For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಮಹಿಳೆ ಮಾಡುವ 5 ಸಾಮಾನ್ಯ ತಪ್ಪುಗಳು

|

ಇನ್ನೊಂದು ಜೀವಕ್ಕೆ ಜನ್ಮವನ್ನು ನೀಡುವ ಒಂದು ಮಹತ್ತರ ಕಾರ್ಯ ಹೆಣ್ಣಿನ ಜೀವನದಲ್ಲಿ ಅತೀ ಪ್ರಮುಖವಾದ ಘಟ್ಟವಾಗಿದೆ. ತಾಯ್ತನದ ಮಹತ್ವವನ್ನು ಈ ಸಮಯದಲ್ಲಿ ಪ್ರತಿಯೊಂದು ಹೆಣ್ಣು ಅರಿತುಕೊಳ್ಳಬೇಕು ಮತ್ತು ಅದಕ್ಕೆ ತಕ್ಕಂತೆ ಮುತುವರ್ಜಿ ವಹಿಸಿಕೊಳ್ಳಬೇಕು. ಮನೆಯ ಹಿರಿಯರು ಗರ್ಭಿಣಿ ಹೆಣ್ಣು ಮನೆಯಲ್ಲಿದ್ದಾಗ ಹೆಜ್ಜೆ ಹೆಜ್ಜೆಗೂ ಆಕೆಯನ್ನು ಉಪಚರಿಸುತ್ತಾರೆ. ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಾರೆ.

ಹಿರಿಯರು ನಮ್ಮೊಂದಿಗೆ ಇಲ್ಲದಿರುವ ಸಮಯದಲ್ಲಿ ಕೂಡ ನಮ್ಮ ಗರ್ಭಾವಸ್ಥೆಯ ಸಂದರ್ಭದಲ್ಲಿ ಹಂತ ಹಂತದ ಕಾಳಜಿಯನ್ನು ನಾವು ತೆಗೆದುಕೊಳ್ಳಬೇಕಾಗುತ್ತದೆ. ಈ ಸಮಯದಲ್ಲಿ ಅನಗತ್ಯ ಚಿಂತೆ ಮಾಡುವುದು ನಿಮ್ಮೊಂದಿಗೆ ನಿಮ್ಮೊಳಗಿನ ಜೀವಕ್ಕೂ ಅಪಾಯವನ್ನು ತಂದೊಡ್ಡಬಹುದು.

ಹೌದು ಇಂದಿನ ಲೇಖನದಲ್ಲಿ ನಿಮಗೆ ಪ್ರಯೋಜನಕಾರಿಯಾಗಿರುವ ನೀವು ಗರ್ಭಾವಸ್ಥೆಯಲ್ಲಿ ತೆಗೆದುಕೊಳ್ಳಬೇಕಾದ ಕೆಲವೊಂದು ಮುತುವರ್ಜಿಗಳು ಮತ್ತು ನೀವು ಮಾಡುವ ತಪ್ಪುಗಳ ಕುರಿತಾಗಿದೆ. ಸಾಮಾನ್ಯವಾಗಿ ಗರ್ಭಿಣಿ ಸ್ತ್ರೀಯರು ತಮ್ಮ ಗರ್ಭಾವಸ್ಥೆಯ ಸಮಯದಲ್ಲಿ ಮಾಡುವ ಈ ಸಾಮಾನ್ಯ ತಪ್ಪುಗಳಿಗೆ ನಂತರ ಬೆಲೆ ತೆರಬೇಕಾಗುತ್ತದೆ ಎಂಬುದು ನೆನಪಿನಲ್ಲಿರಬೇಕು. ಆದ್ದರಿಂದ ನಿಮ್ಮೊಂದಿಗೆ ನಿಮ್ಮ ಮಗುವಿನ ಕಾಳಜಿಯನ್ನು ನೀವು ತೆಗೆದುಕೊಳ್ಳಬೇಕಾಗುತ್ತದೆ. ಹಾಗಿದ್ದರೆ ಆ ತಪ್ಪುಗಳನ್ನು ನೀವು ಮಾಡುತ್ತಿದ್ದರೆ ಈ ಕೂಡಲೇ ಅದನ್ನು ನಿಲ್ಲಿಸಿ ಮತ್ತು ನಿಮ್ಮ ಪುಟ್ಟ ಕಂದಮ್ಮನ ಆರೋಗ್ಯವನ್ನು ಸುಧಾರಿಸಿಕೊಳ್ಳಿ.

ಮಗುವಿನ ಆರೈಕೆಯ ಸ್ಥಳದಲ್ಲಿರಬೇಕಾದ ಎಂಟು ಅತ್ಯಾವಶ್ಯಕ ವಸ್ತುಗಳು

ನಿಮ್ಮಷ್ಟಕ್ಕೆ ಔಷಧ ತೆಗೆದುಕೊಳ್ಳುವುದು

ನಿಮ್ಮಷ್ಟಕ್ಕೆ ಔಷಧ ತೆಗೆದುಕೊಳ್ಳುವುದು

ಗರ್ಭಾವಸ್ಥೆಯಲ್ಲಿ ಸ್ತ್ರೀಯರು ಮಾಡುವ ಪ್ರಮುಖ ತಪ್ಪಾಗಿರುತ್ತದೆ ತಮ್ಮಷ್ಟಕ್ಕೆ ತಾವೇ ಔಷಧಗಳನ್ನು ತೆಗೆದುಕೊಳ್ಳುವುದು ಇಲ್ಲವೇ ಸಲಹೆ ಸೂಚನೆಗಳನ್ನು ಪಾಲಿಸದೇ ಕೆಲವೊಂದು ಮನೆ ಮದ್ದುಗಳನ್ನು ಮಾಡಿಕೊಳ್ಳುವುದಾಗಿದೆ. ಹೀಗಿದ್ದ ಸಂದರ್ಭದಲ್ಲಿ ನಿಮ್ಮ ವೈದ್ಯರನ್ನು ಕಂಡು ಭೇಟಿಯಾಗಿ. ನಿಮಗೆ ಕೆಲವೊಂದು ಆರೋಗ್ಯ ತೊಂದರೆಗಳು ಕಂಡುಬಂದಲ್ಲಿ ವೈದ್ಯರನ್ನು ಭೇಟಿಯಾಗಿ.

ಸಾಕಷ್ಟು ನಿದ್ರೆ ಮಾಡದಿರುವುದು

ಸಾಕಷ್ಟು ನಿದ್ರೆ ಮಾಡದಿರುವುದು

ಗರ್ಭಾವಸ್ಥೆಯ ಸಂದರ್ಭದಲ್ಲಿ, ನಿದ್ರೆಯ ಕೊರತೆ ನಿಮ್ಮ ದೇಹಕ್ಕೆ ಮಾತ್ರ ಹಾನಿಯನ್ನು ಉಂಟುಮಾಡದೇ ಉದರದೊಳಗಿನ ಶಿಶುವಿನ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ. ಮಗುವಿನ ಆರೋಗ್ಯ ನಿಮಗೆ ಮುಖ್ಯ ಎಂದಾದಲ್ಲಿ ನೀವು ಸಾಕಷ್ಟು ನಿದ್ದೆ ಮಾಡುವುದು ಅತೀ ಅಗತ್ಯ.

ರುಚಿಕರ ಆರೋಗ್ಯಕರ ಆಹಾರವನ್ನು ತ್ಯಜಿಸುವುದು

ರುಚಿಕರ ಆರೋಗ್ಯಕರ ಆಹಾರವನ್ನು ತ್ಯಜಿಸುವುದು

ಗರ್ಭಾಸ್ಥೆಯ ಸಂದರ್ಭದಲ್ಲಿ ಮಹಿಳೆ ಮಾಡುವ ಇನ್ನೊಂದು ಸಾಮಾನ್ಯ ತಪ್ಪು ಇದಾಗಿದೆ. ನೀವು ಗರ್ಭಿಣಿಯಾಗಿರುವಾಗ ನಿಮಗೆ ಆರಾಮದಾಯಕವಾಗಿರುವ ಹಾಗೂ ರುಚಿಕರ ಆಹಾರ ಪದಾರ್ಥಗಳನ್ನು ನೀವು ತ್ಯಜಿಸಬೇಕೆಂದೇನಿಲ್ಲ. ನಿಮಗೆ ಇಷ್ಟವಾದ ಆಹಾರ ಯಾವುದಾದರೂ ಇದ್ದಲ್ಲಿ ಅದನ್ನು ಕೂಡಲೇ ಸೇವಿಸಿ.

ಉತ್ತಮ ವೈದ್ಯರ ಆರಿಸುವಿಕೆ

ಉತ್ತಮ ವೈದ್ಯರ ಆರಿಸುವಿಕೆ

ನಿಮ್ಮ ವೈದ್ಯರನ್ನು ಆರಿಸುವ ಸಂರ್ಭದಲ್ಲಿ ಸಂಶೋಧನೆಗಳನ್ನು ನಡೆಸಿ. ವೈದ್ಯರ ಮಾಹಿತಿಯನ್ನು ಸಂಗ್ರಹಿಸಿ. ನಿಮಗೆ ಯಾರಾದರೂ ಉತ್ತಮ ವೈದ್ಯರು ತಿಳಿದಿದ್ದಲ್ಲಿ ಅವರನ್ನು ಹೋಗಿ ಕಾಣಿ. ಕಾಳಜಿ ಇಲ್ಲದೆ ವೈದ್ಯರನ್ನು ನಿಮ್ಮ ಶುಶ್ರೂಷೆಗಾಗಿ ಆರಿಸಿಕೊಳ್ಳಬೇಡಿ. ನಿಮ್ಮ ಆತ್ಮೀಯ ಗೆಳೆಯರು ಅಥವಾ ಕುಟುಂಬದ ವೈದ್ಯರು ಆಗಿದ್ದಲ್ಲಿ ಮುಂದುವರಿಯಿರಿ.

ಇಬ್ಬರಿಗಾಗಿ ತಿನ್ನುವುದು

ಇಬ್ಬರಿಗಾಗಿ ತಿನ್ನುವುದು

ನಿಮ್ಮ ಹೊಟ್ಟೆಯಲ್ಲಿ ನಿಮ್ಮ ಕರುಳ ಕುಡಿ ಬೆಳೆಯುತ್ತಿರುವ ಸಂದರ್ಭದಲ್ಲಿ ನಾವಿಬ್ಬರು ಎಂಬ ಪ್ರೀತಿ ಇರುವುದು ಸಹಜವೇ. ಹಾಗೆಂದು ಇಬ್ಬರಿಗಾಗಿ ಆಹಾರ ಸೇವಿಸುವುದು ಎಂದು ಭಾವಿಸಿ ಅತಿಯಾಗಿ ಸೇವಿಸಬೇಡಿ. ನಿಮ್ಮ ಹೊಟ್ಟೆಯಲ್ಲಿರುವ ಮಗು ನಿಮ್ಮ ಆಹಾರದಿಂದ ಅಗತ್ಯ ನ್ಯೂಟ್ರೀನ್‌ಗಳನ್ನು ಮಾತ್ರ ತೆಗೆದುಕೊಳ್ಳುತ್ತದೆ. ನಿಮ್ಮ ಮಗುವಿನ ಆರೋಗ್ಯಕ್ಕಾಗಿ ಹೆಚ್ಚು ನಿಯಮಿತವಾಗಿರುವ ಪ್ರೊಟೀನ್ ನ್ಯೂಟ್ರೀನ್ ಉಳ್ಳ ಆಹಾರವನ್ನು ನೀವು ತೆಗೆದುಕೊಳ್ಳುತ್ತಿರುವಿರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

English summary

5 Common Mistakes Women Make During Pregnancy

As much as it is a source of immense joy knowing that you are going to give birth to another life, This article looks at the common mistakes women make when pregnant. Being aware of these mistakes is the first step towards ensuring harmony during the pregnancy period.
Story first published: Wednesday, July 23, 2014, 15:19 [IST]
X
Desktop Bottom Promotion