For Quick Alerts
ALLOW NOTIFICATIONS  
For Daily Alerts

ಜನ್ಮಾಷ್ಟಮಿ ವಿಶೇಷ: ಗರ್ಭಿಣಿಯರಿಗೆ ಉಪವಾಸ ಸಲಹೆಗಳು

By Super
|

ಜನ್ಮಾಷ್ಟಮಿ, ಭಾರತದಲ್ಲಿ ಅತ್ಯಂತ ಪ್ರಸಿದ್ಧ ಉತ್ಸವಗಳಲ್ಲಿ ಒಂದಾಗಿದೆ. ಕೃಷ್ಣನ ಹುಟ್ಟುಹಬ್ಬದ ಈ ಮಂಗಳಕರ ದಿನದಂದು ಅನೇಕ ಜನರು ಉಪವಾಸವನ್ನು ಮಾಡುತ್ತಾರೆ. ಆದಾಗ್ಯೂ ನೀವು ಗರ್ಭಿಣಿಯಾಗಿದ್ದು, ಈ ದಿನ ಉಪವಾಸವನ್ನು ಮಾಡಲು ಬಯಸಿದರೆ ನೀವು ಹಸಿದ ಹೊಟ್ಟೆಯಲ್ಲಿರದಂತೆ ಎಚ್ಚರಿಕೆ ವಹಿಸಬೇಕು. ಜನ್ಮಾಷ್ಟಮಿಯ ದಿನ ಗರ್ಭಿಣಿಯರು ಮಿತವಾದ ಉಪವಾಸ ಮಾಡುವುದು ಸೂಕ್ತ.

ಜನ್ಮಾಷ್ಟಮಿಯ ದಿನ ಉಪವಾಸ ಮಾಡಲೇಬೇಕು ಎಂಬ ಯಾವುದೇ ಕಠಿಣದ ನಿಯಮಗಳಿಲ್ಲದ ಕಾರಣ ಹಲವು ಗರ್ಭಿಣಿ ಮಹಿಳೆಯರು ಉಪವಾಸವನ್ನು ಮಾಡುವುದಿಲ್ಲ. ಆದರೆ ಗರ್ಭಿಣಿಯಾಗಿರುವವರು ಮತ್ತು ಈ ದಿನ ಉಪವಾಸವನ್ನು ಮಾಡಲೇಬೇಕು ಎಂದು ಬಯಸುವವರಿಗೆ ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ. ಉಪವಾಸ ಮಾಡುವುದಕ್ಕೂ ಮೊದಲು ನೀವು ವೈದ್ಯರ ಸಲಹೆಯನ್ನು ಪಾಲಿಸುವುದು ಅತ್ಯಂತ ಮುಖ್ಯವಾಗಿದೆ. ವೈದ್ಯರು ಒಪ್ಪಿದಲ್ಲಿ, ಮಾತ್ರ ನೀವು ಜನ್ಮಾಷ್ಟಮಿಯ ದಿನ ಉಪವಾಸವನ್ನು ಮಾಡಬಹುದು.

ಮಹಿಳೆಯರಿಗೆ, ಈ ಗರ್ಭಧಾರಣೆಯ ಸಲಹೆಗಳು ಸರಳವಾಗಿದ್ದು ಆರೋಗ್ಯದ ದೃಷ್ಟಿಯಿಂದಲೂ ಉತ್ತಮವಾದುದು. ನೆನಪಿನಲ್ಲಿಡಬೇಕಾದ ಇನ್ನೊಂದು ಮುಖ್ಯ ವಿಷಯವೆಂದರೆ, ಯಾವುದೇ ನೋವು ಕಾಣಿಸಿಕೊಂಡಲ್ಲಿ ಮತ್ತು ಇದನ್ನು ಸಹಿಸಲು ಸಾಧ್ಯವಾಗದ ಸಮಯದಲ್ಲಿ ನೀವು ಉಪವಾಸವನ್ನು ನಿಲ್ಲಿಸಬಹುದು.

ಇನ್ನೊಂದು ಪ್ರಮುಖ ವಿಷಯವೆಂದರೆ ನಿಮ್ಮ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಳ್ಳದಂತೆ ಎಚ್ಚರವಹಿಸಿ. ಇದು ಭ್ರೂಣ ಮತ್ತು ನಿಮ್ಮ ಆರೋಗ್ಯಕ್ಕೆ ಸಮಸ್ಯೆಯುಂಟುಮಾಡಬಹುದು. ಗರ್ಭಧಾರಣೆಯ ಸಮಯದಲ್ಲಿ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಂಡರೆ ಎದೆಯುರಿ ಮತ್ತು ಅಸ್ವಸ್ಥತೆಗೆ ಕಾರಣವಾಗುತ್ತದೆ. ಈ ವರ್ಷದ (2014) ಜನ್ಮಾಷ್ಟಮಿ ಅವಧಿಯಲ್ಲಿ ಗರ್ಭಿಣಿ ಮಹಿಳೆಯರಿಗೆ ಕೆಲವು ಸಲಹೆಗಳು :

ಉಪವಾಸದ ಆಹಾರ

ಉಪವಾಸದ ಆಹಾರ

ಜನ್ಮಾಷ್ಟಮಿ ಸಮಯದಲ್ಲಿ ಉಪವಾಸವನ್ನು ಕೆಲವು ಆಹಾರಗಳಾದ ಸಾಬೂದಾನ, (singhara) ಹಿಟ್ಟು, ರಾಜ್‌ಗಿರಾ (rajgira) ಹಿಟ್ಟು ಮತ್ತು ಹುರುಳಿ ಹಿಟ್ಟು ಇವುಗಳಲ್ಲಿ ಆಹಾರಗಳನ್ನು ತಯಾರಿಸಿ ಸೇವಿಸಬಹುದು. ಇವು ಅತ್ಯಂತ ಮಿತವಾದ ಮತ್ತು ಆರೋಗ್ಯಕರ.

ನಿಧಾನವಾಗಿ ಉಪವಾಸವನ್ನು ಕಡಿತಗೊಳಿಸಿ

ನಿಧಾನವಾಗಿ ಉಪವಾಸವನ್ನು ಕಡಿತಗೊಳಿಸಿ

ಗರ್ಭಿಣಿಯರಿಗೆ ಮುಖ್ಯವಾದ ಉಪವಾಸ ಸಲಹೆಗಳಲ್ಲಿ ಇದು ಕೂಡ ಒಂದು, ಕ್ರಮೇಣ ನಿಮ್ಮ ಉಪವಾಸವನ್ನು ಮುರಿಯುವುದು. ಉಪವಾಸದಿಂದ ತೊಂದರೆಯಾದ ಸಮಯದಲ್ಲಿ ಅದನ್ನು ಕಡಿತಗೊಳಿಸಬಹುದು.

ವಿಶ್ರಾಂತಿ ಅತ್ಯಗತ್ಯ

ವಿಶ್ರಾಂತಿ ಅತ್ಯಗತ್ಯ

ಜನ್ಮಾಷ್ಟಮಿಯ ಸಂದರ್ಭದಲ್ಲಿ ಉಪವಾಸ ಕೈಕೊಳ್ಳುವ ಗರ್ಭಿಣಿ ಮಹಿಳೆಯರು ಸರಿಯಾದ ವಿಶ್ರಾಂತಿ ತೆಗೆದುಕೊಳ್ಳುವುದು ಅತ್ಯಂತ ಮುಖ್ಯ ಸಲಹೆಗಳಲ್ಲಿ ಒಂದಾಗಿದೆ. ನೀವು ನಿಮ್ಮ ದೇಹಕ್ಕೆ ವಿಶ್ರಾಂತಿ ನೀಡುವುದರ ಮೂಲಕ ನಿಮ್ಮ ದೇಹದ ಹಸಿವು ಕಡಿಮೆಯಾಗುವಂತೆ ಮಾಡಿ ನೋವಿನಿಂದ ತಪ್ಪಿಸಿಕೊಂಡು ದಿನವಿಡೀ ಉಪವಾಸ ಮಾಡಲು ಸಾಧ್ಯವಾಗುತ್ತದೆ.

ಮನೆಯೊಳಗೇ ಇರುವುದು ಉತ್ತಮ

ಮನೆಯೊಳಗೇ ಇರುವುದು ಉತ್ತಮ

ಹವಾಮಾನ, ತೇವಾಂಶಭರಿತ ಮತ್ತು ಬಿಸಿಯಾಗಿದ್ದರೆ, ಸೂರ್ಯನ ಪ್ರಕಾಶದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ. ಹವಾಮಾನ ಸರಿಯಾಗಿಲ್ಲದಿದ್ದಲ್ಲಿ ನಿಮ್ಮಲ್ಲಿ ದಣಿವು ಹೆಚ್ಚಾಗಿ ದೇಹದಲ್ಲಿ ಶಕ್ತಿಯೇ ಇಲ್ಲದಾಗಿ ನಿಮಗೆ ಹಸಿವಿನಿಂದ ಬಳಲಿಕೆ ಉಂಟಾಗಬಹುದು, ಹವಾಮಾನ ನಿಮಗೆ ಅನುಕೂಲಕರವಾಗಿರದಿದ್ದರೆ, ಸೂರ್ಯನ ಶಾಖ ಅಧಿಕವಾಗಿದ್ದಲ್ಲಿ ಮನೆಯಲ್ಲಿಯೇ ಮಲಗಿ ವಿಶ್ರಾಂತಿ ಪಡೆಯುವುದು ಉತ್ತಮ.

ಸಕ್ಕರೆ ಸೇವನೆ ಮಾಡದಿರಿ

ಸಕ್ಕರೆ ಸೇವನೆ ಮಾಡದಿರಿ

ನೀವು ಮಧುಮೇಹಿ ಮತ್ತು ಗರ್ಭಿಣಿಯಾಗಿದ್ದರೆ ಸಕ್ಕರೆ ಸೇವನೆಯಿಂದ ದೂರವಿರಿ. ಎರಡನೆಯದಾಗಿ, ಉಪವಾಸದ ಆರಂಭದಲ್ಲಿ ಸಕ್ಕರೆ ತಿನ್ನುವುದನ್ನು ತಪ್ಪಿಸಲು ಪ್ರಯತ್ನಿಸಿ. ಸಕ್ಕರೆ, ನಿಮಗೆ ಸಾಕಷ್ಟು ಶಕ್ತಿ ಮತ್ತು ನಿಮ್ಮನ್ನು ಸಕ್ರಿಯವಾಗಿಡಲು ಸಹಾಯ ಮಾಡುತ್ತದೆ. ಆದರೆ ನಿಮ್ಮ ರಕ್ತದ ಮಟ್ಟ ಒಮ್ಮೆಲೆ ಕಡಿಮೆಯಾದರೆ ನಿಮಗೆ ತಲೆತಿರುಗುವ ಸಾಧ್ಯತೆ ಹೆಚ್ಚು.

ನೀವು ಅನಾರೋಗ್ಯದಿಂದಿದ್ದರೆ ಉಪವಾಸ ಮಾಡದಿರಿ

ನೀವು ಅನಾರೋಗ್ಯದಿಂದಿದ್ದರೆ ಉಪವಾಸ ಮಾಡದಿರಿ

ಜನ್ಮಾಷ್ಟಮಿ ಸಮಯದಲ್ಲಿ ಉಪವಾಸ ಮಾಡುವ ಗರ್ಭಿಣಿ ಮಹಿಳೆಯರಿಗೆ ಮುಖ್ಯ ಗರ್ಭಧಾರಣೆಯ ಸಲಹೆಗಳಲ್ಲಿ ಒಂದು, ನೀವು ಅಸ್ವಸ್ಥವಾಗಿದ್ದರೆ, ಅಥವಾ ಆರಾಮದಾಯಕವಾಗಿಲ್ಲದಿದ್ದರೆ ಉಪವಾಸ ಮಾಡದಿರಿ. ತಲೆನೋವು ಅಥವಾ ತಲೆತಿರುಗುವಿಕೆ ಉಂಟಾದ ವೇಳೆ ನೀವು ಉಪವಾಸ ಮಾಡದಿರುವುದೇ ಉತ್ತಮ. ಇದು ನಿಮ್ಮ ಗರ್ಭಾವಸ್ಥೆಯಲ್ಲಿ ತೊಂದರೆಗಳನ್ನುಂಟುಮಾಡಬಹುದು ಆದ್ದರಿಂದ ಗರ್ಭಾವಸ್ಥೆಯಲ್ಲಿ ಉಪವಾಸ ಮಾಡುವುದು ಕೆಲವೊಮ್ಮೆ ಅಪಾಯಕ್ಕೂ ಕಾರಣವಾಗಬಹುದು.

ಹಣ್ಣು ಸೇವನೆಯ ಮೂಲಕ ಉಪವಾಸ

ಹಣ್ಣು ಸೇವನೆಯ ಮೂಲಕ ಉಪವಾಸ

ನೀವು ಜನ್ಮಾಷ್ಟಮಿಯ ದಿನ ಉಪವಾಸ ಮಾಡಲು ಯೋಚಿಸಿದ್ದರೆ, ಹಣ್ಣುಗಳನ್ನು ಸೇವಿಸುವ ಮೂಲಕ ಉಪವಾಸವನ್ನು ಮಾಡಬಹುದು. ನಿಮ್ಮ ಶಕ್ತಿಯ ಮಟ್ಟವನ್ನು ಕಾಯ್ದುಕೊಳ್ಳಲು, ಪೋಷಕಾಂಶಗಳು ಮತ್ತು ಪ್ರೋಟೀನ್ ಗಳನ್ನು ಒದಗಿಸುವ ಸಮೃದ್ಧ ನೀರಿನ ಅಂಶವಿರುವ/ತೇವಾಂಶ ಭರಿತ ಹಣ್ಣುಗಳನ್ನು ಸೇವಿಸಬಹುದು.

ನೀರಿನ ಸೇವನೆ

ನೀರಿನ ಸೇವನೆ

ನೀವು ಗರ್ಭಾವಸ್ಥೆಯಲ್ಲಿರುವಾಗ, ದೇಹದ ಆಮ್ನಿಯೋಟಿಕ್ ನೀರನ್ನು ಸಾಕಷ್ಟು ಹೀರಿಕೊಳ್ಳುತ್ತದೆ. ಇದು ನಿಮ್ಮನ್ನು ಡೀಹೈಡ್ರೇಟ್(ನಿರ್ಜಲೀಕರಣ) ಗೊಳ್ಳಲು ಬಿಡುವುದಿಲ್ಲ. ಆದ್ದರಿಂದ, ನೀವು ಸುಸ್ತಾದ ಅಥವಾ ತಲೆತಿರುಗುವ ಸಮಸ್ಯೆಯಿಂದ ದೂರವಿರಲು ಉಪವಾಸ ಮಾಡುವಾಗ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯುವುದು ಉತ್ತಮ.

English summary

Janmashtami: Fasting Tips For Pregnant Women

Janmashtami is one of the most celebrated festivals in India. Many people fast on this auspicious day But those who are pregnant and want to fast on this day, here are some of the tips to keep in mind.
Story first published: Saturday, August 16, 2014, 18:13 [IST]
X
Desktop Bottom Promotion