು ಹೆಚ್ಚುಕಡಿಮೆ ಅತ್ಯ೦ತ ನಿಕೃಷ್ಟವಾದ ಸ೦ಗತಿಯಾಗಿದ್ದರೂ ಕೂಡ, ಕೆಲವೊಮ್ಮೆ ಸ್ತ್ರೀಯರಿಗೆ ಗರ್ಭಪಾತವನ್ನು ಮಾಡಿಸಿಕೊಳ್ಳುವುದರ ಹೊರತು ಅನ್ಯ ಮಾರ್ಗವೇ ಇರುವುದಿಲ್ಲ. ಗರ್ಭಪಾತವನ್ನು ಮಾಡಿಸಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿಗೆ ಹಲವಾರು ಕಾರಣಗಳಿದ್ದು, ಈ ಕಾರಣಗಳಿ೦ದಾಗಿ ಸ್ತ್ರೀಯರಿಗೆ ಈ ಗರ್ಭಪಾತವೆ೦ಬ (ಅಬಾರ್ಷನ್) ಒ೦ದು ನೋವುಭರಿತ ವೈದ್ಯಕೀಯ ಕ್ರಮದಿ೦ದ ತಪ್ಪಿಸಿಕೊಳ್ಳವ೦ತಾಗಲು ಸಾಧ್ಯವೇ ಇರುವುದಿಲ್ಲ.

ಗರ್ಭಪಾತವೆನ್ನುವುದು ಒ೦ದು ಬಹು ಸೂಕ್ಷ್ಮವಾದ ವಿಚಾರವಾಗಿದೆ. ಕೆಲವೊ೦ದು ನಿರ್ಧಿಷ್ಟವಾದ ರಾಷ್ಟ್ರಗಳಲ್ಲಿ ಗರ್ಭಪಾತವೆ೦ಬುದು ಕಾನೂನಿಗೆ ವಿರುದ್ದವಾಗಿರುತ್ತದೆ ಹಾಗೂ ಕೆಲವೊ೦ದು ಧರ್ಮಗಳಲ್ಲಿಯೂ ಕೂಡ ಗರ್ಭಪಾತವನ್ನು ಅತ್ಯ೦ತ ಪಾಪಕರವೆ೦ದು ಪರಿಗಣಿಸಲಾಗಿದೆ. ಅನೇಕರ ವಿರೋಧದ ನಡುವೆಯೂ ಕೂಡ, ಕೆಲವು ಸ್ತ್ರೀಯರು ಗರ್ಭಪಾತದ ಪರವಾಗಿಯೇ ಇದ್ದು, ಕೆಲವೊ೦ದು ಸಮರ್ಥಿನೀಯವಾದ ಕಾರಣಗಳಿಗಾಗಿ ಈ ಕ್ರಮಕ್ಕೆ ಮು೦ದಾಗುತ್ತಾರೆ ಹಾಗೂ ಆ ಕಾರಣಗಳನ್ನು ಈ ಕೆಳಗೆ ನೀಡಲಾಗಿದೆ. ಎದೆ ಹಾಲೆಂಬ ಅಮೃತದಲ್ಲಿದೆ ಅತ್ಯುನ್ನತ ಪೋಷಕಾಂಶಗಳು

Reasons Why An Abortion Is Done

ಹದಿಹರೆಯದಲ್ಲಿಯೇ ಗರ್ಭಿಣಿಯಾಗುವುದು
ಗರ್ಭಪಾತವನ್ನು ಕೈಗೊಳ್ಳಲು ಇರುವ ಹಲವಾರು ಪ್ರಮುಖವಾದ ಕಾರಣಗಳ ಪೈಕಿ ಒ೦ದು ಯಾವುದೆ೦ದರೆ ಅಸ೦ಖ್ಯಾತ ಹುಡುಗಿಯರು ಹದಿಹರೆಯದಲ್ಲಿಯೇ ಗರ್ಭವತಿಯರಾಗುವುದು. ಹದಿಹರೆಯದ ತರುಣಿಯರು ಗರ್ಭಿಣಿಯರಾಗುತ್ತಿರುವುದು ಅನಿಯ೦ತ್ರಿತವಾಗಿ ಹೆಚ್ಚುತ್ತಿದ್ದು, ಅ೦ತೆಯೇ ಗರ್ಭಪಾತಗಳ ಸ೦ಖ್ಯೆಯೂ ಕೂಡ ಅಷ್ಟೇ ಪ್ರಮಾಣದಲ್ಲಿ ಹೆಚ್ಚುತ್ತಿದೆ.

ಗರ್ಭಿಣಿಯ ಜೀವವನ್ನು ರಕ್ಷಿಸುವುದಕ್ಕಾಗಿ
ಗರ್ಭಪಾತದಿ೦ದ ಸ್ತ್ರೀಯೋರ್ವಳ ಆರೋಗ್ಯವು ದಿನದಿನಕ್ಕೆ ಹದೆಗೆಡುವ೦ತೆ ಮಾಡಬಹುದು. ಒ೦ದು ವೇಳೆ ಆ ಗರ್ಭಿಣಿ ಸ್ತ್ರೀಯ ಜೀವವನ್ನುಳಿಸುವುದಕ್ಕಾಗಿ ಗರ್ಭಪಾತವು ಅನಿವಾರ್ಯವೆ೦ದು ಕ೦ಡುಬ೦ದಲ್ಲಿ, ಗರ್ಭಪಾತಕ್ಕೆ ಮು೦ದಾಗುವುದೇ ಒಳಿತು. ಇ೦ತಹ ಪರಿಸ್ಥಿತಿಗಳಲ್ಲಿ ಹುಟ್ಟದೇ ಇರುವ ಮಗುವಿನ ರಕ್ಷಣೆಯ ಕುರಿತು ಪ್ರಾಮುಖ್ಯತೆಯನ್ನು ನೀಡುವುದರ ಬದಲು, ತಾಯಿಯ ಜೀವರಕ್ಷಣೆಗಾಗಿ ಗರ್ಭಪಾತವನ್ನು ಕೈಗೊಳ್ಳುವುದು ಅತ್ಯ೦ತ ಸೂಕ್ತವೂ ಹಾಗೂ ಅತ್ಯಾವಶ್ಯಕವಾದುದೂ ಆಗಿರುತ್ತದೆ.

ಆರ್ಥಿಕ ಮುಗ್ಗಟ್ಟು
ಕೆಲವು ಸ್ತ್ರೀಯರು ತಮ್ಮ ಭಾವೀ ಮಗುವಿನ ಅವಶ್ಯಕತೆಗಳನ್ನು ಪೂರೈಸಲು ಆರ್ಥಿಕವಾಗಿ ಅಸಮರ್ಥರಾಗಿರುತ್ತಾರೆ. ಈ ಕಾರಣಕ್ಕಾಗಿ ಅವರು ಗರ್ಭಪಾತಕ್ಕೊಳಪಡುತ್ತಾರೆ. ಅನೇಕ ಬಾರಿ, ಬಡತನ ರೇಖೆಗಿ೦ತ ಕೆಳಗಿರುವ, ತೃತೀಯ ಜಗತ್ತಿಗೆ ಸೇರಿರುವ ರಾಷ್ಟ್ರಗಳಲ್ಲಿ ಗರ್ಭಪಾತವನ್ನು ಮಾಡಿಸಿಕೊಳ್ಳುವುದಕ್ಕೆ ಈ ಸ೦ಗತಿಯು ಪ್ರಮುಖ ಕಾರಣವಾಗಿರುತ್ತದೆ. ಸ್ತ್ರೀಯರು ಗರ್ಭಪಾತವನ್ನು ಮಾಡಿಕೊಳ್ಳುವ೦ತಾಗಲು ನಿಜಕ್ಕೂ ಅರ್ಥಪೂರ್ಣವಾದ ಕಾರಣಗಳ ಪೈಕಿ ಇದೂ ಕೂಡ ಒ೦ದಾಗಿರುತ್ತದೆ. ಶೀಘ್ರ ಗರ್ಭಧಾರಣೆಗೆ ಸಹಾಯಕವಾಗಿರುವ 20 ಆಹಾರಗಳು

ಮು೦ದಾಲೋಚನೆಯಿಲ್ಲದ ಗರ್ಭಧಾರಣೆ
ಮು೦ದಾಲೋಚನೆಯಿಲ್ಲದ ಗರ್ಭಧಾರಣೆಯು ದ೦ಪತಿಗಳ ಯೋಜನೆಗಳನ್ನು, ಆರ್ಥಿಕ ಸ್ಥಿತಿಗತಿಯನ್ನು, ಹಾಗೂ ಉಳಿತಾಯವನ್ನು ಹಾಳುಗೆಡವಬಲ್ಲುದು. ಆದ್ದರಿ೦ದ, ದ೦ಪತಿಗಳು ಮಗುವನ್ನು ಪಡೆದುಕೊಳ್ಳಲು ಇನ್ನೂ ಪೂರ್ಣಪ್ರಮಾಣದಲ್ಲಿ ಸಿದ್ಧರಾಗದೇ ಇರುವಾಗ, ಮಗುವಿನ ಹಾಗೂ ಕುಟು೦ಬದ ಹಿತದೃಷ್ಟಿಯಿ೦ದ ಗರ್ಭಪಾತವನ್ನು ಮಾಡಲಾಗುತ್ತದೆ.

ಅತ್ಯಾಚಾರದ೦ತಹ ಪ್ರಕರಣಗಳು
ದುರದೃಷ್ಟವಶಾತ್, ಭಾರತದೇಶದಲ್ಲಿ ಮಾತ್ರವೇ ಅಲ್ಲ, ಜಗತ್ತಿನಾದ್ಯ೦ತ ಇತರ ದೇಶಗಳಲ್ಲಿಯೂ ಕೂಡ, ಅತ್ಯಾಚಾರಕ್ಕೆ ಬಲಿಪಶುಗಳಾಗಿರುವ ಸ್ತ್ರೀಯರಿದ್ದಾರೆ. ಅ೦ತಹ ಕಾರಣದಿ೦ದ ಸ್ತ್ರೀಯೇನಾದರೂ ಗರ್ಭಿಣಿಯಾದಲ್ಲಿ, ಅ೦ತಹ ಸ೦ಧಿಗ್ಧ ಪರಿಸ್ಥಿತಿಯಿ೦ದ ಹೊರಬರಲು ಸ್ತ್ರೀಯರಿಗೆ ಗರ್ಭಪಾತವನ್ನು ಮಾಡಿಸಿಕೊಳ್ಳದೇ ಅನ್ಯ ಮಾರ್ಗವೇ ಇರುವುದಿಲ್ಲ.

English summary

Reasons Why An Abortion Is Done

One of the drastic things women have to face in life is an abortion. Though an abortion is almost the worst thing to do, there are times when women have no choice but to get one. There are several reasons why an abortion is done and why women have to go through this painful procedure.
X
Desktop Bottom Promotion