For Quick Alerts
ALLOW NOTIFICATIONS  
For Daily Alerts

ಸಿಸೇರಿಯನ್ ಪ್ರಸವದ ನಂತರ ಸೇವಿಸಬೇಕಾದ ಆಹಾರಗಳು

By Super
|

ರೋಮಾಂಚಕ ಗರ್ಭಧಾರಣೆಯ ಅವಧಿಯ ನಂತರ, ಈಗ ನೀವು ತಾಯ್ತನದ ಸುಖವನ್ನು ಅನುಭವಿಸುತ್ತಿದ್ದೀರಿ. ಅದು ಸಾಮಾನ್ಯ ಹೆರಿಗೆಯಾಗಿರಲಿ ಅಥವಾ ಸಿಸೇರಿಯನ್ ಅಥವಾ ಶಸ್ತ್ರ ಚಿಕಿತ್ಸೆಯ ಮೂಲಕ ಹೆರಿಗೆಯಾಗಿರಲಿ, ಒಟ್ಟಿನಲ್ಲಿ ನೀವು ನಿಮ್ಮ ಜೀವನದ ಪ್ರಮುಖ ಘಟ್ಟವನ್ನು ತಲುಪಿದ್ದಂತೂ ಸುಳ್ಳಲ್ಲ.

ಹೆರಿಗೆಯ ನಂತರ ಕೆಲಸಕ್ಕೆ ಹೊರಟು ನಿಂತಾಗ

ಆದರೆ, ನೀವು ಪ್ರಸವಾನಂತರದ ನಿಮ್ಮ ಆರೋಗ್ಯವನ್ನು ಸುಧಾರಿಸುವತ್ತ ಗಮನಹರಿಸುವುದಾದರೆ. ಅದರಲ್ಲೂ ನಿಮಗೆ ಸಿಸೇರಿಯನ್ ಆಗಿದ್ದರೆ ಆರೋಗ್ಯದ ಕಡೆಗೆ ಹೆಚ್ಚಿನ ಗಮನವನ್ನು ನೀಡಬೇಕು. ಗರ್ಭಾವಸ್ಥೆಯಲ್ಲಿ ದೇಹದಲ್ಲಾದ ಎಲ್ಲಾ ಬದಲಾವಣೆಗಳಿಂದ ಚೇತರಿಸಿಕೊಳ್ಳಲು, ಆರೋಗ್ಯಕರವಾಗಿ ನಿಮ್ಮ ದೇಹವನ್ನು ಇರಿಸಿಕೊಳ್ಳಲು ಪ್ರಸವದ ನಂತರದ ಅವಧಿ ಸರಿಯಾದ ಸಮಯ. ಸಿಸೇರಿಯನ್ ಪ್ರಸವದ ನಂತರ ಆಹಾರದ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗಿರುವುದು ಅತ್ಯಂತ ನಿರ್ಣಾಯಕ ಅಂಶವಾಗಿದೆ.

ಸಿಸೇರಿಯನ್ ಪ್ರಸವದ ನಂತರ ಸರಿಯಾದ ಆಹಾರದ ಆಯ್ಕೆ ನಿಮ್ಮನ್ನು ವೇಗವಾಗಿ ಗುಣಮುಖರಾಗುವಂತೆ ಮಾಡುತ್ತದೆ. ಗ್ಯಾಸ್ ಹೆಚ್ಚಿಸುವ, ಮಲಬದ್ಧತೆಗೆ ಕಾರಣವಾಗಬಹುದಾದ ಮತ್ತು ಜೀರ್ಣಕ್ರಿಯೆಗೆ ಅಡಚಣೆ ಉಂಟುಮಾಡುವಂತಹ ಆಹಾರಗಳ ಬಗ್ಗೆ ಗಮನವಿರಲಿ.

ಸಿಸೇರಿಯನ್ ಪ್ರಸವದ ನಂತರ ಒಂದು ಆರೋಗ್ಯಕರ ಆಹಾರ ಸೇವನೆ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹೆಚ್ಚಿಸುವಲ್ಲಿ ನೆರವಾಗಬಹುದು. ನೀವು ಸಿಸೇರಿಯನ್ ಪ್ರಸವದ ನಂತರ ಸೇವಿಸಬಹುದಾದ ಆಹಾರಗಳನ್ನು ಕಂಡುಕೊಳ್ಳಲು ಹುಡುಕುತ್ತಿದ್ದರೆ, ಇಲ್ಲಿ ನಿಮಗೆ ಸಹಾಯವಾಗುವಂತಹ ಉಪಯುಕ್ತ ಆಹಾರಗಳ ಪಟ್ಟಿಯನ್ನು ನೀಡಲಾಗಿದೆ.

ಹೆರಿಗೆಯ ನಂತರ ಆಹಾರಕ್ರಮ ಹೀಗಿರಲಿ

ಮೊಟ್ಟೆ:

ಮೊಟ್ಟೆ:

ಸಿಸೇರಿಯನ್ ಪ್ರಸವದ ನಂತರ ಸೇವಿಸಲೇ ಬೇಕಾದ ಪ್ರಮುಖ ಆಹಾರ ಮೊಟ್ಟೆ. ಮೊಟ್ಟೆಯಲ್ಲಿ ಪ್ರೋಟೀನ್ ಗಳು ಮತ್ತು ಸತು ಸಮೃದ್ಧವಾಗಿದೆ. ಇದು ನಿಮ್ಮ ಗರ್ಭಧಾರಣೆಯ ಬದಲಾವಣೆಗಳ ಕಠಿಣ ಹಂತಗಳಲ್ಲಿ ಆರೋಗ್ಯ ಸಮಸ್ಯೆಯನ್ನು ಸುಧಾರಿಸಲು ಮತ್ತು ಸದಾ ಆರೋಗ್ಯಕರವಾಗಿ ಉಳಿಯಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಚೇತರಿಕೆಯ ವೇಗವನ್ನೂ ಹೆಚ್ಚಿಸುತ್ತದೆ.

ಮೀನು :

ಮೀನು :

ನೀವು ಮೀನು ತಿನ್ನುವುದನ್ನು ಇಷ್ಟಪಡುವವರಾಗಿದ್ದರೆ ಇಲ್ಲಿದೆ ನಿಮಗೊಂದು ಸಂತೋಷದ ಸುದ್ದಿ. ಮೀನು ಸಿಸೇರಿಯನ್ ನಂತರ ಸೇವನೆ ಮಾಡಬೇಕಾದ ಅತ್ಯುತ್ತಮ ಆಹಾರಗಳಲ್ಲಿ ಒಂದು. ನೀವು ಆರೋಗ್ಯಕರವಾಗಿರಲು ಅಗತ್ಯವಾದ ಬಹಳ ಪ್ರಮುಖವಾದ ಒಮೇಗಾ 3 ಫ್ಯಾಟಿ ಆಸಿಡ್ ಗಳನ್ನು ಹೊಂದಿರುವ ಮೀನು ನಿಮ್ಮ ಆಹಾರದ ಆಯ್ಕೆಯಾಗಿರಲಿ.

ಹಾಲು :

ಹಾಲು :

ಕ್ಯಾಲ್ಸಿಯಂ ಅಂಶ ಸಮೃದ್ಧವಾಗಿರುವ ಹಾಲನ್ನು ನೀವು ಮಗುವಿಗೆ ಸ್ತನ್ಯಪಾನ ಮಾಡುತ್ತಿರುವ ವೇಳೆ ಅಗತ್ಯವಾಗಿ ಸೇವಿಸಬೇಕು. ಎದೆ ಹಾಲು ಉತ್ಪಾದನಾ ಪ್ರಕ್ರಿಯೆಯಲ್ಲಿ ನಿಮ್ಮ ದೇಹಕ್ಕೆ ಕ್ಯಾಲ್ಷಿಯಂ ಅಗತ್ಯವಿರುತ್ತದೆ. ಆದ್ದರಿಂದ ದಿನದಲ್ಲಿ ಎರಡು ಲೋಟ ಹಾಲು ಕುಡಿಯುವುದು ಸೂಕ್ತ.

ಕಲ್ಲಂಗಡಿ :

ಕಲ್ಲಂಗಡಿ :

ಸಿಸೇರಿಯನ್ ಪ್ರಸವದ ನಂತರ ನಮ್ಮ ಕರುಳು ಅದರ ಸಾಮಾನ್ಯ ಕ್ರಿಯೆಗೆ ಮರಳಿ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಗ್ಯಾಸ್ ಮತ್ತು ಮಲಬದ್ಧತೆ ಉಂಟುಮಾಡದಿರುವ ಆಹಾರಗಳನ್ನೇ ಸೇವಿಸಬೇಕಾಗುತ್ತದೆ. ಕಲ್ಲಂಗಡಿ ಹಣ್ಣನ್ನು ಸಿಸೇರಿಯನ್ ಪ್ರಸವದ ನಂತರ ನಿಮ್ಮ ಪ್ರಮುಖ ಆಹಾರದಲ್ಲಿ ಸೇರಿಸಿದರೆ ಉತ್ತಮ.

ನೀರು:

ನೀರು:

ಸಿಸೇರಿಯನ್ ಪ್ರಸವದ ನಂತರ ಸಾಕಷ್ಟು ನೀರು ಕುಡಿಯುವುದು ನಿಮ್ಮ ದೇಹವನ್ನು ಆರೋಗ್ಯಕರವಾಗಿರಿಸಿಕೊಳ್ಳಲು ಬಹಳ ಮುಖ್ಯ. ಇದು ನಿಮ್ಮ ದೇಹವನ್ನು ತೇವಾಂಶವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ನಿಮ್ಮ ದೇಹಕ್ಕೆ ಸಾಕಷ್ಟು ನೀರು ಒದಗಿಸುವುದರಿಂದ ನಿಮ್ಮ ಮಗುವಿಗೆ ಅಗತ್ಯವಾದ ಹಾಲು ದೇಹದಲ್ಲಿ ಉತ್ಪಾದನೆಯಾಗುವಲ್ಲಿಯೂ ಸಹಾಯ ಮಾಡುತ್ತದೆ .

ಮೊಸರು :

ಮೊಸರು :

ಮೊಸರು ನಿಮ್ಮ ದೇಹಕ್ಕೆ ಅಗತ್ಯವಿರುವ ಕ್ಯಾಲ್ಸಿಯಂ ಮತ್ತು ಸತುವನ್ನು ಸರಬರಾಜು ಮಾಡುವ ಅತ್ಯುತ್ತಮ ಆಹಾರ. ಮೊಸರು ಪ್ರಸವದ ನಂತರ ಮಹಿಳೆಯರು ಬೇರೆ ಬೇರೆ ವಿಧದ ಆಹಾರದಲ್ಲಿ ಬೆರೆಸುವುದರಿಂದ ನಿಮ್ಮ ಮೆಚ್ಚಿನ ಆಹಾರವಾಗಬಹುದು. ನಿಮ್ಮ ನೆಚ್ಚಿನ ಯಾವುದೇ ಭಕ್ಷ್ಯಗಳೊಂದಿಗೆ ಮೊಸರನ್ನು ಬಳಸಬಹುದು.

ಅಕ್ರೋಡ:

ಅಕ್ರೋಡ:

ನೀವು ಸಿಸೇರಿಯನ್ ಪ್ರಸವದ ನಂತರ ನಿಮ್ಮ ಆಹಾರದ ಭಾಗವಾಗಿ ಅಕ್ರೋಡವನ್ನು ಸೇವಿಸಬಹುದು. ಅಕ್ರೋಡ ಫೋಲಿಕ್ ಆಮ್ಲ ಮತ್ತು ಪ್ರೋಟೀನ್ ಗಳ ಒಂದು ಉತ್ತಮ ಮೂಲವಾಗಿದೆ. ಸಿಸೇರಿಯನ್ ಪ್ರಸವದ ನಂತರ ಸೇವಿಸಬೇಕಾದ ಆಹಾರವೆಂದು ಪರಿಗಣಿಸಿ, ಅಕ್ರೋಡವನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು .

ನಿಂಬೆ :

ನಿಂಬೆ :

ನಿಂಬೆ, ಸೋಂಕುಗಳ ವಿದುದ್ಧ ಹೋರಾಡಲು ಸಹಾಯ ಮಾಡುವ, ವಿಟಮಿನ್ ಸಿಯನ್ನು ಸಮೃದ್ಧವಾಗಿ ಹೊಂದಿರುವ ಹಣ್ಣು. ವಿಭಾಗ ನಂತರ , ಸಿಸೇರಿಯನ್ ಪ್ರಸವದ ನಂತರ ನೀವು ಗಾಯದಿಂದಾಗಿ ಸೋಂಕುಗಳು ಉಂಟಾಗುವ ಸಾಧ್ಯತೆಗಳು ಬಹಳ. ನಿಂಬೆಯಲ್ಲಿರುವ ವಿಟಮಿನ್ ಸಿ ನಿಮ್ಮನ್ನು ಯಾವುದೇ ರೀತಿಯ ಸೋಂಕಿನಿಂದ ಸುರಕ್ಷಿತವಾಗಿರುವಂತೆ ಮಾಡುತ್ತದೆ.

ಎಲೆಗಳುಳ್ಳ ತರಕಾರಿಗಳು :

ಎಲೆಗಳುಳ್ಳ ತರಕಾರಿಗಳು :

ಎಲೆಗಳುಳ್ಳ ತರಕಾರಿಗಳು ನಿಮ್ಮನ್ನು ಪ್ರಸವದ ನಂತರ ಆರೋಗ್ಯಕರ ಮತ್ತು ಫಿಟ್ ಆಗಿರುವಂತೆ ಮಾಡಲು ಬಹಳ ಸಹಾಯಕವಾಗಿವೆ. ಸಿಸೇರಿಯನ್ ಪ್ರಸವದ ನಂತರ ಫೈಬರ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ. ಇದು ನಿಮ್ಮ ದೇಹದಲ್ಲಿ ಸರಿಯಾದ ಕರುಳಿನ ಚಲನೆಗಳಿಗೆ ಸಹಾಯ ಮಾಡುತ್ತದೆ.ಹೀಗೆ ಅತ್ಯುತ್ತಮ ಆಹಾರಗಳನ್ನು, ಪ್ರಸವದ ನಂತರ ದೈಹಿಕ ಸದೃಢತೆಯನ್ನು ಕಾಪಾಡಿಕೊಳ್ಳಲು ಸೇವಿಸುವುದು ಅತ್ಯಂತ ಅಗತ್ಯ.

Read more about: ತಾಯಿ ಮಗು mother baby
English summary

Foods To Consume Post C-Section

After the thrilling pregnancy period, now you are enjoying your motherhood, no matter whether it was a normal delivery or a C-section. But, when you consider the postpartum health care
X
Desktop Bottom Promotion