For Quick Alerts
ALLOW NOTIFICATIONS  
For Daily Alerts

ಜನನ ನಿಯಂತ್ರಣದ ಬಳಿಕ ಗರ್ಭಧರಿಸಬಹುದೇ?

By Poornima Heggade
|

ಜನನ ನಿಯಂತ್ರಣ ಮಾತ್ರೆಗಳನ್ನು ತೆಗೆದುಕೊಂಡು ಹೇಗೆ ಜನನವನ್ನು ನಿಯಂತ್ರಿಸಬಹುದೋ ಅಷ್ಟೇ ಸುಲಭವಾಗಿ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ ಗರ್ಭ ಧರಿಸುವುದಕ್ಕೂ ಪ್ರಯತ್ನಿಸಬಹುದು. ಆದಾಗ್ಯೂ, ಗರ್ಭಿಣಿಯಾಗುವಲ್ಲಿ ಹೆಚ್ಚು ಪ್ರಯತ್ನಗಳೂ ಅಗತ್ಯ.

ಕೆಲವು ಮಹಿಳೆಯರು, ಗರ್ಭ ಧರಿಸಲು ಪರಿಪೂರ್ಣ ಸಮಯ ನಿರ್ಧರಿಸುವವರೆಗೂ ಜನನ ನಿಯಂತ್ರಣ ವ್ಯವಸ್ಥೆಯನ್ನು ಬಹಳ ವರ್ಷಗಳ ಕಾಲ ಮುಂದುವರೆಸುತ್ತಿರುತ್ತಾರೆ. ಅವರು ಗರ್ಭ ಧರಿಸುವ ಸಮಯವನ್ನು ನಿರ್ಧರಿಸಿದ ನಂತರ ಗರ್ಭಧರಿಸಲು ತಾಳ್ಮೆಯಿಂದ ಕ್ರಮ ಕೈಗೊಳ್ಳಬಹುದು.

Getting Pregnant After Birth Control

ನೀವು ನಿಮ್ಮ ಜನನ ನಿಯಂತ್ರಕಗಳನ್ನು ನಿಲ್ಲಿಸಿದ ತಕ್ಷಣದಲ್ಲಿ ಗರ್ಭಧರಿಸಲು ಪ್ರಯತ್ನ ಆರಂಭಿಸಬಹುದು. ಆದರೆ ಕೆಲವು ವೈದ್ಯರು ನೀವು ಸುಲಭವಾಗಿ ಗರ್ಭಧರಿಸಲು ಇಷ್ಟಪಡುವವರೆಗೆ ಪರ್ಯಾಯ ಜನನ ನಿಯಂತ್ರಣಗಳನ್ನು ಬಳಸಲು ನಿಮಗೆ ಹೇಳಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಗರ್ಭಿಣಿಯರು ಹೈಹೀಲ್ಡ್‌ ಧರಿಸುವುದು ಸುರಕ್ಷಿತವೇ?

ಇತ್ತೀಚಿನ ಅಧ್ಯಯನಗಳು ಇದನ್ನು ಬೆಂಬಲಿಸುವ ಕೆಲವು ಪುರಾವೆಗಳನ್ನು ನೀಡಿವೆ.

ಇದು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

ನಿಮ್ಮ ಸಂತಾನ ನಿಯಂತ್ರಣವನ್ನು ನಿಲ್ಲಿಸಿದ ನಂತರ ಸಾಮಾನ್ಯವಾಗಿ ಒಂದು ತಿಂಗಳು ಅಥವಾ ಎರಡು ತಿಂಗಳಿನಲ್ಲಿ ಅಂಡೋತ್ಪತ್ತಿಯಾಗಲು ಪ್ರಾರಂಭವಾಗುತ್ತದೆ. ಆದಾಗ್ಯೂ, ಕೆಲವು ಮಹಿಳೆಯರಲ್ಲಿ ಈ ಪ್ರಕ್ರಿಯೆ ವೇಗವಾಗಿ ಮತ್ತು ಕೆಲವರಲ್ಲಿ ತಡವಾಗಿ ಉಂಟಾಗಬಹುದು. ಜನನ ನಿಯಂತ್ರಕಗಳನ್ನು ಬಳಸುವುದನ್ನು ನಿಲ್ಲಿಸಿದ ನಂತರ ಅಂಡೋತ್ಪತ್ತಿ ಪ್ರಕ್ರಿಯೆ ಸಾಮಾನ್ಯ ಸ್ಥಿತಿಗೆ (ಋತುಚಕ್ರ) ಮರಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದರ ಮೇಲೆ ಗರ್ಭಧಾರಣೆ ಸಾಧ್ಯವೋ ಇಲ್ಲವೋ ಎಂಬುದನ್ನು ನಿರ್ಧರಿಸಬಹುದು.

ನಿಮಗೆ ಋತುಚಕ್ರ ಸರಿಯಾದ ಸಮಯಕ್ಕೆ ಸರಿಯಾಗಿ ಆಗುತ್ತಿದ್ದರೆ, ನೀವು ಸರಿಯಾಗಿ ಋತುಚಕ್ರವಾಗುತ್ತಿಲ್ಲದ ಮಹಿಳೆಯರಿಗಿಂತ ಅದೃಷ್ಟವಂತರೇ ಸರಿ! ಯಾಕೆಂದರೆ ನಿಮಗೆ ಗರ್ಭಧರಿಸುವ ಅವಕಾಶಗಳು ಅಧಿಕ. ಗರ್ಭಧಾರಣೆಗೆ ಸಾಮಾನ್ಯವಾಗಿ ಹಲವಾರು ತಿಂಗಳುಗಳು ತೆಗೆದುಕೊಳ್ಳುತ್ತದೆ ಮತ್ತು ಆರು ತಿಂಗಳ ವರೆಗೆ ಗರ್ಭಧಾರಣೆಯಾಗದಿದ್ದರೆ ಅದಕ್ಕೆ ಇಂತದ್ದೇ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ಅಥವಾ ಇದು ಆತಂಕ ಪಡುವ ವಿಷಯವೂ ಅಲ್ಲ. ಆದರೆ ನಿಮ್ಮ ಜನನ ನಿಯಂತ್ರಣ ತೆಗೆದುಕೊಳ್ಳುವುದನ್ನು ನಿಲ್ಲಿಸಿದ ಆರು ತಿಂಗಳ ನಂತರವೂ ಗರ್ಭಿಣಿಯಾಗುವ ಸೂಚನೆಗಳಿಲ್ಲದಿದ್ದಲ್ಲಿ ತಕ್ಷಣವೇ ನೀವು ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯ ಸಂಬಂಧಿತ ಜನನ ನಿಯಂತ್ರಣ ಔಷಧಿಗಳು

ಕೆಲವು ಮಹಿಳೆಯರು, ಜನನ ನಿಯಂತ್ರಣ ತೆಗೆದುಕೊಳ್ಳುವುದು ಗರ್ಭಧಾರಣೆಯ ನಿಯಂತ್ರಿಸಲು ಮಾತ್ರವಲ್ಲ, ಆರೋಗ್ಯ ಸಂಬಂಧಿತ ಚಿಕಿತ್ಸೆಯಾಗಿಯೂ ಮಾತ್ರೆಗಳನ್ನು ತೆಗೆದುಕೊಳ್ಳಬಹುದು. ನೀವು ಜನನ ನಿಯಂತ್ರಣ ತೆಗೆದುಕೊಳ್ಳುವುದನ್ನು ನಿಲ್ಲಿಸುವ ಮೊದಲು ಆರೋಗ್ಯ ಸ್ಥಿತಿಯ ಬಗ್ಗೆ ನಿಮ್ಮ ವೈದ್ಯರ ಬಳಿ ಮಾತನಾಡಿ ನೀವು ಜನನ ನಿಯಂತ್ರಣ ತೆಗೆದುಕೊಳ್ಳುವುದನ್ನು ನಿಲ್ಲಿಸುವ ಬಗ್ಗೆ ಚರ್ಚೆ ಮಾಡಿ.

ನಾನೇಕೆ ಗರ್ಭಧರಿಸುತ್ತಿಲ್ಲ?

ನಮ್ಮ ದೇಹದಲ್ಲಿ ಅದೆಷ್ಟು ಚಟುವಟಿಕೆಗಳು ನಡೆಯುತ್ತಿರುತ್ತವೆ ಎಂದರೆ ಪ್ರತಿ ಮಿಲಿ ಸೆಕೆಂಡ್ ಗೂ ಕೂಡ ಅದೆಷ್ಟೋ ಕ್ರಿಯೆಗಳು ನಡೆಯುತ್ತವೆ. ಇದೇ ರೀತಿ ಅಂಡಾಣು ವೀರ್ಯದೊಂದಿಗೆ ಮಿಲನಗೊಳ್ಳುವ ಕ್ರಿಯೆಯೂ ಆಗಿದೆ.

ಈ ಕ್ರಿಯೆಯು ನಮ್ಮ ದೇಹದಲ್ಲಿ ಅದೆಷ್ಟೋ ಬದಲಾವಣೆಗಳನ್ನು ತರಬಹುದು. ಜನನ ನಿಯಂತ್ರಣ ಮಾತ್ರೆಗಳು ಮಹಿಳೆಯನ್ನು ಗರ್ಭಧರಿಸುವುದರಿಂದ ತಡೆಯುತ್ತದೆ ಎಂದು ಸಾಬೀತು ಪಡಿಸುವ ಯಾವುದೇ ಸಂಶೊಧನೆಗಳಿಲ್ಲ. ಇದು ಸಾಮಾನ್ಯವಾಗಿ ತಡವಾಗುವಂತೆಯೇ ಗರ್ಭಧಾರಣೆ ತಡಮಾಡಬಲ್ಲುದು ಅಷ್ಟೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಗರ್ಭಾವಸ್ಥೆಯಲ್ಲಿ ನಿಪ್ಪಲ್ ಆರೈಕೆ ಮಾಡಲು ಟಿಪ್ಸ್

ಸಮಾಜದಲ್ಲಿ ಜನನ ನಿಯಂತ್ರಣ ಬಳಸಿ ಲೈಂಗಿಕ ಸಂಪರ್ಕ ಹೊಂದುವುದು ಹೆಚ್ಚಿನವರ ಆಯ್ಕೆಯಾಗಿದೆ. ಜನನ ನಿಯಂತ್ರಣವನ್ನು ನಿಲ್ಲಿಸಿ ಗರ್ಭಧಾರಣೆಗೆ ಮುಂದಾದ ಕೂಡಲೆ 40 ವಾರಗಳಲ್ಲಿ ಮಗುವಿಗೆ ಜನ್ಮ ನೀಡಬಹುದು ಎಂದು ಮಹಿಳೆಯರು ತಿಳಿದಿರುತ್ತಾರೆ. ಆದರೆ ನಿಜವೇನೆಂದರೆ ಮಹಿಳೆಯ ದೇಹ ಈ ಬದಲಾವಣೆಗಳಿಗೆ ಒಗ್ಗಿಕೊಳ್ಳಲು ಹಲವು ದಿನಗಳು ಬೇಕಾಗುತ್ತವೆ. ನಮ್ಮ ದೇಹ ಮಗುವಿಗೆ ಜನ್ಮ ನೀಡಲು ಸಿದ್ಧವಾದ ಬಳಿಕವಷ್ಟೇ ಗರ್ಭಧಾರಣೆ ಆಗುತ್ತದೆ.

English summary

Getting Pregnant After Birth Control

For some, getting pregnant after birth control, such as the pill, is as easy as stopping the medication and trying to get pregnant. For others, however, getting pregnant may take more effort.
X
Desktop Bottom Promotion