For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಮಹಿಳೆಯರು ಕಡೆಗಣಿಸಬೇಕಾದ ಆಹಾರ ಕ್ರಮಗಳು

|

ತಾಯ್ತನವೆನ್ನುವುದು ಮಹಿಳೆಯ ಜೀವನದ ಅತ್ಯಂತ ಸಂಭ್ರಮದ ಕ್ಷಣಗಳಲ್ಲಿ ಒಂದು. ಗರ್ಭಧಾರಣೆಯ ಸಮಯವು ಪ್ರತಿಯೊಂದು ಹೆಣ್ಣಿಗೂ ಸಂತಸವನ್ನು ಉಂಟುಮಾಡುತ್ತದೆ. ಕೆಲವೊಂದು ಸಲ ನೀವು ತುಂಬಾ ಸಂಭ್ರಮ ಮತ್ತು ಉಲ್ಲಾಸದಿಂದ ಇದ್ದರೆ ಮರುಕ್ಷಣವೇ ನೀವು ತುಂಬಾ ಆಲಸಿ ಮತ್ತು ನಿರಾಶೆಗೊಳಗಾದವರಂತೆ ವರ್ತಿಸಬಹುದು.

ಗರ್ಭಧಾರಣೆಯ ಮೊದಲ ಅವಧಿಯಲ್ಲಿ ಕಡೆಗಣಿಸಬೇಕಾದ ಕೆಲವೊಂದು ಆಹಾರಗಳಿವೆ ಮತ್ತು ನಿಮ್ಮ ಆಹಾರಕ್ರಮವು ಗರ್ಭದಲ್ಲಿರುವ ಮಗುವಿಗೆ ಎಲ್ಲಾ ರೀತಿಯ ಪೌಷ್ಠಿಕಾಂಶಗಳನ್ನು ಒದಗಿಸುತ್ತಿದೆಯಾ ಎಂದು ಮನವರಿಕೆ ಮಾಡಿಕೊಳ್ಳಬೇಕು. ಗರ್ಭಧಾರಣೆ ವೇಳೆ ನೀವು ಸರಿಯಾದ ಮತ್ತು ತೂಕ ಹೆಚ್ಚಿಸುವ ಆಹಾರ ಸೇವಿಸಬೇಕು.

ಗರ್ಭದಲ್ಲಿರುವ ನಿಮ್ಮ ಮಗುವಿನ ಆರೋಗ್ಯ ಹಾಗೂ ಬೆಳವಣಿಗೆಗೆ ಕೆಲವೊಂದು ರೀತಿಯ ಆಹಾರಗಳಿಗೆ ನೀವು ಗುಡ್ ಬೈ ಹೇಳಬೇಕಾಗುತ್ತದೆ. ಗರ್ಭಧಾರಣೆಯ ಆರಂಭದಲ್ಲಿ ಕಡೆಗಣಿಸಬೇಕಾದ ಆಹಾರಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಗರ್ಭಿಣಿಯಾಗಲು ಗಮನಿಸಬೇಕಾದ 10 ಪ್ರಮುಖ ಅಂಶಗಳು

ಕೆಫಿನ್
ಕೆಫಿನ್ ಗರ್ಭಧಾರಣೆಯ ಮೊದಲ ಹಂತದಲ್ಲಿ ಕಡೆಗಣಿಸಬೇಕಾದ ಆಹಾರಗಳ ಪಟ್ಟಿಗೆ ಬರುವುದಿಲ್ಲ. ಆದರೆ ಗರ್ಭಿಣಿ ಮಹಿಳೆಯರು ಕೆಫಿನ್ ಸೇವನೆಯನ್ನು ಮಿತಿಯಲ್ಲಿಡಬೇಕು. ಕೆಫಿನ್ ಅಂಶವು ಚಹಾ, ಕಾಫಿ, ತಂಪು ಪಾನೀಯ, ಚಾಕಲೇಟ್ ಇತ್ಯಾದಿಗಳಲ್ಲಿ ಕಂಡುಬರುತ್ತದೆ.

ತಾಜಾ ಹಣ್ಣಿನ ಜ್ಯೂಸ್
ಹೋಟೆಲ್ ಮತ್ತು ಜ್ಯೂಸ್ ಅಂಗಡಿಗಳಲ್ಲಿ ನಾವು ಕುಡಿಯುವಂತಹ ತಾಜಾ ಹಣ್ಣಿನ ಜ್ಯೂಸ್ ಆರೋಗ್ಯಕರವಾಗಿರುವುದಿಲ್ಲ. ಇದು ಗರ್ಭಿಣಿ ಮಹಿಳೆಗೆ ಹಾನಿಕಾರಕ ಮತ್ತು ಗರ್ಭಧಾರಣೆಯ ಆರಂಭಿಕ ಹಂತದಲ್ಲಿ ಕಡೆಗಣಿಸಬೇಕಾದ ಆಹಾರಗಳ ಪಟ್ಟಿಗೆ ಸೇರಲ್ಪಡುತ್ತದೆ. ಮನೆಯಲ್ಲೇ ಹಣ್ಣಿನ ಜ್ಯೂಸ್ ಮಾಡಿ, ಕುಡಿಯಿರಿ.

ಚೀಸ್
ಎಲ್ಲಾ ರೀತಿಯ ಚೀಸ್ ಹಾನಿಕಾರಕವಲ್ಲ. ಮೌಲ್ಡ್ ಮಾಡಿದ ಚೀಸ್ ಅಥವಾ ಮೃದು ಚೀಸ್ ಅನ್ನು ಪಾಶ್ಚೀಕರಿಸದ ಹಾಲಿನಿಂದ ಮಾಡಲಾಗಿರುವ ಕಾರಣ ಇದನ್ನು ಗರ್ಭಧಾರಣೆಯ ಮೊದಲ ಅವಧಿಯಲ್ಲಿ ಕಡೆಗಣಿಸಬೇಕು. ನಿಮಗೆ ಮೃದು ಚೀಸ್ ಬೇಕೆಂದರೆ ಅದನ್ನು ಪಾಶ್ಚೀಕರಿಸಿದ ಹಾಲಿನಿಂದ ಮಾಡಲಾಗಿದೆಯಾ ಎಂದು ತಿಳಿದುಕೊಳ್ಳಿ.

ಮೊಟ್ಟೆ
ಹೆಚ್ಚಿನವರು ಮೊಟ್ಟೆಯನ್ನು ತುಂಬಾ ಇಷ್ಟಪಡುತ್ತಾರೆ. ಆದರೆ ಹಸಿ ಅಥವಾ ಅರೆಬೆಂದ ಮೊಟ್ಟೆಯು ಗರ್ಭಿಣಿ ಮಹಿಳೆಯರು ಕಡೆಗಣಿಸಬೇಕಾದ ಆಹಾರಗಳ ಪಟ್ಟಿಗೆ ಸೇರಲ್ಪಡುತ್ತದೆ. ಹಸಿ ಮೊಟ್ಟೆ ಹಾಕಿರುವಂತಹ ಪದಾರ್ಥಗಳಾದ ಕುಕ್ಕಿ ಡೌಗ್, ಕೇಕ್, ಮನೆಯಲ್ಲೇ ತಯಾರಿಸಿದ ಸಾಸ್ ಇತ್ಯಾದಿ.

ಮಾಂಸ
ಗರ್ಭಧಾರಣೆಯ ಮೊದಲ ಅವಧಿಯಲ್ಲಿ ಹಸಿ ಮತ್ತು ಅರೆಬೇಯಿಸಿದ ಮಾಂಸವನ್ನು ಕಡೆಗಣಿಸಬೇಕು. ಮಾಂಸ ಸರಿಯಾಗಿ ಬೇಯಿಸಿರಬೇಕು ಮತ್ತು ಅದು ಬಿಸಿಯಾಗಿರುವಾಗಲೇ ತಿನ್ನಿ. ಗರ್ಭಿಣಿ ಮಹಿಳೆಯರಿಗೆ ಬೇಗಆಹಾರ ವಿಷವಾಗುವ ಕಾರಣ ಸಂಸ್ಕರಿತ ಮಾಂಸವನ್ನು ತಿನ್ನಲೇಬಾರದು.

ಪಪ್ಪಾಯಿ ಮತ್ತು ಅನಾನಸು
ಗರ್ಭಧಾರಣೆಯ ಸಮಯದಲ್ಲಿ ನೀವು ತರಕಾರಿ ಮತ್ತು ಹಣ್ಣುಗಳ ಸೇವನೆ ಹೆಚ್ಚಿಸಬೇಕು. ಆದರೆ ಕೆಲವೊಂದು ಹಣ್ಣುಗಳನ್ನು ನೀವು ಗರ್ಭಧಾರಣೆ ವೇಳೆ ಕಡೆಗಣಿಸಬೇಕಾಗುತ್ತದೆ. ಅವುಗಳೆಂದರೆ ಪಪ್ಪಾಯಿ, ಅನಾನಸು ಮತ್ತು ದ್ರಾಕ್ಷಿ.


English summary

Foods must To Avoid During Early Pregnancy

There are many kinds of food you must say goodbye to, for the health and well being of your unborn child. Here is a list of foods to avoid during early pregnancy. 
X
Desktop Bottom Promotion