For Quick Alerts
ALLOW NOTIFICATIONS  
For Daily Alerts

ಮಗುವಿನ ಆರೈಕೆಯ ಸ್ಥಳದಲ್ಲಿರಬೇಕಾದ ಎಂಟು ಅತ್ಯಾವಶ್ಯಕ ವಸ್ತುಗಳು

By Poornima heggade
|

ಮಗು ಜನನವಾದ ಕನಿಷ್ಟ ಆರು ತಿಂಗಳುಗಳವರೆಗೆ ತಾಯಿಯ ಉದರದಲ್ಲಿರುವಂತೆಯೇ ಸುರಕ್ಷತೆಯನ್ನು ಮಾಡಬೇಕಾಗುತ್ತದೆ. ಒಂದು ಗೂಡಿನಲ್ಲಿ ಹಕ್ಕಿ ತನ್ನ ಮೊಟ್ಟೆಯನ್ನು ಹೇಗೆ ಸಂರಕ್ಷಿಸಿಡುವುದೋ ಹಾಗೆ ಮಗುವಿಗೂ ವಿಶೇಷ ಸ್ಥಳ, ಸುರಕ್ಷತೆಯ ಅಗತ್ಯವಿದೆ. ಹಕ್ಕಿ ತನ್ನ ಮೊಟ್ಟೆಗೆ ಕಾವುಕೊಡುವಂತೆ ನೀವು ನಿಮ್ಮ ಮಗುವಿಗೆ ಬಿಸಿಯಾದ ಅಪ್ಪುಗೆಯನ್ನು, ರಕ್ಷಣೆಯನ್ನು ನೀಡಬೇಕಾಗುತ್ತದೆ. ಆದ್ದರಿಂದ "ಗೂಡುಕಟ್ಟುವ" (ನೆಸ್ಟಿಂಗ್) ಪ್ರವೃತ್ತಿ ಮನುಷ್ಯರು ಹಾಗೂ ಹಕ್ಕಿಗಳ ನಡುವೆ ಸಾಮಾನ್ಯ.

ಮಗು ಪದೇ ಪದೇ ಅಳಲು ಕಾರಣಗಳೇನು?

ಎಲ್ಲಾ ತಾಯಂದಿರೂ ತಮ್ಮ ಎಳೆ ಮಕ್ಕಳಿಗಾಗಿ ನೆಸ್ಟ್ ನ್ನು ನಿರ್ಮಾಣಮಾಡುತ್ತಾರೆ. ಹೋಲಿಕೆಗಳು ಮತ್ತು ತತ್ವಗಳು ಏನೇ ಇರಲಿ, ನಿಮ್ಮ ಎಳೆ ಕಂದಮ್ಮನಿಗೆ ಸಂರಕ್ಷಿತ ನೆಸ್ಟ್ ನಿರ್ಮಾಣ ಅತ್ಯಗತ್ಯ. ಇಂತಹ ಸುರಕ್ಷಾ ಗೂಡಿನಲ್ಲಿ ಟಿಶ್ಯೂ, ಸ್ತನ್ಯಪಾನಕ್ಕೆ ಅನೂಕೂಲಕರವಾದ ದಿಂಬುಗಳನ್ನು ಹೊಂದಿರಬೇಕು.

ಎಲ್ಲಾ ತಾಯಂದಿರೂ ಅವರ ಮನೆಯ ಒಳಗೆ ಅವರ ಎಳೆ ಮಗುವಿಗಾಗಿ ಸುರಕ್ಷಿತ ಗೂಡನ್ನು ನಿರ್ಮಾಣ ಮಾಡುತ್ತಾರೆ. ಇದು ಮಗುವಿಗೆ ಅತ್ಯಂತ ಸಹಾಯಕವಾಗುತ್ತದೆ. ಒಂದೇ ಸ್ಥಳದಲ್ಲಿ ಸುರಕ್ಷತೆಯ ನಿಕಟತೆ ಅವರಿಗೆ ಅಗತ್ಯವಿರುತ್ತದೆ. ನೀವು ನಿಮ್ಮ ಆರು ತಿಂಗಳ ಒಳಗಿನ ಮಗುವಿಗೆ ಸ್ತನ್ಯಪಾನ ಮಾಡಿಸುವುದಾದರೆ ಮಗುವಿಗಾಗಿ ಸುರಕ್ಷಾ ಗೂಡು ಸರಿಯಾಗಿ ಸಂಘಟಿತವಾಗಿರಬೇಕು. ಏಕೆಂದರೆ ದಿನದ ಪ್ರತಿ ಎರಡು ಗಂಟೆಗಳಿಗೊಮ್ಮೆ ನೀವು ನಿಮ್ಮ ಮಗುವಿನ ಪಾಲನೆ ಪೋಷಣೆಯಲ್ಲಿ ತೊಡಗಬೇಕಾಗುತ್ತದೆ. ಈ ದೊಡ್ದ ಜವಾಬ್ದಾರಿಯನ್ನು ನೀವು ಸರಿಯಾಗಿ ನಿರ್ವಹಿಸಲು ಇಷ್ಟಪಡುವಿರಾದರೆ ಮೊದಲು ಸರಿಯಾಗಿ ಸಂಘಟಿತ ಸುರಕ್ಷಾ ಗೂಡನ್ನು ನಿರ್ಮಾಣಮಾಡಬೇಕು.

ಇದು ನಿಮ್ಮ ಮಗು ಆರಾಮದಾಯಕವಾಗಿ ಸ್ತನ್ಯಪಾನ ಮಾಡಲು ಸಹಾಯಮಾಡುತ್ತದೆ. ನೀವು ಮಗುವಿಗೆ ಸ್ತನ್ಯಪಾನ ಮಾಡುವಾಗ ನಿಮಗೂ ಸಹ ಆರಾಮದಾಯಕವೆನಿಸಬೇಕು. ನಿಮ್ಮ ಸುರಕ್ಷಾ ಗೂಡನ್ನು ಪರಿಣಾಮಕಾರಿಯಾಗಿ ಮಾಡಲು ಈ ಅಂಶಗಳು ನೀವು ಅಗತ್ಯವಾಗಿ ಮಾಡಬೇಕು.

ಹೊಸ ತಾಯಂದಿರು ಮಾಡುವ 6 ದೊಡ್ಡ ತಪ್ಪುಗಳು

ನರ್ಸಿಂಗ್ ಚೇರ್ ಅಥವಾ ಕೌಚ್

ನರ್ಸಿಂಗ್ ಚೇರ್ ಅಥವಾ ಕೌಚ್

ನೀವು ಬೆನ್ನು ನೋವನ್ನು ತಡೆಯಬೇಕಾದರೆ ಸರಿಯಾದ ಸ್ಥಳದಲ್ಲಿ ಕುಳಿತುಕೊಳ್ಳಬೇಕು. ಇದಕ್ಕಾಗಿ ನೀವು ಒಂದು ಒರಗು ಕುರ್ಚಿಯನ್ನು ಖರೀದಿಮಾಡಬಹುದು. ಅಥವಾ ಮನೆಯಲ್ಲಿಯೇ ಇರುವ ಸೂಕ್ತ ಮಂಚ ಅಥವಾ ಕುರ್ಚಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಸ್ತನ್ಯಪಾನಕ್ಕೆ ಅನುಕೂಲಕರವಾದ ದಿಂಬು

ಸ್ತನ್ಯಪಾನಕ್ಕೆ ಅನುಕೂಲಕರವಾದ ದಿಂಬು

ನಿಮ್ಮ ಮಗುವಿಗಾಗಿ ನಿರ್ಮಾಣ ಮಾಡಿದ ಸುರಕ್ಷಾ ಗೂಡಿನಲ್ಲಿ ಸ್ತನ್ಯಪಾನಕ್ಕೆ ಅನುಕೂಲಕರವಾದಂತಹ ದಿಂಬನ್ನು ಇರಿಸಿಕೊಳ್ಳಿ. ಸಿಸರೇನಿಯನ್ ಮೂಲಕ ಹೆರಿಗೆ ಆದ ತಾಯಂದಿರಿಗೆ ಇದು ಬಹಳ ಅಗತ್ಯ.

ಪಾದಕ್ಕೆ ಆಧಾರ:

ಪಾದಕ್ಕೆ ಆಧಾರ:

ನಿಮ್ಮ ಮಗು ಬಹಳ ಸಮಯದವರೆಗೆ ಸ್ತನ್ಯಪಾನ ಮಾಡುತ್ತಿದ್ದರೆ, ನಿಮ್ಮ ಪಾದವನ್ನು ಮೇಲ್ಭಾದದಲ್ಲಿಡಿ. ಅಥವಾ ಪಾದಕ್ಕೆ ಆಧಾರವಾಗುವಂತಹ ವಸ್ತುವನ್ನು ಬಳಸಿ. ಇದು ನಿಮ್ಮ ಬೆನ್ನುನೋವನ್ನು ತಡೆಯಲು ಸಹಾಯಕವಾಗುತ್ತದೆ.

ನಿಮ್ಮ ಫೋನ್ ದೂರವಿರಲಿ

ನಿಮ್ಮ ಫೋನ್ ದೂರವಿರಲಿ

ನಿಮ್ಮ ಫೋನ್ ನಿಮ್ಮ ಬಳಿಯಲ್ಲೇ ಇದ್ದರೂ ಅದನ್ನು ಸೈಲೆಂಟ್ ಮೋಡ್ ನಲ್ಲಿಡಿ. ನಿಮ್ಮ ಮಗು ನಿದ್ರೆಗೆ ಜಾರುತ್ತಿದ್ದರೆ, ನಿಮ್ಮ ಫೋನ್ ರಿಂಗ್ ಮಗುವಿನ ನಿದ್ರೆಗೆ ಭಂಗತರದಿರಲಿ.

ಪುಸ್ತಕಗಳು ಅಥವಾ ಪತ್ರಿಕೆಗಳು

ಪುಸ್ತಕಗಳು ಅಥವಾ ಪತ್ರಿಕೆಗಳು

ನಿಮ್ಮ ಮಗುವಿಗೆ ಬಹಳ ಸಮಯದವರೆಗೆ ಸ್ತನ್ಯಪಾನವನ್ನು ಮಾಡಿಸುವುದು ಬಳಹ ಬೇಸರದ ಕೆಲಸ. ಇಂತಹ ಸಂದರ್ಭದಲ್ಲಿ ಬೇಸರವನ್ನು ಕಳೆಯಲು ಪುಸ್ತಕಗಳು ಅಥವಾ ಕೆಲವು ಪತ್ರಿಕೆಗಳನ್ನು ತಂದು ಓದಬಹುದು.

ಲ್ಯಾಪ್ ಟಾಪ್ ಅಥವಾ ಟ್ಯಾಬ್ಲೆಟ್

ಲ್ಯಾಪ್ ಟಾಪ್ ಅಥವಾ ಟ್ಯಾಬ್ಲೆಟ್

ನಿಮ್ಮ ಎಳೆ ಕಂದಮ್ಮನಿಗೆ ಹಾಲುಣಿಸುವಾಗ ನೀವು ಲ್ಯಾಪ್ ಟಾಪ್ ಮೇಲ್ ಕಳಿಸುವ ಅಥವಾ ಇತರ ತುರ್ತು ಕೆಲಸವನ್ನು ಮಾಡಬಹುದು. ಆದರೆ ನೀವು ಒಂದೇ ಕೈಯಲ್ಲಿ ಈ ಕೆಲಸಗಳನ್ನು ಮಾಡಲು ಕಲಿಯಬೇಕಷ್ಟೇ!

ವೆಟ್ ವೈಪ್ಸ್ ಮತ್ತು ಡೈಫರ್ಸ್ (ಒರೆಸುವ ಬಟ್ಟೆಗಳು)

ವೆಟ್ ವೈಪ್ಸ್ ಮತ್ತು ಡೈಫರ್ಸ್ (ಒರೆಸುವ ಬಟ್ಟೆಗಳು)

ನಿಮ್ಮ ಮಗು ಹಾಲು ಕುಡಿದು ಅದನ್ನು ತಕ್ಷಣವೇ ಉಗುಳಬಹುದು. ಆದ್ದರಿಂದ ಸದಾ ಕೈಯಲ್ಲಿ ಒದ್ದೆಯಾದ ಮೃದು ಬಟ್ಟೆಯನ್ನು ಇಟ್ಟುಕೊಳ್ಳುವುದು ಕ್ಷೇಮ. ಜೊತೆಗೆ ಮಗುವಿನ ಮಲ ಮೂತ್ರ ಸ್ವಚ್ಛ ಗೊಳಿಸಲು ಒರೆಸುವ ಬಟ್ಟೆಗಳನ್ನೂ ಇಟ್ಟುಕೊಳ್ಳುವುದು ಒಳಿತು.

ಮಗುವಿಗೆ ಬೆಚ್ಚಗಿನ ಸುತ್ತು ಅಗತ್ಯ

ಮಗುವಿಗೆ ಬೆಚ್ಚಗಿನ ಸುತ್ತು ಅಗತ್ಯ

ನವಜಾತ ಶಿಶುವಿನ ಶೂಶ್ರೂಷೆಯ ಸಂದರ್ಭದಲ್ಲಿ ಮಗುವನ್ನು ಬೆಚ್ಚಗಿಡುವುದು ಅತ್ಯಂತ ಅಗತ್ಯ. ಆದ್ದರಿಂದ ಮಗು ಆರಾಮದಾಯಕವಾಗಿ ಮಲಗಲು ಬೆಚ್ಚಗಿನ ಬಟ್ಟೆ ಸುತ್ತುವುದು ಒಳ್ಳೆಯದು.

English summary

8 Things To Have In Your Nursing Nest

Every mother builds her own nursing nest within the house. This is very helpful for babies as well because they like the familiarity of nursing at the same place every day. You will have keep everything handy while you feed your baby. These are the must haves to make your nursing nest effective.
X
Desktop Bottom Promotion