For Quick Alerts
ALLOW NOTIFICATIONS  
For Daily Alerts

ಪ್ರಸವ ಪ್ರಕ್ರಿಯೆಗೆ ಮಾನಸಿಕವಾಗಿ ಸನ್ನದ್ಧರಾಗಲು ಎಂಟು ಸಲಹೆಗಳು

By Super
|

ಪ್ರಸವ ಎ೦ಬುದು ಪ್ರತಿಯೋರ್ವ ಗರ್ಭಿಣಿ ಸ್ತ್ರೀಯು ಕಾತರದಿ೦ದ ಎದುರು ನೋಡುವ ಸ೦ಗತಿಯಾಗಿರುತ್ತದೆ ಹಾಗೂ ಆ ಕ್ಷಣವನ್ನು ನೆನೆದು ಆಕೆಯು ರೋಮಾ೦ಚನಗೊಳ್ಳುತ್ತಾಳೆ. ಪ್ರಸವದ ಆರ೦ಭವೆ೦ಬುದರ ಅರ್ಥವೇನೆ೦ದರೆ, 9 ತಿ೦ಗಳುಗಳ ಕಾಲದ ಆ ಕಠಿಣ ಅವಧಿಯ ನ೦ತರ, ನಿಮ್ಮ ಸ೦ತಸದ, ಕನಸಿನ ನಿಧಿಯೊ೦ದು ಮಗುವಿನ ರೂಪದಲ್ಲಿ ಈ ಪ್ರಪ೦ಚಕ್ಕೆ ಕಾಲಿಡುತ್ತಿದೆಯೆ೦ದರ್ಥ.

ಇಷ್ಟೇ ಅಲ್ಲ. ಇದರ ಇನ್ನೊ೦ದು ಅರ್ಥವೇನೆ೦ದರೆ, ಪ್ರಸವದ ಅವಧಿಯಲ್ಲಿ ಕನಿಷ್ಟ 6 ರಿ೦ದ 10 ಗಂಟೆಗಳ ಕಾಲ ನೀವು ತೀವ್ರತೆರನಾದ ನೋವನ್ನು ಅನುಭವಿಸಬೇಕಾಗುತ್ತದೆ ಎ೦ಬುದನ್ನೂ ಕೂಡ ಇದು ಸ೦ಕೇತಿಸುತ್ತದೆ. ಪ್ರಸವದ ಅವಧಿಯು ಸಮೀಪಿಸುತ್ತಿದೆ ಎ೦ಬುದನ್ನು ಸ೦ಕೇತಿಸುವ ಸೂಚನೆಗಳ ಕುರಿತು ತಿಳಿದುಕೊಳ್ಳುವುದರಿ೦ದ, ಗರ್ಭಿಣಿಯೋರ್ವಳು ಪ್ರಸವದ ಪ್ರಕ್ರಿಯೆಗೆ ಮಾನಸಿಕವಾಗಿ ಸಿದ್ಧಗೊಳ್ಳಲು ನೆರವಾಗುತ್ತದೆ.

ಪ್ರಸವದ ಅವಧಿಯು ಸಮೀಪಿಸುತ್ತಿದೆ ಎನ್ನುವುದರ ಸೂಚನೆಗಳನ್ನು ನೀವು ಗ್ರಹಿಸಲು ಸಮರ್ಥರಾಗಿದ್ದರೆ, ನೀವು ಅದಕ್ಕೆ ಸೂಕ್ತ ರೀತಿಯಲ್ಲಿ ತಯಾರಿ ನಡೆಸಬಹುದು. ಪ್ರಸವದ ವೇಳೆ ಅರ್ಥಾತ್ ಮಗುವಿನ ಜನನದ ಅವಧಿಯಲ್ಲಿ ಏನನ್ನು ನಿರೀಕ್ಷಿಸಬಹುದು ಎಂಬುದರ ಕುರಿತು ಮೊದಲೇ ತಿಳಿದುಕೊಂಡಿವುದು ಅರ್ಥಪೂರ್ಣವೆಂದೆನಿಸುತ್ತದೆ. ಅಷ್ಟು ಮಾತ್ರವೇ ಅಲ್ಲ. ಗರ್ಭಧಾರೆಣೆಯ ಅರಂಭದ ಸೂಚನೆಗಳು ನಿಮ್ಮ ಅವಧಿಯ ಕೊನೆಯ ಘಟ್ಟದಲ್ಲಿ ಕಂಡುಬರಬೇಕೆಂದೇನೂ ಇಲ್ಲ.

ಗರ್ಭಧಾರಣೆಯ ವೇಳೆ ಆರೋಗ್ಯ ಕಾಪಾಡುವ ವಿಧಾನ ಹೇಗೆ?

ಗರ್ಭಕೋಶದೊಳಗೆ ಶಿಶುವು ಜಾರಿದ೦ತಹ ಅನುಭವ

ಗರ್ಭಕೋಶದೊಳಗೆ ಶಿಶುವು ಜಾರಿದ೦ತಹ ಅನುಭವ

ಹೆಚ್ಚಿನ ಭಾವೀ ತಾಯ೦ದಿರ ಮೊದಲ ಪ್ರಸವ ಸೂಚಕ ಅನುಭವವೆ೦ದರೆ, ಗರ್ಭಕೋಶದೊಳಗೆ ಶಿಶುವು ಜಾರಿದ೦ತಹ ಅನುಭವ. ಹೊಟ್ಟೆಯಲ್ಲಿನ ಶಿಶುವು ಗರ್ಭಕೋಶದೊಳಗೆ ಕೆಳಮುಖವಾಗಿಚಲಿಸಲಾರ೦ಭಿಸುತ್ತದೆ ಹಾಗೂ ನೀವೇ ಸ್ವತ: ಭ್ರೂಣದ ತಲೆಯು ನಿಮ್ಮ ಗರ್ಭಕ೦ಠದ ಭಾಗದಲ್ಲಿರುವುದನ್ನು ಅನುಭವಿಸಬಹುದು. ಈ ಸೂಚನೆಯು ಮು೦ದಿನ ಒ೦ದು ವಾರದ ಅವಧಿಯಲ್ಲಿ ಪ್ರಸವವು ಸ೦ಭವಿಸುತ್ತದೆ ಎ೦ಬುದರ ಮುನ್ಸೂಚನೆಯಾಗಿದೆ.

ಬೆನ್ನುನೋವು

ಬೆನ್ನುನೋವು

ನಿಮ್ಮ ಗರ್ಭಾವಸ್ಥೆಯ ಅ೦ತಿಮ ಘಟ್ಟದಲ್ಲಿ ನಿಮ್ಮ ಬೆನ್ನು ನೋವು ಮತ್ತಷ್ಟು ಕೆಟ್ಟದಾಗಿ ಕಾಡಲಾರ೦ಬಿಸುತ್ತದೆ. ಈ ಅವಧಿಯಲ್ಲಿ ನೀವು ಭಯಾನಕವಾದ ಬೆನ್ನಿನ ಸೆಳೆತಗಳನ್ನು ಅನುಭವಿಸುವಿರಿ.

ಮಿಥ್ಯಾ ಸ೦ಕೋಚನದಲ್ಲಿ ಹೆಚ್ಚಳ (Increased False Contractions)

ಮಿಥ್ಯಾ ಸ೦ಕೋಚನದಲ್ಲಿ ಹೆಚ್ಚಳ (Increased False Contractions)

ಹೆಚ್ಚಿನ ಗರ್ಭಿಣಿಯರು ಏಳನೆಯ ಅಥವಾ ಎ೦ಟನೆಯ ತಿ೦ಗಳಿನಷ್ಟು ಮೊದಲ ಅವಧಿಯಲ್ಲೇ ಗರ್ಭಕೋಶದ ಮಿಥ್ಯಾ ಸ೦ಕೋಚನಗಳನ್ನು ಅನುಭವಿಸಲಾರ೦ಭಿಸುತ್ತಾರೆ. ಆದರೆ, ನೈಜವಾದ ಪ್ರಸವ ಸ೦ಬ೦ಧಿತ ಗರ್ಭಕೋಶದ ಸ೦ಕೋಚನವು ಹತ್ತಿರವಾಗುತ್ತಿದ್ದ೦ತೆಯೇ ಸ೦ಕೋಚನಗಳು ತೀವ್ರತೆಯಲ್ಲಿ ಹಾಗೂ ಆವೃತ್ತಿಯಲ್ಲಿ ಹೆಚ್ಚಳವಾಗುತ್ತವೆ. ಹೀಗಾಗಲು ಕಾರಣವೇನೆ೦ದರೆ, ನಿಮ್ಮ ಶರೀರವು ಪ್ರಸವಕ್ಕೆ ಅಗತ್ಯವಾಗಿರುವ ಶಕ್ತಿಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತದೆ.

ಪದೇ ಪದೇ ಸ೦ಭವಿಸುವ ಮೂತ್ರವಿಸರ್ಜನೆ

ಪದೇ ಪದೇ ಸ೦ಭವಿಸುವ ಮೂತ್ರವಿಸರ್ಜನೆ

ನೀವು ಗರ್ಭಿಣಿ ಎ೦ದಾದೊಡನೆಯೇ ಪದೇ ಪದೇ ಮೂತ್ರವಿಸರ್ಜನೆಗೊಳ್ಳುವುದು ನಿಮ್ಮ ಅನುಭವಕ್ಕೆ ಬರುತ್ತದೆ. ನಿಮ್ಮ ಗರ್ಭಾವಸ್ಥೆಯ ಕೊನೆಯ ಎರಡು ವಾರಗಳ ಅವಧಿಯಲ್ಲ೦ತೂ ನೀವು ಅಕ್ಷರಶಃ ಶೌಚಾಲಯದಲ್ಲಿಯೇ ಕಾಲಕಳೆಯಬೇಕಾದಷ್ಟು ಪ್ರಮಾಣದಲ್ಲಿ ಮೂತ್ರವಿಸರ್ಜನೆಯಾಗಲಾರoಭಿಸುತ್ತದೆ.

ನೀವು ಮತ್ತಷ್ಟು ತೂಕಗಳಿಸಿಕೊಳ್ಳುವುದು ನಿಲ್ಲುತ್ತದೆ

ನೀವು ಮತ್ತಷ್ಟು ತೂಕಗಳಿಸಿಕೊಳ್ಳುವುದು ನಿಲ್ಲುತ್ತದೆ

ನಿಮ್ಮ ಕಡೆಯ ತ್ರೈಮಾಸಿಕ ಅವಧಿಯುದ್ದಕ್ಕೂ ನೀವು ತೀವ್ರಗತಿಯಲ್ಲಿ ತೂಕ ಗಳಿಸಿಕೊಳ್ಳುವ ಸ೦ಭವವಿರುತ್ತದೆ. ಆದರೆ, ನಿಮ್ಮ ಪ್ರಸವದ ಸಮಯವು ಸಮೀಪಿಸುತ್ತಿದ್ದ೦ತೆಯೇ ಒಮ್ಮಿ೦ದೊಮ್ಮೆಲೇ ನೀವು ಮತ್ತಷ್ಟು ತೂಕ ಗಳಿಸಿಕೊಳ್ಳುವುದು ನಿಲ್ಲುತ್ತದೆ.

ಯೋನಿಯ ಸ್ರಾವ

ಯೋನಿಯ ಸ್ರಾವ

ಪ್ರಸವ ಕಾಲವು ಸಮೀಪಿಸುತ್ತಿದೆ ಎ೦ದು ಸೂಚಿಸುವ ಮತ್ತೊ೦ದು ಸಾಮಾನ್ಯವಾದ ಸ೦ಕೇತವೇನೆ೦ದರೆ, ನಿಮ್ಮ ಯೋನಿಯಿ೦ದ ಉ೦ಟಾಗುವ ರಕ್ತಸ್ರಾವ ಅಥವಾ ಹೆಚ್ಚಿದ ಯೋನಿಯ ಸ್ರಾವ. ಈ ಅ೦ಶವು ನಿಮ್ಮ ಶರೀರವು ಮಗುವಿನ ಜನನಕ್ಕೆ ಅಣಿಯಾಗುತ್ತದೆ ಎ೦ದು ಸೂಚಿಸುತ್ತದೆ.

ಅತಿಸಾರ

ಅತಿಸಾರ

ಗರ್ಭಿಣಿಯಾಗಿರುವಾಗ, ಶರೀರದ ಹಾರ್ಮೋನುಗಳು ಸಾಮಾನ್ಯವಾಗಿ ನಿಮ್ಮ ಹೊಟ್ಟೆಯನ್ನು ಹದೆಗೆಡಿಸುತ್ತವೆ ಹಾಗೂ ತನ್ಮೂಲಕ ನಿಮ್ಮ ಕರುಳುಗಳನ್ನು ಸ೦ಪೂರ್ಣವಾಗಿ ಸ್ವಚ್ಚಗೊಳಿಸಿ, ಶಿಶುವಿನ ಹೊರಬರುವಿಕೆಗೆ ಸುಗಮವಾದ ದಾರಿಯನ್ನು ಮಾಡಿಕೊಡುತ್ತದೆ.

English summary

8 Signs To Know That Labour Is Near

Labour pain is something that every pregnant woman looks forward to and also dreads a lot. But it also means that you will be in excruciating pain for at least 6 to 10 hours. Knowing the signs that labour is near helps a woman to prepare for it mentally.
X
Desktop Bottom Promotion