For Quick Alerts
ALLOW NOTIFICATIONS  
For Daily Alerts

ಗರ್ಭಧಾರಣೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 5 ಸತ್ಯಗಳು

By Poornima heggade
|

ನಿಮ್ಮ ಮೊದಲ ಗರ್ಭಧಾರಣೆಯ ಸಂತೋಷದ ವಿಷಯವನ್ನು ಮನೆಯವರೊಂದಿಗೆ ಹೇಳಿದಾಗಿನಿಂದ ಅವರು ಸಾಕಷ್ಟು ಸಲಹೆಗಳನ್ನು ನಿಮಗೆ ನೀಡುತ್ತಾರೆ. ಆದರೆ ಅವರು ಹೇಳದೇ ಉಳಿದ ಹಲವು ವಿಷಯಗಳನ್ನು ನೀವಾಗಿಯೇ ತಿಳಿದುಕೊಳ್ಳಬೇಕು. ಮೊದಲ ಗರ್ಭಧಾರಣೆ, ಅತ್ಯಂತ ಕುತೂಹಲ, ಉತ್ಸಾಹ ಮತ್ತು ಭಯದ ಜೊತೆಗೂಡಿದ ಸಂಭ್ರಮ. ಗರ್ಭಾವಸ್ಥೆಯ ಬಗ್ಗೆ ಎಷ್ಟೇ ಎಚ್ಚರಿಕೆಯನ್ನು ವಹಿಸಿದರೂ ಎಷ್ಟೇ ವಿಷಯಗಳನ್ನು ತಿಳಿದುಕೊಂಡಿದ್ದರೂ ಇನ್ನೂ ಹಲವು ವಿಷಯಗಳು ನಿಮಗೆ ಗೊತ್ತಿಲ್ಲದೇ ಇರಬಹುದು!

ಗರ್ಭಾವಸ್ಥೆಯಲ್ಲಿ ಮಹಿಳೆ ಮಾಡುವ 5 ಸಾಮಾನ್ಯ ತಪ್ಪುಗಳು

5 Hidden truths about motherhood

ಅಪಾಯಕಾರಿ ಕನಸು
ಜಗತ್ತಿನಲ್ಲಿ ಎಲ್ಲವೂ ಸುರಕ್ಷಿತ ಎಂದು ಹೇಳಲು ಸಾಧ್ಯವಿಲ್ಲ. ಆದರೆ ನಿಮ್ಮ ಪುಟ್ಟ ಕಂದಮ್ಮ ಹುಟ್ಟಿದಾಗಿನಿಂದ ಅದರ ಸುರಕ್ಷತೆಯ ಬಗ್ಗೆ ನೀವು ಇನ್ನಿಲ್ಲದಷ್ಟು ಗಮನವಹಿಸುತ್ತೀರಿ. ನಿಮ್ಮ ಕುಟುಂಬದ ಸದಸ್ಯರು ಅಥವಾ ಸ್ನೇಹಿತರು ಮಗುವನ್ನು ಎತ್ತಿಕೊಳ್ಳಲು ಬಂದರೆ ಅವರ ಕೈಗಳಲ್ಲಿ ಕೊಳೆಗಳಿರುವಂತೆ ನಿಮಗೆ ಭಾಸವಾಗುತ್ತದೆ. ನಿಮಗೆ ನಿಮ್ಮ ಮಗುವಿನ ರಕ್ಷಣೆ ಈ ಸಂದರ್ಭದಲ್ಲಿ ಅತ್ಯಂತ ಅಗತ್ಯ. ಸುತ್ತಮುತ್ತಲಿನ ಧೂಳು, ವಿಶಾನಿಲಗಳು ನಿಮ್ಮ ಮಗುವನ್ನು ಆವರಿಸಿದಂತೆ ಭಾವಿಸಿ ನಿಮ್ಮ ಎದೆಬಡಿತ ಹೆಚ್ಚಾಗುತ್ತದೆ. ಮಗುವು ಆಟವಾಡುವ ಆಟಿಕೆಗಳಿಂದ ಹಿಡಿದು ಅದು ಸೇವಿಸುವ ಆಹಾರದ ಪ್ರತಿ ತುತ್ತಿನಲ್ಲೂ ರಾಸಾಯನಿಕಗಳು, ಕ್ರೀಮಿ ಕೀಟಗಳಿರಬಹುದೆಂದು ಭಯಗೊಳ್ಳುತ್ತೀರಿ. ಅದರ ಬಗ್ಗೆಯೇ ಸಾಕಷ್ಟು ಯೋಚಿಸುತ್ತೀರಿ. ಆದರೆ ಇದು ಎಲ್ಲಾ ತಾಯಂದಿರಲ್ಲೂ ಸಂಭವಿಸುವಂತದ್ದು. ನಿಮಗೂ ಹೀಗನ್ನಿಸಿದ್ದಲ್ಲಿ ಭಯಗೊಳ್ಳುವ ಅಗತ್ಯವಿಲ್ಲ. ಆದರೆ ವಾಸ್ತವ ನಿಮಗರಿವಾದಾಗ ಮನಸ್ಸು ಶಾಂತವಾಗುತ್ತದೆ. ಸುತ್ತಲಿನ ಈ ಸಮಸ್ಯೆಗಳಿಂದ ದೂರವಾಗಲು ಸಾಧ್ಯವಿಲ್ಲ ಆದರೆ ನಿಮ್ಮ ಮಗುವನ್ನು ಸಂರಕ್ಷಿಸಲು ಸ್ವಲ್ಪ ಎಚ್ಚರಿಕೆಬೇಕು ಅಷ್ಟೆ!

ಗರ್ಭಿಣಿ ಪತ್ನಿಯ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಹೇಗೆ?

ಬೇರೆಕಡೆ ಗಮನ ಹರಿಸುವುದು
ಮಗು ಹೊಟ್ಟೆಯಲ್ಲಿರುವ ಒಂಬತ್ತು ತಿಂಗಳ ಅವಧಿಯಲ್ಲಿ ನೀವು ಇತರರಿಗೆ ವಿಶೇಷವಾಗಿ ಕಾಣಿಸುತ್ತೀರಿ. ವಿಶೇಷ ಕಾಳಜಿಯನ್ನೂ ಮಾಡುತ್ತಾರೆ. ನಿಮ್ಮ ಆರೋಗ್ಯದ ಬಗ್ಗೆ ಕುಟುಂಬದವರು, ಸ್ನೇಹಿತರು ಆಗಾಗ್ಗೆ ವಿಚಾರಿಸುತ್ತಾರೆ. ನಿಮ್ಮ ಮಗುವಿನ ಜನನದ ನಂತರ ನಿಮ್ಮ ಜವಾಬ್ದಾರಿಯನ್ನು ಯಾರೂ ಹೇಳುವುದಿಲ್ಲ. ಆದರೆ ನಿಮಗೆ ಆ ಜವಾಬ್ದಾರಿಯ ಅರಿವಾಗುತ್ತಿರುತ್ತದೆ. ಮಗುವಿನ ಜನನವಾದ ನಂತರ ನಿಮ್ಮ ಕೆಲಸ ಮಗುವನ್ನು ಸಲಹುವುದು. ಇಲ್ಲಿಂದ ನಿಮ್ಮ ಮೊದಲ ಸ್ಥಾನ ಮಗುವಿಗೆ! ಎಲ್ಲರ ಗಮನ ಮಗುವಿನ ಮೇಲೆ. ಅದರ ಆಟ ಪಾಠಗಳ ನಡುವೆ ನೀವು ಕಳೆದೇಹೋಗುತ್ತೀರಿ!

ಸ್ತನ್ಯಪಾನ ಅಷ್ಟು ಸುಲಭವಲ್ಲ
ಸ್ತನ್ಯಪಾನ ಸುಲಭ ಹಾಗೂ ಅದು ನೈಸರ್ಗಿಕ ಎಂದು ಭಾವಿಸಿದ್ದರೆ ಇದು ಅಕ್ಷರಶಃ ತಪ್ಪು. ತಾಯ್ತನದ ಅತ್ಯಂತ ಕಠಿಣ ಹಾಗೂ ಸವಾಲಿನ ಹಂತ ಇದು. ಮಗು ತಾನಾಗಿಯೇ ಹಾಲು ಕುಡಿಯುವುದನ್ನು ಕಲಿತಿರುವುದಿಲ್ಲ. ಅದನ್ನು ನೀವೇ ಕಲಿಸಬೇಕು. ಎದೆಯಲ್ಲಿ ಹಾಲಿಲ್ಲದೇ ಇರುವುದು ಅಥವಾ ಯಾವುದಾದರೂ ಸೋಂಕು ತಗಲುವುದು ಇಂತಹ ಹಲವು ಸಮಸ್ಯೆಗಳೊಂದಿಗೆ ನೀವು ಹೋರಾಡಬೇಕಾಗುತ್ತದೆ. ಇಡೀ ರಾತ್ರಿ ನಿದ್ದೆಯಿಲ್ಲದೇ ಪರಿತಪಿಸಬೇಕಾಗುತ್ತದೆ. ಈ ಎಲ್ಲಾ ಪರಿಸ್ಥಿತಿಗಳನ್ನು ನೀವಾಗಿಯೇ ನಿರ್ವಹಿಸಬೇಕು.
ಈ ಎಲ್ಲಾ ಸಮಸ್ಯೆಗಳು ಎದುರಾದಾಗ ನಿವು ಸರಿಯಾದ ತಾಯಿಯಲ್ಲ ಎಂದೇಲ್ಲಾ ಯೋಚಿಸುವ ಬದಲು ಈ ಸಮಸ್ಯೆಗಳನ್ನು ಎದುರಿಸಲು ವೈದ್ಯರ ಅಥವಾ ದಾದಿಯರ ಸಲಹೆಕೇಳಿ. ಸರಿಯಾದ ಆಹಾರ ಸೇವನೆ, ಅಧಿಕ ನೀರು ಕುಡಿಯುವುದನ್ನು ಮರೆಯದಿರಿ. ಅಸಮರ್ಪಕ ಸ್ತನ್ಯಪಾನ ಮನೋರೋಗಕ್ಕೆ ಕಾರಣವಾಗುತ್ತದೆ ಎನ್ನುವ ಭಯ ಬೇಡ. ಸರಿಯಾದ ಸಲಹೆಯನ್ನು ಪಡೆದು ನಿಮ್ಮ ಕಾರ್ಯವನ್ನು ನಿರ್ವಹಿಸಿ.

ಬದಲಾದ ಕಾರ್ಯ
ತಾಯಿಯಾಗುವುದಕ್ಕೂ ಮೊದಲು ನಿಮ್ಮ ಕಾರ್ಯಗಳು ಹಲವು. ಪ್ರತಿಯೊಂದು ಕಾರ್ಯವನ್ನೂ ಸಾರಾಸಗಟಾಗಿ ನಿಭಾಯಿಸುತ್ತಿದ್ದಿರಿ. ಆದರೆ ಮಗು ಜನನವಾದ ನಂತರ ನಿಮ್ಮ ಯೋಚನೆಗಳು, ಕಾರ್ಯಗಳೂ ಎಲ್ಲವೂ ಬದಲಾಗುತ್ತದೆ. ನಿಮ್ಮ ಮಗುವಿನ ಬಗ್ಗೆಯೇ ಸದಾ ಯೋಚಿಸುತ್ತೀರಿ. ಮಗುವಿಗೆ ಬಳಸುವ ಸೋಪ್ ಇತ್ಯಾದಿ ವಸ್ತುಗಳು ಮಗುವಿಗೆ ಯಾವುದೇ ತೊಂದರೆಮಾಡಿದರೆ ಎಂದು ಆತಂಕಗೊಳ್ಳುತ್ತೀರಿ. ಇದೀಗ ನಿಮ್ಮ ಮಗು ಮಾತ್ರ ನಿಮ್ಮ ಪ್ರಪಂಚ. ಇದರಿಂದ ನಿಮಗೆ ದಣಿವೂ ಹೆಚ್ಚಾಗುತ್ತದೆ. ಸಣ್ಣ ಸಣ್ಣ ವಿಷಯಗಳ ಬಗೆಗೂ ಅಧಿಕವಾಗಿ ವಿಶ್ಲೇಷಿಸುತ್ತೀರಿ. ಆದರೆ ಯಕಃಶ್ವಿತ ವಿಷಯಗಳ ಬಗ್ಗೆ ಚಿಂತಿಸುವುದನ್ನು ಬಿಡಿ. ಅಗತ್ಯವಿದ್ದಲ್ಲಿ ಬೇರೆಯವರ ಸಹಾಯಪಡೆದು ಕಾರ್ಯನಿರ್ವಹಿಸಿ.

ನೀವಿಗ ಸ್ವರ್ಧಿಗಳು
ನಾವು ನಮ್ಮ ಮಕ್ಕಳನ್ನು ವಿಶಿಷ್ಟ ಎಂದೇ ಭಾವಿಸುತ್ತೇವೆ. ನಿಮ್ಮ ಮಗು ಬೇರೆ ಎಲ್ಲಾ ಮಕ್ಕಳಿಗಿಂತ ವಿಭಿನ್ನ ಎಂದೇ ಪರಿಗಣಿಸುತ್ತಾರೆ. ಬೇರೆ ಮಕ್ಕಳೊಂದಿಗೆ ನಮ ಮಕ್ಕಳ ಹೋಲಿಕೆ ಮಾಡುವುದನ್ನು ಇಷ್ಟಪಡುವುದಿಲ್ಲ. ಇದೀಗ ನಿಮಗೆ ಸ್ವರ್ಧಿಗಳು ಅಧಿಕ. ಅವರವರ ಮಕ್ಕಳ ಬಗ್ಗೆ ಅವರು ಹೊಗಳಿಕೊಳ್ಳುವಾಗ ನೀವು ನಿಮ್ಮ ಮಗುವನ್ನು ಅವರಿಗಿಂತ ವಿಭಿನ್ನ ಎಂದು ಸಾರುವಲ್ಲಿ ನಿರತರಾಗುತ್ತೀರಿ. ಇನ್ನೊಬ್ಬರು ಅವರ ಮಕ್ಕಳ ಬಗ್ಗೆ ಹೇಳಿದಾಗ ನಿಮ್ಮಲ್ಲಿ ಕೀಳಿರಿಮೆ ಮೂಡದಿರುವಂತೆ ಗಮನವಹಿಸಿ. ನಿಮ್ಮ ಮಗುವನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವ ನಿಮ್ಮ ಗುರಿಯನ್ನು ಮುಟ್ಟುವ ತನಕ ಅಡ್ದಬರುವ ಎಲ್ಲಾ ಅಡೆತಡೆಗಳನ್ನೂ ನೀವು ಎದುರಿಸಬೇಕಾಗುತ್ತದೆ.
ಮಕ್ಕಳೊಂದಿಗೆ ಹಗುರವಾದ, ಸಾಮಾನ್ಯವಿಷಯಗಳನ್ನು ಮಾತನಾಡುವುದು, ಸಲಹೆಗಳನ್ನು ನೀಡುವುದರ ಮೂಲಕ ಅವರನ್ನು ಸರಿಯಾದ ದಾರಿಯಲ್ಲಿ ನಡೆಯುವಂತೆ ಮಾರ್ಗದರ್ಶನ ನೀಡಬೇಕು. ನಿಮ್ಮ ಮಗುವಿನ ಜೊತೆ ಬೇರೆಯವರು (ಅಂದರೆ ತಂದೆ ) ಮಾತನಾಡುವಾಗ ನೀವು ಮೌನವಾಗಿರುವುದು ಉತ್ತಮ.

English summary

5 Hidden truths about motherhood

You've told everyone the good news and they've responded with unending advice. But there are some things your family and best friend are keeping from you.
X
Desktop Bottom Promotion