For Quick Alerts
ALLOW NOTIFICATIONS  
For Daily Alerts

ಸಾಮಾನ್ಯ ಗರ್ಭಧಾರಣೆಯ ತೊಂದರೆಗಳು

By Poornima heggade
|

ಮಗು ಹುಟ್ಟುವ ಮೊದಲು ಒಂಬತ್ತು ತಿಂಗಳು ಹೊಟ್ಟೆಯ ಒಳಗೆ, ಮಗು ಹುಟ್ಟಿದಾಗಿನಿಂದ ಮೂರು ವರ್ಷ (ಅಥವಾ ದೊಡ್ಡವರಾಗುವವರೆಗೆ) ಮಡಿಲಲ್ಲಿ ಹಾಗೂ ತನ್ನ ಉಸಿರಿರುವವರೆಗೂ ತನ್ನ ಎದೆಯಲ್ಲಿಟ್ಟು ಸಲಹುವುದು ಪ್ರತಿಯೊಬ್ಬ ಸ್ತ್ರೀಯ ಜೀವನದ ಪರಿ, ನಿತ್ಯದ ಬದುಕು!

ಮೇರಿ ಮ್ಯಾನ್ಸನ್ ಅವರ ಈ ಪದಗಳು ಅಕ್ಷರಶಃ ನಿಜ! ಒಂದು ಮಗುವಿಗೆ ಜನ್ಮ ನೀಡುವ ಪ್ರತಿ ಮಹಿಳೆಯರಿಗೆ ವಾಸ್ತವವಾಗಿ ಈ ಭಾವನೆ ಆಕೆಯ ಜೀವನದ ಯಾವುದೇ ಇತರ ಸಂತೋಷಗಳಿಗೆ ಸರಿಸಾಟಿಯಿಲ್ಲದ್ದು.
ಆದರೆ ಈ ಆನಂದ ಜೊತೆಗೆ ತಾಯಿ ಆಗುವ ಮೊದಲು ಪ್ರತಿ ಮಹಿಳೆಯರು ಕೆಲವು ತೊಂದರೆಗಳನ್ನೂ ಅನುಭವಿಸಬೇಕಾಗುತ್ತದೆ.

ಕೆಲವು ಸಾಮಾನ್ಯ ಗರ್ಭಧಾರಣೆಯ ಸಮಸ್ಯೆಗಳು ಈ ಕೆಳಗಿನಂತಿವೆ:

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಹೆರಿಗೆ ಸಮಯದಲ್ಲಿ ಯಾವಾಗ ಆಸ್ಪತ್ರೆಗೆ ಭೇಟಿ ನೀಡಬೇಕು?

ವಾಂತಿ:

ವಾಂತಿ:

ಸ್ತ್ರೀ ತನ್ನ ಗರ್ಭಧಾರಣೆಯ ಪೂರ್ತಿ ಅನುಭವಿಸುವ ಮೂಲಭೂತ ಗರ್ಭಧಾರಣೆಯ ಸಮಸ್ಯೆ ಇದಾಗಿದೆ. ಆದರೆ ಮತ್ತೆ ಮತ್ತೆ ವಾಂತಿಯಾಗಿ ಅದು ದಿನದಿಂದ ದಿನಕ್ಕೆ ಹೆಚ್ಚಿದರೆ ವೈದ್ಯಕೀಯ ತಪಾಸಣೆ ಅತ್ಯಗತ್ಯ.

ಬೆಳಗಿನ ಸಮಯದಲ್ಲಿ ಆಯಾಸ (ಮಾರ್ನಿಂಗ್ ಸಿಕ್ನೆಸ್):

ಬೆಳಗಿನ ಸಮಯದಲ್ಲಿ ಆಯಾಸ (ಮಾರ್ನಿಂಗ್ ಸಿಕ್ನೆಸ್):

ಹಾರ್ಮೋನ್ (ಗ್ರಂಥಿ) ಗಳಲ್ಲಿನ ಬದಲಾವಣೆಗಳು ಬೆಳಗಿನ ಬೇನೆಯನ್ನು ಉಂಟು ಮಾಡುತ್ತದೆ ಇದು ಇಡೀ ದಿನವೂ ಮುಂದುವರೆಯುವ ಸಾಧ್ಯತೆಗಳಿರುತ್ತವೆ. ಬೆಳಗಿನ ಆರೋಗ್ಯ ತೊಂದರೆಯನ್ನು ನಿಯಂತ್ರಿಸಲು ಉತ್ತಮ ಪರಿಹಾರವೆಂದರೆ, ಬೆಳಗಿನ ಸಮಯದಲ್ಲಿ ಅಲ್ಪ ಆಹಾರ ಸೇವಿಸುವುದು, ಮತ್ತು ನಿಮ್ಮ ಮನೆಯೊಳಗೆ ಸರಿಯಾಗಿ ಗಾಳಿಬರುವ ಹಾಗೆ ನೋಡಿಕೊಳ್ಳಿ.

ಊತ:

ಊತ:

ಊತ ಗರ್ಭಿಣಿ ಮಹಿಳೆಯರಲ್ಲಿ ಕಂಡುಬರುವ ಮತ್ತೊಂದು ಸಾಮಾನ್ಯ ಸಮಸ್ಯೆ. ಆದರೆ ಊತದ ಪ್ರಮಾಣ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ದೀರ್ಘಕಾಲದವರೆಗೆ ನಿಲ್ಲುವುದನ್ನು ತಪ್ಪಿಸುವುದು ಮತ್ತು ಆರಾಮದಾಯಕವಾದ ಶೂಗಳನ್ನು ಅಥವಾ ವಿಶೇಷವಾಗಿ ಈ ಸಮಸ್ಯೆಯನ್ನು ಎದುರಿಸಲು ವಿನ್ಯಾಸಗೊಳಿಸಲಾದ ಪಾದರಕ್ಷೆಗಳನ್ನು ಧರಿಸುವುದು ಈ ಸಮಸ್ಯೆಗೆ ಕೊಂಚ ಪರಿಹಾರ ನೀಡಬಲ್ಲದು.

ತೂಕ ಹೆಚ್ಚಾಗುವುದು :

ತೂಕ ಹೆಚ್ಚಾಗುವುದು :

ಗರ್ಭಧಾರಣೆಯ ಸಂದರ್ಭದಲ್ಲಿ ಎಲ್ಲಾ ಮಹಿಳೆಯರಲ್ಲೂ ಅವರ ದೇಹದ ತೂಕ ಹೆಚ್ಚಾಗುತ್ತದೆ. ಆದ್ದರಿಂದ ಅನಗತ್ಯವಾಗಿ ಅದರ ಬಗ್ಗೆ ಚಿಂತೆ ಮಾಡಿ ಆಗಾಗ್ಗೆ ಆಹಾರವನ್ನು ಸೇವಿಸುವುದನ್ನು ನಿಲ್ಲಿಸದಿರಿ.

ನಿದ್ರಾಹೀನತೆ :

ನಿದ್ರಾಹೀನತೆ :

ಗ್ರಂಥಿಯಲ್ಲಿನ ಬದಲಾವಣೆಗಳು ಮತ್ತು ಅಸ್ವಸ್ಥತೆ ಗರ್ಭಾವಸ್ಥೆಯಲ್ಲಿ ನಿದ್ರಾಹೀನತೆಗೆ ಕಾರಣ. ಕೆಫಿನ್, ಮದ್ಯ ಮತ್ತು ಕೊಬ್ಬಿನ ಆಹಾರಗಳನ್ನು ಸೇವಿಸುವುದನ್ನು ನಿಲ್ಲಿಸುವುದರ ಮೂಲಕ ಈ ಸಮಸ್ಯೆಯನ್ನು ಎದುರಿಸಬಹುದು.

ಆಯಾಸ :

ಆಯಾಸ :

ಸರಿಯಾದ ನಿದ್ರೆ ಮತ್ತು ವಿಶ್ರಾಂತಿ ತೆಗೆದುಕೊಳ್ಳುವುದರಿಂದ ಗರ್ಭಾವಸ್ಥೆಯಲ್ಲಿನ ಅಧಿಕ ಆಯಾಸವನ್ನು ತಪ್ಪಿಸಬಹುದು. ದೇಹದಲ್ಲಿ ಸುಸ್ತಿಗೆ ಕಾರಣವಾಗುವ ರಕ್ತಹೀನತೆ ತಪ್ಪಿಸಲು ಕಬ್ಬಿಣದ ಅಂಶ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು.

ಬೆನ್ನು ನೋವು :

ಬೆನ್ನು ನೋವು :

ಹೊಟ್ಟೆಯ ಭಾಗದಲ್ಲಿ ತೂಕ ಹೆಚ್ಚಾಗುವ ಕಾರಣ, ಮಹಿಳೆಯರು ಗರ್ಭಾವಸ್ಥೆಯಲ್ಲಿ ಬೆನ್ನು ನೋವನ್ನು ಅನುಭವಿಸುತ್ತಾರೆ. ಆರಾಮದಾಯಕ ಶೂಗಳನ್ನು ಧರಿಸಿ ಮತ್ತು ಈ ಸಮಸ್ಯೆಯನ್ನು ತೀವ್ರಗೊಳಿಸುವ ಭಾರವಾದ ವಸ್ತುಗಳನ್ನು ಎತ್ತುವ ಕೆಲಸಗಳನ್ನು ಮಾಡದಿರಿ.

ಹೊಟ್ಟೆ ನೋವು :

ಹೊಟ್ಟೆ ನೋವು :

ಗರ್ಭಧಾರಣೆಯ ಎರಡು ಮತ್ತು ಮೂರನೇ ತಿಂಗಳು ಆರಂಭವಾಗುತ್ತಿದ್ದಂತೆ ಹೊಟ್ಟೆನೋವು ಸಾಮಾನ್ಯ. ವಸ್ತಿ (mmಮೂತ್ರ ಪಿಂಡದ ಭಾಗ) ಹೊಟ್ಟೆಯಲ್ಲಿ ಮಗುವಿನ ಬೆಳವಣಿಗೆಗೆ ಹೆಚ್ಚು ಸ್ಥಳಾವಕಾಶ ಉಂಟಾಗುವ ಸಮಯ ಇದು. ಆದರೆ, ನಿರಂತರ ನೋವು ನೋವು ಕಾಣಿಸಿಕೊಂಡಲ್ಲಿ ವೈದ್ಯಕೀಯ ನೆರವನ್ನು ಪಡೆಯಬೇಕಾಗುತ್ತದೆ.

ಮಲಬದ್ಧತೆ :

ಮಲಬದ್ಧತೆ :

ಇದು ದೇಹದಲ್ಲಿ ಚಯಾಪಚಯ ಬದಲಾವಣೆಗಳಿಂದಾಗಿ ಸಂಭವಿಸುತ್ತದೆ. ಹೆಚ್ಚು ನೀರನ್ನು ಕುಡಿಯುವುದು ಮತ್ತು ಫೈಬರ್ ಭರಿತ ಆಹಾರ ತಿನ್ನುವುದು ಈ ಸಮಸ್ಯೆಗೆ ಪರಿಹಾರ.

ಕಾಲಿನ ಸೆಳೆತ :

ಕಾಲಿನ ಸೆಳೆತ :

ಮಲಗುವ ಮೊದಲು ಕಾಲಿನ ಹೆಬ್ಬೆರಳನ್ನು ತಿರುಗಿಸುವ ವ್ಯಾಯಾಮ (Toe curling exercises ಟೊ ಕರ್ಲಿಂಗ್ ವ್ಯಾಯಾಮ) ಮಾಡಬೇಕು. ನೋವು ಉಂಟಾದ ಭಾಗಗಳಲ್ಲಿ ಚೆನ್ನಾಗಿ ಮಸಾಜ್ ಮಾಡಿ. ಮೆಗ್ನೀಶೀಯಂ ಮತ್ತು ಪೊಟ್ಯಾಶಿಯಂ ಹೇರಳವಾಗಿರುವ ಆಹಾರವನ್ನು ಸೇವಿಸಿ.

ಉಸಿರಾಟದ ತೊಂದರೆ :

ಉಸಿರಾಟದ ತೊಂದರೆ :

ಈ ಸಮಸ್ಯೆಗೆ ಕಾರಣ, ಗರ್ಭಿಣಿ ಮಹಿಳೆಯ ದೇಹದಲ್ಲಿ ಒತ್ತಡ ಉಂಟಾಗುವುದು. ನೀವು ಉಸಿರಾಟದ ತೊಂದರೆಯ ಭಾವನೆ ಉಂಟಾದಲ್ಲಿ ವಿಶ್ರಾಂತಿ ಮಾಡಿ ಮತ್ತು ಸಮಸ್ಯೆ ಹೆಚ್ಚಾದರೆ ವೈದ್ಯರನ್ನು ಭೇಟಿ ಮಾಡಿ.

ಇವುಗಳ ಜೊತೆಗೆ ತಲೆನೋವು, ಅಧಿಕ ರಕ್ತದೊತ್ತಡ, ಆಹಾರ ಕಡುಬಯಕೆ ಮತ್ತು ಗಂಟಲು ನೋವು ಮೊದಲಾದವು ಇತರ ಕೆಲವು ಸಾಮಾನ್ಯ ಗರ್ಭಧಾರಣೆಯ ಸಮಸ್ಯೆಗಳು.

ಈ ಕೆಲವು ಸಮಸ್ಯೆಗಳನ್ನು ಗರ್ಭಧಾರಣೆಯ ಸಮಯದಲ್ಲಿ ನಿವಾರಿಸಲು ಸಾಧ್ಯವಿಲ್ಲ. ಆದರೆ ತಾಯಿ ಮಗು ಮಗುವಿನ ಮೇಲೆ ಧನಾತ್ಮಕ ಪರಿಣಾಮ ಹೊಂದಿರುವ ಆರೋಗ್ಯವಂತ ಜೀವನ ಶೈಲಿಯನ್ನು ಅನುಸರಿಸುವ ಮೂಲಕ ಸ್ವಲ್ಪಮಟ್ಟಿಗೆ ಈ ಸಮಸ್ಯೆಗಳನ್ನು ತಡೆಗಟ್ಟಬಹುದು. ಆರೋಗ್ಯಕರ ಮಗು ಪ್ರತಿ ತಾಯಿಯ ಬಯಕೆ!

English summary

Common Pregnancy Problems

Giving birth to a child is indeed what every women carves for and this feeling is unmatched to any other pleasures of life.
Story first published: Saturday, March 29, 2014, 16:53 [IST]
X
Desktop Bottom Promotion