For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರೇ ಎಚ್ಚರ: ಮೀನು ಸೇವಿಸುವಾಗ ಜಾಗರೂಕತೆ ವಹಿಸಿ!

By Harsha
|

ಮೀನಿನ ಸೇವನೆ ಗರ್ಭಧಾರಣೆಯ ಸಮಯದಲ್ಲಿ ನಿಮಗೆ ಹಾಗು ನಿಮ್ಮ ಮಗುವಿಗೆ ಬಹಳ ಒಳ್ಳೆಯದು. ಆದರೆ ಸಾಗರದ ಮೀನಿನ ಆಹಾರ ಸೇವನೆ ಮಾಡುವಾಗ ಮಗುವಿಗೆ ಹಾನಿ ಆಗದಂತೆ ಬಹಳ ಎಚ್ಚರವಹಿಸುವುದು ಒಳ್ಳೆಯದು. ಏಕೆಂದರೆ ಕೆಲವು ಮೀನುಗಳಲ್ಲಿ ಅದರಲ್ಲಿಯೂ ದೊಡ್ಡದಾದ ಕಡಲ ಮೀನುಗಳಲ್ಲಿ ಪಾದರಸದ ಅಂಶ ಇರಬಹುದು. ಈ ಅಂಶವು ಮಗುವಿನ ಬೆಳವಣಿಗೆಗೆ ಹಾಗೂ ಗರ್ಭಿಣಿಯರಿಗೆ ನಾನಾ ರೀತಿಯ ತೊಂದರೆಗಳನ್ನುಂಟು ಮಾಡಬಹುದು.

ಸಾಮಾನ್ಯವಾಗಿ ಕಾರ್ಖಾನೆಗಳ ತ್ಯಾಜ್ಯ ವಸ್ತುಗಳಿಂದ ಪಾದರಸವು ಕಡಲನ್ನು ಸೇರುತ್ತದೆ. ಹೀಗೆ ಸೇರಿದ ಪಾದರಸವು ಮೀಥೈಲ್ ಮರ್ಕುರಿಯಾಗಿ ಪರಿವರ್ತನೆಗೊಳ್ಳುತ್ತದೆ. ಈ ಅಪಾಯಕಾರಿ ಸಂಯುಕ್ತವು ಆ ಕಲುಷಿತ ನೀರಿನಲ್ಲಿರುವ ಮೀನುಗಳನ್ನು ಸೇರಿ ಅದರ ಮಾಂಸದೊಡನೆ ಒಂದುಗೂಡುತ್ತದೆ. ಕೆಲವೊಮ್ಮೆ ಮೀನನ್ನು ಸರಿಯಾಗಿ ಬೇಯಿಸಿದ ನಂತರವೂ ಅಲ್ಲೇ ಉಳಿಯುತ್ತದೆ.

Pregnancy Tip – Be cautious while eating fish

ಗರ್ಭಧಾರಣೆಯ ಸಮಯದಲ್ಲಿ ಹೆಚ್ಚು ಪ್ರಮಾಣದಲ್ಲಿ ಪಾದರಸದ ಸೇವನೆಯಾದಲ್ಲಿ ಮಗುವಿನ ಮಿದುಳಿನ ಹಾಗು ನರಮಂಡಲದ ಬೆಳವಣಿಗೆ ಕುಂದುವುದು. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ನಿಮ್ಮ ಮೀನು ಸೇವನೆಗೆ ಮಿತಿ ಇಡಿ. ವಾರದಲ್ಲಿ ಕೇವಲ ಒಂದು ಬಾರಿ ಮಾತ್ರ ಸೇವಿಸಿ. ಇವು ಮಗುವಿನ ಮಿದುಳು ಮತ್ತು ಕಣ್ಣಿನ ಬೆಳವಣಿಗೆಗೆ ಬಹಳ ಮುಖ್ಯವಾದುದು. ಹಾಗಾಗಿ ಗರ್ಭಧಾರಣೆಯ ಸಮಯದಲ್ಲಿ ಮೀನು ತಿನ್ನುವುದಾದಲ್ಲಿ ಈ ನಿಯಮಗಳನ್ನು ಪಾಲಿಸುವುದು ಅತ್ಯವಶ್ಯಕ

* ದೊಡ್ಡದಾದ ಕಡಲ ಮೀನುಗಳಾದ ಸ್ವೋರ್ಡ್ ಮೀನು, ಕಿಂಗ್ ಮ್ಯಾಕರೆಲ್ ಗಳನ್ನೂ ಸೇವಿಸುದು ತಪ್ಪಿಸಿರಿ. ಬದಲಿಗೆ ಸ್ಥಳೀಯ ಕೆರೆಗಳ ಮೀನುಗಳಾದ ರೋಹು, ಕ್ಯಾಟಲ ಹಿಲ್ಸ ಸುರ್ಮೈ ಇತ್ಯಾದಿಗಳ ಸೇವನೆ ಮಾಡಿ.

* ಶೇಖರಿಸಲಾಗಿರುವ ಮೀನು ತಿನ್ನುವುದನ್ನೂ ತಪ್ಪಿಸಿರಿ ಏಕೆಂದರೆ ಇದರಲ್ಲಿ ಬಹಳ ಸಂರಕ್ಷಕ(ಫ್ರೆಸೆರ್ವಟಿವ್)ಗಳಿರುತ್ತವೆ.

* ಕಡೆಯದಾಗಿ ಅಗಸೆ ಬೀಜ ಮೊಸರು ಮತ್ತು ಮೊಟ್ಟೆಗಳನ್ನು ಮೀನಿನ ಬದಲಿಗೆ ಸೇವಿಸಬಹುದು.

English summary

Pregnancy Tip – Be cautious while eating fish

Fish can be an excellent source of omega-3 fatty acids and proteins, that can do a great deal of good to you and your baby during your pregnancy. But keep in mind that you need to be cautious with your seafood consumption to ensure that it doesn’t harm your baby in any way.
X
Desktop Bottom Promotion