For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯಾದಾಗ ನಿರ್ಲಕ್ಷಿಸಬೇಕಾದ 5 ಸೌಂದರ್ಯ ಸಾಧನಗಳು

By Arpitha Rao
|

ಗರ್ಭವತಿಯ ಮೊದಲ ಹಂತದಲ್ಲಿ ಸರಿಯಾದ ನಿಗಾ ವಹಿಸದಿದ್ದಲ್ಲಿ ಭ್ರೂಣದ ಮೇಲೆ ವೈವಿಧ್ಯಮಯ ಪರಿಣಾಮಗಳು ಬೀಳಬಹುದು.ದಶಕಗಳ ಹಿಂದೆ ಸಂಶೋಧಕರು ಇದರ ಬಗ್ಗೆ ಅಧ್ಯಯನ ನಡೆಸುತ್ತಿರುವಾಗ ಅವರು ಸಾಕಷ್ಟು ರಾಸಾಯನಿಕ ವಸ್ತುಗಳು ತಾಯಿಯ ಭ್ರೂಣದ ಮೇಲೆ ಪರಿಣಾಮ ಬೀರುತ್ತಿರುವುದೇ ಇದಕ್ಕೆ ಕಾರಣ ಎಂಬುದನ್ನು ಕಂಡು ಹಿಡಿದರು.

ತಾಯಿಯಾಗುತ್ತಿರುವಾಗ ಸುಂದರವಾಗಿ ಕಾಣಬೇಕೆಂಬ ಆಸೆ ಇರುವುದು ಸಹಜ.ಇದರೊಂದಿಗೆ ಯಾವುದೇ ಸಮಸ್ಯೆಗೆ ಒಳಗಾಗದೆ ಸುರಕ್ಷಿತ ಮಗುವನ್ನು ಹೊಂದಲು ಈ ಕೆಳಗೆ ಸೌಂದರ್ಯ ವರ್ಧಕಗಳಿಂದ ದೂರವಿರಬೇಕಾದ ಬಗ್ಗೆ ಸಲಹೆ ನೀಡಲಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಸಾಮಾನ್ಯ ಗರ್ಭಧಾರಣೆಯ ತೊಂದರೆಗಳು

ಐಶಾರಾಮಿ ಉತ್ಪನ್ನಗಳು:

ಐಶಾರಾಮಿ ಉತ್ಪನ್ನಗಳು:

ವಾವ್ ಇದು ಎಲ್ಲಾ ಗಂಡಸರಿಗೆ ಒಳ್ಳೆಯ ಸುದ್ದಿ.ಸಂಶೋಧಕರು ಹೇಳುವ ಪ್ರಕಾರ ಗರ್ಭವತಿಯಾದಾಗ ಯಾವುದೇ ರೀತಿಯ ಸಾವಯವ ಉತ್ಪನ್ನಗಳನ್ನು ಬಳಸಬಾರದು ಇದರಿಂದ ಅಲರ್ಜಿ ಆಗುವ ಮತ್ತು ತ್ವಚೆ ಸಮಸ್ಯೆ ಕಾಣಿಸಿಕೊಳ್ಳುವ ಸಂಭವ ಇರುತ್ತದೆ.ಎಲ್ಲಾ ಗರ್ಭಿಣಿ ಮಹಿಳೆಯರು ಮಗುವಿನ ಮೇಲೆ ಯಾವುದೇ ದುಷ್ಪರಿಣಾಮ ಬೀರದ ಸೌಮ್ಯ ರೀತಿಯ ಉತ್ಪನ್ನಗಳನ್ನು ಬಳಸಬೇಕು.ಇದರಿಂದ ಹಣ ಕೂಡ ಉಳಿತಾಯ ಮಾಡಬಹುದು ಜೊತೆಗೆ ಅಡ್ಡ ಪರಿಣಾಮಗಳನ್ನೂ ತಡೆಯಬಹುದು.

ಟ್ಯಾನಿಂಗ್ ವಿಧಾನಗಳು:

ಟ್ಯಾನಿಂಗ್ ವಿಧಾನಗಳು:

ಆಹಾರ ಮತ್ತು ಔಷಧ ಆಡಳಿತ ಮಂಡಳಿ ಹೇಳುವಂತೆ ಟ್ಯಾನಿಂಗ್ ನಲ್ಲಿ Dihydroxyacetone ಎಂಬ ರಾಸಾಯನಿಕ ಅಂಶವಿರುವುತ್ತದೆ.ಗರ್ಭಿಣಿಯಾದಾಗ ಟ್ಯಾನಿಂಗ್ ಆಗುವಂತಹ ಚಟುವಟಿಕೆಗಳಿಂದ ದೂರವಿರಬೇಕು.ಸನ್ ಟ್ಯಾನಿಂಗ್ ನಿಂದ ಕ್ಯಾನ್ಸರ್ ಬರುವ ಸಾಧ್ಯತೆ ಗರ್ಭಾವಸ್ಥೆಯಲ್ಲಿ ಹೆಚ್ಚಿರುತ್ತದೆ.ಗರ್ಭಿಣಿಯಾದಾಗ ದೇಹ ಬೇಗ ಕಾಯಿಲೆಗೆ ಒಳಗಾಗುವ ಸಾಧ್ಯತೆ ಇರುತ್ತದೆ.ಟ್ಯಾನ್ ಆಗದಿರಲು ಸ್ಪ್ರೇ ಗಳನ್ನು ಬಳಸುವುದರಿಂದ ಭ್ರೂಣದ ಮೇಲೆ ಪರಿಣಾಮ ಬೀರುತ್ತದೆ.ಆದ್ದರಿಂದ ಗರ್ಭಿಣಿಯಾದಾಗ ಟ್ಯಾನ್ ಔಷಧಿಗಳನ್ನು ಬಳಸುವುದನ್ನು ನಿರ್ಲಕ್ಷಿಸಬೇಕು.

ಚರ್ಮವನ್ನು ಬಿಳಿಯಾಗಿಸುವ ಉತ್ಪನ್ನಗಳು:

ಚರ್ಮವನ್ನು ಬಿಳಿಯಾಗಿಸುವ ಉತ್ಪನ್ನಗಳು:

ಚರ್ಮವನ್ನು ಬಿಳಿಯಾಗಿಸುವ ಉತ್ಪನ್ನಗಳಲ್ಲಿ ಅಧಿಕ ಪ್ರಮಾಣದ ರಾಸಾಯನಿಕವಿದ್ದು ಇದು ಕಿಣ್ವಗಳಿಗೆ ಪರಿಣಾಮ ಬೀರುತ್ತವೆ.ಆದ್ದರಿಂದ ಗರ್ಭಿಣಿ ಮಹಿಳೆಯು ಮಗು ಜನಿಸುವವರೆಗೆ ಇಂತಹ ಉತ್ಪನ್ನಗಳಿಂದ ದೂರವಿರುವುದು ಒಳ್ಳೆಯದು.

ಹೇರ್ ರಿಮೂವಲ್:

ಹೇರ್ ರಿಮೂವಲ್:

ಕೂದಲನ್ನು ತೆಗೆಯಲು ಬಳಸುವ ಈ ಉತ್ಪನ್ನಗಳಲ್ಲಿ thioglycolic ಆಮ್ಲ ಹೆಚ್ಚಿನ ಪ್ರಮಾಣದಲ್ಲಿರುತ್ತದೆ,ಇದು ಗರ್ಭಿಣಿ ಮಹಿಳೆಯರಿಗೆ ಸುರಕ್ಷಿತವಲ್ಲ.ಈ ರೀತಿಯ ಉತ್ಪನ್ನಗಳನ್ನು ಗರ್ಭಿಣಿಯಾದಾಗ ಬಳಸಬೇಡಿ,ಬದಲಿಗೆ ನಿಮ್ಮ ಗಂಡನಿಗೆ ಬೇಡದ ಕೂದಲನ್ನು ಶೇವ್ ಮಾಡಲು ಹೇಳಿ.ಇದರಿಂದ ನಿಮ್ಮ ಗಂಡನಿಗೆ ನಿಮ್ಮೊಂದಿಗೆ ಹೆಚ್ಚು ಕಾಲ ಕಳೆಯುವಂತೆ ಮತ್ತು ಸುಂದರ ಘಳಿಗೆಯನ್ನು ಒಟ್ಟಿಗೆ ಕಳೆದ ಅನುಭವವಾಗುತ್ತದೆ.

ಅಧಿಕ ಪರಿಮಳ ಹೊಂದಿದ ಫ್ರಾಗ್ರೆನ್ಸಸ್ :

ಅಧಿಕ ಪರಿಮಳ ಹೊಂದಿದ ಫ್ರಾಗ್ರೆನ್ಸಸ್ :

ಕೆಲವೊಮ್ಮೆ ಮಹಿಳೆಯರು ಅಧಿಕ ಪರಿಮಳ ಹೊಂದಿದ ವಿಶೇಷ ಅನುಭವದಲ್ಲಿ ಇರಬಯಸುತ್ತಾರೆ.ಆದಾಗ್ಯೂ ಗರ್ಭಿಣಿ ಮಹಿಳೆ ಇದನ್ನು ಬಳಸುವುದರಿಂದ ಭ್ರೂಣದ ಹಾರ್ಮೋನುಗಳ ಮೇಲೆ ಇದು ಪರಿಣಾಮ ಬೀರುವುದರಿಂದ ಈ ರೀತಿಯ ಉತ್ಪನ್ನಗಳಿಂದ ದೂರವಿರುವುದು ಉತ್ತಮ.ರೂಂ ಫ್ರೆಶ್ನರ್,ಪರ್ಫ಼್ಯೂಮ್ ಇವುಗಳನ್ನು ಅಧಿಕವಾಗಿ ಬಳಸದಿರುವುದು ಒಳ್ಳೆಯದು.

ಟ್ಯಾಟೂಗಳು:

ಟ್ಯಾಟೂಗಳು:

ನೀವು ಟ್ಯಾಟೂ ಇಷ್ಟ ಪಡುವವರಾಗಿರಬಹುದು.ನೀವು ಗರ್ಭಿಣಿಯಾಗಿದ್ದಲ್ಲಿ ಇದು ಟ್ಯಾಟೂ ಹಾಕಿಸಿಕೊಳ್ಳಲು ಸರಿಯಾದ ಸಮಯವಲ್ಲ ಎಂಬುದನ್ನು ನೆನಪಿನಲ್ಲಿಡಿ.ಆರೋಗ್ಯಯುತ ಮಗುವಿಗೆ ಜನನ ನೀಡುವವರೆಗೆ ನಿಮ್ಮ ಆಸೆಯನ್ನು ಹತೋಟಿಯಲ್ಲಿಡಿ ಮತ್ತು ಟ್ಯಾಟೂ ಹಾಕಿಸಿಕೊಳ್ಳದಿರಿ.ಟ್ಯಾಟೂ ನಿಮ್ಮ ಚರ್ಮದ ಮೇಲೆ ದುಷ್ಪರಿಣಾಮ ಬೀರುವುದು ಮಾತ್ರವಲ್ಲ,ಇದರಿಂದ ಅನೇಕ ರೋಗಗಳು ಕೂಡ ಬರಬಹುದು.ಆದ್ದರಿಂದ ಯಾವುದೇ ಸಮಸ್ಯೆಯನ್ನು ತಂದುಕೊಳ್ಳಬೇಡಿ. ಈ ಮೇಲೆ ಹೇಳಿದ ಸಲಹೆಗಳನ್ನು ಸರಿಯಾಗಿ ಪಾಲಿಸಿ ಆರೋಗ್ಯಯುತ ಮಗುವನ್ನು ಪಡೆಯಿರಿ.

English summary

6 Beauty Products to Avoid During Pregnancy

There is a saying, ‘early pregnancy can cause diverse effect on the embryo’, if it’s not going through a healthy process. Decades ago, when researchers were churning the new discoveries, they found out the various chemicals, which could affect a mother’s womb in many ways.
Story first published: Saturday, April 5, 2014, 16:26 [IST]
X
Desktop Bottom Promotion