For Quick Alerts
ALLOW NOTIFICATIONS  
For Daily Alerts

ಸಂತಾನೋತ್ಪತ್ತಿ ಕಡಿಮೆ ಮಾಡುವ ಪಾನೀಯಗಳು

By Hemanth P
|

ಹಲವಾರು ರೀತಿಯ ಪಾನೀಯಗಳ ಸೇವನೆಯಿಂದಾಗಿ ಪುರುಷರಲ್ಲಿ ಸಂತಾನೋತ್ಪತ್ತಿ ಆರೋಗ್ಯವು ಹೆಚ್ಚು ಹಾನಿಗೊಳಗಾಗುತ್ತದೆ. ನಿಮ್ಮ ಸಂತಾನೋತ್ಪತ್ತಿ ಮತ್ತು ಫಲವತ್ತತೆ ಮೇಲೆ ನೇರ ಹಾನಿಯನ್ನುಂಟು ಮಾಡುವಂತಹ ಪಾನೀಯಗಳನ್ನು ತ್ಯಜಿಸಬೇಕು ಅಥವಾ ಅದನ್ನು ಕಡಿಮೆಗೊಳಿಸಬೇಕು. ಬಂಜೆತನ ನಿವಾರಿಸಬೇಕಾದರೆ ನೀವು ಅತ್ಯಂತ ಪ್ರಯಾಸದ ಹಾದಿ ಕ್ರಮಿಸಬೇಕು. ಭವಿಷ್ಯದಲ್ಲಿ ನೀವು ಮಕ್ಕಳನ್ನು ಪಡೆಯಲು ಬಯಸಿರುವುದೇ ಆದರೆ ಆರೋಗ್ಯಕರ ಮತ್ತು ಧನಾತ್ಮಕವಾಗಿರುವುದು ತುಂಬಾ ಮುಖ್ಯ. ನಿಮ್ಮ ಜೀವನಶೈಲಿ ಹಾಗೂ ಆರೋಗ್ಯದ ಮೇಲೆ ಮಗುವಿನ ಆರೋಗ್ಯವು ಅವಲಂಬಿತವಾಗಿರುತ್ತದೆ.

ಪುರುಷರ ಸಂತಾನೋತ್ಪತ್ತಿ ಮೇಲೆ ಪರಿಣಾಮ ಬೀರುವಂತಹ ಪ್ರಮುಖ ಪಾನೀಯವೆಂದರೆ ಆಲ್ಕೋಹಾಲ್. ಆಲ್ಕೋಹಾಲ್ ಸೇವನೆ ಮಾಡುವ ಹೆಚ್ಚಿನವರು ಮಕ್ಕಳನ್ನು ಪಡೆಯಲು ಬಯಸಿದರೂ ಆಗ ಅವರು ವಿಫಲವಾಗುತ್ತಿರುವ ಹಲವಾರು ದೂರುಗಳು ಬಂದಿದೆ. ಅತಿಯಾದ ಆಲ್ಕೋಹಾಲ್ ಸೇವನೆ ಮತ್ತು ಆಲ್ಕೋಹಾಲ್ ನ್ನು ಚಟವಾಗಿಸಿಕೊಂಡಿರುವವರು ವೀರ್ಯಾಣು ಗುಣಮಟ್ಟ ಮತ್ತು ವೀರ್ಯಾಣು ಸಂಖ್ಯೆ ಕಡಿಮೆ ಹೊಂದಿರುತ್ತಾರೆ. ಸ್ಪಿರಿಟ್ ಹೊಂದಿರುವ ವೊಡ್ಕಾ, ಜಿನ್ ಮತ್ತು ಬಿಳಿ ರಮ್ ಫಲವತ್ತತೆ ಕಡಿಮೆ ಮಾಡುವಂತಹ ಪ್ರಮುಖ ಅಮಲು ಪಾನೀಯಗಳು. ಯಾವಾಗಲೊಮ್ಮೆ ವೈನ್ ಕುಡಿಯುವುದು ಒಳ್ಳೆಯದು.

ಪುರುಷರ ಸಂತಾನೋತ್ಪತ್ತಿ ಮೇಲೆ ಪರಿಣಾಮ ಬೀರುವ ಮತ್ತೊಂದು ಪಾನೀಯವೆಂದರೆ ಕೆಫಿನ್. ಹೆಚ್ಚಿನ ಪುರುಷರು ಕಾಫಿ ಮತ್ತು ಇತರ ಕೆಫಿನ್ ಯುಕ್ತ ಪಾನೀಯಗಳನ್ನು ಸೇವಿಸುತ್ತಿರುತ್ತಾರೆ. ಕೆಫಿನ್ ಸೇವನೆ ಒಂದು ಮಿತಿ ದಾಟಿದ ಬಳಿಕ ಅದು ಹಾನಿಯನ್ನು ಉಂಟು ಮಾಡುತ್ತದೆ. ಸರಾಸರಿ ವಯಸ್ಕರಿಗೆ ದಿನಕ್ಕೆ ಸೇವಿಸಬಹುದಾದ ಕೆಫಿನ್ ಮಟ್ಟ 300 ಮಿ.ಗ್ರಾಂ. ಇದಕ್ಕಿಂತ ಕಡಿಮೆ ಸೇವನೆ ಮಾಡಿದಷ್ಟು ಅದು ನಿಮ್ಮ ಸಾಮಾನ್ಯ ಆರೋಗ್ಯ ಮತ್ತು ಸಂತಾನೋತ್ಪತ್ತಿಗೆ ಒಳ್ಳೆಯದು.

1. ಕಾಫಿ

1. ಕಾಫಿ

ಬೆಳಗ್ಗಿನ ಒಂದು ಕಪ್ ನ್ನು ತಪ್ಪಿಸಬೇಕೆಂದಿಲ್ಲ. ಆದರೆ ನೀವು 200 ಮಿ.ಗ್ರಾಂ.ಗಿಂತ ಹೆಚ್ಚಿನ ಕೆಫಿನ್ ಸೇವನೆ ಮಾಡಿದರೆ. ಆ ಬಗ್ಗೆ ದಿನಕ್ಕೆ ಒಂದು ಎರಡು ಎಂಟು ಔನ್ಸ್ ಕಪ್ ಇಲ್ಲಿದೆ, ಇದರಿಂದ ನಿಮಗೆ ಸಮಾಧಾನವಾಗಬಹುದು. ಅತಿಯಾದ ಕೆಫಿನ್ ಸೇವನೆಯಿಂದಾಗಿ ಫಲವತ್ತತೆ ಸಮಸ್ಯೆ ಉಂಟಾಗಬಹುದು. ನೀವು ಮಗುವಿನ ತಂದೆಯಾಗಲು ಬಯಸುವುದಾದರೆ ಆಗ ಕೆಫಿನ್ ಸೇವನೆ ತುಂಬಾ ಕಡಿಮೆಗೊಳಿಸಿ. ಕೆಫಿನ್ ಖನಿಜಾಂಶ ಹೀರಿಕೊಳ್ಳುವ ಸಾಮರ್ಥ್ಯ ಕಡಿಮೆ ಮಾಡುತ್ತದೆ. ಅತಿಯಾಗಿ ಸೇವನೆ ಮಾಡಿದಾಗ ದೇಹವು ನಿರ್ಜಲೀಕರಣವಾಗಬಹುದು. ಇದರಿಂದಾಗಿ ಕೆಫಿನ್ ಸೇವನೆ ಕಡಿಮೆ ಮಾಡಬೇಕು.

2. ಅಪರೂಪದ ಕುಡಿತ

2. ಅಪರೂಪದ ಕುಡಿತ

ನಿಮ್ಮ ಸ್ನೇಹಿತರು ಆಮಂತ್ರಿಸುತ್ತಿರುವ ಪಬ್ ಗಳಿಗೆ ನೀವು ಹೋಗುವುದನ್ನು ನಿಲ್ಲಿಸಬೇಕು ಅಥವಾ ಅಲ್ಲಿ ಹೋಗಿ ಹೆಚ್ಚು ಕುಡಿಯದಂತೆ ಎಚ್ಚರಿಕೆ ವಹಿಸಬೇಕು. ಅತಿಯಾಗಿ ಕುಡಿಯುವುದನ್ನು ನಿಗ್ರಹಿಸಲು ನಿಮಗೆ ತುಂಬಾ ಕಷ್ಟವಾಗಹುದು. ನೀವು ಕೇವಲ ಗುಣಮಟ್ಟದ ವೀರ್ಯಾಣುವನ್ನು ಕಳಕೊಳ್ಳುವುದು ಮಾತ್ರವಲ್ಲದೆ ಕಾಮವನ್ನು ಕುಂದಿಸಬಹುದು.

3. ಆಲ್ಕೋಹಾಲ್

3. ಆಲ್ಕೋಹಾಲ್

ಅತಿಯಾದ ಆಲ್ಕೋಹಾಲ್ ಸೇವನೆಯಿಂದ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಮಟ್ಟ, ವೀರ್ಯಾಣುವಿನ ಗುಣಮಟ್ಟ ಮತ್ತು ಪ್ರಮಾಣ ಕಡಿಮೆ ಮಾಡುತ್ತದೆ. ಇದು ಕಾಮ ಕುಂದುವಂತೆ ಮಾಡಿ ಬಂಜೆತನಕ್ಕೆ ಕಾರಣವಾಗಬಹುದು. ಪುರುಷರು ಅತಿಯಾಗಿ ಕುಡಿಯುತ್ತಿದ್ದರೆ ಆಗ ಮಹಿಳೆ ಗರ್ಭಧರಿಸುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ. ಆದಾಗ್ಯೂ ನೀವು ಕುಡಿಯುವುದನ್ನು ಕಡಿಮೆ ಮಾಡಿದರೆ ಅದರ ಪರಿಣಾಮ ತದ್ವಿರುದ್ಧವಾಗಬಹುದು. ಆಲ್ಕೋಹಾಲ್ ನಿಮ್ಮ ದೇಹವನ್ನು ಕ್ಷಿಪ್ರಗತಿಯಲ್ಲಿ ನಿರ್ಜಲೀಕರಣಗೊಳಿಸಿ ವೀರ್ಯದ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು. ನಿರ್ಜಲೀಕರಣದಿಂದಾಗಿ ಆಂತರಿಕ ಅಂಗಾಂಗಗಳು ಮತ್ತು ಅಂಗಾಂಶಗಳ ಮೇಲೆ ಹಾನಿಯನ್ನು ಉಂಟು ಮಾಡಬಹುದು.

4. ಎನರ್ಜಿ ಡ್ರಿಂಕ್ಸ್ ಮತ್ತು ಏರಿಯೇಟೆಡ್ ಡ್ರಿಂಕ್ಸ್

4. ಎನರ್ಜಿ ಡ್ರಿಂಕ್ಸ್ ಮತ್ತು ಏರಿಯೇಟೆಡ್ ಡ್ರಿಂಕ್ಸ್

ಇದು ನೇರವಾಗಿ ನಿಮ್ಮ ಸಂತಾನೋತ್ಪತ್ತಿಯ ಮೇಲೆ ಪರಿಣಾಮ ಬೀರಲ್ಲ. ಅತಿಯಾದ ಕೋಲಾ ಮತ್ತು ಎನರ್ಜಿ ಡ್ರಿಂಕ್ಸ್ ಸೇವನೆಯಿಂದಾಗಿ ಅದರಲ್ಲಿನ ಕೆಫಿನ್ ಅಂಶವು ಸಂತಾನೋತ್ಪತ್ತಿ ಮೇಲೆ ಪರಿಣಾಮ ಬೀರಬಹುದು. ಕಾರ್ಬ್ರೋನೇಟೆಡ್ ಪಾನೀಯಗಳು ಜೀರ್ಣಾಂಗ ಕ್ರಿಯೆ ಮೇಲೆ ಪರಿಣಾಮ ಬೀರಿ ಮಲಬದ್ಧತೆಗೆ ಕಾರಣವಾಬಹುದು. ದೀರ್ಘಾವಧಿಯ ಮಲಬದ್ಧತೆ ಸಮಸ್ಯೆಯಿಂದಾಗಿ ಅದು ರಕ್ತದ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು. ಸಾಮಾನ್ಯವಾಗಿ ಎನರ್ಜಿ ಡ್ರಿಂಕ್ಸ್ ನ್ನು ಕೆಫಿನ್ ನಿಂದ ಪ್ಯಾಕ್ ಮಾಡಲಾಗಿರುತ್ತದೆ ಮತ್ತು ಇದರ ಅತಿಯಾದ ಸೇವನೆ ಫಲವತ್ತತೆ ಮೇಲೆ ಪರಿಣಾಮ ಬೀರಬಹುದು.

English summary

Drinks to avoid for better reproductive health

Reproductive health in men is highly affected by consumption of few drinks. You should take care in avoiding or limiting these drinks that directly affect your reproductive health and risk infertility. Reversal of infertility is a tedious task which is a road you may wish to avoid.
Story first published: Saturday, January 4, 2014, 14:49 [IST]
X
Desktop Bottom Promotion