For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿರುವ ಗರ್ಭಿಣಿಯರಿಗೆ ಎಳ್ಳಿನ ಎಣ್ಣೆ ಎಷ್ಟು ಒಳ್ಳೆಯದು?

|

ಗರ್ಭಾವಸ್ಥೆ, ಎನ್ನುವುದು ಮಹಿಳೆಯ ಜೀವನದಲ್ಲಿನ ಅದ್ಭುತ ಅನುಭವಗಳಲ್ಲಿ ಒಂದಾಗಿದೆ. ಇದು ಆಕೆ ಎರಡು ವಿಧದಲ್ಲಿ ವರ್ತಿಸುವ ಅಥವಾ ಜವಾಬ್ದಾರಿಯನ್ನು ನಿಭಾಯಿಸುವ ಸಮಯ. ತನ್ನ ಮಡಿಲಿಗೆ ಬರುವ ಮಗುವನ್ನು ಕಾಯುವ ಸಮಯ, ಆರೈಕೆ ಮಾಡುವ ಸಮಯ.

ಈ ಸಮಯದಲ್ಲಿ ನೀವು ತುಂಬಾ ಕಾಳಜಿ ಮಾಡಬೇಕು ಮತ್ತು ಎಲ್ಲಾ ಅಗತ್ಯ ಜೀವಸತ್ವಗಳು ಮತ್ತು ಪೋಷಕಾಂಶಗಳನ್ನೂ ನಿಮ್ಮ ದೇಹಕ್ಕೆ ನೀಡುತ್ತಿದ್ದೀರೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಎಳ್ಳಿನ ಎಣ್ಣೆ, ಗರ್ಭಧಾರಣೆಗೆ ಸಂಬಂಧಿಸಿದಂತೆ ವಿವಾದದ ವಿಷಯವಾಗಿ ಮಾರ್ಪಟ್ಟಿದೆ! ಎಳ್ಳಿನ ಬೀಜವು ಕಬ್ಬಿಣ, ಪೊಟ್ಯಾಶಿಯಂ ಮತ್ತು ಕ್ಯಾಲ್ಸಿಯಂ ನಂತಹ ಅನೇಕ ಅಗತ್ಯ ಪೋಷಕಾಂಶಗಳ ಉತ್ತಮ ಮೂಲವಾಗಿದೆ, ಆದರೆ ಗರ್ಭಪಾತಗಳು ಮತ್ತು ಇತರ ಅಪಾಯಗಳಿಗೂ ಕಾರಣವಾಗಬಹುದು ಎಂಬ ಅಭಿಪ್ರಾಯಗಳೂ ಇವೆ.

Is Sesame Oil Good For Pregnant Women?

ಎಳ್ಳಿನ ಎಣ್ಣೆಯನ್ನು ಬಳಸುವುದನ್ನು ಪ್ರಸವಪೂರ್ವ ಅಲರ್ಜಿ ಅಥವಾ ಇತರ ತೊಂದರೆಗಳಿರುವವರು ಸೇವಿಸಕೂಡದು. ಅದರಂತೆ ಮಲಬದ್ಧತೆ ಮತ್ತು ಪೌಷ್ಟಿಕಾಂಶದ ಅವಶ್ಯಕತೆಗಳಿರುವವರಿಗೆ ಇದು ಉತ್ತಮ ಎಂದು ಪರಿಗಣಿಸಲಾಗಿದೆ.

ಗರ್ಭಿಣಿ ಮಹಿಳೆಯರ ಮೇಲೆ ಎಳ್ಳಿನ ಎಣ್ಣೆಯ ಪರಿಣಾಮ, ಗರ್ಭಿಣಿ ಮಹಿಳೆಯ ಆರೋಗ್ಯ ಸ್ಥಿತಿ ಮತ್ತು ಸೇವಿಸುವ ಪ್ರಮಾಣವನ್ನು ಅವಲಂಬಿಸಿರುತ್ತದೆ. 'ಗರ್ಭಿಣಿಯರಿಗೆ ಎಳ್ಳಿನ ಎಣ್ಣೆ ಉತ್ತಮವೇ ಎಂಬ ಪ್ರಶ್ನೆಗೆ ಉತ್ತರವಾಗಿ ನಾವು ಈ ಎಣ್ಣೆಯ 'ವಿವಿಧ ಪರಿಣಾಮಗಳನ್ನು ಪರಿಗಣಿಸುವ ಮೂಲಕ ನಿಮಗೆ ಉತ್ತರಿಸುತ್ತೇವೆ!

ಗರ್ಭಾವಸ್ಥೆಯಲ್ಲಿರುವ ಗರ್ಭಿಣಿಯರಿಗೆ ಸೂಕ್ತ ಸಲಹೆಗಳು

ಗರ್ಭಪಾತ
ಭಾರತದ ಕೆಲವು ಭಾಗಗಳಲ್ಲಿ ಬೆಲ್ಲದಲ್ಲಿ ಎಳ್ಳಿನ ಎಣ್ಣೆಯನ್ನು ಬೆರೆಸಿ ಗರ್ಭಪಾತ ಉಂಟುಮಾಡಲು ಬಳಸಲಾಗುತ್ತದೆ. ಆದ್ದರಿಂದ ನೀವು ನಿಮ್ಮ ಮನೆಯ ಅಜ್ಜಿಯಂದಿರನ್ನು ಗರ್ಭಿಣಿ ಸ್ತ್ರೀಗೆ ಎಳ್ಳಿನ ಎಣ್ಣೆ ಒಳ್ಳೆಯದೇ ಎಂದು ಕೇಳಿದರೆ ಅವರು ಖಂಡಿತವಾಗಿಯೂ, ವಿಶೇಷವಾಗಿ ಮೊದಲನೇಯ ತ್ರೈಮಾಸಿಕದ ಅವಧಿಯಲ್ಲಿ ಇದು ಉತ್ತಮವಲ್ಲ ಎಂದೇ ಹೇಳುತ್ತಾರೆ.

ಅಲರ್ಜಿಗಳಿಗೆ
ಎಳ್ಳಿನ ಎಣ್ಣೆ, ಗಂಧಕ ಮತ್ತು ಅಪರ್ಯಾಪ್ತ ಕೊಬ್ಬಿನ ಅಂಶವನ್ನು ಹೊಂದಿದೆ. ನಿಮ್ಮ ರೋಗ ನಿರೋಧಕ ವ್ಯವಸ್ಥೆ ದುರ್ಬಲವಾಗಿದ್ದಾಗ ವಿಶೇಷವಾಗಿ ಗರ್ಭಾವಸ್ಥೆಯಲ್ಲಿ ಅಲರ್ಜಿಯನ್ನು ಉಂಟುಮಾಡಬಹುದು. ಆದ್ದರಿಂದ ನಿಮಗೆ ಅಲರ್ಜಿ ಇದ್ದರೆ ಗರ್ಭಿಣಿಯಾಗಿದ್ದಾಗ ಹೊರತುಪಡಿಸಿ ಉಳಿದ ಎಲ್ಲಾ ಸಮಯಗಳಲ್ಲಿಯೂ ಉತ್ತಮವೇ.

ಬಿಸಿ ಆಹಾರ
ಆಯುರ್ವೇದದ ಪ್ರಕಾರ ಎಳ್ಳು ಎಣ್ಣೆ, ಬಿಸಿ ಆಹಾರಗಳ ವರ್ಗದಲ್ಲಿ ಬರುತ್ತದೆ. ಇದು ಆಂತರಿಕ ದೇಹದ ಶಾಖಕ್ಕೆ ಕಾರಣವಾಗಿ ಭ್ರೂಣದ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಮತ್ತು, ' ಗರ್ಭಧಾರಣೆಯ ಸಂದರ್ಭದಲ್ಲಿ ಎಳ್ಳಿನ ಎಣ್ಣೆ ಉತ್ತಮವೇ ಎಂದರೆ ' ಮತ್ತೆ ನಮ್ಮ ಉತ್ತರ 'ಇಲ್ಲ' ಎಂಬುದು.

ಪ್ರಚೋದಕ ಹಾರ್ಮೋನ್
ಎಳ್ಳಿನ ಎಣ್ಣೆ ಪ್ರಚೋದಕ ಹಾರ್ಮೋನ್ ನಡವಳಿಕೆಯನ್ನು ಹೊಂದಿದೆ. ಇದು ಗರ್ಭಾಶಯದ ಕುಗ್ಗುವಿಕೆಯನ್ನು ಪ್ರಚೋದಿಸುವುದರ ಮೂಲಕ ಗರ್ಭಪಾತಕ್ಕೆ ಕಾರಣವಾಗುತ್ತದೆ. ಇದು ಗರ್ಭಿಣಿ ಮಹಿಳೆಯರಲ್ಲಿ, ಗರ್ಭಧಾರಣೆಯ ಸಾಂದರ್ಭದಲ್ಲಿ ಎಳ್ಳಿನ ಎಣ್ಣೆ ಉತ್ತಮವೇ ಎಂಬ ಗೊಂದಲಕ್ಕೆ ಮುಖ್ಯ ಕಾರಣಗಳಲ್ಲಿ ಒಂದಾಗಿದೆ.

ಅಗತ್ಯವಾದ ಪೋಷಕಾಂಶಗಳು
ಎಳ್ಳಿನ ಎಣ್ಣೆ ಕಬ್ಬಿಣ, ಪೊಟ್ಯಾಶಿಯಂ ಮತ್ತು ಕ್ಯಾಲ್ಸಿಯಂನ್ನು ಹೇರಳವಾಗಿ ಹೊಂದಿದೆ. ಇದು ವಿಟಮಿನ್ ಎ ಮತ್ತು ಬಿಯನ್ನು ಕೂಡ ಒಳಗೊಂಡಿದೆ. ಆದ್ದರಿಂದ ಪೌಷ್ಠಿಕಾಂಶದ ಅಗತ್ಯದ ಇರುವವರಿಗೆ ಎಳ್ಳೆಣ್ಣೆ ಒಳ್ಳೆಯದು.

ಅಕಾಲಿಕ ರಕ್ತಸ್ರಾವ
ಎಳ್ಳಿನ ಎಣ್ಣೆ, ಹಾರ್ಮೋನ್ ಸಮತೋಲನ ಗುಣಗಳನ್ನು ಹೊಂದಿದೆ ಮತ್ತು ಗರ್ಭಿಣಿ ಮಹಿಳೆಯರ ಅಕಾಲಿಕ ರಕ್ತಸ್ರಾವ ತಡೆಗಟ್ಟಲು ಉಪಯುಕ್ತವಾಗಿದೆ. ಇದನ್ನು ಸರಿಯಾದ ಪ್ರಮಾಣದಲ್ಲಿ ಬಳಸುವುದಾದರೆ, ಗರ್ಭಾವಸ್ಥೆಯಲ್ಲಿ ಎಳ್ಳಿನ ಎಣ್ಣೆ ತೆಗೆದುಕೊಳ್ಳುವುದು ಒಳ್ಳೆಯದು.

ಗರ್ಭಿಣಿಯರಿಗೆ ಕಂಡುಬರುವ ಸುಸ್ತು ಹಾಗೂ ಜಡತ್ವಕ್ಕೆ ಕಾರಣವೇನು?

ಮಲಬದ್ಧತೆ
ಮಲಬದ್ಧತೆ, ಗರ್ಭಿಣಿ ಮಹಿಳೆಯರು ಎದುರಿಸುವ ಒಂದು ಸಾಮಾನ್ಯ ಸಮಸ್ಯೆ. ಫೈಬರ್‌ನ್ನು ಹೆಚ್ಚಿನ ಪ್ರಮಾಣದಲ್ಲಿ ಒಳಗೊಂಡಿರುವ ಎಳ್ಳಿನ ಎಣ್ಣೆ, ಈ ಸಮಸ್ಯೆಯನ್ನು ಎದುರಿಸಲು ಸಹಾಯ ಮಾಡುತ್ತದೆ ಮತ್ತು ಇಲ್ಲಿ, ಎಳ್ಳಿನ ಎಣ್ಣೆ ಗರ್ಭಧಾರಣೆಯ ಸಮಯದಲ್ಲಿ ಒಳ್ಳೆಯದೇ ಎಂಬ ನಿಮ್ಮ ಪ್ರಶ್ನೆಗೆ ನಮ್ಮ ಉತ್ತರ ಖಂಡಿತವಾಗಿಯೂ ಹೌದು ಎಂಬುದು !

English summary

Is Sesame Oil Good For Pregnant Women?

Pregnancy is one of the most wonderful experiences in the life of a woman. The sesame oil, which is high in fibres will help to combat this issue and so here, is sesame oil good for pregnancy? Definitely yes!
Story first published: Saturday, August 2, 2014, 10:41 [IST]
X
Desktop Bottom Promotion