For Quick Alerts
ALLOW NOTIFICATIONS  
For Daily Alerts

ನಿಮ್ಮ ಎರಡನೇಯ ಗರ್ಭಧಾರಣೆಯ ವಿಷಯವನ್ನು ಮೊದಲ ಮಗುವಿನೊಂದಿಗೆ ಹಂಚಿಕೊಳ್ಳುವುದು ಹೇಗೆ?

By Poornima hegade
|

ತಾಯ್ತನ ಎನ್ನುವುದು ಹೆಣ್ಣಿಗೆ ಇನ್ನೊಂದು ಜನ್ಮ. ಅದು ಚೊಚ್ಚಲ ಗರ್ಭಧಾರಣೆಯಾಗಿರಲಿ ಅಥವಾ ಎರಡನೆಯದಾಗಿರಲಿ. ಆಕೆಯಲ್ಲಿ ತನ್ನ ಪ್ರಪಂಚಕ್ಕೆ ಹೊಸದೊಂದು ಜೀವವನ್ನು ಬರಮಾಡಿಕೊಳ್ಳಲು ಕುತೂಹಲ, ಸಂತೋಷ ಮನೆ ಮಾಡಿರುತ್ತದೆ. ತನ್ನ ಎರಡನೇಯ ಗರ್ಭಧಾರಣೆಯ ಸಂತೋಷವನ್ನು ಆಕೆ ತನ್ನ ಮನೆಯವರೊಂದಿಗೆ ಹಂಚಿಕೊಳ್ಳಲು ಹವಣಿಸುತ್ತಾಳೆ.

ನಿಮ್ಮ ಮಗುವನ್ನೂ ನಿಮ್ಮ ಸಾಕುಪ್ರಾಣಿಯ ಸಂಗಾತಿಯಾಗಿಸಿ!

ಆದರೆ ತನ್ನ ಮೊದಲನೇಯ ಮಗುವಿನ ಮೇಲೆ ತನ್ನ ಎರಡನೆಯ ಗರ್ಭಧಾರಣೆಯ ವಿಷಯವನ್ನು ಹೇಳುವಾಗ ಆ ಮಗುವಿನ ಮೇಲೆ ಏನಾದರೂ ಪರಿಣಾಮ ಬೀರಬಹುದೇ ಎಂಬುದನ್ನು ಆಕೆ ಗಮನಿಸಬೇಕು. ಇದು ಅತ್ಯಂತ ಸಹಜವಾದ ಹಾಗೂ ಅತ್ಯಗತ್ಯವಾಗಿ ಆಕೆ ಎದುರಿಸಲೇಬೇಕಾದಂತಹ ಪ್ರಶ್ನೆ! ಇದಕ್ಕೆ ಉತ್ತರಿಸಲು ಆಕೆ ಮಾನಸಿಕವಾಗಿಯೂ ಸಿದ್ಧಳಾಗಬೇಕಾಗುತ್ತದೆ.

ಎರಡನೇ ಮಗುವಿನ ನಿರೀಕ್ಷಣೆಯಲ್ಲಿರುವ ತಾಯಿ ತನ್ನ ಮೊದಲಿನ ಮಗುವಿಗೆ ನಿನಗೆ ಸಹೋದರ ಅಥವಾ ಸಹೋದರಿ ಬರುತ್ತಿರುವ ವಿಚಾರವನ್ನು ಸೂಕ್ಷ್ಮವಾಗಿ ಯುಕ್ತವಾದ ರೀತಿಯಲ್ಲಿ ತಿಳಿಸಲೇಬೇಕು. ಮೊದಲ ಮಗು ಕುಟುಂಬದಲ್ಲಿ, ಪೋಷಕರ ಹೃದಯದಲ್ಲಿ ತನ್ನ ಸ್ಥಾನ ದುರ್ಬಲಗೊಂಡಂತೆ ಭಾಸವಾಗಿ ಬೆದರುವ ಸಾಧ್ಯತೆಗಳಿರುತ್ತವೆ. ಇದು ಎಲ್ಲಾ ಮಕ್ಕಳಲ್ಲಿಯೂ ಕಂಡುಬರುವ ಸಹಜವಾದ ಅಭಿಪ್ರಾಯ ಕೂಡ. ಆದ್ದರಿಂದ ಸರಿಯಾದ ಸಮಯದಲ್ಲಿ ನಿಮ್ಮ ಮೊದಲ ಮಗುವಿಗೆ ಯಾವುದೇ ರೀತಿಯ ಕೆಟ್ಟ ಭಾವನೆಗಳುಂಟಾಗದಂತೆ ನೀವು ನಿಮ್ಮ ಎರಡನೆಯ ಮಗುವಿಗೆ ಜನ್ಮ ನೀಡುತ್ತಿರುವ ವಿಷಯವನ್ನು ಮನವರಿಕೆ ಮಾಡಿ.

How to Share Your Second Pregnancy with Your First Child

ನೀವು ನಿಮ್ಮ ಮೊದಲ ಮಗುವನ್ನು ಎರಡನೇ ಮಗುವಿನ ಸ್ವೀಕಾರ ಮಾಡಲು ಮಾನಸಿಕವಾಗಿ ಸಿದ್ಧಪಡಿಸುವುದು ಉತ್ತಮ. ಇದರಿಂದ ಮುಂದಾಗುವ ಹಲವು ತೊಂದರೆಗಳನ್ನು ತಪ್ಪಿಸಬಹುದು. ಮುಂಬರುವ ಪರಿಸ್ಥಿತಿಯ ಬಗ್ಗೆ ನಿಮ್ಮ ಮಗುವಿಗೆ ವಿವರಿಸಿ . ಆದರೆ ನಿಮಗೆ ನಿಮ್ಮ ಮಗುವಿನೊಂದಿಗೆ ಈ ವಿಚಾರವನ್ನು ಹೇಗೆ ಮಾತನಾಡುವುದು, ನಿನಗೆ ಸಹೋದರ/ ಸಹೋದರಿ ಬರುತ್ತಿರುವ ವಿಷಯವನ್ನು ತಿಳಿಸುವುದು ಹೇಗೆ ಎಂಬ ಯೋಚನೆಯಲ್ಲಿದ್ದೀರಾ? ಹಾಗಾದರೆ ನಾವಿಲ್ಲಿ ಕೆಲವು ಉಪಯುಕ್ತ ಸಲಹೆಗಳನ್ನು ನೀಡುತ್ತಿದ್ದೇವೆ.

ಮಗು ಸ್ತನ್ಯಪಾನ ತ್ಯಜಿಸಲು ಅನುಸರಿಸಬೇಕಾದ ವಿಧಾನಗಳು

ಮಾಡಬೇಕಾದ ಅಂಶಗಳು:

*ನಿಮ್ಮ ಮೊದಲನೇ ಮಗುವಿಗೆ ತನ್ನ ಹೊಸ ಸಹೋದರ/ಸಹೋದರಿಯನ್ನು ಮುಟ್ಟಲು. ಪ್ರೀತಿಸಲು ಬಿಡಿ ಇದರಿಂದ ಅವರ ನಡುವೆ ಬಾಂಧವ್ಯ ಬೆಳೆಯಲು ಸಹಾಯವಾಗುತ್ತದೆ.

*ನಿಮ್ಮ ಮೊದಲಿನ ಮಗುವಿಗೂ ನಿಮ್ಮ ಸಮಯವನ್ನು ಕೂಡಿ. ಎರಡನೇಯ ಮಗು ಮಲಗಿದ ಸಮಯದಲ್ಲಿ ನಿಮ್ಮ ಸಮಯವನ್ನು ಸಂಪೂರ್ಣವಾಗಿ ನಿಮ್ಮ ಮೊದಲಿನ ಮಗುವಿನೊಂದಿಗೆ ಕಳೆಯಿರಿ.

ಮಗುವಿಗೆ ಬಲವಂತವಾಗಿ ಉಣಿಸುವುದು ಸರಿಯೇ?

ಮಾಡಬಾರದ ಅಂಶಗಳು:

*ಎರಡನೇ ಮಗು ನಿಮ ಜೀವನದಲ್ಲಿ ಬರುತ್ತಿದ್ದಂತೆ ನಿಮ್ಮ ಮೊದಲನೆಯ ಮಗುವನ್ನು ಎಂದಿಗೂ ನಿರ್ಲಕ್ಷ ಮಾಡದಿರಿ.

*ಹೊಸ ಮಗುವಿನ ಬಗ್ಗೆ ಅಧಿಕ ಪೂರ್ವಭಾವಿ ಯೋಚನೆಗಳನ್ನು ಮಾಡದಿರಿ.

ಸಲಹೆಗಳು:

*ನಿಮ್ಮ ಎರಡನೇ ಗರ್ಭಧಾರಣೆಯ ಆರಂಭದಿಂದ ಎಲ್ಲಾ ಚಟುವಟಿಕೆಗಳನ್ನು ನಿಮ್ಮ ಮೊದಲಿನ ಮಗುವಿಗೂ ತಿಳಿಯುವಂತೆ ಮಾಡಿ. ಅವನ/ಅವಳ, ಸಹೋದರ/ದರಿ ಹುಟ್ಟಲಿರುವ ವಿಷಯ ಅವರಿಗೆ ತಿಳಿಯುವಂತೆ ಮಾಡಿ.

*ನೀವು ನಿಮ್ಮ ವೈದ್ಯರನ್ನು ಭೇಟಿ ಮಾಡುವ ಸಮಯದಲ್ಲಿ ನಿಮ್ಮ ಮೊದಲನೆಯ ಮಗುವೂ ನಿಮ್ಮೊಂದಿಗೆ ಬರಲು ಅವಕಾಶಮಾಡಿ ಕೊಡಿ. ನಿಮ್ಮ ಹೊಟ್ಟೆಯಲ್ಲಿರುವ ಮಗುವಿನ ಹೃದಯ ಭಡಿತ ನಿಮ್ಮ ಮೊದಲ ಮಗುವಿಗೆ ಕೇಳುವಂತೆ ಹೇಳಿ. ನಿಮ್ಮ ವೈದ್ಯರ ಬಳಿ ನಿಮ್ಮ ಹೊಟ್ಟೆಯಲ್ಲಿ ಮಗುವಿರುವ ವಿಷಯವನ್ನು ನಿಮ್ಮ ಮೊದಲ ಮಗುವಿಗೆ ವಿವರಿಸುವಂತೆ ಹೇಳಿ.

*ನಿಮ್ಮ ಮುಂಬರುವ ಮಗುವಿನೊಂದಿಗೆ ತಂದೆ - ತಾಯಿ ಹೆಚ್ಚು ಸಮಯವನ್ನು ಕಳೆಯುವುದು ಎಷ್ಟು ಅಗತ್ಯ ಎಂಬುದನ್ನು ವಿವರಿಸಿ. ಒಂದು ಗೊಂಬೆಯ ಸಹಾಯದಿಂದ ಪುಟ್ಟ ಮಗುವಿನ ಆಗಮನ ಮತ್ತು ಅದರ ಆರೈಕೆಯ ಅಗತ್ಯತೆಗಳನ್ನು ನಿಮ್ಮ ಮೊದಲ ಮಗುವಿಗೆ ವಿವರಿಸಿ.

ಆರೋಗ್ಯಕರವಾಗಿ ಮಗುವಿಗೆ ಜನ್ಮ ನೀಡಲು 8 ವಿಧಾನಗಳು

*ನಿಮ್ಮ ಎರಡನೇಯ ಮಗುವಿನ ಜನನವಾದ ನಂತರ, ಅದರ ಆರೈಕೆಗೆ ನಿಮ್ಮ ಮೊದಲಿನ ಮಗುವಿನ ಸಹಾಯವನ್ನೂ ಪಡೆದುಕೊಳ್ಳಿ.

*ನೀವು ಹೆರಿಗೆಯ ಸಮಯದಲ್ಲಿ ಆಸ್ವತ್ರೆಯಲ್ಲಿರಬೇಕಾದ ಸಂದರ್ಭದಲ್ಲಿ ಅಗತ್ಯವಿರುವ ಬಟ್ಟೆಗಳನ್ನು ಜೋಡಿಸಿಕೊಳ್ಳಲು ನಿಮ್ಮ ಮೊದಲಿನ ಮಗುವಿನ ಸಹಾಯವನ್ನು ಕೇಳಿ. ಎರಡನೇಯ ಮಗು ಹುಟ್ಟಿದ ನಂತರ ನಿಮ್ಮ ಮೊದಲನೆಯ ಮಗು ಮನೆಯ ಸದಸ್ಯರಿಗೆಲ್ಲ ತನ್ನ ಸಹೋದರ/ದರಿ ಯನ್ನು ಪರಿಚಯ ಮಾಡಿಕೊಡುವಂತೆ ಹೇಳಿ. ಜೊತೆಗೆ ನಿಮ್ಮ ಎರಡನೇಯ ಮಗುವಿಗೆ ಒಂದು ಸುಂದರವಾದ ಹೆಸರನ್ನು ಸೂಚಿಸಲು ಹೇಳಿ.

ನಿಮ್ಮ ಮೊದಲನೇಯ ಮಗುವಿನೊಂದಿಗೆ ಎರಡನೇಯ ಮಗುವಿನ ಸಂಬಂಧವನ್ನು ಆರಂಭದಲ್ಲಿಯೇ ಬೆಸೆಯುವಂತೆ ಮಾಡುತ್ತಾ ಬಂದರೆ ಮುಂದೆ ನಿಮ್ಮ ಮೊದಲನೆಯ ಮಗು ಅಸುರಕ್ಷತೆಯ ಭಾವನೆಯನ್ನು ಬೆಳೆಸಿಕೊಳ್ಳುವುದನ್ನು ಸುಲಭವಾಗಿ ತಡೆಯಬಹುದು

English summary

How to Share Your Second Pregnancy with Your First Child

How to Share Your Second Pregnancy with Your First Child
Story first published: Wednesday, May 14, 2014, 15:05 [IST]
X
Desktop Bottom Promotion