For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯಾಗಿರುವಾಗ ಸೇವಿಸಲೇಬಾರದ 7 ಪದಾರ್ಥಗಳು

By Deepak M
|

ತಾಯಿಯಾಗುವ ಭಾಗ್ಯ ಜೀವನದ ಅತ್ಯಂತ ಮಹತ್ವದ ಘಟ್ಟ. ಪ್ರತಿ ಹೆಣ್ಣು ತನ್ನ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳುವ ವಿಶೇಷ ಕಾಲವಿದು. ಈ ಸಮಯದಲ್ಲಿ ಎಷ್ಟು ಎಚ್ಚರಿಕೆಯಿಂದ ಇದ್ದಷ್ಟು ಅಷ್ಟು ಒಳ್ಳೆಯದು. ಕೆಲವೊಮ್ಮೆ ತಿಳಿದೊ ಅಥವಾ ತಿಳಿಯದೆಯೋ ನೀವು ಕೆಲವೊಂದು ತಪ್ಪುಗಳನ್ನು ಮಾಡುತ್ತೀರಿ.

ಬಸಿರಾಗಿರುವಾಗ ಸಹಜವಾಗಿ ಬಯಕೆಗಳು ಹೆಚ್ಚಾಗಿ ಕಾಡುವುದು ಸಹಜ. ಅದಕ್ಕಾಗಿ ಆರೋಗ್ಯಕರ ಪಥ್ಯದ ವಿಚಾರದಲ್ಲಿ ಅಲ್ಪ ಸ್ವಲ್ಪ ರಾಜಿ ಮಾಡಿಕೊಂಡರೆ ಏನೂ ಆಗುವುದಿಲ್ಲ. ಆದರೆ ಅದನ್ನು ಸೇವಿಸುವ ಮೊದಲು ಗರ್ಭಿಣಿಯರು ಆ ಆಹಾರವನ್ನು ಸೇವಿಸುವುದು ಅಪಾಯಕಾರಿಯೇ ಅಥವಾ ಇಲ್ಲವೇ ಎಂದು ಆಲೋಚಿಸಿ ಮುಂದಡಿ ಇಡಿ. ಅದಕ್ಕಾಗಿ ನಾವು ನಿಮಗೆ ಗರ್ಭಿಣಿಯರು ಸೇವಿಸಬಾರದಂತಹ ಆಹಾರ ಪದಾರ್ಥಗಳ ಪಟ್ಟಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ, ಓದಿ ತಿಳಿದುಕೊಳ್ಳಿ;

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹೆರಿಗೆ ಸಮಯದಲ್ಲಿ ಯಾವಾಗ ಆಸ್ಪತ್ರೆಗೆ ಭೇಟಿ ನೀಡಬೇಕು?

ಕೆಫಿನ್:

ಕೆಫಿನ್:

ಕಾಫಿ ಮುಂತಾದ ಕೆಫಿನ್ ಇರುವ ಅಂಶಗಳನ್ನು ಸೇವಿಸುವುದನ್ನು ನಿಮ್ಮಿಂದ ಬಿಡಲು ಸಾಧ್ಯವಾಗುತ್ತಿಲ್ಲವೇ?, ಪರವಾಗಿಲ್ಲ ಹೆಚ್ಚಾಗಿ ಸೇವಿಸಬೇಡಿ, ಈ ಪ್ರಮಾಣವು ಎರಡು ಕಪ್‍ಗೆ ಸೀಮಿತವಾಗಿರುವಂತೆ ನೋಡಿಕೊಳ್ಳಿ. ಕಾಫಿಯನ್ನು ನಿಮ್ಮ ಆಹಾರ ಪಟ್ಟಿಯಿಂದ ತೆಗೆದುಹಾಕುವುದು ಮತ್ತಷ್ಟು ಒಳ್ಳೆಯದು. ಮುಂಬೈ ಮೂಲದ ಡಯಟೀಷಿಯನ್ ಮತ್ತು ಸ್ಪೋರ್ಟ್ಸ್ ನ್ಯೂಟ್ರೀಷಿಯನಿಸ್ಟ್ ಆಗಿರುವ ದೀಪ್ಷಿಕಾ ಅಗರ್‌ವಾಲ್‍ರವರ ಪ್ರಕಾರ " ಗರ್ಭಧಾರಣೆಯ ಅವಧಿಯಲ್ಲಿ ಅತಿಯಾದ ಕಾಫಿ ಸೇವನೆ ಒಳ್ಳೆಯದಲ್ಲ. ಅದರಲ್ಲೂ ಮೊದಲ ತ್ರೈಮಾಸಿಕ ಅವಧಿಯಲ್ಲಿ ಅತಿಯಾದ ಕಾಫಿ ಸೇವನೆಯು ಗರ್ಭಪಾತದಂತಹ ಅಪಾಯಕ್ಕೆ ಎಡೆಮಾಡಿಕೊಡಬಹುದು ಅಥವಾ ಗರ್ಭದಲ್ಲಿ ಬೆಳೆಯುತ್ತಿರುವ ಪಿಂಡದ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರಬಹುದಂತೆ. ಅದಕ್ಕಾಗಿ ಸೇವಿಸುವಾಗ ಹಿತ-ಮಿತವಾಗಿ ಸೇವಿಸುವುದು ಅತಿ ಉತ್ತಮ ನಿರ್ಧಾರವಾಗುತ್ತದೆ."

ಹಸಿ ಕೋಳಿ ಮಾಂಸ ಮತ್ತು ಮೀನು;

ಹಸಿ ಕೋಳಿ ಮಾಂಸ ಮತ್ತು ಮೀನು;

ನೀವು ಈ ಮೊದಲೇ ಕೇಳಿರಬಹುದು. ಹಸಿ ಮೊಟ್ಟೆ, ಮಾಂಸ ಅಥವಾ ಮೀನುಗಳು ಗರ್ಭಿಣಿಯರ ಆಹಾರದ ಪಟ್ಟಿಯಲ್ಲಿ ಸೇರಿರುವುದಿಲ್ಲ. ಏಕೆ? ಎಂಬ ಸಂಶಯವೇ. ದೀಪ್ಷಿಕಾರವರ ಪ್ರಕಾರ" ಹಸಿ ಮಾಂಸ ಮತ್ತು ಮೀನುಗಳು ಗರ್ಭಿಣಿಯರಲ್ಲಿ ಇನ್‍ಫೆಕ್ಷನ್ ಉಂಟು ಮಾಡಬಹುದು. ಹಸಿ ಮೊಟ್ಟೆಗಳು ಅಥವಾ ಮಾಂಸಗಳು ಗರ್ಭಿಣಿಯರಲ್ಲಿ ಹಲವು ರೀತಿಯ ಪರಾವಲಂಬಿ ರೋಗಗಳಿಗೆ ಕಾರಣಗಳಾಗುತ್ತವೆ. ಒಂದು ವೇಳೆ ತಾಯಿಯು ಇವುಗಳನ್ನು ಸೇವಿಸಿದರೆ , ಈ ಇನ್‍ಫೆಕ್ಷನ್ ಅಥವಾ ಕಾಯಿಲೆಯು ಹೊಕ್ಕುಳ ಬಳ್ಳಿಯನ್ನು ಹಾದು, ಗರ್ಭವನ್ನು ತಲುಪುತ್ತದೆಯಂತೆ" . ಇದರಿಂದ ಮಗುವು ಅವಧಿ ಪೂರ್ವ ಜನನವಾಗಬಹುದು ಅಥವಾ ಹುಟ್ಟುವ ಮಗು ಮಾನಸಿಕ ಅಸ್ವಸ್ಥನಾಗಿ ಜನಿಸಬಹುದು. ಹೆಚ್ಚಿನ ಮಾಹಿತಿಗೆ ಓದಿ -ಗರ್ಭಿಣಿಯಾಗಿರುವಾಗ ಸೇವಿಸಬಹುದಾದ ಮತ್ತು ಸೇವಿಸಬಾರದಂತಹ 10 ಆಹಾರಗಳು.

ಸಂಸ್ಕರಿಸದ ಚೀಸ್ ಅಥವಾ ಹಾಲು;

ಸಂಸ್ಕರಿಸದ ಚೀಸ್ ಅಥವಾ ಹಾಲು;

ಗರ್ಭಿಣಿಯಾಗಿರುವಾಗ ಹೈನು ಉತ್ಪನ್ನಗಳನ್ನು ಸೇವಿಸುವುದು ಒಳ್ಳೆಯದು. ಇದರಿಂದ ಗರ್ಭಿಣಿಯರಿಗೆ ಅಗತ್ಯವಾದ ಕ್ಯಾಲ್ಸಿಯಂ ದೊರೆಯುತ್ತದೆ. ಆದರೂ ಸಹ ಸಂಸ್ಕರಿಸದ ಚೀಸ್ ಮತ್ತು ಹಾಲನ್ನು ಸೇವಿಸದಿದ್ದರೆ ಉತ್ತಮ. " ಸಂಸ್ಕರಿಸದ ಚೀಸ್ ಅಥವಾ ಹಾಲುಗಳಲ್ಲಿ ಬ್ಯಾಕ್ಟೀರಿಯಾಗಳು ಇದ್ದು, ಅವು ಕರುಳ ಬಳ್ಳಿಯ ಮೂಲಕ ಗರ್ಭವನ್ನು ತಲುಪಿ ಗರ್ಭಪಾತಕ್ಕೆ ಕಾರಣವಾಗಬಹುದು." ಯಾವುದಕ್ಕು ಸುರಕ್ಷತೆಯ ದೃಷ್ಟಿಯಿಂದ ನೀವು ಕೊಳ್ಳುವ ಚೀಸ್ ಮತ್ತು ಹಾಲಿನ ಪ್ಯಾಕನ್ನು ಕೊಳ್ಳುವಾಗ ಪರೀಕ್ಷಿಸಿ ಕೊಂಡು ಕೊಳ್ಳಿ. ಇದಕ್ಕಾಗಿ ಎಫ್‍ಡಿಎಯು ಹಾಲು ಮತ್ತು ಚೀಸ್ ಉತ್ಪನ್ನಗಳ ಮೇಲೆ ಸಂಸ್ಕರಿಸಲ್ಪಟ್ಟಿದೆಯೇ? ಮತ್ತು ಗರ್ಭಿಣಿಯರು ಸೇವಿಸಬಹುದೇ ? ಎಂಬ ಅಂಶಗಳನ್ನು ಕಡ್ಡಾಯವಾಗಿ ನಮೂದಿಸಬೇಕು ಎಂಬ ಕಾನೂನನ್ನು ಜಾರಿ ಮಾಡಿದೆ. ಹೈನು ಉತ್ಪನ್ನಗಳ ಮೇಲೆ " ಸಂಸ್ಕರಿಸಲ್ಪಟ್ಟಿದೆ" ಎಂಬ ಅಂಶ ನಮೂದಾಗಿಲ್ಲದಿದ್ದರೆ, ಅದನ್ನು ಕೊಳ್ಳದಿದ್ದರೆ ಉತ್ತಮವೆಂದು ದೀಪ್ಷಿಕಾರವರು ಹೇಳುತ್ತಾರೆ.

ರಸ್ತೆ ಬದಿಯ ತಿಂಡಿಗಳು :

ರಸ್ತೆ ಬದಿಯ ತಿಂಡಿಗಳು :

ರಸ್ತೆ ಬದಿಯಲ್ಲಿ ದೊರೆಯುವ ಎಲ್ಲಾ ತಿಂಡಿಗಳು ಗರ್ಭಿಣಿಯರ ಆರೋಗ್ಯಕ್ಕೆ ಹಾನಿಕಾರವಲ್ಲ. ಆದರೆ ಇದು ಎಷ್ಟು ಹಾನಿಕಾರಕ ಎಂಬುದು ಅವರು ಬಳಸುವ ನೀರಿನ ಶುದ್ಧತೆಯ ಮೇಲೆ ಅವಲಂಬಿತವಾಗಿರುತ್ತದೆ. ದೀಪ್ಷಿಕಾರವರ ಪ್ರಕಾರ " ರಸ್ತೆ ಬದಿಯ ತಿಂಡಿಯನ್ನು ಸೇವಿಸುವುದರಿಂದ ಇನ್‍ಫೆಕ್ಷನ್‍ಗೆ ಒಳಗಾಗುವ ಅಪಾಯವಿರುತ್ತದೆ. ಹೀಗೆ ಇನ್‍ಫೆಕ್ಷನ್‍ಗೆ ಒಳಗಾದರೆ ಖಂಡಿತವಾಗಿ ಕಾಯಿಲೆಗಳು ಬರುತ್ತವೆ, ಆಗ ತಪ್ಪದೆ ಔಷದೋಪಚಾರವನ್ನು ಪಡೆಯಬೇಕು. ಹೀಗೆ ಪಡೆಯುವ ಔಷಧಗಳು ಎಲ್ಲವೂ ಮಗುವಿಗೆ ಉತ್ತಮಕರವಾಗಿರುವುದಿಲ್ಲ. ಅದರಲ್ಲೂ ಗರ್ಭಿಣಿಯರಲ್ಲಿ ರೋಗ ನಿರೋಧಕ ಶಕ್ತಿಯು ಸಾಮಾನ್ಯರಿಗಿಂತ ಕಡಿಕೆ ಇರುತ್ತದೆ. ಹಾಗಾಗಿ ಆಕೆಗೆ ಇನ್‍ಫೆಕ್ಷನ್ ಆಗುವ ಸಾಧ್ಯತೆ ಇತರರಿಗಿಂತ ಹೆಚ್ಚಾಗಿರುತ್ತದೆಯಂತೆ".

ಆಲ್ಕೋಹಾಲ್ ;

ಆಲ್ಕೋಹಾಲ್ ;

ಸಾಂದರ್ಭಿಕವಾಗಿ ಸೇವಿಸಲು ಇಷ್ಟಪಟ್ಟರೆ ಪರವಾಗಿಲ್ಲ. ಆದರೆ ಮಿತಿಯನ್ನು ದಾಟಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದನ್ನು ಮರೆಯಬೇಡಿ. " ಗರ್ಭಿಣಿಯರು ಅತಿಯಾದ ಆಲ್ಕೋಹಾಲನ್ನು ಸೇವಿಸುವುದರಿಂದ ಮಗುವಿನ ಮತ್ತು ಮಗುವಿನ ಮೆದುಳಿನ ಬೆಳವಣಿಗೆಯು ಕುಂಠಿತಗೊಳ್ಳುತ್ತದೆ. ಜೊತೆಗೆ ಇದು ಮಗುವಿನ ಮುಖದ ಸೌಂದರ್ಯವನ್ನು ಹಾಳು ಮಾಡಿಬಿಡುತ್ತದೆ, ಅಲ್ಲದೆ ಇದು ಮಾನಸಿಕ ಅಸ್ವಸ್ಥತೆಯನ್ನು ಸಹ ಉಂಟು ಮಾಡುವ ಅಪಾಯವಿರುತ್ತದೆ" ಎಂದು ದೀಪ್ಷಿಕಾರವರು ಅಭಿಪ್ರಾಯಪಡುತ್ತಾರೆ. ಹೆಚ್ಚಿನ ಮಾಹಿತಿಗೆ ಓದಿ- ಗರ್ಭಿಣಿಯರ ಮೇಲೆ ಆಲ್ಕೋಹಾಲಿನಿಂದ ಉಂಟಾಗುವ ಪರಿಣಾಮಗಳು.

ಸಿಗರೇಟ್‍ಗಳು;

ಸಿಗರೇಟ್‍ಗಳು;

ನಿಸ್ಸಂಶಯವಾಗಿ ಗರ್ಭಿಣಿಯರ ಮೇಲೆ ಸಿಗರೇಟ್‍ಗಳು ದುಷ್ಪರಿಣಾಮವನ್ನು ಬೀರುತ್ತವೆ. " ಇದರಲ್ಲಿ ನಿಕೋಟಿನ್ ಇದೆ ಎಂಬ ಕಾರಣಕ್ಕಾಗಿಯಲ್ಲದೆ, ಸಿಗರೇಟುಗಳು ನಿಮ್ಮ ಮಗುವಿಗೆ ಗರ್ಭದಲ್ಲಿರುವಾಗಲೇ ನಿಕೋಟಿನ್, ಕಾರ್ಬನ್ ಮೊನಾಕ್ಸೈಡ್ ಮತ್ತು ಟಾರ್‌ಗಳನ್ನು ಸೇವಿಸುವಂತೆ ಮಾಡುತ್ತದೆ. ಇದು ಮಗುವಿಗೆ ಪೂರೈಕೆಯಾಗುವ ಆಮ್ಲಜನಕವನ್ನು ಕಡಿಮೆ ಮಾಡುತ್ತದೆ. ಇದರ ಪರಿಣಾಮ ಜನನ ಸಂಬಂಧಿ ನ್ಯೂನತೆಗಳು, ಕಡಿಮೆ ತೂಕ ಅಥವಾ ಕೆಲವೊಮ್ಮೆ ಸೀಳು ತುಟಿ, ಅಂಗುಳುಗಳ ಸಮಸ್ಯೆಯನ್ನು ಸಹ ಉಂಟು ಮಾಡಬಹುದು" ಎಂದು ದೀಪ್ಷಿಕಾರವರು ಎಚ್ಚರಿಸುತ್ತಾರೆ.

ಗ್ರೀನ್ ಟೀ;

ಗ್ರೀನ್ ಟೀ;

ಗ್ರೀನ್ ಟೀಯು ಸಸ್ಯಜನ್ಯವಾಗಿದ್ದು, ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಆದರೆ ಇದನ್ನು ಗರ್ಭಿಣಿಯಾಗಿರುವಾಗ ಸೇವಿಸದಿದ್ದರೆ ಉತ್ತಮ. ಏಕೆಂದರ" ಗರ್ಭಿಣಿಯರು ಗ್ರೀನ್ ಟೀಯನ್ನು ಸೇವಿಸುವುದರಿಂದ ಒಳ್ಳೆಯದಾಗುತ್ತದೆ ಎಂಬುದಕ್ಕೆ ಯಾವುದೇ ಅಧಿಕೃತ ಪುರಾವೆಗಳು ನಮ್ಮ ಬಳಿ ಇಲ್ಲ. ಇದಕ್ಕೆ ಮತ್ತೊಂದು ಪ್ರಮುಖ ಕಾರಣವಿದೆ, ಗ್ರೀನ್ ಟೀಯು ಸಾಮಾನ್ಯವಾಗಿ ಸೇವಿಸಿದವರಲ್ಲಿ ಜೈವಿಕ ಕ್ರಿಯೆಯ ಪ್ರಮಾಣವನ್ನು ಹೆಚ್ಚಿಸುತ್ತದೆ. ಗರ್ಭಿಣಿಯರಲ್ಲಿ ಮೊದಲೇ ಜೈವಿಕ ಕ್ರಿಯೆಯು ಹೆಚ್ಚಿನ ಪ್ರಮಾಣದಲ್ಲಿರುತ್ತದೆ, ಅದರ ಜೊತೆಗೆ ಗ್ರೀನ್ ಟೀಯನ್ನು ಸೇವಿಸಿ ಅದರ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವುದು ಒಳ್ಳೆಯದಲ್ಲ. ' ಎಂದು ದೀಪ್ಷಿಕಾರವರು ಅಭಿಪ್ರಾಯಪಡುತ್ತಾರೆ. ಇದರ ಜೊತೆಗೆ ಗ್ರೀನ್ ಟೀಯಲ್ಲಿ ಕೆಲವು ಕೆಫಿನ್‍ ಅಂಶಗಳನ್ನು ಸಹ ಒಳಗೊಂಡಿರುತ್ತದೆ. ಅದಕ್ಕಾಗಿ ಗ್ರೀನ್ ಟೀಯನ್ನು ಸೇವಿಸುವುದರಿಂದ ಮಾಮೂಲಿ ಟೀಯನ್ನು ಸೇವಿಸುವುದರಿಂದ ಸಂಭವಿಸುವ ಅಪಾಯವೇ ಸಂಭವಿಸುತ್ತದೆ. ಇದಲ್ಲದೆ ಅಧಿಕ ಪ್ರಮಾಣದಲ್ಲಿ ಗ್ರೀನ್ ಟೀಯನ್ನು ಸೇವಿಸುವುದರಿಂದ ಗರ್ಭಿಣಿಯರಿಗೆ ಮತ್ತು ಅವರ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೆ ಫೊಲಿಕ್ ಆಮ್ಲದ ಪೂರೈಕೆಯನ್ನು ಕಡಿಮೆ ಮಾಡಿ, ಅದರ ಕೊರತೆಯುಂಟಾಗುವಂತೆ ಮಾಡುತ್ತದೆ. ಇದರಿಂದ ತಾಯಿ ಮತ್ತು ಮಗು ಫೊಲಿಕ್ ಆಮ್ಲದ ನ್ಯೂನತೆಗಳಿಂದ ಉಂಟಾಗುವ ಕಾಯಿಲೆಗಳಿಗೆ ತುತ್ತಾಗುವ ಸಂಭವವುಂಟಾಗುತ್ತದೆ.

English summary

7 things you should avoid during pregnancy

You should be watchful about what you eat during your pregnancy. Sometimes you are on the right track and sometimes you make mistakes.
Story first published: Saturday, March 15, 2014, 11:22 [IST]
X
Desktop Bottom Promotion