For Quick Alerts
ALLOW NOTIFICATIONS  
For Daily Alerts

8ನೇ ತಿಂಗಳ ಗರ್ಭಾವಸ್ಥೆಯಲ್ಲಿ ಗರ್ಭಿಣಿಯರಿಗೆ ಮುನ್ನೆಚ್ಚರಿಕೆಗಳು

By Super
|

ನಿಮ್ಮ ಹೊಟ್ಟೆಯಲ್ಲಿ ಹುಟ್ಟಿ, ನಿಮ್ಮ ಕುಟುಂಬದ ನೂತನ ಸದಸ್ಯನಾಗಲಿರುವ ಮಗುವಿನ ಬಗ್ಗೆ ನೀವು ಬಹಳಷ್ಟು ಆಶಾಗೋಪುರಗಳನ್ನು ಮತ್ತು ಕನಸುಗಳನ್ನು ಕಟ್ಟಿ ಕೊಂಡಿರುತ್ತೀರಿ. ಆದರೂ ಈ ಸಮಯದಲ್ಲಿ ನೀವು ನಿಮ್ಮ ಗರ್ಭಾವಸ್ಥೆಯ ಸ್ಥಿತಿ- ಗತಿಯ ಬಗ್ಗೆ ಅರಿವು ಇಟ್ಟು ಕೊಂಡಿರಬೇಕಾದುದು ಅನಿವಾರ್ಯ. ನಿಮ್ಮ ಗರ್ಭಾವಸ್ಥೆಯ ಎರಡನೆ ತ್ರೈಮಾಸಿಕ ಅವಧಿಯು ಮುಗಿದ ನಂತರದ ಅವಧಿಯಲ್ಲಿ ತಾಯಿ ಮತ್ತು ಮಗುವಿನ ದೇಹದಲ್ಲಿ ಗಣನೀಯವಾದ ಬದಲಾವಣೆಗಳು ಕಂಡು ಬರುತ್ತವೆ.

ನಿಮ್ಮ ಪ್ರತಿಯೊಂದು ಹೆಜ್ಜೆಯೂ ನಿಮ್ಮ ಮಗುವಿನ ಮೇಲೆ ಪ್ರಭಾವ ಬೀಳುವುದಲ್ಲದೆ ನಿಮ್ಮ ಭೌತಿಕ ಅಂಶಗಳು ಮತ್ತು ಮಾನಸಿಕ ಅಂಶಗಳನ್ನೂ ಒಳಗೊಂಡಿರುತ್ತದೆ. ಗರ್ಭಿಣಿಯಾಗಿ 8ನೇ ತಿಂಗಳ ನಂತರ ಪಾಲಿಸುವ ಸಲಹೆಗಳಲ್ಲಿ ನಿಮ್ಮ ಸ್ತ್ರೀರೋಗತಜ್ಞರನ್ನು ಅಗಾಗ್ಗೆ ಕಾಣುತ್ತಿರಬೇಕು. ಹೀಗೆ ಮಾಡುವುದರಿಂದ ಎಲ್ಲಾ ಪರಿಸ್ಥಿತಿಗಳು ಸರಿಯಾಗಿ ನಡೆದುಕೊಂಡು ಹೋಗುತ್ತಿವೆ ಮತ್ತು ನಿಮ್ಮ ಮಗುವು ಆರೋಗ್ಯದಿಂದ ಚಲನೆಗಳನ್ನು ಮಾಡುತ್ತಿದೆಯೆಂದು ಖಾತ್ರಿಯಾಗುತ್ತದೆ. ಇಂತಹ ಭೇಟಿಗಳ ಜೊತೆಗೆ ನೀವೂ ಕೂಡ ನಿಮ್ಮ ಬಗ್ಗೆ ಹೆಚ್ಚುವರಿ ಗಮನ ಕೊಡಬೇಕಾಗುತ್ತದೆ.

ಆಹಾರ

6 Things To Avoid When Pregnant At 8 Months

ಗರ್ಭಧರಿಸಿರುವಾಗ ಆಹಾರದ ಬಗ್ಗೆ ಅಂತಹ ವಿಶೇಷವೇನೂ ಇಲ್ಲ. ಮನೆಯಲ್ಲಿ ಮಾಡಿದ ತಾಜಾ ಆಹಾರವನ್ನೇ ತೆಗೆದುಕೊಳ್ಳಿ. ಪ್ರೋಟೀನ್, ಕ್ಯಾಲ್ಸಿಯುಮ್ ಮತ್ತು ಕಬ್ಬಿಣಾಂಶ ಸಮೃದ್ಧವಾಗಿರುವ ಆಹಾರ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಅತ್ಯಂತ ಮುಖ್ಯ. ಒಂದು ಆರೋಗ್ಯಕರ ತಾಯಿಯು ಒಂದು ಆರೋಗ್ಯಕರ ಮಗವಿಗೆ ಜನ್ಮ ನೀಡಲು ಸಾಧ್ಯವಾಗುತ್ತದೆ. ಸಿದ್ಧ ಪಡಿಸಲಾಗಿರುವ ಮತ್ತು ಪ್ಯಾಕ್ ಆಗಿರುವ ಆಹಾರಗಳಿಂದ ದೂರವಿರಿ. ಸಂರಕ್ಷಕ ಮತ್ತು ಸಂಯೋಜಕಗಳನ್ನು ಸೇರಿಸಿರುವ ಆಹಾರಗಳನ್ನು ಸೇವಿಸಲು ಇಷ್ಟಪಡಬೇಡಿ. ಗರ್ಭಾವಸ್ಥೆಯಲ್ಲಿ ಮಹಿಳೆ ಮಾಡುವ 5 ಸಾಮಾನ್ಯ ತಪ್ಪುಗಳು

ಮಸಾಲೆಯುಕ್ತ ಆಹಾರ

ಮಸಾಲೆಗಳು ಒಳ್ಳೆಯದು ಆದರೆ ಮಿತಿಯಲ್ಲಿರಬೇಕು. ಹೆಚ್ಚು ಮಸಾಲೆಯುಕ್ತ ಆಹಾರಗಳನ್ನು ಸೇವಿಸಿದಾಗೆ ಅಹಿತಕರ ಮತ್ತು ಅಸ್ವಸ್ಥತೆಯಿಂದ ಬಳಲುವುದಲ್ಲದೆ ಬೆಳೆಯುತ್ತಿರುವ ಮಗುವಿಗೆ ಅಪಾಯಕಾರಿಯಾಗುತ್ತದೆ. ನೀವು ಕೇವಲ ಬೇಯಿಸಿದ ಆಹಾರವನ್ನು ಮಾತ್ರ ತೆಗೆದುಕೊಳ್ಳಬೇಕಾಗಿಲ್ಲ ಆದರೆ ಅದಕ್ಕೆ ರುಚಿಕೊಡಲು ಕನಿಷ್ಠ ಮಸಾಲೆಗಳನ್ನು ಮಾತ್ರ ಬಳಸಿ ಸೇವಿಸಿ. ಹಾಗೆಯೆ ಪ್ಯಾಕ್ ಮಾಡಿ ಕೃತಕ ಸ್ವಾದವಿರುವ ತಕ್ಷಣ ಬಳಸುವ ಮಸಾಲೆ ಮಿಶ್ರಣ ಸೇವಿಸುವುದನ್ನು ತಪ್ಪಿಸಿ.

ದೂರ ಪ್ರಯಾಣ
ನೀವು ಎಂಟುತಿಂಗಳ ಗರ್ಭಾವಸ್ಥೆಯಲ್ಲಿರುವಾಗ ನೀವು ಮಗುವು ಯಾವುದೇ ಸಮಯದಲ್ಲಿ ಬಂದುಬಿಡಬಹುದೆಂದು ನಿರೀಕ್ಷಿಸಬಹುದು. ಹೆರಿಗೆಯ ಬೇನೆ ನಿಧಾನವಾಗಿ ಆರಂಭವಾಗಿ ನೀವು ಆಸ್ಪತ್ರೆ ತಲುಪಲು ಸಾಕಷ್ಟು ಸಮಯವಿರುತ್ತದೆ. ಯಾವುದೇ ಅನಗತ್ಯ ಪರಿಸ್ಥಿತಿಗಳನ್ನು ತಪ್ಪಿಸಲು ದೂರ ಪ್ರಯಾಣ ಮಾಡುವುದನ್ನು ತಪ್ಪಿಸಿ. ಜೊತೆಗೆ ದೂರ ಪ್ರಯಾಣವು ಆಯಾಸ ತರುವುದರಿಂದ ನೀವು ಗರ್ಭಾವಸ್ಥೆಯಲ್ಲಿ ಮುಂದುವರಿದಿದ್ದಾಗ ತಪ್ಪಿಸುವ ಮುಖ್ಯಕಾರಣಗಳಲ್ಲಿ ಇದು ಒಂದಾಗಿದೆ.

ದೀರ್ಘಕಾಲ ಕುಳಿತುಕೊಳ್ಳುವುದು

ನೀವು ಮನೆಯಲ್ಲಾಗಲಿ ಅಥವ ಆಫೀಸ್‌ನಲ್ಲಾಗಲಿ ಸತತವಾಗಿ ದೀರ್ಘಕಾಲ ಕುಳಿತುಕೊಳ್ಳುವುದನ್ನು ತಪ್ಪಿಸಿ. ದೀರ್ಘಕಾಲ ಕುಳಿತುಕೊಳ್ಳುವುದರಿಂದ ನಿಮ್ಮ ಬೆನ್ನು ನೋವಿಗೆ ಕಾರಣವಾಗುವುದಲ್ಲದೆ ನಿಮ್ಮ ಹೊಟ್ಟೆಯ ಮೇಲೆ ಒತ್ತಡಕ್ಕೆ ಕಾರಣವಾಗಬಹುದು. ನೀವು ಎಂಟು ತಿಂಗಳ ಗರ್ಭಿಣಿಯಾಗಿದ್ದಾಗ ನಿಮ್ಮ ಹೊಟ್ಟೆಯ ಬಹುಭಾಗ ಮಗುವಿನಿಂದ ಆವರಿಸಿಕೊಂಡಿರುತ್ತದೆ ಎಂಬುದನ್ನು ನೆನಪಿಡಿ. ಮಧ್ಯೆ ಮಧ್ಯೆ ಎದ್ದು ಸ್ವಲ್ಪ ನಡೆಯಿರಿ. ಹಾಗೆ ಮಾಡಿದಾಗ ನಿಮ್ಮ ಮಗುವಿಗೂ ಒಳ್ಳೆಯದಾಗುತ್ತದೆ.

ಗೊಂದಲದ ಸಂದರ್ಭಗಳು

ಸಾಧ್ಯವಾದಷ್ಟು ಗೊಂದಲದ ಪರಿಸ್ಥಿತಿಗಳಿಂದ ದೂರವಿರಿ, ಅದು ಮನೆಯಲ್ಲಾಗಲಿ, ಆಫೀಸ್‌ನಲ್ಲಾಗಲಿ ಅಥವ ಎಲ್ಲಾದರೂ ಸರಿ. ಮಗುವು ಗರ್ಭಾಶಯದಲ್ಲಿದ್ದರೂ ಕೂಡ ಗೊಂದಲಗಳ ಪರಿಸ್ಥಿತಿಗಳು ಮಗುವಿನ ಮೇಲೆ ಪ್ರಭಾವ ಬೀರುತ್ತವೆ. ನೀವು ಕೇಳುವ, ಮಾತಾಡುವ ಮತ್ತು ನೋಡುವ ಎಲ್ಲಾ ವಿಷಯಗಳು ನಿಮ್ಮ ಮಗುವಿಗೆ ತಲುಪುತ್ತವೆ. ಹಾಗೆಯೇ ಗೊಂದಲದ ಮಾಧ್ಯಮಗಳ ವಿಷಯಗಳನ್ನು ಕೇಳುವುದನ್ನು ತಪ್ಪಿಸಿ.

ಒತ್ತಡ

ಒತ್ತಡಗಳು ಅನೇಕ ರೀತಿಯಲ್ಲಿರುತ್ತವೆ -ದೈಹಿಕ ಮತ್ತು ಮಾನಸಿಕ. ಆರೋಗ್ಯಕರ ಮಗುವನ್ನು ಹೆರಲು ಎಲ್ಲಾ ರೀತಿಯಲ್ಲಿ ಒತ್ತಡದ ಪರಿಸ್ಥಿತಿಗಳನ್ನು ತಪ್ಪಿಸಿ. ಅಥವಾ ಸಾಧ್ಯವಾದಷ್ಟು ಸಂತೋಷವಾಗಿರುವುದಕ್ಕೆ ಪ್ರಯತ್ನಿಸಿ. ನಿಮ್ಮ ವಿಭಿನ್ನ ಭಾವನೆಗಳು ನಿಮ್ಮ ಮಗುವಿಗೆ ತಲುಪುತ್ತವೆ ಮತ್ತು ನಿಮಗೆ ಹೇಗೆ ಅನುಭವವಾಗುತ್ತಿದೆಯೋ ಹಾಗೆ ಮಗುವಿಗೆ ಕೂಡ ಆಗುತ್ತದೆ.

ಗರ್ಭಾವಸ್ಥೆಯು ಮಹಿಳೆಯ ಜೀವನದಲ್ಲಿ ಒಂದು ವಿಶೇಷ ಹೆಜ್ಜೆ
ಇಂತಹ ಸಮಯದಲ್ಲಿ ನೀವು ನಿಮ್ಮ ಒಳಗೆ ಬೆಳೆಯುತ್ತಿರುವ ಒಂದು ಜೀವಕ್ಕೆ ಸಂಪೂರ್ಣ ಜವಾಬ್ದಾರಿಯಾಗಿರುತ್ತೀರಿ ಎಂಬುದನ್ನು ಕಂಡುಕೊಳ್ಳುತ್ತೀರಿ. ನಿಮ್ಮ ವೈದ್ಯರು, ಸ್ನೇಹಿತರು ಮತ್ತು ಬಂಧುಗಳು ನಿಮಗೆ ಗರ್ಭಾವಸ್ಥೆಯಲ್ಲಿದ್ದಾಗ ಏನೇನು ಮಾಡುವುದರಿಂದ ತಪ್ಪಿಸಿಕೊಳ್ಳಬೇಕೆಂದು ಹೇಳುತ್ತಾರೆ. ಅವರು ಹೇಳುವುದಕ್ಕೆ ಲಕ್ಷ್ಯವಿಡಿ ಮತ್ತು ಜೀವನದಲ್ಲಿ ಸಂತೋಷವಾಗಿರಬೇಕು ಎಂಬುದನ್ನು ಸಂಪೂರ್ಣವಾಗಿ ಪಾಲಿಸಬೇಕೆಂದು ಖಚಿತಪಡಿಸಿಕೊಳ್ಳಿ. ನಿಮ್ಮ ಗರ್ಭಧಾರಣೆಯ ದಿನಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವಹಾಗೆ ಕಳೆಯಿರಿ ಮತ್ತು ನಿಮ್ಮ ಜೀವನದಲ್ಲಿ ಒಂದು ಸಂಪೂರ್ಣ ಸಂತೋಷದ ಬುಗ್ಗೆಯನ್ನು ಅನುಭವಿಸಲು ಸಿದ್ಧರಾಗಿ.

English summary

6 Things To Avoid When Pregnant At 8 Months

You must remember that when pregnant, you are not only responsible for your wellness but more importantly for the healthy growth of the foetus. Every move you make will have an effect on the baby and this not only includes physical factors but psychological ones too.
Story first published: Monday, October 27, 2014, 18:10 [IST]
X
Desktop Bottom Promotion