For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿರುವ ಸಾಮಾನ್ಯ ಗರ್ಭಾವಸ್ಥೆಯ ನಂಬಿಕೆಗಳು

|

ಭಾರತದಲ್ಲಿರುವ ಗರ್ಭಿಣಿ ಸ್ತ್ರೀಯರು ಹಲವಾರು ನಂಬಿಕೆಗಳನ್ನು ತಮ್ಮ ಗರ್ಭಾವಸ್ಥೆಯಲ್ಲಿ ನಂಬುತ್ತಾರೆ. ಅರ್ಧದಷ್ಟು ನಂಬಿಕೆಗಳನ್ನು ಹೆಚ್ಚಾಗಿ ಗರ್ಭಿಣಿಯರು ತಮ್ಮ ಮೊದಲ ಮಗುವಿನ ಗರ್ಭವಸ್ಥೆಯಲ್ಲಿ ಆಚರಿಸುತ್ತಾರೆ. ತಮ್ಮ ಮಗುವಿನ ಒಳಿತಿಗಾಗಿ ಹೆಚ್ಚಿನ ಗರ್ಭಿಣಿ ಸ್ತ್ರೀಯರು ಈ ನಂಬಿಕೆಯನ್ನು ಆಚರಿಸುತ್ತಾರೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬೆಳಗ್ಗಿನ ಅನಾರೋಗ್ಯ ವಿರುದ್ಧ ಹೋರಾಡಲು ಮದ್ದು

ತಾಯ್ತನ ಹೆಣ್ಣಿಗೆ ವರದಾನವಿದ್ದಂತೆ. ತನ್ನ ಒಡಲಲ್ಲಿ ಜೀಬ ತಳೆಯುವ ಪುಟ್ಟ ಕಂದಮ್ಮ ತಾಯಿಗೆ ಎಲ್ಲ ಸುಖವನ್ನೂ ನೀಡುತ್ತದೆ. ಈ ಸಮಯದಲ್ಲಿ ತಾಯಿ ಮಗುವಿನ ಆರೋಗ್ಯಕ್ಕೆ ಹೆಚ್ಚು ಮಹತ್ವವಿದೆ. ಈ ನಂಬಿಕೆಗಳನ್ನು ಸಹ ಸುರಕ್ಷತೆಯ ಆಧಾರದಲ್ಲಿ ಪಾಲಿಸಲಾಗುತ್ತದೆ. ಕೆಲವೊಮ್ಮೆ ಈ ನಂಬಿಕೆಗಳು ಮೂಢತೆಯನ್ನು ಕೂಡ ಹೊಂದಿರುತ್ತವೆ.

ಗರ್ಭಿಣಿಗೆ ಅಸುರಕ್ಷತೆಯನ್ನು ಉಂಟುಮಾಡುವ ಈ ನಂಬಿಕೆಗಳು ಮನೆಯ ಹಿರಿಯರು ಆಚರಣೆಗೆ ತಂದು ಅದನ್ನು ಪಾಲಿಸುವಂತೆ ಆಕೆಗೆ ಬಲವಂತ ಪಡಿಸುತ್ತಾರೆ. ಇದರಿಂದ ಗರ್ಭಿಣಿ ತಾಯಿಗೆ ನೋವೇ ಹೆಚ್ಚು. ನಂಬಿಕೆಗಳು ವೈಚರಿಕವಾಗಿದ್ದರೆ ಮಾತ್ರ ಅದರ ಅನುಷ್ಠಾನ ಸಾಧ್ಯ. ಇಂದು ಬೋಲ್ಡ್ ಸ್ಕೈ ಅಂತಹ ಕೆಲವೊಂದು ಆಚರಣೆಗಳು ನಂಬಿಕೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೆ. ಅವುಗಳತ್ತ ನೋಟ ಹರಿಸಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಎರಡನೇ ಮಗುವಿನ ಆಗಮನಕ್ಕೆ ತಯಾರಾಗಿ

ನಂಬಿಕೆ 1: ಮಗುವಿನ ಚಿತ್ರ

ನಂಬಿಕೆ 1: ಮಗುವಿನ ಚಿತ್ರ

ನೀವು ಗರ್ಭಿಣಿಯರಿರುವ ಭಾರತೀಯ ಮನೆಗೆ ಭೇಟಿ ಕೊಟ್ಟಾಗ ಮನೆಯ ಗೋಡೆಗಳಲ್ಲಿ ಸುಂದರ ಮಗುವಿನ ಭಾವಚಿತ್ರಗಳನ್ನು ಗಮನಿಸಬಹುದು. ಭಾರತೀಯ ನಂಬಿಕೆಯ ಪ್ರಕಾರ ಈ ಫೋಟೋಗಳನ್ನು ನೋಡುವುದು ಗರ್ಭಿಣಿಗೆ ಸುಂದರ ಮಗುವನ್ನು ದಯಪಾಲಿಸುತ್ತದೆ ಎಂದಾಗಿದೆ.

ನಂಬಿಕೆ 2: ತುಪ್ಪ ಸೇವನೆ

ನಂಬಿಕೆ 2: ತುಪ್ಪ ಸೇವನೆ

ಭಾರತೀಯ ಗರ್ಭಿಣೀ ಸ್ತ್ರೀಯರು ಪ್ರಸವ ಸಮಯದಲ್ಲಿ ಹೆಚ್ಚು ತುಪ್ಪ ಮತ್ತು ಬೆಣ್ಣೆಯನ್ನು ಸೇವಿಸುತ್ತಾರೆ. ನಂಬಿಕೆಯ ಪ್ರಕಾರ ತುಪ್ಪವನ್ನು ಸೇವಿಸುವುದು ಹೆರಿಗೆಯನ್ನು ಸರಳಗೊಳಿಸಿ ಮಗುವನ್ನು ಗರ್ಭಕೋಶದಿಂದ ಹೊರಗೆ ಬರಲು ಸುಲಭಗೊಳಿಸುತ್ತದೆ ಎಂದಾಗಿದೆ.

ನಂಬಿಕೆ 3: ಇಬ್ಬರಿಗಾಗಿ ಸೇವನೆ

ನಂಬಿಕೆ 3: ಇಬ್ಬರಿಗಾಗಿ ಸೇವನೆ

ತಾವು ಗರ್ಭಿಣಿಯಾಗಿರುವಾಗ ಎರಡೂ ಜೀವಗಳಿಗಾಗಿ ಆಹಾರ ಸೇವನೆ ಮಾಡುತ್ತೇವೆ ಎಂದು ಸ್ತ್ರೀಯರು ನಂಬುತ್ತಾರೆ. ಆದರೆ ಗರ್ಭಿಣಿಯರು ಹೆಚ್ಚು ತಿನ್ನುವುದು ಅವರಿಗೆ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು.

ನಂಬಿಕೆ 4: ಬಿಳಿ ಬಣ್ಣದ ಮಗುವಿಗಾಗಿ

ನಂಬಿಕೆ 4: ಬಿಳಿ ಬಣ್ಣದ ಮಗುವಿಗಾಗಿ

ಭಾರತದಲ್ಲಿ, ಜನರು ಮಗುವಿನ ಬಣ್ಣಕ್ಕೆ ಮಹತ್ವ ನೀಡುತ್ತಾರೆ. ಆದ್ದರಿಂದ ಹೆಚ್ಚಿನ ಮಹಿಳೆಯರು ಕೇಸರಿ ಮಿಶ್ರಿತ ಹಾಲನ್ನು ಹೆಚ್ಚಾಗಿ ಸೇವಿಸುತ್ತಾರೆ ಇದರಿಂದ ಜನಿಸುವ ಮಗು ಬಿಳಿ ಮತ್ತು ಸುಂದರವಾಗಿರುತ್ತದೆ ಎಂಬುದು ಅವರ ನಂಬಿಕೆ.

ನಂಬಿಕೆ 5: ಗರ್ಭಿಣಿ ಬಯಕೆಗಳು

ನಂಬಿಕೆ 5: ಗರ್ಭಿಣಿ ಬಯಕೆಗಳು

ಆಹಾರದ ವಿಷಯಕ್ಕೆ ಬಂದಾಗ ಗರ್ಭಿಣಿ ತಾಯಿಗೆ ಬಯಕೆ ಸಾಮಾನ್ಯವಾಗಿರುತ್ತದೆ. ಗರ್ಭಿಣಿಯು ಉಪ್ಪಿನ ಆಹಾರಗಳನ್ನು ಹೆಚ್ಚು ತಿಂದಲ್ಲಿ ಆಕೆಗೆ ಗಂಡು ಮಗು ಮತ್ತು ಸಿಹಿ ಆಹಾರ ಪದಾರ್ಥಗಳನ್ನು ಹೆಚ್ಚು ತಿಂದಲ್ಲಿ ಹೆಣ್ಣು ಮಗು ಎಂಬ ನಂಬಿಕೆ ಇನ್ನೂ ಇದೆ.

ನಂಬಿಕೆ 6: ಹೊಟ್ಟೆಯ ಆಕಾರ

ನಂಬಿಕೆ 6: ಹೊಟ್ಟೆಯ ಆಕಾರ

ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ಹೊಟ್ಟೆಯ ಆಕಾರವು ಮಗು ಗಂಡೋ ಹೆಣ್ಣೋ ಎಂಬುದನ್ನು ನಿರ್ಧರಿಸುತ್ತದೆ ಎಂದಾಗಿದೆ. ಗರ್ಭಿಣಿ ಸ್ತ್ರೀಯ ಹೊಟ್ಟೆ ದೊಡ್ಡದಾಗಿದ್ದರೆ ಹೆಣ್ಣು ಮಗುವೆಂದೂ ಹೊಟ್ಟೆ ಸಣ್ಣದಾಗಿದ್ದರೆ ಗಂಡು ಮಗುವೆಂಬ ನಂಬಿಕೆ ಇದೆ.

ನಂಬಿಕೆ 7: ಬಣ್ಣದ ಆಹಾರಗಳು

ನಂಬಿಕೆ 7: ಬಣ್ಣದ ಆಹಾರಗಳು

ಬಿಳಿ ಬಣ್ಣದ ಸುಂದರ ಮಗು ನಿಮ್ಮದಾಗಬೇಕಿದ್ದರೆ ಗಾಢ ವರ್ಣದ ಆಹಾರಗಳನ್ನು ನಿರ್ಲಕ್ಷಿಸಬೇಕು. ಈ ನಂಬಿಕೆಯನ್ನು ಭಾರತದಲ್ಲಿರುವ ಗ್ರಾಮೀಣ ಮಹಿಳೆಯರು ಆಚರಿಸುತ್ತಾರೆ.

ನಂಬಿಕೆ 8: ಎಳನೀರು

ನಂಬಿಕೆ 8: ಎಳನೀರು

ಗರ್ಭಿಣಿ ಸ್ತ್ರೀಯರು ಮೂರನೇ ತಿಂಗಳಲ್ಲಿ ಹೆಚ್ಚು ಎಳನೀರು ಸೇವಿಸಬೇಕೆಂಬ ಮಾತಿದೆ. ಭಾರತೀಯ ನಂಬಿಕೆಯು ಹೆಚ್ಚು ಎಳನೀರು ಕುಡಿದಂತೆ ನವಜಾತ ಶಿಶುವಿನ ತಲೆಯು ಹೆಚ್ಚು ಸುತ್ತುಗಳಿಂದ ಆವೃತವಾಗಿರುತ್ತದೆ ಎಂದಾಗಿದೆ.

ನಂಬಿಕೆ 9: ಏಸಿಡಿಟಿ ಸಮಸ್ಯೆಗಳು

ನಂಬಿಕೆ 9: ಏಸಿಡಿಟಿ ಸಮಸ್ಯೆಗಳು

ನೀವು ಸತತವಾಗಿ ಏಸಿಡಿಟಿ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಹೃದಯ/ಎದೆ ಉರಿ ನಿಮಗಾಗುತ್ತಿದ್ದರೆ, ಭಾರತೀಯ ನಂಬಿಕೆಗೆ ಅನುಗುಣವಾಗಿ ನಿಮ್ಮ ಮಗುವು ಹೆಚ್ಚು ಕೂದಲನ್ನು ಹೊಂದಿದೆ ಎಂದಾಗಿದೆ.

ನಂಬಿಕೆ 10: ಮಲಗುವ ಭಂಗಿಗಳು

ನಂಬಿಕೆ 10: ಮಲಗುವ ಭಂಗಿಗಳು

ಭಾರತೀಯ ನಂಬಿಕೆಯ ಪ್ರಕಾರ ಗರ್ಭಿಣಿ ಸ್ತ್ರೀಯರು ಅಂಗಾತ ಮಲಗಬಾರದೆಂಬ ನಿಯಮವಿದೆ. ಅಂಗಾತವಾಗಿ ಮಲಗುವುದು ಭ್ರೂಣಕ್ಕೆ ಆಮ್ಲಜನಕ ಪೂರೈಕೆಯನ್ನು ತುಂಡರಿಸುತ್ತದೆ ಎಂದಾಗಿದೆ.

English summary

Common Pregnancy Myths In India

In India, there are a number of women who follow a list of myths when they are pregnant. It is said that half of these myths are commonly followed by women who are carrying their first child. Out of concern for their baby, women still follow these myths regardless of how untrue they might be.
Story first published: Wednesday, February 19, 2014, 13:42 [IST]
X
Desktop Bottom Promotion