For Quick Alerts
ALLOW NOTIFICATIONS  
For Daily Alerts

ಪ್ರತಿ ಗರ್ಭಿಣಿ ಸ್ತ್ರೀಯ ಅಹಾರಕ್ರಮದಲ್ಲಿ ಇರಲೇಬೇಕಾದ ಅವಶ್ಯಕ ವಸ್ತುಗಳು.

By ರೀನಾ
|

ನೀವು ಗರ್ಭಿಣಿಯೇ ?! ಹಾಗಿದ್ದಲ್ಲಿ ನಿಮಗೊಂದು ಸಂತಸದ ಸುದ್ದಿ. ಗರ್ಭಿಣಿಯಾಗಿರುವುದರ ಒಂದು ಲಾಭವೇನೆಂದರೆ, ನೀವು ಯಾವುದೇ ಮುಜುಗುರವಿಲ್ಲದೆ ನಿಮ್ಮ ಊಟದ ತಟ್ಟೆಯನ್ನು ಆಹಾರ ಪದಾರ್ಥಗಳಿಂದ ಪೇರಿಸಿಕೊಳ್ಳಬಹುದು. ಇಂತಹ ಸ್ವಾತಂತ್ರ್ಯ ನಿಮಗಿರುವುದಾದರೂ ಕೂಡ ನೀವು ಒಂದು ವಿಷಯವನ್ನು ನೆನಪಿನಲ್ಲಿರಿಸಿಕೊಳ್ಳಬೇಕು.

ಅದೇನೆಂದರೆ, ನೀವು ಯಾವಾಗಲೂ ನಿಮ್ಮ ಆಹಾರಕ್ರಮದಲ್ಲಿ ಸರಿಯಾದ, ಸತ್ವಯುತ ಪದಾರ್ಥಗಳನ್ನು ಸೇರಿಸಿಕೊoಡಿರಬೇಕು ಹಾಗೂ ಯಾವಾಗಲೂ ಆರೋಗ್ಯದಾಯಕ ವಸ್ತುಗಳನ್ನೇ ಸೇವಿಸಬೇಕು. ನೀವು ಒಂದಲ್ಲ ಒಂದು ರೂಪದಲ್ಲಿ ಸೇವಿಸಲೇಬೇಕಾದ ಅವಶ್ಯಕ ವಸ್ತುಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.

ಕ್ಯಾಲ್ಸಿಯಂ:

ಕ್ಯಾಲ್ಸಿಯಂ:

ಕ್ಯಾಲ್ಸಿಯಂ ಧಾತುವು ಮೂಳೆ ಮತ್ತು ಹಲ್ಲುಗಳ ಬೆಳವಣಿಗೆಗೆ ಮತ್ತು ಅವುಗಳ ಆರೋಗ್ಯಕ್ಕೆ ಸಹಕಾರಿ ಎಂಬ ವಿಷಯವನ್ನು ನೀವು ನಿಮ್ಮ ಶಾಲಾ ಪಠ್ಯ ಪುಸ್ತಕಗಳಿಂದಲೇ ತಿಳಿದುಕೊಂಡಿದ್ದೀರಿ. ನೀವು ಗರ್ಭಿಣಿಯಾಗಿರುವಾಗ ನಿಮಗೆ ಕ್ಯಾಲ್ಸಿಯಂ ನ ವಿಶೇಷ ಅವಶ್ಯಕತೆ ಇರುತ್ತದೆ. ಕಾರಣವೇನೆಂದರೆ, ಗರ್ಭದಲ್ಲಿನ ಶಿಶುವಿನ ಒಟ್ಟಾರೆ ಅಸ್ಥಿಪಂಜರದ ಸರಿಯಾದ ಬೆಳವಣಿಗೆಗೆ ಸಾಕಾಗುವಷ್ಟು ಕ್ಯಾಲ್ಸಿಯಂ ಅನ್ನು ಪೂರೈಸಲು ನಿಮಗೆ ಹೆಚ್ಚುವರಿ ಕ್ಯಾಲ್ಸಿಯಂ ಬೇಕಾಗುತ್ತದೆ. ಈ ಕಾರಣಕ್ಕಾಗಿ, ಒಂದು ಲೋಟ ತುಂಬಾ ಹಾಲನ್ನು ಕುಡಿಯಿರಿ ಮತ್ತು ಗಿಣ್ಣು, ಮೊಸರು, ಪನೀರ್ ನಂತಹ ಹಾಲಿನ ಉತ್ಪನ್ನಗಳನ್ನು ಯಥೇಚ್ಚವಾಗಿ ಸೇವಿಸಿರಿ. ಒಂದು ವೇಳೆ ನಿಮಗೆ lactose ವರ್ಜ್ಯವಾಗಿದ್ದರೆ ಅಥವಾ ನೀವು ಗರ್ಭಿಣಿಯಾಗಿರುವಾಗ ಒಂದು ವೇಳೆ lactose ಗೆ ಅಲರ್ಜಿಯನ್ನು ಬೆಳೆಸಿಕೊಂಡರೂ ಕೂಡ, ನೀವು ಕ್ಯಾಲ್ಸಿಯಂ ನ ನೈಸರ್ಗಿಕ ಮೂಲಗಳನ್ನು ತೊರೆದು ಮಾತ್ರೆಗಳನ್ನು ಸೇವಿಸಲು ಇದು ಸಕಾರಣವಲ್ಲ.

ಫೋಲಿಕ್ ಆಮ್ಲ :

ಫೋಲಿಕ್ ಆಮ್ಲ :

ಭ್ರೂಣದ ಮೆದುಳು ಮತ್ತು ಬೆನ್ನುಹುರಿಯ ಬೆಳವಣಿಗೆಗೆ ಫೋಲಿಕ್ ಆಮ್ಲವು ಅವಶ್ಯಕವಾಗಿದೆ. "ವೈದ್ಯರ ನಂಬಿಕೆಯ ಪ್ರಕಾರ, ಸಾಮಾನ್ಯವಾಗಿ ಫೋಲಿಕ್ ಆಮ್ಲವನ್ನು ಆಹಾರದೊಂದಿಗೆ ಸೇವಿಸುವುದರ ಸಾಧ್ಯತೆ ಕಡಿಮೆ ಇದ್ದು, ಇದರಿಂದಾಗಿ ಭ್ರೂಣದ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆ ಇದ್ದು, ಈ ಕಾರಣಕ್ಕಾಗಿ ಅದನ್ನು ಗುಳಿಗೆಯ ರೂಪದಲ್ಲಿ ವೈದ್ಯರು ಗರ್ಭಿಣಿಯರಿಗೆ ಶಿಪಾರಸು ಮಾಡುತ್ತಾರೆ." ಎಂದು Deepshika ಅವರು ತಿಳಿಸುತ್ತಾರೆ.

ಗುಳಿಗೆಗಳ ಸೇವನೆಯನ್ನು ನೀವು ತಪ್ಪಿಸಬಾರದು ಎಂದಿದ್ದರೂ ಕೂಡ, ನೀವು ಫೋಲಿಕ್ ಆಮ್ಲವನ್ನು, tofu, ಅಥವಾ ಸೋಯಾ ಪನೀರ್, ಪಾಲಕ್, ಮೆಂತೆ ಸೊಪ್ಪುಗಳoತಹ ಕಡು ಹಸಿರು ತರಕಾರಿಗಳು, ಸೋರೆಕಾಯಿ, ಕುಂಬಳ, ಕಡಲೇಕಾಯಿ, ಪದಾರ್ಥಗಳ ಮೂಲಕ ದೇಹಕ್ಕೆ ಸೇರಿಸಿಕೊಳ್ಳಬಹುದು. "ಅನೇಕ ಮಹಿಳೆಯರು ಗರ್ಭಿಣಿಯಾಗಿರುವ ಕಾಲದಲ್ಲಿ ಅಥವಾ ಅಲ್ಲದೆಯೂ ಕೂಡ ಅನೇಕ ಬಾರಿ ನೆಲಗಡಲೆಗೆ ಅಲರ್ಜಿ ಉಳ್ಳವರಾಗಿರುತ್ತಾರೆ. ಒಂದು ವೇಳೆ ಇದರ ಸೇವನೆಯಿಂದ, ನಿಮ್ಮ ಶರೀರದಲ್ಲಿ ಯಾವುದೇ ರೀತಿಯ ಅಲರ್ಜಿಯು ಉಂಟಾದರೆ, ಇದನ್ನು ನಿಮ್ಮ ಅಹಾರಕ್ರಮದಿಂದ ತೆಗೆದುಹಾಕಿರಿ. ಆದಾಗ್ಯೂ, ಇತರ ಅಹಾರಪದಾರ್ಥಗಳು, ಅವುಗಳನ್ನು ನೀವು ಸಾಕಷ್ಟು ಪ್ರಮಾಣದಲ್ಲಿ ತೆಗೆದುಕೊಂಡಿದ್ದೇ ಆದರೆ, ಅವೂ ಕೂಡ ನಿಮ್ಮ ಶರೀರಕ್ಕೆ ಅವಶ್ಯವಿದ್ದಷ್ಟು ಫೋಲಿಕ್ ಆಮ್ಲವನ್ನು ಒದಗಿಸುತ್ತವೆ" ಎಂದು Deepshika ಹೇಳುತ್ತಾರೆ. ಗರ್ಭಿಣಿಯಾಗಿದ್ದಾಗ ಫೋಲಿಕ್ ಆಮ್ಲದ ಮಹತ್ವದ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಿರಿ.

ಕಬ್ಬಿಣದ ಅಂಶ:

ಕಬ್ಬಿಣದ ಅಂಶ:

ಇದು ನಿಮ್ಮ ಶರೀರದಲ್ಲಿ ಅವಶ್ಯಕವಾದ ಹೆಮೊಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಸಹಕರಿಸುತ್ತದೆ ಹಾಗೂ ಶಿಶುವಿನ ಅಂಗಗಳು ಮತ್ತು ಜೀವಕೋಶಗಳ ಬೆಳವಣಿಗೆಗೆ ಪೂರಕವಾಗಿದೆ. "ನೀವು ನಿಮ್ಮ ಶಿಶುವಿನ ಆರೋಗ್ಯ ಮತ್ತು ಬೆಳವಣಿಗೆಗೆ ಈಗ ಜವಾಬ್ದಾರರಾಗಿರುವುದರಿಂದ, ನೀವು ನಿಮ್ಮ ಶರೀರದ ಕಬ್ಬಿಣದ ಅಂಶವನ್ನು ಹೆಚ್ಚಿನ ಮಟ್ಟದಲ್ಲಿರಿಸಿಕೊಳ್ಳುವುದರ ಬಗ್ಗೆ ನೆನಪಿಟ್ಟುಕೊಳ್ಳುವುದು ಅವಶ್ಯ" ಎನ್ನುತ್ತಾರೆ Deepshikha. ಪಾಲಕ್, ಮೆಂತೆ ಸೊಪ್ಪು, ಕೋಸುಗಡ್ಡೆ, ಖರ್ಜೂರ, ಒಣದ್ರಾಕ್ಷಿ, fig, ಬೀಟ್ರೂಟ್, ಮತ್ತು ಸೇಬುಗಳಂತಹ ಹಚ್ಚ ಹಸಿರು ತರಕಾರಿಗಳನ್ನು ಯಥೇಚ್ಚವಾಗಿ ಸೇವಿಸಿರಿ. ಕಬ್ಬಿಣದ ಅಂಶ ಹಾಗೂ ಕ್ಯಾಲ್ಸಿಯಂ ನ ಅಂಶವನ್ನು ಹೊಂದಿರುವ ಅಹಾರಪದಾರ್ಥಗಳನ್ನು ಎಂದೂ ಒಟ್ಟೊಟ್ಟಿಗೆ ಸೇವಿಸದಿರಿ. ಕಾರಣ, ಕಬ್ಬಿಣದಂಶವು ರಕ್ತಗತವಾಗಲು ಕ್ಯಾಲ್ಸಿಯಂ ಅಡ್ಡಿಯಾಗಬಹುದು ಎಂದು Deepshikha ಅವರು ಎಚ್ಚರಿಸುತ್ತಾರೆ. ಉದಾಹರಣೆಗೆ, ಕೊಸುಗಡ್ಡೆಯ ಸಲಾಡ್ ಮತ್ತು ಮೊಸರು ಅಥವಾ ಹಾಲನ್ನು ಪಾಲಕ್ ಟೋಸ್ಟ್ ನೊಂದಿಗೆ ಸೇವಿಸಬೇಡಿರಿ.

ವಿಟಾಮಿನ್ B12:

ವಿಟಾಮಿನ್ B12:

ಇದನ್ನು ಖಂಡಿತಾ ತಪ್ಪಿಸಬೇಡಿರಿ. ತಾಯಿಯ ಮತ್ತು ಶಿಶುವಿನ ಮೆದುಳುಗಳ ಸಮರ್ಪಕ ಕಾರ್ಯ ನಿರ್ವಹಣೆಗೆ ವಿಟಾಮಿನ್ B12 ಅತಿ ಅವಶ್ಯವಾಗಿದೆ.

English summary

essentials every pregnant woman’s diet should have

The best thing about pregnancy is that you can pile up your plate with food without any guilt. The unrestricted freedom aside, it is important that you include the right things in your diet plan and eat healthy always.
X
Desktop Bottom Promotion