For Quick Alerts
ALLOW NOTIFICATIONS  
For Daily Alerts

ಆರನೆಯ ತಿಂಗಳಿನಲ್ಲಿ ಗರ್ಭಾವಸ್ಥೆಯ ಕಾಳಜಿ ಹೇಗೆ?

|

ಗರ್ಭಾವಸ್ಥೆ ಎಂಬುದು ಕುಟುಂಬದ ಒಂದು ಸಂತೋಷಕ್ಕೆ ಕಾರಣವಾಗುತ್ತದೆ. ಜಗತ್ತಿಗೆ ಹೊಸ ಅತಿಥಿಯನ್ನು ಬರಮಾಡಿಕೊಳ್ಳುವ ಕಾತರ ಅಚ್ಚರಿ ಸಂಭ್ರಮ ಎಲ್ಲರಲ್ಲೂ ಮನೆಮಾಡಿರುತ್ತದೆ. ನವ ಮಾಸಗಳು ತುಂಬಿ ನಿಮ್ಮ ಸಂತೋಷದ ಮೂಟೆಯನ್ನೇ ಹೊತ್ತು ತರುವ ಸುಂದರ ದೇವ ಪುತ್ಥಳಿ ನಿಮ್ಮ ಕೈ ಸೇರುತ್ತದೆ.

ಇನ್ನಷ್ಟು ಮಾಹಿತಿಗಳಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಭಾರತದಲ್ಲಿರುವ ಸಾಮಾನ್ಯ ಗರ್ಭಾವಸ್ಥೆಯ ನಂಬಿಕೆಗಳು

ಆದರೆ ಗರ್ಭಾವಸ್ಥೆ ಮುಂದುವರಿದಂತೆ, ನೀವು ಹೆಚ್ಚು ಕಾಳಜಿ ಮತ್ತು ಜಾಗರೂಕತೆಯನ್ನು ತೆಗೆದುಕೊಳ್ಳಬೇಕು. ಒಂಭತ್ತನೆಯ ತಿಂಗಳು ಆತಂಕ ಮತ್ತು ದೀರ್ಘವಾಗಿರುತ್ತದೆ. ಗರ್ಭಿಣಿ ಸ್ತ್ರೀ ತನ್ನಷ್ಟಕ್ಕೆ ಕಾಳಜಿ ತೆಗೆದುಕೊಳ್ಳಲು ಹೆದರುತ್ತಾಳೆ ಮತ್ತು ಮನೆಯ ಸದಸ್ಯರ ಸ್ನೇಹಿತರ ಪ್ರೋತ್ಸಾಹ ಬೆಂಬಲ ಆಕೆಗೆ ಅತೀ ಅಗತ್ಯ.

ಗರ್ಭಿಣಿ ಸ್ತ್ರೀಯರಿಗೆ ಒಂದು ಸಾಮಾನ್ಯ ಸಲಹೆಯಂತೆ ಅವರು ಹೆಚ್ಚು ನ್ಯೂಟ್ರೀನ್ ಭರಿತ ಆಹಾರಗಳನ್ನು ತೆಗೆದುಕೊಳ್ಳಬೇಕು. ಹಾನಿಕಾರಕ ಅಂಶವಿರುವ ಆಹಾರಗಳನ್ನು ಸೇವಿಸದೇ ನಿಯಮಿತ ವ್ಯಾಯಾಮದಿಂದ ಆರೋಗ್ಯವನ್ನು ಉತ್ತಮಪಡಸಿಕೊಳ್ಳಬೇಕು.

ಇನ್ನಷ್ಟು ಮಾಹಿತಿಗಳಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸಂತಾನೋತ್ಪತ್ತಿ ಕಡಿಮೆ ಮಾಡುವ ಪಾನೀಯಗಳು

ಆದರೆ ಪ್ರತೀ ತಿಂಗಳು ಕಾಳಜಿಯಲ್ಲಿ ಹೆಚ್ಚಿನ ಗಮನವನ್ನು ನೀಡಬೇಕು. ಒಂದೊಂದು ತಿಂಗಳು ಕಳೆದಂತೆ ಗರ್ಭಿಣಿಯರ ದೇಹದಲ್ಲಿ ಅನೇಕ ಮಾರ್ಪಾಡುಗಳು ಉಂಟಾಗುತ್ತವೆ. ಆರನೆಯ ತಿಂಗಳಿನಲ್ಲಿ, ನಿಮ್ಮ ದ್ವಿತೀಯ ತ್ರೈಮಾಸಿಕವನ್ನು ಕೊನೆಗೊಳಿಸುತ್ತೀರಿ ಮತ್ತು ಮೂರನೆಯ ತ್ರೈ ಮಾಸಿಕಕ್ಕೆ ಕಾಲಿಡುತ್ತೀರಿ. ನೀವು 6 ತಿಂಗಳ ಗರ್ಭಿಣಿಯಾಗಿರುವಾಗ,

ಹೆರಿಗೆ ಪೂರ್ವ ಅವಧಿಯಲ್ಲಿ ಮಗುವು ಗರ್ಭದಿಂದ ಹೊರಬರುವ ಅವಧಿಯಾಗಿರುತ್ತದೆ. 6 ನೆಯ ತಿಂಗಳಿನಲ್ಲಿ ನಿಮ್ಮ ಹೊಟ್ಟೆ ದೊಡ್ಡದಾಗಿರುತ್ತದೆ ಮತ್ತು ಮಗುವು ಬೆಳೆಯುತ್ತದೆ. 6 ನೆಯ ತಿಂಗಳಿನಲ್ಲಿ ನೀವು ತೆಗೆದುಕೊಳ್ಳಬೇಕಾದ ಕೆಲವೊಂದು ಮಾರ್ಗದರ್ಶನಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ.

ಇನ್ನಷ್ಟು ಮಾಹಿತಿಗಳಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಗರ್ಭಿಣಿಯೆಂದು ಹೇಳುವ ಲಕ್ಷಣಗಳಿವು

1.ದ್ರವಾಹಾರ ಸೇವನೆ:

1.ದ್ರವಾಹಾರ ಸೇವನೆ:

6 ನೆಯ ತಿಂಗಳಿನಲ್ಲಿ ಗರ್ಭಿಣಿ ಸ್ತ್ರೀಯರು ತೆಗೆದುಕೊಳ್ಳಬೇಕಾದ ಮೊದಲನೆಯ ಕಾಳಜಿ ಎಂದರೆ ದ್ರವಾಹಾರವನ್ನು ಸೇವಿಸುವುದಾಗಿದೆ. ದೇಹವು ನಿರ್ಜಲೀಕರಣಕ್ಕೆ ಒಳಗಾಗದಂತೆ ಸಾಕಷ್ಟು ನೀರು ಕುಡಿಯುವುದನ್ನು ಆಕೆ ಅಭ್ಯಾಸ ಮಾಡಬೇಕು.

2.ಸಣ್ಣ ಊಟ:

2.ಸಣ್ಣ ಊಟ:

ಗರ್ಭಿಣಿ ಸ್ತ್ರೀಯರು ಸಣ್ಣ ಮಟ್ಟಿನ ಊಟವನ್ನು ಆಗಾಗ್ಗೆ ತೆಗೆದುಕೊಳ್ಳುವುದು ಅತ್ಯವಶ್ಯಕ. ಸಣ್ಣದಾಗಿರುವ ಆದರೆ ಆಗಾಗ್ಗೆ ಆಹಾರವನ್ನು ತೆಗೆದುಕೊಳ್ಳಬೇಕು ಇದರಿಂದ ಆಕೆಯ ದೇಹದಲ್ಲಿ ಶಕ್ತಿ ಹೆಚ್ಚಾಗುತ್ತದೆ.

3.ಖಾರದ ಆಹಾರಗಳು:

3.ಖಾರದ ಆಹಾರಗಳು:

ಆರು ತಿಂಗಳ ಗರ್ಭಿಣೀ ಸ್ತ್ರೀಯರು ಎದೆ ಉರಿಯಂತಹ ಸಮಸ್ಯೆಯಿಂದ ಬಳಲುತ್ತಾರೆ. ಏಕೆಂದರೆ ರಕ್ತವು ಗರ್ಭಕ್ಕೆ ಹೆಚ್ಚು ಪೂರೈಕೆಯಾಗುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ಈ ಸಮಯದಲ್ಲಿ ಆಕೆ ಖಾರದ ಆಹಾರಗಳನ್ನು ತೆಗೆದುಕೊಳ್ಳದಿರುವುದು ಉತ್ತಮ.

4.ವ್ಯಾಯಾಮ:

4.ವ್ಯಾಯಾಮ:

ದೊಡ್ಡದಾಗಿರುವ ಹೊಟ್ಟೆ ಮತ್ತು ಇದರಿಂದ ನಿಮ್ಮ ಬೆನ್ನಿಗೆ ಹೆಚ್ಚಿನ ಒತ್ತಡ ಬೀಳುತ್ತದೆ. ಅಧಿಕ ಭಾರವನ್ನು ನೀವು ಹೊರುವುದು ಇದಕ್ಕೆ ಕಾರಣ. ಈ ಸಮಯದಲ್ಲಿ ಸ್ವಲ್ಪ ತೂಕವನ್ನು ಇಳಿಸಲು ನೀವು ವ್ಯಾಯಾಮದ ಮೊರೆ ಹೋಗಲೇಬೇಕು.

5.ಬೆನ್ನಿಗೆ ಬೀಳುವ ಒತ್ತಡವನ್ನು ನಿವಾರಿಸಿ:

5.ಬೆನ್ನಿಗೆ ಬೀಳುವ ಒತ್ತಡವನ್ನು ನಿವಾರಿಸಿ:

ನಿಮ್ಮ ಬೆಳೆಯುತ್ತಿರುವ ಪೃಷ್ಠವು ನಿಮ್ಮ ದೇಹದ ಅಂಗರಚನಾ ವ್ಯತ್ಯಾಸಗಳನ್ನು ತಿಳಿಸುತ್ತದೆ. ಕೆಲವು ಸಮಸ್ಯೆಗಳನ್ನು ನಿವಾರಿಸಲು ಗರ್ಭಿಣಿ ಮಹಿಳೆಯು ಬೆನ್ನಿಗೆ ಹೆಚ್ಚು ಒತ್ತಡವನ್ನು ಹಾಕಬಾರದು.

6.ಹೀಲ್ಸ್ ಧರಿಸದಿರಿ:

6.ಹೀಲ್ಸ್ ಧರಿಸದಿರಿ:

ಎಲ್ಲಾ ಗರ್ಭಿಣಿಯರು ಹೀಲ್ಸ್‌ಗಳನ್ನು ಧರಿಸದೇ ಫ್ಲೇಟ್ ಚಪ್ಪಲಿಗಳನ್ನು ಆಯ್ಕೆಮಾಡಿಕೊಳ್ಳಬೇಕು. ಈ ಸಮಯದಲ್ಲಿ ಫ್ಯಾಶನ್‌ಗೆ ಹೆಚ್ಚು ಗಮನಕೊಡದೇ ನಿಮ್ಮ ಸುರಕ್ಷತೆಯನ್ನು ಮಾಡಿ.

7.ಯೋನಿ ಸೋಂಕು:

7.ಯೋನಿ ಸೋಂಕು:

ಆರು ತಿಂಗಳ ಗರ್ಭಿಣಿಯಾಗಿರುವಾಗ, ಮಹಿಳೆ ಯೋನಿ ಸೋಂಕಿಗೆ ಒಳಗಾಗುತ್ತಾಳೆ. ಇದನ್ನು ನಿವಾರಿಸಲು ಹತ್ತಿಯ ಒಳಉಡುಪುಗಳನ್ನು ಆಕೆ ಧರಿಸಬೇಕು. ಮತ್ತು ಯೋನಿಯನ್ನು ಚೆನ್ನಾಗಿ ತೊಳೆದು ಸ್ವಚ್ಛವಾಗಿರಿಸಬೇಕು.

8.ನಿಮ್ಮ ದೇಹಕ್ಕೆ ವಿಶ್ರಾಂತಿ ನೀಡಿ:

8.ನಿಮ್ಮ ದೇಹಕ್ಕೆ ವಿಶ್ರಾಂತಿ ನೀಡಿ:

ಹೆಚ್ಚಿನ ಗರ್ಭಿಣಿ ಸ್ತ್ರೀಯರು ಇಡೀ ದಿನ ಕೆಲಸ ಮಾಡುತ್ತಿರುತ್ತಾರೆ. 6 ನೆಯ ತಿಂಗಳಿನಲ್ಲಿ ನೀವು ಪ್ರಸೂತಿಯ ರಜೆಯನ್ನು ತೆಗೆದುಕೊಳ್ಳದಿದ್ದರೆ, ನಿಮ್ಮ ದೇಹ ವಿಶ್ರಾಂತಿ ರಹಿತವಾಗಿರುತ್ತದೆ. ನೀವು ಸಾಕಷ್ಟು ವಿಶ್ರಾಂತಿಯನ್ನು ಆರನೆಯ ತಿಂಗಳಿನಲ್ಲಿ ತೆಗೆದುಕೊಳ್ಳಲೇಬೇಕು.


English summary

Pregnancy Care For The 6th Month

Pregnancy is a time of great joy for all the family. It is a great cause of celebration as you prepare to bring a new life into the world. Nine months will actually fly by and before you know it, your bundle of joy will be in your arms.
Story first published: Wednesday, February 26, 2014, 15:45 [IST]
X
Desktop Bottom Promotion