For Quick Alerts
ALLOW NOTIFICATIONS  
For Daily Alerts

ಗರ್ಭಧಾರಣೆಗೆ ಅಡ್ಡಿಯಾಗುವ ಬೊಜ್ಜಿನ ಐದು ಕಾರಣಗಳು

By Hemanth P
|

ಗೃಹಿಣಿಯಾಗಿದ್ದ 30ರ ಹರೆಯದ ಶಿಲ್ಪಿ ಸಚದೇವ ಕಳೆದ ಎರಡು ವರ್ಷಗಳಿಂದ ಗರ್ಭಧರಿಸಲು ಪ್ರಯತ್ನಿಸುತ್ತಿದ್ದರೂ ಯಾವುದೇ ಫಲಿತಾಂಶವಿಲ್ಲ. ಗರ್ಭಧಾರಣೆ ಮಾಡುವ ಪ್ರಯತ್ನವೆಲ್ಲಾ ವಿಫಲವಾದ ಹಿನ್ನೆಲೆಯಲ್ಲಿ ಸಚದೇವ ದಂಪತಿ ಐವಿಎಫ್ ಸ್ಪೆಷಲಿಸ್ಟ್ ನ್ನು ಭೇಟಿಯಾಗಲು ನಿರ್ಧರಿಸಿದರು. ಐವಿಎಫ್ ಕ್ಲಿನಿಕ್ ನಲ್ಲಿ ಪರೀಕ್ಷೆ ನಡೆಸಿದ ಬಳಿಕ ಬಂದ ಫಲಿತಾಂಶದಲ್ಲಿ ಶಿಲ್ಪಿ ಅಂಡಾಣುಗಳಲ್ಲಿ ಅಸಾಮಾನ್ಯವಿರುವ ಕಾರಣ ಗರ್ಭಧಾರಣೆ ವಿಫಲವಾಗಿದೆ ಎಂದು ತಿಳಿದುಬಂತು. ಇದಕ್ಕೆ ಕಾರಣವೇನೆಂದರೆ ಆಕೆಯ ಬೊಜ್ಜು.

ಮಗುವಿಗೆ ಪರಿಪೂರ್ಣ ಬಾಡಿ ಮಸಾಜ್ ಮಾಡುವುದು ಹೇಗೆ?

ಇಂತಹ ಸಮಸ್ಯೆ ಎದುರಿಸುತ್ತಿರುವುದು ಶಿಲ್ಪಿ ಮಾತ್ರವಲ್ಲ, ಐಎಂಸಿಆರ್ ನ ಪ್ರಕಾರ ಪ್ರತೀ ವರ್ಷ ಜಗತ್ತಿನಾದ್ಯಂತ ಸುಮಾರು 60ರಿಂದ 80 ದಶಲಕ್ಷದಷ್ಟು ದಂಪತಿ ಇಂತಹ ಸಮಸ್ಯೆ ಎದುರಿಸುತ್ತಿದ್ದಾರಂತೆ. ಇದರಲ್ಲಿ 15ರಿಂದ 20 ದಶಲಕ್ಷ ದಂಪತಿ ಭಾರತದವರಾಗಿದ್ದಾರೆ.

ದೇಶದಲ್ಲಿನ ಶೇ. 10ರಷ್ಟು ದಂಪತಿ ಬೊಜ್ಜಿನಿಂದಾಗಿ ಬಂಜೆತನ ಎದುರಿಸುತ್ತಿದ್ದಾರೆ. ಬೊಜ್ಜನ್ನು ಹೊಂದಿದ್ದು, ಗರ್ಭಧಾರಣೆ ಬಗ್ಗೆ ಯೋಜನೆ ಹಾಕಿಕೊಂಡಿದ್ದರೆ ಆಗ ನೀವು ದೇಹದ ತೂಕವನ್ನು ಇಳಿಸಿಕೊಳ್ಳಬೇಕಾಗುತ್ತದೆ ಎಂದು ಐವಿಎಫ್ ತಜ್ಞರು ಹೇಳುತ್ತಾರೆ. ಬೊಜ್ಜಿನಿಂದ ಗರ್ಭಿಣಿಗೆ ಒಂದು ಸವಾಲು ಮಾತ್ರವಲ್ಲದೆ ಇದು ಗರ್ಭಧಾರಣೆಗೂ ಕಠಿಣವಾಗಲಿದೆ. ಗರ್ಭಧಾರಣೆಗೆ ಅಡ್ಡಿಯಾಗಬಲ್ಲ ಐದು ಪ್ರಮುಖ ಕಾರಣಗಳನ್ನು ಇಲ್ಲಿ ನೀಡಲಾಗಿದೆ.

ಗರ್ಭಿಣಿಯರಿಗೆ ಮನೆ ಸ್ವಚ್ಛಗೊಳಿಸಲು ಸಲಹೆಗಳು

1. ಬಂಜೆತನದ ಅಪಾಯ ಹೆಚ್ಚಿಸುತ್ತದೆ

1. ಬಂಜೆತನದ ಅಪಾಯ ಹೆಚ್ಚಿಸುತ್ತದೆ

ಬೊಜ್ಜಿನಿಂದಾಗಿ ಮಹಿಳೆಯರಲ್ಲಿನ ಸಾಮಾನ್ಯ ಹಾರ್ಮೋನುಗಳು ಬದಲಾವಣೆಯಾದಾಗ ಅಂಡೋತ್ಪತ್ತಿ ಮತ್ತು ಫಲವತ್ತತೆ ಮೇಲೆ ಪರಿಣಾಮ ಬೀರುತ್ತದೆ. ಇದು ಅಂಡಾಶಯಗಳ ಸಾಮಾನ್ಯ ಕ್ರಿಯೆಯ ಮೇಲೂ ಪರಿಣಾಮ ಬೀರುತ್ತದೆ. ಇದರಿಂದಾಗಿ ಅನಿಯಮಿತ ಅಥವಾ ವಿರಳ ಋತುಚಕ್ರ ಉಂಟಾಗಿ ಸಾಮಾನ್ಯ ಅಂಡೋತ್ಪತ್ತಿ ಮೇಲೆ ಪರಿಣಾಮ ಬೀರಬಹುದು. ಪುರುಷ ಹಾರ್ಮೋನುಗಳ ಬಿಡುಗಡೆಗೆ ಕಾರಣವಾಗುವ ಮಹಿಳೆಯ ಹೊಟ್ಟೆಯಲ್ಲಿರುವ ಕೊಬ್ಬು ಫಾಲಿಕಲೀಯ ಪಕ್ವತೆಯನ್ನು ತಡೆಯುತ್ತದೆ ಮತ್ತು ಇದರ ಪರಿಣಾಮ ಅಂಡೋತ್ಪತ್ತಿಯು ಕ್ಷೀಣಿಸುತ್ತದೆ.

2. ಫಲವತ್ತತೆ ಚಿಕಿತ್ಸೆ ಯಶಸ್ವಿಯಾಗಲ್ಲ

2. ಫಲವತ್ತತೆ ಚಿಕಿತ್ಸೆ ಯಶಸ್ವಿಯಾಗಲ್ಲ

ಬೊಜ್ಜು ಹೊಂದಿರುವ ಮಹಿಳೆ ಮೇಲೆ ನಡೆಸುವ ಐವಿಎಫ್ ಚಿಕಿತ್ಸೆಯು ಬೊಜ್ಜು ಇಲ್ಲದ ಮಹಿಳೆಯ ಮೇಲೆ ನಡೆಸುವ ಐವಿಎಫ್ ಚಿಕಿತ್ಸೆಗಿಂತ ಕಡಿಮೆ ಯಶಸ್ಸನ್ನು ಪಡೆಯುತ್ತದೆ. ಐವಿಎಫ್ ಚಿಕಿತ್ಸೆ ಯಶಸ್ವಿಯಾಗಲು ತೂಕ ಕಳೆದುಕೊಳ್ಳುವುದು ತುಂಬಾ ಮುಖ್ಯ.

3.ಗರ್ಭಪಾತದ ಅವಕಾಶ ಹೆಚ್ಚು

3.ಗರ್ಭಪಾತದ ಅವಕಾಶ ಹೆಚ್ಚು

ಬೊಜ್ಜು ಇದ್ದರೂ ಗರ್ಭಧರಿಸಿದ್ದೇ ಆದಲ್ಲಿ ಮಗುವನ್ನು ಉಳಿಸಿಕೊಳ್ಳುವುದು ತುಂಬಾ ಕಷ್ಟವಾಗಲಿದೆ. ಬೊಜ್ಜಿನಿಂದಾಗಿ ಮಹಿಳೆಯಲ್ಲಿ ಗರ್ಭಪಾತವಾಗುವ ಸಾಧ್ಯತೆ ಹೆಚ್ಚಿದೆ. ಬೊಜ್ಜಿರುವ ಮಹಿಳೆಯಲ್ಲಿ ಗರ್ಭಪಾತವಾದರೆ ಎರಡನೇ ಸಲ ಗರ್ಭಧರಿಸಲು ಆಕೆಗೆ ಕಷ್ಟವಾಗಲಿದೆ.

4. ಪಿಸಿಒಎಸ್ ಗೆ ಕಾರಣವಾಗಬಹುದು

4. ಪಿಸಿಒಎಸ್ ಗೆ ಕಾರಣವಾಗಬಹುದು

ಬೊಜ್ಜಿನಿಂದಾಗಿ ಅತಿಯಾದ ಇನ್ಸುಲಿನ್ ಉತ್ಪತ್ತಿಯಾಗಿ ಅದರಿಂದಾಗಿ ಅನಿಯಮಿತ ಅಂಡೋತ್ಪತ್ತಿಯಾಗಬಹುದು. ಬೊಜ್ಜು, ಇನ್ಸುಲಿನ್ ಉತ್ಪತ್ತಿಯ ಅತಿಯಾದ ಬಿಡುಗಡೆ ಮತ್ತು ಬಂಜೆತನದ ಪರಿಸ್ಥಿತಿಯನ್ನು ಪಾಲಿಸೈಟಿಕ್ ಓವರಿಯನ್ ಸಿಡ್ರಮ್(ಪಿಸಿಒಎಸ್) ಎಂದು ಕರೆಯಲಾಗುತ್ತದೆ. ಅನಿಯಮಿತ ಋತುಚಕ್ರ, ಅಂಡೋತ್ಪತ್ತಿ, ಬೊಜ್ಜು ಮತ್ತು ಪುರುಷ ಹಾರ್ಮೋನುಗಳ ಕುಂದುವಿಕೆಗೆ ವೈದ್ಯಕೀಯವಾಗಿ ಪಿಸಿಒಎಸ್ ಎಂದು ಕರೆಯಲಾಗುತ್ತದೆ.

5. ಇದರಿಂದ ಇತರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು

5. ಇದರಿಂದ ಇತರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು

ಬೊಜ್ಜನ್ನು ಹೊಂದಿರುವವರು ಜೀವನಶೈಲಿಯಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸಬಹುದು. ಇದರಲ್ಲಿ ಪ್ರಮುಖವೆಂದರೆ ರಕ್ತದ ಒತ್ತಡ, ಡಯಾಬಿಟಿಸ್, ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಹೊಂದುವುದು ಇತ್ಯಾದಿ. ಆರೋಗ್ಯಕ್ಕೆ ಸಂಬಂಧಪಟ್ಟ ಈ ಎಲ್ಲಾ ಸಮಸ್ಯೆಗಳು ಬೊಜ್ಜನ್ನು ಹೊಂದಿರುವ ಮಹಿಳೆಗೆ ದೊಡ್ಡ ಸವಾಲನ್ನೊಡ್ಡಲಿದೆ.

ಗರ್ಭಧಾರಣೆಗೆ ಮೊದಲು ತೂಕ ಕಳಕೊಳ್ಳಿ

ಗರ್ಭಧಾರಣೆಗೆ ಮೊದಲು ತೂಕ ಕಳಕೊಳ್ಳಿ

ನೀವು ಅತಿಯಾದ ತೂಕ ಹೊಂದಿದ್ದರೆ ನಿಮ್ಮ ತೂಕವನ್ನು ಕಡಿಮೆ ಮತ್ತು ನಿಯಂತ್ರಣಕ್ಕೆ ತರಲು ಪ್ರಯತ್ನಿಸಿ. ನಿಮ್ಮ ತೂಕದ ಶೇ. 15ರಷ್ಟು ತೂಕ ಕಳಕೊಂಡರು ಇದು ನೆರವಾಗುತ್ತದೆ. ಇದರಿಂದ ಯಾವುದೇ ಔಷಧಿ ಅಥವಾ ಚಿಕಿತ್ಸೆಯಿಲ್ಲದೆ ಗರ್ಭಧಾರಣೆ ಮಾಡಬಹುದು. ಪಿಸಿಒಡಿ ಹೊಂದಿರುವ ಮಹಿಳೆಯರು ತಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಯಾವುದೇ ಚಿಕಿತ್ಸೆಯಿಲ್ಲದೆ ಗರ್ಭಧಾರಣೆ ಮಾಡಬಹುದು ಮತ್ತು ಹೆರಿಗೆಗೂ ಸಮಸ್ಯೆಯಿಲ್ಲ ಎಂದು ಡಾ. ಗುಪ್ತಾ ಅವರು ಹೇಳುತ್ತಾರೆ. ವೇಗವಾಗಿ ನಡೆಯುವುದು, ಏರೋಬಿಕ್ ವ್ಯಾಯಾಮ ಮತ್ತು ಅಕ್ವಾ ವರ್ಕ್ ಔಟ್ ನಂತಹ ಹಲವಾರು ವ್ಯಾಯಾಮಗಳನ್ನು ಆಯ್ದುಕೊಂಡು ಬೇಗನೆ ಫಲಿತಾಂಶ ಪಡೆಯಬಹುದು.

ದುರಾಭ್ಯಾಸ ತ್ಯಜಿಸಿ

ದುರಾಭ್ಯಾಸ ತ್ಯಜಿಸಿ

ಆರೋಗ್ಯಕರ ಗರ್ಭಧಾರಣೆ ಮತ್ತು ಫಲವತ್ತತೆಗೆ ದೇಹದ ತೂಕದೊಂದಿಗೆ ಧೂಮಪಾನ ಮತ್ತು ಮಧ್ಯಪಾನವನ್ನು ತ್ಯಜಿಸುವುದು ತುಂಬಾ ಮುಖ್ಯ. ಇಂತಹ ದುರಾಭ್ಯಾಸ ನಿಮ್ಮಲ್ಲಿದ್ದರೆ ಆರೋಗ್ಯಕರ ಗರ್ಭಧಾರಣೆಗಾಗಿ ಇದನ್ನು ತ್ಯಜಿಸಬೇಕೆಂದು ಸಲಹೆ ಮಾಡಲಾಗುತ್ತದೆ.

ಆರೋಗ್ಯಕರ ಆಹಾರಕ್ರಮ ಪಾಲಿಸಿ

ಆರೋಗ್ಯಕರ ಆಹಾರಕ್ರಮ ಪಾಲಿಸಿ

ಬೆಳಗ್ಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ಯಾವತ್ತೂ ತ್ಯಜಿಸಬೇಡಿ. ಊಟದ ಮಧ್ಯೆ ಹಗುರವಾದ ತಿಂಡಿಗಳನ್ನು ತಿನ್ನಿ. ಅಧಿಕ ಮಟ್ಟದ ಸಕ್ಕರೆ ಮತ್ತು ಕೊಬ್ಬನ್ನು ಹೊಂದಿರುವ ಆಹಾರ ಅಥವಾ ನೀರನ್ನು ಸೇವಿಸಬೇಡಿ. ಹಣ್ಣುಗಳು, ಹಸಿರೆಳೆ ತರಕಾರಿ ಮತ್ತು ಸಲಾಡ್ ಗಳನ್ನು ಹೆಚ್ಚಾಗಿ ಸೇವಿಸಿ.

ಐವಿಎಫ್ ಸ್ಪೆಷಲಿಸ್ಟ್ ಸಲಹೆ ಪಡೆಯಿರಿ

ಐವಿಎಫ್ ಸ್ಪೆಷಲಿಸ್ಟ್ ಸಲಹೆ ಪಡೆಯಿರಿ

ನೀವು ಪ್ರತಿಯೊಂದನ್ನು ಪ್ರಯತ್ನಿಸಿ ಮತ್ತು ತೂಕ ಕಳೆದುಕೊಳ್ಳುವ ಕ್ರಮವನ್ನು ಪಾಲಿಸುತ್ತಿದ್ದರೂ ಯಾವುದೇ ಪ್ರಯೋಜವಾಗುತ್ತಿಲ್ಲವೆಂದಾದರೆ ನೀವು ಐವಿಎಫ್ ಸ್ಪೆಷಲಿಸ್ಟ್ ನ್ನು ಭೇಟಿಯಾಗಿ ನಿಮ್ಮ ಆರೋಗ್ಯ ಮತ್ತು ಗರ್ಭಧಾರಣೆಯ ಅವಕಾಶವನ್ನು ಪರೀಕ್ಷಿಸಿಕೊಳ್ಳಿ.

ನಿಮ್ಮ ಸಂಗಾತಿಯ ಆರೋಗ್ಯ ಪರೀಕ್ಷಿಸಿ

ನಿಮ್ಮ ಸಂಗಾತಿಯ ಆರೋಗ್ಯ ಪರೀಕ್ಷಿಸಿ

ಬೊಜ್ಜು ನಿಮ್ಮ ಫಲವತ್ತತೆಗೆ ಅಡ್ಡಿಯಾಗಬಹುದು. ಆದರೆ ಗರ್ಭಧಾರಣೆ ಮಾಡಬೇಕಾದರೆ ನಿಮ್ಮ ಸಂಗಾತಿಯ ಆರೋಗ್ಯ ಕೂಡ ತುಂಬಾ ಮುಖ್ಯವೆಂದು ನೀವು ಗಮನಿಸಿ. ನಿಮ್ಮಂತೆ ನಿಮ್ಮ ಸಂಗಾತಿ ಕೂಡ ಅತಿಯಾದ ತೂಕವನ್ನು ಹೊಂದಿದ್ದರೆ ತೂಕ ಕಳೆದುಕೊಳ್ಳಲು ಹೇಳಿ. ಸ್ಪೆಷಲಿಸ್ಟ್ ಗಳನ್ನು ಭೇಟಿಯಾಗಿ ಗರ್ಭಧಾರಣೆಗೆ ಬೇಕಾದ ಜೀವನಶೈಲಿ ಪಾಲಿಸಲು ತಿಳಿಸಿ.

English summary

5 ways obesity affects your chances of getting pregnant

Shilpi Sachdeva who is in her early 30s, a housewife, had been trying to get pregnant for the past two years with no results. The Sachdeva couple decided to consult an IVF specialist for help after repeated failed attempts in conceiving.
Story first published: Saturday, April 19, 2014, 15:14 [IST]
X
Desktop Bottom Promotion