For Quick Alerts
ALLOW NOTIFICATIONS  
For Daily Alerts

ಹೆತ್ತವರೆ೦ದು ಕರೆಯಿಸಿಕೊಳ್ಳುವ ಮುನ್ನ ಪಾಲಿಸಬೇಕಾದ 10 ಸೂತ್ರಗಳು

By Gururaj
|

ನಿಮ್ಮ ಕುಟು೦ಬ ಜೀವನವೆ೦ಬ ಪುಟ್ಟ ಪ್ರಪ೦ಚಕ್ಕೆ ಓರ್ವ ಚಿಕ್ಕ ಅತಿಥಿಯನ್ನು ಬರಮಾಡಿಕೊಳ್ಳಲು ಯೋಜನೆ ಹಾಕಿಕೊ೦ಡಿದ್ದೀರಾ ? ವಾವ್..!!! ನಿಜಕ್ಕೂ ಇದೊ೦ದು ಅದ್ಭುತ ವಿಚಾರ.
ಆದರೆ, ನೀವು ಇದರ ಕುರಿತು ಎಲ್ಲಾ ಅಗತ್ಯವಾದ ಪೂರ್ವತಯಾರಿಯನ್ನು ಮಾಡಿಕೊ೦ಡಿದ್ದೀರಾ ? ನೀವು "ಮಕ್ಕಳನ್ನು ಹೆತ್ತವರು" ಎ೦ದು ಅನ್ನಿಸಿಕೊಳ್ಳುವುದಕ್ಕೆ ಮೊದಲು ನೀವು ಪರಿಗಣಿಸಬೇಕಾದ ಕೆಲವು ಮಹತ್ವದ ವಿಚಾರಗಳು ಈ ಕೆಳಗಿನ೦ತಿವೆ.

ಹೆರಿಗೆಯ ನಂತರ ಶುಚಿತ್ವವನ್ನು ಕಾಪಾಡಿಕೊಳ್ಳುವುದು ಹೇಗೆ?

ನಿಮ್ಮ ತೂಕವನ್ನು ಪರಿಶೀಲಿಸಿಕೊಳ್ಳಿರಿ

ನಿಮ್ಮ ತೂಕವನ್ನು ಪರಿಶೀಲಿಸಿಕೊಳ್ಳಿರಿ

ನಿಮ್ಮ ಕರಾರುವಕ್ಕಾದ ತೂಕವನ್ನು ತಿಳಿದುಕೊಳ್ಳಿರಿ. ಅಗತ್ಯಕ್ಕಿ೦ತಲೂ ಅತಿಯಾದ ತೂಕ ಮತ್ತು ಅತೀ ಕಡಿಮೆ ತೂಕ ಇವೆರಡೂ ಶಿಶುವಿನ ಜನನದ ಮೊದಲು ಮತ್ತು ಜನನಾನ೦ತರ ಮಾರಕವಾದ ಸ್ಥಿತಿಗಳು. ನಿಮ್ಮ ತೂಕವು ಕಡಿಮೆಯಿದ್ದರೆ, ಅದು ಭ್ರೂಣದ ಸರಿಯಾದ ರಚನೆಯ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುತ್ತದೆ. ನಿಮ್ಮ ತೂಕವು ಹೆಚ್ಚಾಗಿದ್ದರೆ, ಅದು ಮಧುಮೇಹ ಮತ್ತು ಅತಿಯಾದ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿ೦ದ, ಗರ್ಭಿಣಿಯಾಗುವುದಕ್ಕಿ೦ತ ಮೊದಲು ತೂಕವನ್ನು ಪರಿಶೀಲಿಸಿಕೊಳ್ಳಿರಿ.

ನೀವು ತೆಗೆದುಕೊಳ್ಳುತ್ತಿರುವ ಔಷಧಿಗಳ ಬಗ್ಗೆ ನಿಗಾ ಇರಲಿ

ನೀವು ತೆಗೆದುಕೊಳ್ಳುತ್ತಿರುವ ಔಷಧಿಗಳ ಬಗ್ಗೆ ನಿಗಾ ಇರಲಿ

ನೀವು ಅಲರ್ಜಿ, ತಲೆನೋವು, ಅಥವಾ ಇತರ ಯಾವುದೇ ಸಮಸ್ಯೆಗೆ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ, ಇನ್ನು ಮು೦ದೆ ಇವುಗಳ ಕುರಿತು ಎಚ್ಚರವಹಿಸಬೇಕು. ಈ ಔಷಧಿಗಳ ಪೈಕಿ ಕೆಲವೊ೦ದು ನಿಮ್ಮ ಗರ್ಭಸ್ಥ ಶಿಶುವಿಗೆ ಹಾನಿಕಾರಕವಾಗಿರಬಹುದು. ನೀವು ತೆಗೆದುಕೊಳ್ಳುವ ಔಷಧಿಗಳು ಅಥವಾ ಸಿರಪ್‌ಗಳನ್ನು ನಿಮ್ಮ ವೈದ್ಯರ ಗಮನಕ್ಕೆ ತರುವುದು ಅತ್ಯಗತ್ಯ. ಅ೦ತೆಯೇ, ಯಾವ ಬದಲೀ ಔಷಧಿಗಳನ್ನು ಸೇವಿಸಬೇಕು ಅಥವಾ ಯಾವ ಔಷಧಿಯನ್ನು ಸೇವಿಸುವುದನ್ನು ನಿಲ್ಲಿಸಬೇಕು ಎ೦ಬುದರ ಬಗ್ಗೆಯೂ ಕೂಡ ವೈದ್ಯರ ಸಲಹೆ ಪಡೆಯಿರಿ.

ನಿಮ್ಮ ರೆಫ್ರಿಜರೇಟರ್ ಸತ್ವಭರಿತ ಆಹಾರವಸ್ತುಗಳಿ೦ದ ತು೦ಬಿರಲಿ

ನಿಮ್ಮ ರೆಫ್ರಿಜರೇಟರ್ ಸತ್ವಭರಿತ ಆಹಾರವಸ್ತುಗಳಿ೦ದ ತು೦ಬಿರಲಿ

ನಿಮ್ಮ ಫ್ರಿಜ್ ನಲ್ಲಿ ಹಣ್ಣುಗಳು, ಜ್ಯೂಸ್ ಗಳು, ಮತ್ತಿತರ ವಿವಿಧ ಅನ್ನಾ೦ಗಗಳುಳ್ಳ ಆಹಾರ ವಸ್ತುಗಳು, ಪ್ರೋಟೀನ್ ಮತ್ತು ಕ್ಯಾಲ್ಸಿಯ೦ ನಿ೦ದ ಸಮೃದ್ಧವಾದ ಆಹಾರ ವಸ್ತುಗಳನ್ನು ಶೇಖರಿಸಿಡಿರಿ. ಯಥೇಚ್ಚವಾಗಿ ತರಕಾರಿ ಮತ್ತು ಬಹುಧಾನ್ಯಗಳ ಸೇವನೆ ಮಾಡಿರಿ. ನಿಮ್ಮ ಆಹಾರಕ್ರಮದಲ್ಲಿ ಸೋಯಾ ಉತ್ಪನ್ನಗಳು, ಕಾಳುಗಳು, ಮತ್ತು ಹುರುಳಿಯನ್ನು ಸೇರಿಸಿಕೊಳ್ಳಿರಿ.

ನಿಮ್ಮ ದ೦ತ ವೈದ್ಯರನ್ನು ಭೇಟಿ ಮಾಡಿರಿ

ನಿಮ್ಮ ದ೦ತ ವೈದ್ಯರನ್ನು ಭೇಟಿ ಮಾಡಿರಿ

ಆರೋಗ್ಯಯುತವಾದ ಗರ್ಭಾವಸ್ಥೆಗೆ ಬಾಯಿಯ ಆರೋಗ್ಯವು ಅತೀ ಮುಖ್ಯ. ವಸಡಿನ ಸಮಸ್ಯೆಗಳು ಅಥವಾ ರೋಗಗಳು ಸೂಕ್ಷ್ಮಾಣುವಿನ ಸೋ೦ಕು, ಅವಧಿಗೆ ಮುನ್ನವೇ ಪ್ರಸವವಾಗುವುದು, ಹಾಗೂ ಅತಿಯಾದ ರಕ್ತದೊತ್ತಡ, ಮೂತ್ರದಲ್ಲಿ ಪ್ರೋಟೀನ್‌ನ ಅ೦ಶ, ಮತ್ತು ಶರೀರದಲ್ಲಿ ದ್ರವದ ಸ೦ಚಯನ ಇವುಗಳಿ೦ದ ಒಡಗೂಡಿದ ಗರ್ಭಾವಸ್ಥೆಗೆ ಕಾರಣವಾಗುತ್ತದೆ.

ಮನೆಯ ದುರಸ್ತಿ ಕಾರ್ಯ

ಮನೆಯ ದುರಸ್ತಿ ಕಾರ್ಯ

ನಿಮ್ಮ ಕನಸಿನ ಮನೆಯನ್ನು ದುರಸ್ತಿಗೊಳಿಸುವ ಯೋಜನೆಯೇನಾದರೂ ನಿಮಗಿದ್ದಲ್ಲಿ, ನೀವು ಗರ್ಭಿಣಿಯಾಗುವುದಕ್ಕಿ೦ತ ಮೊದಲೇ ಆ ಕಾರ್ಯವನ್ನು ಕೈಗೆತ್ತಿಕೊಳ್ಳಿರಿ. ಬಣ್ಣಗಳು (ಪೈ೦ಟ್), ಗೋಡೆಯ ಕಲೆ ನಿವಾರಕಗಳು, ಮತ್ತು ಕೀಟನಾಶಕಗಳು ರಾಸಾಯನಿಕಗಳನ್ನು ಹೊ೦ದಿದ್ದು, ಅವು ಗರ್ಭಿಣಿ ಮಹಿಳೆ ಹಾಗೂ ಮಗು ಇಬ್ಬರಿಗೂ ಹಾನಿಯು೦ಟು ಮಾಡಬಲ್ಲದು.

ನಿಮ್ಮ ವೈದ್ಯರಲ್ಲಿ ಸಮಾಲೋಚಿಸಿರಿ

ನಿಮ್ಮ ವೈದ್ಯರಲ್ಲಿ ಸಮಾಲೋಚಿಸಿರಿ

ಮಗುವಿನ ಜನನದ ನಿರೀಕ್ಷಿತ ದಿನಾ೦ಕದಿ೦ದ ಮೂರು ತಿ೦ಗಳು ಮೊದಲೇ, ಒಮ್ಮೆ ಪ್ರಸವಪೂರ್ವ ತಪಾಸಣೆಗೆ೦ದು ನಿಮ್ಮ ವೈದ್ಯರನ್ನು ಭೇಟಿ ಮಾಡಿರಿ. ನಿಮ್ಮ ರಕ್ತದೊತ್ತಡ, ಮಧುಮೇಹ, ಥೈರಾಯಿಡ್, ಹಾಗೂ ಹಿಮೋಗ್ಲೋಬಿನ್ ಮಟ್ಟಗಳನ್ನು ಪರೀಕ್ಷೆಗೊಳಪಡಿಸಿರಿ. ನಿಮ್ಮ ಕೌಟು೦ಬಿಕ ಹೆನ್ನೆಲೆಯ ಆಧಾರದ ಮೇಲೆ ವೈದ್ಯರು ನಿಮಗೆ ಜೆನೆಟಿಕ್ ಪರೀಕ್ಷೆಯನ್ನೂ ಕೂಡ ಶಿಪಾರಸು ಮಾಡಬಹುದು.

ನಿರಾಳವಾಗಿರಿ

ನಿರಾಳವಾಗಿರಿ

ಅತಿಯಾದ ಮಾನಸಿಕ ಒತ್ತಡವು ನಿಮ್ಮ ಸುಸೂತ್ರವಾದ ಪ್ರಸವ ಪ್ರಕ್ರಿಯೆಗೆ ಅಡ್ಡಿಪಡಿಸಬಹುದು. ಮಗುವಿನ ಜನನದ ಮೊದಲು ನಿರಾಳವಾಗಿರಿ. ಆಸಕ್ತಿಕರವಾದ ಪುಸ್ತಕಗಳನ್ನು ಓದಿರಿ, ಧ್ಯಾನ ಮಾಡಿರಿ, ನಿಮ್ಮ ಸ್ನೇಹಿತೆಯರೊಡನೆ ಸಮಯ ಕಳೆಯಿರಿ, ಚಲನಚಿತ್ರವೊ೦ದನ್ನು ವೀಕ್ಷಿಸಿರಿ, ಉತ್ತಮವಾದ ಸ೦ಗೀತವನ್ನು ಆಲಿಸಿರಿ, ಪರಿಪೂರ್ಣವಾದ ನಿದ್ರೆ ಮಾಡಿರಿ, ಅಥವಾ ನಿಮ್ಮನ್ನು ಯಾವುದು ಸ೦ತಸವಾಗಿರಿಸುತ್ತದೆಯೋ ಅದೆಲ್ಲವನ್ನೂ ಮಾಡಿರಿ. ಆದರೆ, ಒತ್ತಡದ ನಿವಾರಣೆಗೆ೦ದು ಆಲ್ಕೋಹಾಲ್ ಅನ್ನೋ ಅಥವಾ ಗುಳಿಗೆಗಳನ್ನೋ ತೆಗೆದುಕೊಳ್ಳಬೇಡಿರಿ.

ಫೋಲಿಕ್ ಆಮ್ಲದ ಸೇವನೆಯನ್ನು ಹೆಚ್ಚಿಸಿರಿ

ಫೋಲಿಕ್ ಆಮ್ಲದ ಸೇವನೆಯನ್ನು ಹೆಚ್ಚಿಸಿರಿ

ಬೆನ್ನಹುರಿಯು ಬೆನ್ನಿನ ಕೆಳಭಾಗದ ಅವಕಾಶದ ನಡುವೆ ಹೊರಚಾಚುವ ಸ್ಪೈನಾ ಬಿಫಿಡಾದ೦ತಹ ಜನನ ಕಾಲದ ಊನತೆಯ ಅಪಾಯವನ್ನು ಕಡಿಮೆ ಮಾಡಲು ಅನ್ನಾ೦ಗ ಬಿ ಯ ಸೇವನೆಯನ್ನು ಹೆಚ್ಚಿಸಿರಿ. ಪಾಲಕ್ ಸೊಪ್ಪು ಮತ್ತು ಇತರ ಹಸುರು ಸೊಪ್ಪಿನ ತರಕಾರಿಗಳು ಫೋಲಿಕ್ ಆಮ್ಲದ ಉತ್ತಮ ಆಗರಗಳು.

ವೈನ್, ಕೆಫೀನ್, ಮತ್ತು ಧೂಮಪಾನದಿ೦ದ ದೂರವಿರಿ

ವೈನ್, ಕೆಫೀನ್, ಮತ್ತು ಧೂಮಪಾನದಿ೦ದ ದೂರವಿರಿ

ಧೂಮಪಾನ, ಕಾಫಿ, ಮತ್ತು ವೈನ್ ಗಳಿಗೆ ನಿರ್ದಾಕ್ಷಿಣ್ಯವಾಗಿ "ಬೇಡ" ಎ೦ಬ ಉತ್ತರವು ನಿಮ್ಮದಾಗಿರಲಿ. ಧೂಮ ಮತ್ತು ವೈನ್ ಗಳು ನಿಮ್ಮ ಮಗುವಿನಲ್ಲಿ ಹೃದಯದ ಸಮಸ್ಯೆಗಳು ಅಥವಾ ಮೆದುಳಿನ ನ್ಯೂನತೆಗಳನ್ನು ಹುಟ್ಟುಹಾಕಬಹುದು. ಅಧ್ಯಯನದ ಪ್ರಕಾರ, ಕೆಫೀನ್ ಅನ್ನು ಹೆಚ್ಚಾಗಿ ಸೇವಿಸುವುದು ಗರ್ಭಪಾತಕ್ಕೆ ಕಾರಣವಾಗಬಹುದು.

ನಿಮ್ಮ ಹಣಕಾಸಿನ ಸ್ಥಿತಿಗತಿಯನ್ನೊಮ್ಮೆ ಅವಲೋಕಿಸಿಕೊಳ್ಳಿ

ನಿಮ್ಮ ಹಣಕಾಸಿನ ಸ್ಥಿತಿಗತಿಯನ್ನೊಮ್ಮೆ ಅವಲೋಕಿಸಿಕೊಳ್ಳಿ

ನಿಮಗೆಲ್ಲಾ ತಿಳಿದಿರುವ೦ತೆ, ಹಣದುಬ್ಬರ ದರವು ತೀವ್ರಗತಿಯಲ್ಲಿ ಏರುತ್ತಿದೆ. ಮಗುವನ್ನು ಪಡೆಯುವ ಮೊದಲು, ನಿಮ್ಮ ಪುಟಾಣಿ ಅತಿಥಿಯನ್ನು ಸಮರ್ಥವಾಗಿ ಪೋಷಿಸಲು ಅನುಕೂಲವಾಗುವ೦ತೆ ನಿಮ್ಮ ಆರ್ಥಿಕ ಸ್ಥಿತಿಗತಿ ಇದೆ ಎ೦ಬುದನ್ನು ಖಾತ್ರಿಪಡಿಸಿಕೊಳ್ಳಿರಿ. ಗರ್ಭಿಣಿಯ ಆರೈಕೆ ಮತ್ತು ಪ್ರಸವ ಪ್ರಕ್ರಿಯೆಗೆ ತಗಲಬಹುದಾದ ಖರ್ಚುವೆಚ್ಚಗಳನ್ನು ಅ೦ದಾಜಿಸಿರಿ. ನೀವು ಆರೋಗ್ಯ ವಿಮೆಯನ್ನು ಪಡೆಯುವವರಾಗಿದ್ದರೆ, ನಿಮ್ಮ ವಿಮಾ ಕ೦ಪನಿಗೆ, ಸ೦ಸ್ಥೆಗೆ ಕರೆಮಾಡಿ ಪ್ರಸವಪೂರ್ವ ಖರ್ಚುವೆಚ್ಚಗಳ ಬಗ್ಗೆ ಅವರು ಒದಗಿಸುವ ಯಾವುದಾದರೂ ಸೌಲಭ್ಯಗಳಿವೇ ಎ೦ಬುದನ್ನು ವಿಚಾರಿಸಿರಿ.

English summary

10 Tips before Propelling into the World of Parenting

Are you planning for welcoming a little guest in your world? Wow….it’s great! But, have you done with all the preparations? Here are some tips that you should consider before plunging to parenthood.
X
Desktop Bottom Promotion