For Quick Alerts
ALLOW NOTIFICATIONS  
For Daily Alerts

ಗರ್ಭಧಾರಣೆ ವೇಳೆ ಸೂಕ್ತ ನಿದ್ರೆಗಾಗಿ ಆರು ವಿಧಾನಗಳು

By Super
|

ಗರ್ಭಿಣಿಯಾಗಿರುವ ವೇಳೆ ಪಾಲಿಸಬೇಕಾದ ಆರೋಗ್ಯಕರ ಪಥ್ಯ ಮತ್ತು ವ್ಯಾಯಾಮದ ಪ್ರಾಮುಖ್ಯತೆ ಬಗ್ಗೆ ನೀವು ತುಂಬಾ ಕಲಿತಿರಬಹುದು. ಈ ಮಹತ್ವದ 9 ತಿಂಗಳಲ್ಲಿ ನಿದ್ರೆ ಮತ್ತು ಅದರ ಅಗತ್ಯತೆಯ ಬಗ್ಗೆ ಯಾರು ಕೂಡ ನಿಮಗೆ ಹೇಳಿರುವುದಿಲ್ಲ. ಗರ್ಭಧಾರಣೆ ವೇಳೆ ನಿದ್ರೆಯ ಸರಿಯಾದ ಆಹಾರ ಕ್ರಮ ಮತ್ತು ವ್ಯಾಯಾಮದಷ್ಟೇ ಮುಖ್ಯ. ಗರ್ಭಧಾರಣೆ ವೇಳೆ ಸಾಮಾನ್ಯವಾಗಿ ನಿದ್ರೆಯ ನಿರಂತರತೆಗೂ ಸಮಸ್ಯೆಯಾಗುತ್ತದೆ.
ಹಲವಾರು ಮಹಿಳೆಯರು ಗರ್ಭದಾರಣೆ ವೇಳೆ ನಿದ್ರೆಗೆಡುವ, ಆತಂಕ ಮತ್ತು ನಿದ್ರಾಹೀನತೆ ಬಗ್ಗೆ ದೂರು ನೀಡಿದ್ದಾರೆ.

ಇನ್ನೊಂದು ಕಡೆ ಕೆಲವರು ಅವಕಾಶ ಸಿಕ್ಕಿದೆಡೆ ನಿದ್ರೆಗೆ ಶರಣಾಗುತ್ತಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಗರ್ಭಧಾರಣೆ ವಏಳೆ ಅತಿಯಾದ ನಿದ್ರೆ ಮತ್ತು ಕಡಿಮೆ ನಿದ್ರೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಒಳ್ಳೆಯ ವಿಧಾನವೆಂದರೆ ನಿಯಮಿತವಾಗಿ ನಿದ್ರೆ ಮಾಡುವುದು ಮತ್ತು ಸರಿಯಾದ ಸೂಚನೆಗಳನ್ನು ಪಾಲಿಸಲು ನಿಮ್ಮ ದೇಹದ ಮಾತನ್ನು ಆಲಿಸಿ. ಗರ್ಭಧಾರಣೆ ವೇಳೆ ರಾತ್ರಿ ಸರಿಯಾಗಿ ನಿದ್ರೆ ಮಾಡಲು ಪಾಲಿಸಬೇಕಾದ ಕೆಲವೊಂದು ವಿಧಾನಗಳು. ಗರ್ಭಿಣಿಯರಿಗೆ ಚಳಿಯಿಂದ ರಕ್ಷಣೆ ಪಡೆಯಲು ಅಮೂಲ್ಯ ಸಲಹೆ

ಕೆಫಿನ್ ಸೇವನೆ ನಿಯಂತ್ರಿಸಿ

ಗರ್ಭಧಾರಣೆ ವೇಳೆ ಅತಿಯಾದ ಕೆಫಿನ್ ಸೇವನೆಯಿಂದ ನಿಮ್ಮ ನಿದ್ರೆಯ ಚಕ್ರಕ್ಕೆ ತೊಂದರೆಯಾಗಬಹುದು. ಇದನ್ನು ಹೊರತುಪಡಿಸಿ ಗರ್ಭಧಾರಣೆ ವೇಳೆ ಕೆಫಿನ್ ಸೇವನೆಯಿಂದ ಹಲವಾರು ರೀತಿಯ ಅಪಾಯಗಳಿವೆ. ಕೆಲವೊಂದು ಅಧ್ಯಯನಗಳ ಪ್ರಕಾರ ಅತಿಯಾದ ಕೆಫಿನ್ ಸೇವನೆಯಿಂದ ಹುಟ್ಟುವ ಮಗುವಿನಲ್ಲಿ ಅಂಗವೈಕಲ್ಯ ಅಥವಾ ಗರ್ಭಪಾತವಾಗಬಹುದು. ಇದರಿಂದ ನಿಮ್ಮ ಮಗುವಿನ ಸುರಕ್ಷತೆ ಮತ್ತು ಒಳ್ಳೆಯ ನಿದ್ರೆ ಪಡೆಯಲು ಕೆಫಿನ್ ಸೇವನೆ ನಿಯಂತ್ರಿಸಿ. ನಿಮಗೆ ಕೆಫಿನ್ ಸೇವನೆ ತ್ಯಜಿಸಲು ಸಾಧ್ಯವಾಗದಿದ್ದರೆ ಆಗ ಅದನ್ನು ನಿಯಂತ್ರಿಸಲು ಪ್ರಯತ್ನಿಸಿ. ಇದೇ ನಿಯಮ ಚಹಾ, ಗ್ರೀನ್ ಟೀ ಅಥವಾ ಇತರ ಪಾನೀಯಗಳಿಗೂ ಅನ್ವಯವಾಗುತ್ತದೆ. ಗರ್ಭಧಾರಣೆ ವೇಳೆ ನೀವು ಕಡಗಣಿಸಬೇಕಾದ ಎಂಟು ಪಾನೀಯಗಳು ಇಲ್ಲಿವೆ.

ನಿಯಮಿತವಾಗಿ ನಿದ್ರೆ ಮಾಡಿ

ಗರ್ಭಧಾರಣೆ ವೇಳೆ ಆಯಾಸ ಸಾಮಾನ್ಯ. ಅತ್ಯುತ್ತಮ ಕಾರ್ಯಚಟುವಟಿಕೆ ಮತ್ತು ಭ್ರೂಣದ ಬೆಳವಣಿಗೆಗೆ ನಿಮ್ಮ ದೇಹಕ್ಕೆ ಸಾಕಷ್ಟು ವಿಶ್ರಾಂತಿ ಬೇಕಾಗುತ್ತದೆ. ಅತಿಯಾದ ಆಯಾಸದಿಂದಾಗಿ ನಿಮಗೆ ರಾತ್ರಿ ವೇಳೆ ನಿದ್ರೆ ಮಾಡಲು ಮತ್ತು ವಿಶ್ರಾಂತಿ ಪಡೆಯಲು ತುಂಬಾ ಕಷ್ಟವಾಗಬಹುದು. ಇದನ್ನು ತಡೆಯಲು ದಿನದಲ್ಲಿ ನಿಯಮಿತವಾಗಿ ನಿದ್ರೆ ಮಾಡಿ. ಇದರಿಂದ ಎರಡು ರೀತಿಯ ಪ್ರಯೋಜನಗಳಿವೆ. ಇದು ಆಯಾಸ ನಿವಾರಿಸುತ್ತದೆ ಮತ್ತು ನಿಮ್ಮ ದೇಹಕ್ಕೆ ಸರಿಯಾದ ನಿದ್ರೆಯಿಂದ ನಿಮ್ಮ ದೇಹವು ಸಂಪೂರ್ಣವಾಗಿ ಪುನಶ್ಚೇತನಗೊಳ್ಳಲು ನೆರವಾಗುತ್ತದೆ. ಮಧ್ಯಾಹ್ನದ ಊಟದ ಬಳಿಕ ಕೇವಲ ೧೫ ನಿಮಿಷಗಳ ನಿದ್ರೆ ನಿಮಗೆ ತುಂಬಾ ನೆರವಾಗಬಹುದು. ಗರ್ಭಧಾರಣೆ ವೇಳೆ ಒಂದು ಗಂಟೆ ಬೇಗನೆ ಮಲಗಿ ಮತ್ತು ಒಂದು ಗಂಟೆ ತಡವಾಗಿ ಎದ್ದೇಳುವುದರಿಂದ ನಿದ್ರೆ ಹೆಚ್ಚಿಸಬಹುದು. ಬೇರೆ ಕೆಲಸಗಳಿಗೆ ನೌಕರರನ್ನಿಡಿ ಅಥವಾ ನಿಮ್ಮ ಕುಟುಂಬದವರು ಇತರ ಕೆಲಸಗಳಲ್ಲಿ ನೆರವಾದರೆ ನಿಮಗೆ ಹೆಚ್ಚು ನಿದ್ರೆ ಬರುತ್ತದೆ. ಗರ್ಭಧಾರಣೆ ವೇಳೆ ಸಾಕಷ್ಟು ನಿದ್ರೆ ಮಾಡಲು ಇಲ್ಲಿ ಕೆಲವೊಂದು ವಿಧಾನಗಳಿವೆ.

ಮಲಗುವ ಮೊದಲು ಹೊಟ್ಟೆ ತುಂಬಾ ಊಟ ಮಾಡಬೇಡಿ

ಗರ್ಭಧಾರಣೆ ವೇಳೆ ಅಜೀರ್ಣ, ಹೊಟ್ಟೆ ಉಬ್ಬರ ಮತ್ತು ಎದೆಯುರಿಯು ನೀವು ಯೋಚಿಸಿದಕ್ಕಿಂತ ಹೆಚ್ಚಿನ ಸಮಸ್ಯೆಯನ್ನು ಉಂಟು ಮಾಡಬಹುದು. ಅದಾಗ್ಯೂ, ಕೆಲವೊಂದು ವಿಧಾನಗಳಿಂದ ಈ ಸಮಸ್ಯೆಗಳನ್ನೆಲ್ಲಾ ಪರಿಣಾಮಕಾರಿಯಾಗಿ ನಿಭಾಯಿಸಬಹುದು. ಇಂತಹ ಸಮಸ್ಯೆಗಳು ನಿಮ್ಮ ದೇಹದ ಕಾರ್ಯಚಟುವಟಿಕೆಗಳ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ ರಾತ್ರಿಯ ಉತ್ತಮ ನಿದ್ರೆಯನ್ನು ಕೆಡಿಸುತ್ತದೆ. ಅಜೀರ್ಣ ಮತ್ತು ಎದೆಯುರಿಯನ್ನು ತಡೆಯಲು ಒಳ್ಳೆಯ ವಿಧಾನವೆಂದರೆ ನಿದ್ರಿಸುವ ಮೊದಲು ಅತಿಯಾಗಿ ಊಟ ಮಾಡಬೇಡಿ. ಮಲಗುವ ಎರಡು ಗಂಟೆಗೆ ಮೊದಲು ಊಟ ಮಾಡಿ. ಅಜೀರ್ಣವನ್ನು ತಡೆಯಲು ಊಟ ಮಾಡಿದ ಬಳಿಕ ಸ್ವಲ್ಪ ಹೊತ್ತು ನಡೆದಾಡಿದರೆ ರಾತ್ರಿ ಉತ್ತಮ ನಿದ್ರೆ ಬರುತ್ತದೆ. ಗರ್ಭಧಾರಣೆಯ ಕೆಲವೊಂದು ಸಾಮಾನ್ಯ ಲಕ್ಷಣಗಳು ಇಲ್ಲಿವೆ. ಗರ್ಭಿಣಿಯರಿಗೆ ಚಳಿಯಿಂದ ರಕ್ಷಣೆ ಪಡೆಯಲು ಅಮೂಲ್ಯ ಸಲಹೆ

ಹೆಚ್ಚು ನೀರು ಸೇವಿಸಿ

ಸರಿಯಾದ ಪ್ರಮಾಣದಲ್ಲಿ ನೀರಿನ ಸೇವನೆಯಿಂದ ನಿಮ್ಮ ದೇಹವ ವ್ಯವಸ್ಥೆಯನ್ನು ವಿಷಾಯುಕ್ತ ಮತ್ತು ನೈಸರ್ಗಿಕವಾಗಿ ನಿಮ್ಮ ಕರುಳನ್ನು ಪೋಷಿಸುತ್ತದೆ. ನೀರು ನಿಮ್ಮ ದೇಹದಲ್ಲಿ ಹಿತವಾದ ಪರಿಣಾಮ ಉಂಟುಮಾಡಿ ಆರಾಮವಾಗಿರಲು ನೆರವಾಗುತ್ತದೆ. ಗರ್ಭಧಾರಣೆ ವೇಳೆ ಹೆಚ್ಚಿನ ಪ್ರಮಾಣದಲ್ಲಿ ನೀರು ಯಾಕೆ ಕುಡಿಯಬೇಕು ಎನ್ನುವ ಬಗ್ಗೆ ಕೆಲವೊಂದು ಕಾರಣಗಳು ಇಲ್ಲಿವೆ.

ಆರಾಮದಾಯಕ ಭಂಗಿಯಲ್ಲಿ ನಿದ್ರೆ ಮಾಡಿ

ಗರ್ಭಧಾರಣೆ ಸಮಯದಲ್ಲಿ ಉಂಟಾಗುವ ಕೆಲವೊಂದು ದೈಹಿಕ ಬದಲಾವಣೆಗಳಿಂದಾಗಿ ರಾತ್ರಿಯ ನಿದ್ರೆಗೆ ತೊಂದರೆಯಾಗಲು ಕೆಲವೊಂದು ಕಾರಣಗಳು. ಮುಂದಕ್ಕೆ ಬಂದಿರುವ ಹೊಟ್ಟೆ, ಬಾತುಕೊಂಡಿರುವ ಕಾಲು ಮತ್ತು ಕೈಗಳಿಂದ ಮಲಗಳು ಸಮಸ್ಯೆಯಾಗುತ್ತದೆ. ನೀವು ಊತ ಅಥವಾ ಕಾಲು ಬಾತುಕೊಳ್ಳಲು ಸಮಸ್ಯೆಯಿಂದ ಬಳಲುತ್ತಿದ್ದರೆ ಮಲಗುವಾಗ ಕಾಲಿನಡಿಯಲ್ಲಿ ತಲೆದಿಂಬು ಇಟ್ಟುಕೊಳ್ಳಿ. ಇದು ನಿಮಗೆ ಆರಾಮ ಮತ್ತು ವಿಶ್ರಾಂತಿ ನೀಡುತ್ತದೆ. ನಿಮ್ಮ ಹೊಟ್ಟೆಗೆ ಸರಿಯಾದ ಬೆಂಬಲ ನೀಡಬೇಕೆಂದರೆ ಆಗ ನೀವು ಗರ್ಭಧಾರಣೆಗಾಗಿ ಮಾಡಲ್ಪಟ್ಟಿರುವ ದಿಂಬನ್ನು ಬಳಸಿ, ಹೊಟ್ಟೆಯ ಅಡಿಯಲ್ಲಿ ಈ ದಿಂಬನ್ನು ಇಟ್ಟು ಎಡಕ್ಕೆ ಮಲಗಿ. ದಿಂಬಿನಿಂದಾಗಿ ನಿಮ್ಮ ಕಾಲುಗಳು ಮತ್ತು ಬೆನ್ನುಹುರಿ ಸರಿಯಾಗಿರುವಂತೆ ನೋಡುತ್ತದೆ. ಇದರಿಂದ ನಿಮಗೆ ಮಲಗುವ ಭಂಗಿಯಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ. ತಜ್ಞರ ಪ್ರಕಾರ ಗರ್ಭಧಾರಣೆ ವೇಳೆ ಎಡಬದಿಗೆ ಮಲಗುವುದರಿಂದ ಸರಿಯಾದ ರಕ್ತಸಂಚಲವಾಗುತ್ತದೆ ಮತ್ತು ಭ್ರೂಣಕ್ಕೂ ಸರಿಯಾದ ಪೋಷಕಾಂಶಗಳು ಸರಬರಾಜಾಗುತ್ತದೆ.

ಒತ್ತಡ ನಿವಾರಿಸಿ

ಗರ್ಭಧಾರಣೆ ವೇಳೆ ಒತ್ತಡವು ನಿಮಗೆ ಹಲವಾರು ರೀತಿಯಿಂದ ಸಮಸ್ಯೆನ್ನು ಉಂಟುಮಾಡಬಹುದು. ಇದರಲ್ಲಿ ಒಂದು ರಾತ್ರಿಯ ನಿದ್ರೆ. ಮಲಗುವ ಮೊದಲು ನೀವು ಒತ್ತಡದಲ್ಲಿದ್ದರೆ ಆಗ ದೇಹಕ್ಕೆ ಆರಾಮವಾಗಲು ಸ್ನಾನ ಮಾಡಿ ಅಥವಾ ಮಸಾಜ್ ಮಾಡಿಕೊಳ್ಳಿ. ಇದರಿಂದ ನಿಮಗೆ ಒಳ್ಳೆಯ ನಿದ್ರೆ ಬರುತ್ತದೆ. ಗರ್ಭಧಾರಣೆ ವೇಳೆ ಒತ್ತಡಕ್ಕೆ ಒಳಗಾಗಬೇಡಿ. ಇದರಿಂದ ನಿಮ್ಮ ಮಗುವಿನ ಮೇಲೆ ಹಲವಾರು ಪರಿಣಾಮಗಳಾಗಬಹುದು. ಗರ್ಭಧಾರಣೆ ವೇಳೆ ಒತ್ತಡದಿಂದ ಪಾರಾಗಲು ಒಂಭತ್ತು ವಿಧಾನಗಳು ಇಲ್ಲಿವೆ. ಗರ್ಭಿಣಿ ಸ್ತ್ರೀಯರ ಆಹಾರ ಸೇವನೆ ಹೇಗಿರಬೇಕು?

ಮಲಗುವ ಮೊದಲ ವ್ಯಾಯಾಮ ಮಾಡಬೇಡಿ
ಗರ್ಭಧಾರಣೆ ವೇಳೆ ವ್ಯಾಯಾಮ ತುಂಬಾ ಒಳ್ಳೆಯದು. ಆದರೆ ಮಲಗುವ ಸ್ವಲ್ಪ ಮೊದಲು ವ್ಯಾಯಾಮ ಮಾಡುವುದು ತುಂಬಾ ಕೆಟ್ಟದು. ಇದರಿಂದ ನಿಮ್ಮ ನಿದ್ರೆಗೆ ಭಂಗವಾಗಬಹುದು. ನಿದ್ರೆಗೆ ಕೆಲವು ಗಂಟೆಗಳ ಮೊದಲು ನೀವು ವ್ಯಾಯಾಮ ಮಾಡಿ. ಆದರೆ ನಿದ್ರೆಗೆ ಮೊದಲು ನೀವು ಯೋಗಾಭ್ಯಾಸ ಮಾಡಿದರೆ ಅದು ನಿದ್ರೆಗೆ ನೆರವಾಗುತ್ತದೆ. ತಜ್ಞರ ಸಲಹೆ ಪಡೆದು ಇದನ್ನು ಮುಂದುವರಿಸಿ.

English summary

6 ways to sleep well during pregnancy

While you learn a lot about a healthy diet and importance of exercise during pregnancy, nobody tells you about significance of sleep and its essence during those crucial nine months. However, sleep during pregnancy is as essential as eating right and exercising. Pregnancy among its other woes disturbs one’s normal sleep patterns too.
X
Desktop Bottom Promotion