For Quick Alerts
ALLOW NOTIFICATIONS  
For Daily Alerts

ರಕ್ತದೊತ್ತಡದ ಮಹಿಳೆಯರಿಗೆ ಗರ್ಭಧಾರಣೆಯ ಸಲಹೆಗಳು

By Hemanth P
|

ಮಹಿಳೆಯ ಜೀವನದಲ್ಲಿ ಗರ್ಭಧಾರಣೆ ಎನ್ನುವುದು ತುಂಬಾ ವಿಶೇಷ ಅನುಭವ. ಈ ಸಮಯದಲ್ಲಿ ಆಕೆ ತನ್ನೊಳಗೆ ಇನ್ನೊಬ್ಬ ವ್ಯಕ್ತಿಯನ್ನು ಹೊತ್ತುಕೊಳ್ಳಲು ಮತ್ತು ಕುಟುಂಬಕ್ಕೆ ಹೊಸ ಸದಸ್ಯನನ್ನು ಸ್ವಾಗತಿಸಲು ತಯಾರಾಗುತ್ತಾಳೆ. ಗರ್ಭಧಾರಣೆ ವೇಳೆ ಹೆಚ್ಚಿನ ಆರೈಕೆ ಬೇಕಾಗುತ್ತದೆ. ಮಹಿಳೆ ತನ್ನ ಬಗ್ಗೆ, ತನ್ನ ಗರ್ಭ ಮತ್ತು ಕುಟುಂಬದವರ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಕಾಗುತ್ತದೆ. ಇದು ಎರಡನೇ ಗರ್ಭಧಾರಣೆಯಾಗಿದ್ದರೆ ಆಗ ಪರಿಸ್ಥಿತಿ ಮತ್ತಷ್ಟು ಜಟಿಲವಾಗುತ್ತದೆ.

ನಿಮಗೆ ಮೊದಲ ಮಗುವನ್ನು ಕೂಡ ನೋಡಿಕೊಳ್ಳಬೇಕಾಗುತ್ತದೆ. ಗರ್ಭಧಾರಣೆ ವೇಳೆ ಹಲವಾರು ರೀತಿಯಿಂದ ಅನಾರೋಗ್ಯಕ್ಕೊಳಗಾಗಬಹುದು. ಈ ವೇಳೆ ರಕ್ತದೊತ್ತಡ ಮತ್ತು ಮಧುಮೇಹ ಸಾಮಾನ್ಯವಾಗಿ ಕಂಡುಬರುತ್ತದೆ. ಗರ್ಭಧಾರಣೆಯ ಮಧುಮೇಹ ಮಹಿಳೆಯಲ್ಲಿ ಸಾಮಾನ್ಯ, ಅದೇ ರೀತಿ ರಕ್ತದೊತ್ತಡ ಕೂಡ.

ಗರ್ಭಧಾರಣೆ ವೇಳೆ ರಕ್ತದೊತ್ತಡ ಕಾಣಿಸಿಕೊಳ್ಳುವ ಮಹಿಳೆಯರು ಆರೋಗ್ಯಕರ ಮಗುವಿನ ಜನ್ಮ ನೀಡುತ್ತಾರೆ. ಆದಾಗ್ಯೂ ಕೆಲವೊಂದು ಸಮಸ್ಯೆಗಳು ಮಹಿಳೆಯರನ್ನು ಕಾಡಬಹುದು. ಸಮಸ್ಯೆಗಳು ಹೆಚ್ಚಾದಾಗ ಅದು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಕೆಲವೊಂದು ಸಲ ಇದು ಪ್ರಾಣಹಾನಿಯನ್ನುಂಟು ಮಾಡಬಹುದು. ಮಹಿಳೆಯರ ಮೇಲೆ ರಕ್ತದೊತ್ತಡದ ಪರಿಣಾಮವಾಗಬಹುದು. ಆದರೆ ಗರ್ಭದಲ್ಲಿರುವ ಮಗುವಿಗೆ ಇದರ ಪರಿಣಾಮ ಭಿನ್ನವಾಗಬಹುದು.

ಗರ್ಭಿಣಿ ಮಹಿಳೆ ತೊಂದರೆಗೊಳಗಾಗುವ ಮೊದಲು ಅದಕ್ಕೆ ಚಿಕಿತ್ಸೆ ಮಾಡುವುದು ಮುಖ್ಯ. ಮಹಿಳೆಯರು ಪಾಲಿಸಬೇಕಾದ ಗರ್ಭಧಾರಣೆಯ ಸಲಹೆಗಳು ಹಲವಾರು ಮತ್ತು ಗರ್ಭಧಾರಣೆ ವೇಳೆ ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ರಕ್ತದೊತ್ತಡದಿಂದ ಬಳಲುತ್ತಿರುವ ಮಹಿಳೆಯರಿಗೆ ಗರ್ಭಧಾರಣೆಯ ಕೆಲವೊಂದು ನಿಯಮಗಳು. ಗರ್ಭಧಾರಣೆ ವೇಳೆ ಅತಿಯಾದ ರಕ್ತದೊತ್ತಡದಿಂದ ಪ್ರಿಕ್ಲಾಂಪ್ಸಿಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದಕ್ಕೆ ಕೆಲವೊಂದು ಕಾರಣಗಳು

Pregnancy Tips For Women With BP

* ರಕ್ತ ನಾಳಗಳಿಗೆ ಹಾನಿ

* ಅನಾರೋಗ್ಯಕರ ಆಹಾರ

* ಗರ್ಭಕೋಶಕ್ಕೆ ಸರಿಯಾಗಿ ರಕ್ತ ಸಂಚಲನ ಆಗದಿರುವುದು

* ರೋಗನಿರೋಧಕ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸದಿರುವುದು

ಗರ್ಭಧಾರಣೆ ವೇಳೆ ಆಗುವ ರಕ್ತದೊತ್ತಡದಿಂದ ಉಂಟಾಗುವ ಇತರ ಸಮಸ್ಯೆಗಳು.

1.ಗರ್ಭಧಾರಣೆಯ ರಕ್ತದೊತ್ತಡ
ಗರ್ಭಧಾರಣೆ ಬಿಪಿಯಿಂದ ಮಹಿಳೆಯರು ಈ ಒಂದು ಸಮಸ್ಯೆಯನ್ನು ಎದುರಿಸುತ್ತಾರೆ. ಗರ್ಭಧಾರಣೆ ಬಿಪಿ ಮಹಿಳೆಯರಲ್ಲಿ ಅಧಿಕ ರಕ್ತದೊತ್ತಡ ಉಂಟು ಮಾಡುತ್ತದೆ. ಆದರೆ ಮೂತ್ರದಲ್ಲಿ ಪ್ರೋಟೀನ್ ಅಲ್ಲ. ಗರ್ಭಧಾರಣೆಯ ಅಧಿಕ ರಕ್ತದೊತ್ತಡದಿಂದಾಗಿ ಬಳಿಕ ಪ್ರಿಕ್ಲಾಂಪ್ಸಿಯ ಉಂಟಾಗಬಹುದು.

2. 20 ವಾರಗಳಲ್ಲಿ ಬಿಪಿ
ಗರ್ಭಧಾರಣೆ 20 ವಾರಗಳ ಬಳಿಕ ಕೆಲವು ಮಹಿಳೆಯಲ್ಲಿ ರಕ್ತದೊತ್ತಡ ಕಾಣಿಸುತ್ತದೆ. ಇದನ್ನು ತೀವ್ರ ರಕ್ತದೊತ್ತಡವೆನ್ನಲಾಗುತ್ತದೆ. ಈ ರೀತಿಯ ರಕ್ತದೊತ್ತಡವು ಹೆರಿಗೆ ಬಳಿಕವೂ ಮುಂದುವರಿಯಬಹುದು. ಹೆರಿಗೆಯ 12 ವಾರಗಳ ಬಳಿಕ ಇದು ಸಹಜ ಸ್ಥಿತಿಗೆ ಮರಳಬಹುದು.

3. ಸೂಪರಿ ಇಂಪೊಶಿಸನ್
ಮಹಿಳೆಯರು ಪ್ರಿಕ್ಲಾಂಪ್ಸಿಯ ಮತ್ತು ತೀವ್ರ ರಕ್ತದೊತ್ತಡ ಸುಪೆರಿಇಂಪೊಶಿಸನ್ ನಿಂದ ಬಳಲಬಹುದು. ಬಿಪಿ ಗರ್ಭಧಾರಣೆ ವೇಳೆ ಇದು ಮಹಿಳೆಯರಲ್ಲಿ ಸಾಮಾನ್ಯ. ಈ ವೇಳೆ ಮಹಿಳೆಯರ ಮೂತ್ರದಲ್ಲಿ ಪ್ರೋಟೀನ್ ಸಂಗ್ರಹವಾಗುತ್ತದೆ.

ಇದರತ್ತ ಗಮನಹರಿಸಿ
* ಬಿಪಿ ಗರ್ಭಧಾರಣೆಯಿಂದ ಬಳಲುತ್ತಿರುವ ಮಹಿಳೆಯರು ತಮ್ಮ ಜೀವನಶೈಲಿಯಲ್ಲಿ ಕೆಲವೊಂದು ಅಂಶಗಳನ್ನು ಪಾಲಿಸಬೇಕು. ಪ್ರಮುಖ ಗರ್ಭಧಾರಣೆ ಟಿಪ್ಸ್ ಎಂದರೆ ಮಹಿಳೆಯರು ದೈಹಿಕವಾಗಿ ಕ್ರಿಯಾಶೀಲರಾಗಿರಬೇಕು. ಗರ್ಭಧಾರಣೆ ಬಿಪಿಯಿಂದ ಬಳಲುತ್ತಿರುವ ಮಹಿಳೆ ಸಣ್ಣಮಟ್ಟದಲ್ಲಿ ದೈಹಿಕ ಚಟುವಟಿಕೆಗಳಲ್ಲಿ ತೊಡಗಿರಬೇಕು. ನಡೆದಾಡುವುದು ಇದರಲ್ಲಿ ಅತೀ ಮುಖ್ಯ. ನಿಮ್ಮ ಸಂಗಾತಿ ಜತೆಗೆ ಸ್ವಲ್ಪ ನಡೆದಾಡಿದರೆ ಆಗ ಆರೋಗ್ಯಕ್ಕೆ ಒಳ್ಳೆಯದು.

* ಗರ್ಭಧಾರಣೆ ಬಿಪಿಯಿಂದ ಬಳಲುತ್ತಿರುವ ಮಹಿಳೆಯರು ಪೌಷ್ಟಿಕಾಂಶಗಳಿರುವ ಆಹಾರಕ್ರಮವನ್ನು ಪಾಲಿಸಬೇಕು. ಯಾವುದೇ ಕಾರಣಕ್ಕೂ ಆಹಾರ ತ್ಯಜಿಸಬಾರದು. ನಿಮ್ಮ ವೈದ್ಯರ ಸಲಹೆ ಪಡೆಯಿರಿ, ನೀವು ಏನು ತಿನ್ನಬೇಕು ಮತ್ತು ಆರೋಗ್ಯಕರವಾಗಿರಲು ಅವರು ಮಾರ್ಗದರ್ಶನ ನೀಡಬಹುದು.

* ಹೆಚ್ಚಿನ ಪೂರಕಗಳನ್ನು ಸೇರಿಸುವುದು ಮಹಿಳೆಯರಿಗೆ ಮತ್ತೊಂದು ಗರ್ಭಧಾರಣೆಯ ಟಿಪ್ಸ್. ಗರ್ಭಧಾರಣೆ ಬಿಪಿಯಿಂದ ಬಳಲುತ್ತಿರುವ ಮಹಿಳೆಯರು ತಮ್ಮ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಸೇರಿಸಬೇಕು. ಇದು ರಕ್ತದೊತ್ತಡವನ್ನು ತುಂಬಾ ಕಡಿಮೆ ಮಾಡುತ್ತದೆ.

* ಎಲ್ಲವೂ ನಿಜವಾದರೆ ಗರ್ಭಧಾರಣೆ ಬಿಪಿಯಿಂದ ಬಳಲುತ್ತಿರುವ ಮಹಿಳೆಯರು ನಿಯಮಿತವಾಗಿ ಚೆಕ್ ಅಪ್ ಮಾಡಿಕೊಳ್ಳುತ್ತಿರಬೇಕು. ನಿಯಮಿತವಾಗಿ ನಿಮ್ಮ ಬಿಪಿ ಪರೀಕ್ಷೆ ಮಾಡಿಸಿಕೊಳ್ಳುತ್ತಿರಿ. ವೈದ್ಯರನ್ನು ಭೇಟಿಯಾಗಿ ಮತ್ತು ನಿಮ್ಮ ವೈದ್ಯರೊಂದಿಗಿನ ಭೇಟಿಯನ್ನು ಕಡೆಗಣಿಸದಿರಿ. ವೈದ್ಯರು ನಿಮಗೆ ಸೂಕ್ತ ಸಲಹೆಗಳನ್ನು ನೀಡಬಹುದು.

* ಗರ್ಭಧಾರಣೆ ವೇಳೆ ತುಂಬಾ ಸಂತೋಷ ಮತ್ತು ಶಾಂತವಾಗಿರಿ. ಈ ಒಂದು ಸಲಹೆಯನ್ನು ನಾವು ಯಾವಾಗಲೂ ಪಾಲಿಸಬೇಕು. ಶಾಂತ ಮನಸ್ಥಿತಿಯಿಂದ ನಿಮ್ಮ ಒತ್ತಡ ಕಡಿಮೆ ಮಾಡಿ ಹಲವಾರು ರೋಗಗಳನ್ನು ತಡೆಗಟ್ಟಬಹುದು. ಒಳ್ಳೆಯ ಫಲಿತಾಂಶಕ್ಕಾಗಿ ನೀವು ಧಾನ್ಯ ಮಾಡಬಹುದು. ದಿನಕ್ಕೆ 15-20 ನಿಮಿಷ ಧ್ಯಾನ ಮಾಡಿ ಮತ್ತು ಫಲಿತಾಂಶ ನೋಡಿ. ಗರ್ಭಧಾರಣೆ ವೇಳೆ ಪ್ರತಿಯೊಂದು ಕ್ಷಣವು ಬೇಕಾಗಿರುವುದು ಆರೈಕೆ, ಆರೈಕೆ ಮತ್ತು ಆರೈಕೆ...

English summary

Pregnancy Tips For Women With BP

Pregnancy tips women should follow are many and it is good to stay cautious during the period of pregnancy. Below are some of the pregnancy rules for women suffering from bp.
X
Desktop Bottom Promotion