For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರ ಆರೋಗ್ಯವನ್ನು ಸುಸ್ಥಿತಿಯಲ್ಲಿಡುವ 8 ತರಕಾರಿಗಳು

|

ಗರ್ಭಿಣಿಯಾಗಿರುವಾಗ ನಾವು ಗಮನಿಸಬೇಕಾದ ಅತ್ಯಂತ ಮುಖ್ಯ ಅಂಶವೆಂದರೆ, ಮಗುವಿನ ಬೆಳವಣಿಗೆ ಯಾವುದೇ ಅಡೆತಡೆಗಳಿಲ್ಲದೆ ಸಾಗುತ್ತಿದೆಯೇ ಎಂಬುದನ್ನು ಗಮನಿಸುವುದು. ನಿಮ್ಮ ಮಗು ಆರೋಗ್ಯಕರವಾಗಿರಬೇಕು ಎಂದಾದಲ್ಲಿ ಕೆಲವೊಂದು ಆಹಾರ ಪದಾರ್ಥಗಳನ್ನು ತಪ್ಪದೆ ಸೇವಿಸಬೇಕು. ಈ ಅಂಕಣದಲ್ಲಿ ನಿಮ್ಮ ಮಗುವಿನ ಆರೋಗ್ಯವನ್ನು ಕಾಪಾಡುವಂತಹ ಕೆಲವೊಂದು ತರಕಾರಿಗಳ ಬಗ್ಗೆ ನಾವು ನಿಮಗಾಗಿ ತಿಳಿಸುತ್ತಿದ್ದೇವೆ.

ಇದನ್ನು ಸೇವಿಸಿ ನಿಮ್ಮ ಮಗುವಿನ ಆರೋಗ್ಯವನ್ನು ಗರ್ಭದಿಂದಲೇ ಕಾಪಾಡಿ. ಇವುಗಳು ನಿಮ್ಮ ಮಗುವು ಗರ್ಭದಲ್ಲಿರುವಾಗಲೆ ಬೇಕಾದ ಪೋಷಕಾಂಶಗಳನ್ನು ಒದಗಿಸಿ, ಮಗುವಿನ ಬೆಳವಣಿಗೆಗೆ ಸಹಕರಿಸುತ್ತವೆ.
ಇವು ಕೇವಲ ತರಕಾರಿಗಳಷ್ಟೇ ಅಲ್ಲದೆ ಹೊಟ್ಟೆಯಲ್ಲಿರುವ ನಿಮ್ಮ ಮಗುವಿನ ಬೆಳವಣಿಗೆಗೆ ಸಹಕರಿಸುವಂತಹ ಪೋಷಕಾಂಶಗಳ ಮೂಲವು ಸಹ ಆಗಿವೆ.

ಇಲ್ಲಿ ನಾವು ನಿಮಗಾಗಿ ನಿಮ್ಮ ಮಗುವಿನ ಮತ್ತು ಗರ್ಭಿಣಿಯಾಗಿರುವ ನಿಮ್ಮ ಆರೋಗ್ಯವನ್ನು ಸಮತೋಲನಿಂದ ಕಾಪಾಡುವಂತಹ ಕೆಲವೊಂದು ತರಕಾರಿಗಳ ಪರಿಚಯವನ್ನು ನಿಮಗಾಗಿ ಮಾಡಿಕೊಡುತ್ತಿದ್ದೇವೆ, ಓದಿ ತಿಳಿದುಕೊಳ್ಳಿ. ಮತ್ತು ತಪ್ಪದೆ ಸೇವಿಸಲು ಆರಂಭಿಸಿ.......

ಗರ್ಭಿಣಿಯರ ಸುಸ್ತು ಹೋಗಲಾಡಿಸುವ ಆಹಾರಗಳಿವು

ಬ್ರೊಕ್ಕೊಲಿ

ಬ್ರೊಕ್ಕೊಲಿ

ಬ್ರೊಕ್ಕೊಲಿ ಎಂಬುದು ಪೋಷಕಾಂಶಗಳ ಕಣಜವನ್ನೇ ತನ್ನಲ್ಲಿ ಅಡಗಿಸಿಕೊಂಡಿರುವ ತರಕಾರಿಯಾಗಿದೆ. ಇದು ಗರ್ಭಿಣಿಯರು ತಪ್ಪದೆ ಸೇವಿಸಬೇಕಾದ ತರ್ಕಾರಿಯಾಗಿದೆ. ಇದರಲ್ಲಿ ಕ್ಯಾಲ್ಸಿಯಂ ಮತ್ತು ಫೊಲೆಟ್ ಇದ್ದು, ಇದು ಮಗುವಿನ ಮೆದುಳಿನ ಭಾಗದ ಬೆಳವಣಿಗೆಗಳಿಗೆ ಪ್ರಧಾನವಾಗಿ ನೆರವಾಗುತ್ತದೆ.

ಸಿಹಿ ಆಲುಗಡ್ಡೆಗಳು

ಸಿಹಿ ಆಲುಗಡ್ಡೆಗಳು

ಸಿಹಿ ಆಲುಗಡ್ಡೆಗಳು ಹಲವಾರು ಆರೋಗ್ಯಕಾರಿ ಪ್ರಯೋಜನಗಳನ್ನು ತಮ್ಮಲ್ಲಿ ಅಡಗಿಸಿಕೊಂಡಿವೆ. ಇದರ ಪ್ರಮುಖ ಪ್ರಯೋಜನಗಳೆಂದರೆ, ಇದು ಮಗುವಿನ ಅಂಗಾಂಗಗಳ ಬೆಳವಣಿಗೆಗೆ ಮುಖ್ಯವಾಗಿ ಸಹಾಯ ಮಾಡುತ್ತದೆ. ಇದರಲ್ಲಿ ನಾರಿನಂಶ ಮತ್ತು ಪೊಟಾಶಿಯಂ ಸಮೃದ್ಧವಾಗಿರುತ್ತದೆ.

ಅವೊಕ್ಯಾಡೊಗಳು

ಅವೊಕ್ಯಾಡೊಗಳು

ಅವೊಕ್ಯಾಡೊಗಳನ್ನು ಗರ್ಭಿಣಿಯರು ತಪ್ಪದೆ ಸೇವಿಸಬೇಕು. ಇವುಗಳನ್ನು ಸೇವಿಸಿದ ಕೂಡಲೆ ಅದರ ಪೋಷಕಾಂಶಗಳು ನಮ್ಮ ದೇಹಕ್ಕೆ ಚೈತನ್ಯವನ್ನು ಒದಗಿಸುತ್ತವೆ. ಇದರಲ್ಲಿ ವಿಟಮಿನ್ ಬಿ, ಸಿ, ಎ ಮತ್ತು ಬಿ6ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇದರ ಜೊತೆಗೆ ಇದರಲ್ಲಿ ಫೊಲೆಟ್ ಮತ್ತು ಪೊಟಾಶಿಯಂ ಸಹ ಅಧಿಕ ಪ್ರಮಾಣದಲ್ಲಿರುತ್ತವೆ.

ಬೀಟ್ ರೂಟ್‍ಗಳು

ಬೀಟ್ ರೂಟ್‍ಗಳು

ಬೀಟ್‍ರೂಟ್‍ಗಳು ಸಹ ಗರ್ಭಿಣಿಯಾಗಿರುವವರಿಗೆ ಹೇಳಿ ಮಾಡಿಸಿದ ತರಕಾರಿಯಾಗಿದೆ. ಇದರ ಜೊತೆಗೆ ಇದರಲ್ಲಿ ಕಬ್ಬಿಣ ಮತ್ತು ಫೊಲಿಕ್ ಆಮ್ಲಗಳ ಪ್ರಮಾಣವು ಸಹ ಅಧಿಕವಾಗಿರುತ್ತದೆ ಮತ್ತು ವಿಟಮಿನ್ ಎ ಹಾಗು ಸಿಗಳು ಸಹ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಹೀಗಾಗಿ ಇದು ಗರ್ಭಿಣಿಯಾಗಿರುವಾಗ ತಿನ್ನಲೇ ಬೇಕಾದ ತರಕಾರಿಗಳಲ್ಲಿ ಒಂದಾಗಿದೆ.

ಹಸಿರು ಸೊಪ್ಪುಗಳು

ಹಸಿರು ಸೊಪ್ಪುಗಳು

ಹಸಿರು ಸೊಪ್ಪುಗಳಲ್ಲಿ ಸಮೃದ್ಧವಾದ ಸತುವಿನ ಅಂಶವಿರುತ್ತದೆ. ಸತುವು ಮಗುವಿನ ಅಂಗಾಂಗಗಳ ಬೆಳವಣಿಗೆಯಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುವ ಅಂಶವಾಗಿರುತ್ತದೆ. ಪಾಲಕ್ ಸೊಪ್ಪುಗಳು, ಲೆಟ್ಯೂಸ್ ಮತ್ತು ಫೆನುಗ್ರೀಕ್‍ಗಳಲ್ಲಿ ಸಹ ಸತುವಿನ ಅಂಶ ಯಥೇಚ್ಛವಾಗಿರುತ್ತದೆ. ಇದರ ಜೊತೆಗೆ ಇದರಲ್ಲಿ ಮ್ಯಾಂಗನೀಸ್, ನಾರಿನಂಶ ಮತ್ತು ಇನ್ನಿತರ ವಿಟಮಿನ್‍ಗಳು ಸಹ ಇರುವುದರಿಂದ ಗರ್ಭಿಣಿಯರು ಇವುಗಳನ್ನು ತಪ್ಪದೆ ಸೇವಿಸಬೇಕಾಗುತ್ತದೆ.

ಟೊಮೇಟೊ

ಟೊಮೇಟೊ

ಲೈಕೊಪೀನ್ ಎಂಬ ಶಕ್ತಿ ಶಾಲಿ ಕ್ಯಾನ್ಸರ್ ನಿವಾರಿಸುವ ಅಂಶವು ಟೊಮೇಟೊಗಳಲ್ಲಿ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತವೆ. ಗರ್ಭಿಣಿಯಾಗಿರುವಾಗ ಇವುಗಳನ್ನು ಸೇವಿಸಿದರೆ ಅದು ಮಗುವಿನ ಜನನದ ನಂತರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಮುಂದಿನ ಕೆಲವು ತಿಂಗಳುಗಳವರೆಗೆ ಇವುಗಳು ಮಗುವಿನ ರೋಗ ನಿರೋಧಕ ಶಕ್ತಿಯನ್ನು ಕಾಪಾಡುತ್ತಲೆ ಇರುತ್ತವೆ.

ಹಸಿರು ಬಟಾಣಿಗಳು

ಹಸಿರು ಬಟಾಣಿಗಳು

ಗರ್ಭಿಣಿಯಾಗಿರುವಾಗ ಸೇವಿಸಲೇಬೇಕಾದ ತರಕಾರಿಗಳಲ್ಲಿ ಹಸಿರು ಬಟಾಣಿಗಳು ಸಹ ಒಂದು. ಇದರಲ್ಲಿ ವಿಟಮಿನ್-ಕೆಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇವುಗಳು ಮಗುವಿನ ಕೇಂದ್ರಿಯ ನರ ವ್ಯೂಹದ ಬೆಳವಣಿಗೆಗೆ ಅತ್ಯಂತ ಪೂರಕವಾಗಿರುತ್ತದೆ. ಜೊತೆಗೆ ಮೂಳೆ, ಆರೋಗ್ಯ ಮತ್ತು ಸ್ನಾಯುಗಳ ಬೆಳವಣಿಗೆಗು ಸಹ ಇದು ಪ್ರಯೋಜನಕಾರಿ.

ಎಲೆ ಕೋಸು

ಎಲೆ ಕೋಸು

ಎಲೆಕೋಸು ಸಹ ಗರ್ಭಿಣಿಯಾಗಿರುವಾಗ ಸೇವಿಸಲೆ ಬೇಕಾದ ತರಕಾರಿಗಳಲ್ಲಿ ಒಂದಾಗಿದೆ. ಇದರಲ್ಲಿ ವಿಟಮಿನ್ ಎ, ಇ ಮತ್ತು ಕೆಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇದರಲ್ಲಿ ಮ್ಯೆಗ್ನಿಶಿಯಂ, ಸತು ಮತ್ತು ಪೊಟಾಶಿಯಂಗಳು ಯಥೇಚ್ಛವಾಗಿರುತ್ತವೆ. ಇವುಗಳು ಮಗುವಿನ ಒಟ್ಟಾರೆ ಆರೋಗ್ಯಕ್ಕೆ ಅತ್ಯಾವಶ್ಯಕವಾದ ಪೋಷಕಾಂಶಗಳಾಗಿವೆ.

English summary

8 Must Have Vegetables During Pregnancy

The most imperative aspect of pregnancy is taking measures to ensure that the growth of your baby is uninterrupted and seamless. Here are 8 essential vegetables to eat during pregnancy. They can also be seen as power foods to eat during pregnancy, for they fall under this extensively talked about category. Read on...
Story first published: Wednesday, September 10, 2014, 12:37 [IST]
X
Desktop Bottom Promotion