For Quick Alerts
ALLOW NOTIFICATIONS  
For Daily Alerts

ಹೆರಿಗೆ ಸಮಯದಲ್ಲಿ ಹೆಂಗಸಿಗೆ ಹೇಳಲೆಬಾರದಂತಹ 5 ವಿಷಯಗಳು

By Deepak M
|

ತಾಯಿಯಾಗುವುದು ಎಲ್ಲ ಹೆಂಗಸರ ಕನಸು. ಆ ಕನಸು ಚಿಗುರೊಡೆದು, ಕಾಯಾಗಿ, ಹಣ್ಣಾಗಿ ಹಸುಗೂಸಾಗಿ ಕೈಗೆ ಬರುವವರೆಗು ಕಾತರ, ಖುಷಿ, ತಳಮಳ ಎಲ್ಲ ಇರುತ್ತದೆ. ಆದರೆ ಇಡೀ ಗರ್ಭಾವಧಿಯಲ್ಲಿ ಹೆರಿಗೆ ನೋವು ಎಂಬುದು ಯಾವ ಹೆಂಗಸಿಗು ಅಪ್ಯಾಯಮಾನಕಾರವಾದ ಅಂಶವಾಗಿರುವುದಿಲ್ಲ. ಏಕೆಂದರೆ ಈ ಪ್ರಕ್ರಿಯೆಯು ಹಲವಾರು ಮಹಿಳೆಯರಿಗೆ ಅಗಾಧವಾದ ಸಂಕಷ್ಟವನ್ನು , ನಿತ್ರಾಣಗೊಳಿಸುವಷ್ಟು ಸುಸ್ತನ್ನು ನೀಡುತ್ತದೆ. ಆದರೆ ಈ ಪ್ರಕ್ರಿಯೆಯಲ್ಲಿ ಸ್ವಲ್ಪ ಆರಾಮವನ್ನು ನೀಡುವ ಕೆಲವು ಪರಿಹಾರಗಳನ್ನು ತಕ್ಷಣದಲ್ಲಿ ಒದಗಿಸಬಹುದು.

ನೋವು ಕಡಿಮೆ ಮಾಡುವ ಔಷಧಿಗಳು, ಅಕ್ಯೂಪ್ರೆಶ್ಶ್‌ರ್, ಬೆನ್ನಿಗೆ ಮಸಾಜ್, ಎಪಿಡುರಲ್ ಮುಂತಾದ ಪರಿಹಾರಗಳನ್ನು ಹೆರಿಗೆ ನೋವನುಭವಿಸುತ್ತಿರುವ ಹೆಂಗಸರಿಗೆ ನೀಡಬಹುದು. ಆದರೆ ಸಾಮಾನ್ಯವಾಗಿ ಹೆಂಗಸಿಗೆ ಈ ನೋವಿಗಿಂತ ಹೆಚ್ಚಾಗಿ ಮಾತಿನಿಂದಾಗಿಯೇ ಹೆಚ್ಚಿನ ನೋವು ಉಂಟಾಗುವ ಸಾಧ್ಯತೆಗಳೇ ಹೆಚ್ಚು.

ಆಕೆಯ ಸಂಗಾತಿ, ಅಥವಾ ಅವರ ಆರೈಕೆಯನ್ನು ನೋಡಿಕೊಳ್ಳುವವರು ಈ ಸಮಯದಲ್ಲಿ ಏನು ಹೇಳಬೇಕು ಅಥವಾ ಏನು ಹೇಳಬಾರದು ಎಂಬ ಚಡಪಡಿಕೆಯನ್ನು ಹೊಂದಿರುತ್ತಾರೆ. ಅದಕ್ಕಾಗಿ ಹೆರಿಗೆ ನೋವಿನಲ್ಲಿರುವ ಹೆಂಗಸರಿಗೆ ಸಹ್ಯವಾಗದಂತ ಮಾತುಗಳು ಯಾವುವು ಎಂಬುದನ್ನು ನಾವಿಲ್ಲಿ ಹಂಚಿಕೊಂಡಿದ್ದೇವೆ. ಓದಿ ತಿಳಿದುಕೊಳ್ಳಿ ಖಂಡಿತ ನಿಮಗೆ ಮುಂದೆ ಸಹಾಯಕ್ಕೆ ಬಂದೇ ಬರುತ್ತವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಸಾಮಾನ್ಯ ಗರ್ಭಧಾರಣೆಯ ತೊಂದರೆಗಳು

ನಿನ್ನ ಹೊಟ್ಟೆ ಇನ್ನು ಹಿಗ್ಗಿಲ್ಲ;

ನಿನ್ನ ಹೊಟ್ಟೆ ಇನ್ನು ಹಿಗ್ಗಿಲ್ಲ;

ಈ ವಿಷಯದ ಬಗ್ಗೆ ನಿಮಗೆ ಇನ್ನೂ ಗೊತ್ತಿಲ್ಲವೆಂದಾದಲ್ಲಿ ನಿಮ್ಮ ವೈಧ್ಯರನ್ನು ಕೇಳಿ ತಿಳಿದುಕೊಳ್ಳಿ. ಏಕೆಂದರೆ ಈ ಮಾಹಿತಿ ನಿಮಗೆ ಅತ್ಯಾವಶ್ಯಕವದೆ.ಗಿ ಬೇಕಾಗುವುದು. ಗರ್ಭಿಣಿಯಾಗಿರುವ ಹೆಂಗಸರಿಗು ಸಹ ಈ ವಿಚಾರದ ಅರಿವು ಇರುತ್ತದೆ. ತಮಗೆ ಸ್ವಾಭಾವಿಕವಾಗಿ ಹೆರಿಗೆಯಾಗಬೇಕೆಂದರೆ ತಮ್ಮ ಗರ್ಭವು ಹಿಗ್ಗಿ ಕೆಳಗೆ ಬರಬೇಕು ಎಂಬುದು ಅವರಿಗೂ ಗೊತ್ತು, ಅದಕ್ಕಾಗಿ 4 ರಿಂದ 24 ಗಂಟೆ ತಗುಲಬಹುದು ( ನಾವಿಲ್ಲಿ ತಮಾಷೆ ಮಾಡುತ್ತಿಲ್ಲ). ಈ ಸಮಯದಲ್ಲಿ ನೀವು ಹೋಗಿ, ನಿನ್ನ ಗರ್ಭಾಶಯವು ಇನ್ನು ಹಿಗ್ಗಿಲ್ಲ, ಸ್ವಲ್ಪ ಕಷ್ಟವಾಗುತ್ತಿದೆ ಎಂದು ಹೇಳಿದರೆ ಆಕೆಯ ಮಾನಸಿಕ ಒತ್ತಡವು ಮತ್ತಷ್ಟು ಹೆಚ್ಚಾಗುತ್ತದೆ. ಒಂದು ವಿಚಾರ ನೆನಪಿರಲಿ ಮಾನಸಿಕ ಒತ್ತಡವು ಹೆರಿಗೆ ನೋವಿನಲ್ಲಿರುವ ಹೆಂಗಸಿಗೆ ಒಳ್ಳೆಯ ಸಂಗಾತಿಯಲ್ಲ.

ಸಹಾಯ ಮಾಡುವುದು ಹೇಗೆ :

ಹೆರಿಗೆ ನೋವು ಎಂಬುದು ನಿಜಕ್ಕು ಯಾತನಮಯವಾದ ಪ್ರಕ್ರಿಯೆಯಾಗಿರುತ್ತದೆ. ಅದೇನು ಆರಂಭದಲ್ಲಿಯೇ ಅಥವಾ ಅಂತ್ಯದಲ್ಲಿಯೇ ಎಂಬ ಭೇದ ಭಾವವಿರುವುದಿಲ್ಲ. ಹಾಗೆಂದು ನೀವೇನು ಕೈಚೆಲ್ಲಿ ಕೂರಬೇಡಿ. ಆಕೆಯ ಪ್ರತಿಕ್ರಿಯೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರಿ. ಆಕೆಯು ಬೆವರುತ್ತಿದ್ದರೆ ಏಸಿ ಆನ್ ಮಾಡಿ ಅಥವಾ ಫೇಸ್ ಸ್ಪಾಂಜ್ ತೆಗೆದುಕೊಂಡು ತಣ್ಣನೆಯ ನೀರಿನಲ್ಲಿ ಅದ್ದಿ ಆಕೆಯ ಮುಖವನ್ನು ಒರೆಸಿ. ಆಕೆಯ ನೋವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ಮೃದುವಾಗಿ ಮಸಾಜ್ ಮಾಡಿ. ಒಂದು ವಿಚಾರ ನೆನಪಿಡಿ, ಈ ಎಲ್ಲಾ ಅಂಶಗಳನ್ನು ಮಾಡುವ ವಿಶ್ವಾಸವಿದ್ದಲ್ಲಿ ಮಾತ್ರ ಮಾಡಿ. ಏಕೆಂದರೆ ಪ್ರಸವ ಪೂರ್ವ ಅವಧಿಯಲ್ಲಿಯೇ ಇವುಗಳನ್ನು ನೀವು ಪ್ರಯತ್ನಿಸಿದ್ದಲ್ಲಿ ಈಗ ನಿಮಗೆ ಸಹಕಾರಿಯಾಗುತ್ತದೆ.

ಆಯಾಸ ಮಾಡ್ಕೋಬೇಡ,

ಆಯಾಸ ಮಾಡ್ಕೋಬೇಡ,

ಮುಂದೆ ಇನ್ನು ಸ್ವಲ್ಪ ತಾಕತ್ ಬೇಕಾಗುತ್ತೆ; ಹೆರಿಗೆ ನೋವಿನ ಸಂದರ್ಭದಲ್ಲಿ ಹೆಂಗಸರು ಕಿರುಚುವುದು, ಅಳುವುದು ಮತ್ತು ಕೋಪೋದ್ರೇಕದಿಂದ ವರ್ತಿಸುವುದು ಸಾಮಾನ್ಯ. ಈ ಪರಿಸ್ಥಿತಿಯನ್ನು ನಿಭಾಯಿಸಲು ನಿಮಗೆ ಬಂದರೆ ಸರಿ, ಬರಲಿಲ್ಲವಾದಲ್ಲಿ ಯಾರಾದರು ಆಯಾ ಅಥವಾ ಶುಶ್ರೂಶಕಿಯನ್ನು ನೇಮಿಸಿ. ಹೆರಿಗೆ ನೋವಿನಲ್ಲಿರುವ ಹೆಂಗಸಿಗೆ ತಾನು ಇನ್ನೂ ಯಾವ ಹಂತದ ನೋವನ್ನು ಅನುಭವಿಸುತ್ತಿದ್ದೇನೆ ಎಂಬುದು ಮುಖ್ಯವಾಗಿರುವುದಿಲ್ಲ. ಯಾವ ಹಂತವಾದರು ಸರಿ ಆಕೆಗೆ ಸಹಿಸಲಸಾಧ್ಯವಾದ ನೋವು ಆಕೆಯನ್ನು ಕಾಡುತ್ತಿರುತ್ತದೆ. ಇದು ಆಕೆಯನ್ನು ಮತ್ತು ಆಕೆಯ ಇಂದ್ರೀಯಗಳನ್ನು ಅಸೌಖ್ಯಕ್ಕೆ ಗುರಿಮಾಡುತ್ತದೆ. ಇದೆಲ್ಲ ಸೇರಿ ಆಕೆಯು ಹಿಂಡಿ ಹಿಪ್ಪೆಯಂತಾಗಿ ಬಿಟ್ಟಿರುತ್ತಾಳೆ.

ಸಹಾಯ ಮಾಡುವುದು ಹೇಗೆ:

ಸಹಾಯ ಮಾಡುವುದು ಹೇಗೆ:

ಆಕೆಯ ಕೋಪೋದ್ರೇಕಕ್ಕೆ ಪ್ರತಿಕ್ರಿಯೆ ತೋರಬೇಡಿ, ತಾಳ್ಮೆಯನ್ನು ಕಾಪಾಡಿಕೊಳ್ಳಿ. ಇಲ್ಲಿ ನೀವು ಮೂಕ ಪ್ರೇಕ್ಷಕನಂತೆ ನೋಡುವುದರ ಹೊರತಾಗಿ ಮತ್ತೇನು ಮಾಡುವುದಕ್ಕಾಗುವುದಿಲ್ಲ. ಹೆರಿಗೆ ನೋವು ಅನುಭವಿಸುತ್ತಿರುವ ಕೆಲವು ಹೆಂಗಸರು ತಮ್ಮನ್ನು ಮುಟ್ಟಲು ಸಹ ಬಿಡುವುದಿಲ್ಲ. ಆಗಾಗಿ ನೀವು ಇಂತಹ ಹೆಂಗಸರೊಂದಿಗೆ ಸ್ವಲ್ಪ ನಯವಾಗಿ ಮತ್ತು ಜಾಗರೂಕತೆಯಿಂದ ವ್ಯವಹರಿಸಬೇಕು. ಯಾವುದೇ ರೀತಿಯಲ್ಲಿ ಆಕೆಯ ಉದ್ವೇಗವನ್ನು ಮತ್ತಷ್ಟು ಹೆಚ್ಚಿಸುವ ಗೋಜಿಗೆ ಹೋಗಬಾರದು.

ನೀನು ಮಗುವನ್ನು ಆಯಾಸ ಮಾಡುತ್ತಿದ್ದೀಯಾ;

ನೀನು ಮಗುವನ್ನು ಆಯಾಸ ಮಾಡುತ್ತಿದ್ದೀಯಾ;

ಮೊದಲು ಈ ಮಾತನ್ನು ಹೇಳುವುದನ್ನು ನಿಲ್ಲಿಸಿ. ಆಕೆಯು ತನಗೆ ಹುಟ್ಟುವ ಮಗುವಿನ ಸಲುವಾಗಿ ಎಷ್ಟೆಲ್ಲ ಕಷ್ಟಗಳನ್ನು ಅನುಭವಿಸಿದ್ದಾಳೆ ಮತ್ತು ಅನುಭವಿಸುತ್ತಿದ್ದಾಳೆ ಎಂಬುದರ ಅರಿವು ನಿಮಗಿರುವುದಿಲ್ಲ. ಆಗಾಗಿ ದಯವಿಟ್ಟು ಈ ಮಾತನ್ನು ಹೇಳಬೇಡಿ. ಯಾವುದನ್ನು ಆಕೆ ಬೇಕೆಂದೆ ಮಾಡುತ್ತಿಲ್ಲ, ಪ್ರಸ್ತುತ ಪರಿಸ್ಥಿತಿಯನ್ನು ಆಕೆಯು ನಿಯಂತ್ರಿಸಲು ಮತ್ತು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ,ಆಗಾಗಿ ಆಕೆ ಹಾಗೆ ವರ್ತಿಸುತ್ತಿದ್ದಾಳೆ ಎಂಬುದನ್ನು ತಿಳಿದುಕೊಳ್ಳಿ. ಯಾವುದೇ ಕಾರಣಕ್ಕು ಮಗುವಿನ ವಿಚಾರವನ್ನು ಅಡ್ಡ ಇಟ್ಟುಕೊಂಡು ಆಕೆಗೆ ಭಯವನ್ನುಂಟು ಮಾಡಲು ಹೋಗಬೇಡಿ.

ಸಹಾಯ ಮಾಡುವುದು ಹೇಗೆ;

ಆಕೆಯನ್ನು ಸಮಾಧಾನಪಡಿಸಲು ಮತ್ತು ಆಕೆಗೆ ಆರಾಮವನ್ನು ಒದಗಿಸಲು ನೀವು ಮಾಡಿದ ಪ್ರಯತ್ನಗಳೆಲ್ಲವು ಫಲ ನೀಡಲಿಲ್ಲವೇ ಬಿಡಿ. ಆಕೆಗೆ ಅದು ತನ್ನಷ್ಟಕ್ಕೆ ತಾನೇ ಅರ್ಥವಾಗುತ್ತದೆ. ನೀವು ಆಕೆಯೊಂದಿಗೆ ನೋವನ್ನು ಹಂಚಿಕೊಂಡಿರಿ ಎಂಬ ಭಾವನೆಯೇ ಆಕೆಗೆ ಧೈರ್ಯ ನೀಡುತ್ತದೆ.

ತಳ್ಳು , ನೂಕು, ಇನ್ನು ಸ್ವಲ್ಪ ಪುಶ್ ಮಾಡು;

ತಳ್ಳು , ನೂಕು, ಇನ್ನು ಸ್ವಲ್ಪ ಪುಶ್ ಮಾಡು;

ಇದು ಪ್ರಸವ ಕೋಣೆಯಲ್ಲಿ ವೈಧ್ಯರು ಅಥವಾ ನಿರ್ಭಾವುಕ ಅಟೆಂಡರ್ ಹೇಳಬಹುದಾದ ಮಾತು. ಈ ಮಾತು ಅವರಿಗೆ ಯಾದೃಚ್ಛಿಕವಾಗಿ ಬರುತ್ತದೆ. ಮಗುವನ್ನು ಬೇಗ ಹೆತ್ತು ಅದರ ಕಣ್ಣಿನಲ್ಲಿ ತನ್ನ ಪ್ರತಿಬಿಂಬ ನೋಡುವ ಕಾತರ ತಾಯಿಗೆ ಒಂಬತ್ತು ತಿಂಗಳಿಗಿಂತ ಹಿಂದಿನಿಂದಲೆ ಆರಂಭವಾಗಿರುವುದಿಲ್ಲವೇ? ಆಕೆಯು ಪ್ರಯತ್ನಿಸುತ್ತಿರುತ್ತಾಳೆ. ಹಾಗೆಂದು ಆಕೆಗೆ ನಿರ್ದೇಶನಗಳನ್ನು ನೀಡಲು ಹೋಗಬೇಡಿ. ಆಕೆಯ ಕಷ್ಟವನ್ನು ಅರಿತು ತಾಳ್ಮೆಯನ್ನು ಕಾಪಾಡಿಕೊಳ್ಳಿ. ಪ್ರಸವ ಸುಗಮವಾಗುತ್ತದೆ.

ಹೇಗೆ ಸಹಾಯ ಮಾಡುವುದು;

ವೈಧ್ಯರು ಮತ್ತು ಶುಶ್ರೂಶಕಿಯ ಮೇಲೆ ರೇಗಲು ಹೋಗಬೇಡಿ. ಆಕೆಯ ಕಿವಿಯ ಬಳಿ ಮೆತ್ತಗೆ ಹೇಳಿ ಚೆನ್ನಾಗಿ ಉಸಿರಾಡು ಎಂದು. ಆಕೆಯು ಚೆನ್ನಾಗಿ ಉಸಿರಾಡಲು ಪ್ರೇರೇಪಿಸಿ. ನಿಮ್ಮ ಮಾತುಗಳನ್ನು ಆಕೆ ಕೇಳುತ್ತಾಳೋ, ಇಲ್ಲವೋ, ಅದು ಬೇರೆ ಮಾತು ಆದರೆ ನಿಮ್ಮ ಕರ್ತವ್ಯ ನೀವು ಮಾಡಿ. ಆದರೆ ಈ ಸಂದರ್ಭದಲ್ಲಿ ನೀವು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಆಕೆಯು ಗರ್ಭಿಣಿಯಾಗಿರುವಾಗಲೇ ತಿಳಿದುಕೊಂಡಿರಿ. ಸಾಧ್ಯವಾದರೆ ಇದರ ಸಂಬಂಧ ಕೆಲವು ತರಗತಿಗಳಿಗೆ ಹಾಜರಾಗಿ ಕಲಿತುಕೊಳ್ಳಿ.

English summary

5 things you shouldn’t say to a woman in labour

Labour definitely isn’t the most fascinating part of pregnancy and we all know that. The entire process of labour is debilitating, distressing and overwhelming for most women.
Story first published: Saturday, April 5, 2014, 14:55 [IST]
X
Desktop Bottom Promotion