For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರಲ್ಲಿ ಹುಳಿ ತಿನ್ನುವ ಬಯಕೆ; ಏನಿದರ ರಹಸ್ಯ?

|

ಮಹಿಳೆಗೆ ಸುಮಾರು ಮೂರು ತಿಂಗಳ ಬಳಿಕ ತನ್ನ ಆಹಾರದಲ್ಲಿ ವಿಭಿನ್ನವಾದುದನ್ನು ತಿನ್ನುವ ಬಯಕೆ ಮೂಡುತ್ತದೆ. ಆದರೆ ಏನನ್ನು ತಿನ್ನಬೇಕು ಎನ್ನುವುದು ಪ್ರತಿ ಮಹಿಳೆಗೂ ಭಿನ್ನವಾಗಿರುತ್ತದೆ. ಕೆಲವರಿಗೆ ಹುಳಿ ಬೇಕಾದರೆ ಕೆಲವರಿಗೆ ಸಿಹಿ, ಕೆಲವರಿಗೆ ಉಪ್ಪು ಬೇಕೆನಿಸುತ್ತದೆ. ಬಸಿರು ಬಯಕೆ ಎಂದು ವೈದ್ಯಕೀಯ ಭಾಷೆಯಲ್ಲಿ ಕರೆಯಲಾಗುವ ಈ ಹಂಬಲದಲ್ಲಿ ಮುಂದೆ ಹುಟ್ಟಲಿರುವ ಮಗು ಗಂಡೋ ಹೆಣ್ಣೋ ಎಂದು ಅರಿಯುವ ಶಕ್ತಿ ಇದೆ ಎಂದು ನಮ್ಮ ಹಿರಿಯರು ನಂಬಿದ್ದರು.

ಹಿಂದೆ ಮಗುವಿನ ಲಿಂಗ ಪತ್ತೆಮಾಡಲು ಯಾವುದೇ ವೈದ್ಯಕೀಯ ವಿಧಾನ ಇಲ್ಲದಿದ್ದ ಕಾಲದಲ್ಲಿ ಈ ಹಂಬಲವನ್ನೇ ಸೂಕ್ಷ್ಮವಾಗಿ ಗಮನಿಸಿ ಮಗು ಗಂಡೋ ಹೆಣ್ಣೋ ಎಂದು ನಿರ್ಧರಿಸುತ್ತಿದ್ದರು. ಬಸಿರಿನ ಸಮಯದಲ್ಲಿ ದೇಹದಲ್ಲಿ ಸ್ರವಿಸುವ HCG(human chorionic gonado tropin) ಎಂಬ ಹಾರ್ಮೋನು ಈ ಬಯಕೆಗೆ ಕಾರಣ ಎಂದು ವೈದ್ಯರು ತಿಳಿಸುತ್ತಾರೆ. ಇಂದು ಹುಟ್ಟಲಿರುವ ಮಗುವಿನ ಲಿಂಗದ ಪತ್ತೆಗೆ ವೈದ್ಯಕೀಯ ಸಾಧನಗಳು ಲಭ್ಯವಿದ್ದರೂ ಭಾರತದಲ್ಲಿ ಅದು ಕಾನೂನುಬಾಹಿರವಾದುದರಿಂದ ವೈದ್ಯರು ಮಗುವಿನ ಲಿಂಗವನ್ನು ತಿಳಿಸುವುದಿಲ್ಲ.

ಆದರೂ ತಾಯಿಯಾಗುತ್ತಿರುವವಳಿಗೆ ತನ್ನ ಗರ್ಭದಲ್ಲಿರುವ ಮಗು ಯಾವುದೆಂಬ ಕುತೂಹಲ ಹೆಚ್ಚುತ್ತಾ ಹೋಗುತ್ತದೆ. ಆ ಸಮಯದಲ್ಲಿ ಬಸಿರು ಬಯಕೆಯನ್ನು ಕೊಂಚ ಸೂಕ್ಷ್ಮವಾಗಿ ಅವಲೋಕಿಸಿದರೆ ಸರಿಸುಮಾರಾದ ಉತ್ತರ ದೊರಕುತ್ತದೆ. ಹಿರಿಯರು ಕಲೆಹಾಕಿದ ಈ ಮಾಹಿತಿಯ ಬಗ್ಗೆ ವಿವರಗಳನ್ನು ಕೆಳಗೆ ನೀಡಲಾಗಿದೆ. ಒಂದು ವೇಳೆ ಬಸುರಿಗೆ ತಾನೇನು ಬಯಸುತ್ತಿದ್ದೇನೆ ಎಂದು ಸ್ಪಷ್ಟವಾಗಿ ತಿಳಿಯದೇ ಇದ್ದಲ್ಲಿ, ಮಾಡುತ್ತಿರುವ ಊಟದಲ್ಲಿ ಯಾವ ವ್ಯಂಜನವನ್ನು ಹೆಚ್ಚು ನಂಜಿಕೊಳ್ಳುತ್ತಿದ್ದಾರೆ ಎಂದು ಗಮನಿಸುವ ಮೂಲಕ ಆ ಬಯಕೆಯನ್ನು ಕಂಡುಕೊಳ್ಳಬಹುದು.

ಗರ್ಭಿಣಿಯರು ಇಷ್ಟಪಟ್ಟು ತಿನ್ನುವ ಆಹಾರಗಳು

ಹುಳಿ

ಹುಳಿ

ಬಸರಿಗೆ ಹುಳಿ ತಿನ್ನುವ ಬಯಕೆ ಮೂಡಿದರೆ ಹುಟ್ಟಲಿರುವ ಮಗು ಗಂಡು ಎಂದು ಹಿರಿಯರು ಅನುಭವದಿಂದ ಹೇಳುತ್ತಾರೆ. ಹುಣಸೆ ಹಣ್ಣು, ಲಿಂಬೆಹಣ್ಣಿನ ಉಪ್ಪಿನಕಾಯಿ, ನೆಲ್ಲಿಕಾಯಿ, ಕೋಕಂ ಮೊದಲಾದವುಗಳನ್ನು ತಿನ್ನುವ ಸ್ಪಷ್ಟ ಬಯಕೆ ಗಂಡು ಮಗುವಿನ ಆಗಮನದ ಸೂಚನೆ ಎಂಬುದು ಹಿರಿಯರ ಅನುಭವದ ಮಾತು.

ಉಪ್ಪು

ಉಪ್ಪು

ಹೆಚ್ಚಿನ ಉಪ್ಪು ತಿನ್ನುವ ಬಯಕೆ ಮೂಡಿದರೆ ಹುಟ್ಟಲಿರುವ ಮಗು ಸಹಾ ಗಂಡು ಎಂದು ನಂಬಲಾಗಿದೆ. ಊಟದಲ್ಲಿ ಉಪ್ಪು ಸರಿಯಾಗಿದ್ದರೂ ಇನ್ನಷ್ಟು ಉಪ್ಪು ಸುರಿದುಕೊಳ್ಳುವುದು, ಕಡ್ಡಿಗೆ ಸ್ವಲ್ಪ ಹುಣಸೆಹಣ್ಣನ್ನು ಐಸ್ ಕ್ಯಾಂಡಿಯಂತೆ ಲೇಪಿಸಿ ಸುತ್ತಲೂ ಹರಳುಪ್ಪನ್ನು ತಟ್ಟಿ ಐಸ್ ಕ್ಯಾಂಡಿ ಚೀಪುವಂತೆ ಚೀಪುವುದು, ಉಪ್ಪು ಹೆಚ್ಚಾಗಿರುವ ಆಲುಗಡ್ಡೆ ಚಿಪ್ಸ್, ಉಪ್ಪಿನ ನೀರಿನಲ್ಲಿ ಬೇಯಿಸಿರುವ ಕಡಲೆ, ಉಪ್ಪಿನಲ್ಲಿ ನೆನೆಸಿರುವ ಮೆಣಸು ಮೊದಲಾದವು ಗಂಡು ಮಗುವಿನ ಆಗಮನ ಹಾಡುತ್ತವೆ.

ಸಿಹಿ

ಸಿಹಿ

ಸಿಹಿ ತಿನ್ನುವ ಬಯಕೆ ಹೆಣ್ಣು ಮಗುವಿನ ಆಗಮನದ ಮುನ್ಸೂಚನೆ ಎಂದು ಹಿರಿಯರು ಹೇಳುತ್ತಾರೆ. ಸಿಹಿ ಪದಾರ್ಥಗಳನ್ನು, ಚಾಕಲೇಟು, ಬೆಲ್ಲ, ಕೊಬ್ಬರಿ ಮಿಠಾಯಿ, ಚಾ ಕಾಫಿಯಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿನ ಸಕ್ಕರೆ ಸುರಿದುಕೊಳ್ಳುವುದು, ತಟ್ಟೆಯಲ್ಲಿರುವ ಸಿಹಿ ತಿನಿಸುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನುವುದು ಹೆಣ್ಣು ಮಗು ಬೆಳೆಯುತ್ತಿರುವ ಮುನ್ಸೂಚನೆಯಾಗಿದೆ.

ಖಾರ

ಖಾರ

ಊಟದಲ್ಲಿ ಹೆಚ್ಚು ಖಾರವನ್ನು ಬಯಸುವುದೂ ಗಂಡು ಮಗುವಿನ ಸೂಚನೆಯಾಗಿದೆ. ಮಾಡುವ ಅಡುಗೆಗಳಲ್ಲಿ ಮೆಣಸು ಹೆಚ್ಚಿರುವ ಅಡುಗೆಗಳನ್ನು ಆಯ್ಕೆ ಮಾಡಿಕೊಳ್ಳುವುದು, ತುತ್ತಿನ ನಡುವೆ ಹಸಿಮಣಸು ಅಥವಾ ಹುರಿದ ಒಣಮೆಣಸಿನ ತುಂಡುಗಳನ್ನು ತಿನ್ನುವುದು ಸಹಾ ಗಂಡು ಮಗುವಿನ ಸೂಚನೆಗಳಾಗಿವೆ.

ಲಿಂಬೆ

ಲಿಂಬೆ

ಲಿಂಬೆಹಣ್ಣನ್ನು ಕತ್ತರಿಸಿ ಹಾಗೇ ನೆಕ್ಕುವ ಬಯಕೆಯಾಗುತ್ತಿದೆಯೇ? ಹಾಗಿದ್ದರೆ ಹೆಚ್ಚಿನ ಪಕ್ಷ ಆಗುವುದು ಗಂಡು ಮಗುವೇ. ಲಿಂಬೆರಸ, ಲಿಂಬೆ ಹಣ್ಣಿನ ಪಾನಕ, ಲಿಂಬೆರಸ ಹಾಕಿರುವ ವ್ಯಂಜನಗಳನ್ನು ತಿನ್ನುವ ಬಯಕೆಗಳು ಗಂಡು ಮಗುವಿನ ಸೂಚನೆ ನೀಡುತ್ತವೆ. ಗಂಡು ಮಗುವನ್ನು ಹೆತ್ತ ಹಲವು ತಾಯಂದಿರು ತಮಗೆ ಬಸಿರಿನ ಮೊದಲು ಲಿಂಬೆಹಣ್ಣು ತಿನ್ನುವ ಹೆಚ್ಚಿನ ಬಯಕೆ ಇಲ್ಲದಿದ್ದುದು ಬಸಿರಿನ ಸಮಯದಲ್ಲಿ ಹೆಚ್ಚಾಗಿರುವುದನ್ನು ತಿಳಿಸಿರುವುದು ಈ ವಾದಕ್ಕೆ ಪುಷ್ಟಿ ನೀಡುತ್ತದೆ.

ಮಾಂಸಾಹಾರ

ಮಾಂಸಾಹಾರ

ತನ್ನ ಊಟದಲ್ಲಿ ಹೆಚ್ಚಿನ ಮಾಂಸಾಹಾರವಿರಬೇಕು ಎಂದು ಗರ್ಭಿಣಿ ಬಯಸಿದರೆ ಅದು ಗಂಡು ಮಗುವಿನ ಸೂಚನೆ ಎಂದು ನಂಬಲಾಗಿದೆ.

ಉಪ್ಪಿನಕಾಯಿ

ಉಪ್ಪಿನಕಾಯಿ

ಊಟದ ನಡುವೆ ಅಗತ್ಯಕ್ಕಿಂತ ಹೆಚ್ಚನ ಪ್ರಮಾಣದಲ್ಲಿ ಉಪ್ಪಿನಕಾಯಿ ನೆಂಜಿಕೊಳ್ಳುತ್ತಿದ್ದರೆ ಗಂಡು ಮಗುವಿನ ಆಗಮನದ ಸೂಚನೆಯಾಗಿದೆ. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಉಪ್ಪಿನಕಾಯಿ ಉಪ್ಪು ಮತ್ತು ಖಾರ ಹೊಂದಿದ್ದರೆ ಈ ಮಾತು ಸರಿ. ಒಂದು ವೇಳೆ ಸಿಹಿ ಉಪ್ಪಿನಕಾಯಿಯ ಬಯಕೆ ಹೆಚ್ಚಾಗಿದ್ದರೆ ಅದು ಹೆಣ್ಣು ಮಗುವಿನ ಸೂಚನೆಯಾಗಿದೆ.

ಕಿತ್ತಲೆ ಹಣ್ಣು

ಕಿತ್ತಲೆ ಹಣ್ಣು

ಸಿಟ್ರಸ್ ಆಮ್ಲ ಹೆಚ್ಚಿರುವ ಹಣ್ಣುಗಳನ್ನು ತಿನ್ನುವ ಬಯಕೆ ಗಂಡು ಮಗುವಿನ ಆಗಮನದ ಸೂಚನೆಯಾಗಿದೆ. ಕಿತ್ತಲೆ ಹಣ್ಣು, ಮೂಸಂಬಿ, ಮೊದಲಾದ ಹಣ್ಣುಗಳನ್ನು ಸುಲಿದು ತಿನ್ನುವ ಅಥವಾ ಜ್ಯೂಸ್ ಮಾಡಿಕೊಂಡು ಕುಡಿಯುವ ಬಯಕೆ ಗಂಡು ಮಗುವಿನ ಆಗಮನದ ಮುನ್ಸೂಚನೆಯಾಗಿದೆ.

ಈ ಎಲ್ಲ ಬದಲಾವಣೆಗಳು, ಬಯಕೆಗಳು ಎಲ್ಲ ಗರ್ಭಿಣಿಯರಲ್ಲೂ ಆಗಬೇಕೆಂದಿಲ್ಲ. ಅವರವರ ದೈಹಿಕ, ಮಾನಸಿಕ ಪ್ರಕೃತಿಗೆ ಅನುಗುಣವಾಗಿ ಬದಲಾವಣೆ ಆಗುತ್ತಿರುತ್ತದೆ. ಮೇಲಿನ ಯಾವುವೂ ವೈಜ್ಞಾನಿಕವಾಗಿ ಪುರಾವೆಯಾಗಿಲ್ಲ. ಎಲ್ಲವೂ ಹಿರಿಯರಿಂದ ಸಿಕ್ಕಿರುವ ಅನುಭವದ ಮಾತುಗಳು ಮಾತ್ರ. ಇವು ಎಷ್ಟರ ಮಟ್ಟಿಗೆ ಸರಿ ಎಂಬುವುದನ್ನು ಗರ್ಭಿಣಿಯರು ಒಂದೆಡೆ ಬರೆದಿಟ್ಟುಕೊಂಡು ಪ್ರಸವದ ಬಳಿಕ ನಮಗೆ ತಿಳಿಸಿದರೆ ಇನ್ನೂ ಹೆಚ್ಚಿನವರಿಗೆ ಈ ಮಾಹಿತಿಯ ಉಪಯೋಗಕ್ಕೆ ಬರಬಹುದು.

English summary

Pregnancy Cravings When Expecting A Boy

Food cravings are pretty normal during pregnancy. The choices differ from person to person. Some prefer sweet, while others love salt. Some crave sour, while others need bitter.Since in India it is not legal to determine the sex of your baby, you may have to wait until its birth.
X
Desktop Bottom Promotion