For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಸಂಭವಿಸುವ 10 ಸಾಮಾನ್ಯ ಸಮಸ್ಯೆಗಳು

By Viswanath S
|

ಒಬ್ಬ ಮಹಿಳೆಗೆ ಒಂದು ಮಗುವಿಗೆ ಜನ್ಮ ನೀಡುವುದು ಒಂದು ಅದ್ಭುತ ಕೊಡುಗೆ ಮತ್ತು ಆ ಸಮಯವು ಮಹಿಳೆಗೆ ಅತೀ ಹೆಚ್ಚಿನ ಸಂತೋಷ ತರುತ್ತದೆ. ಆದಾಗ್ಯೂ ಎಲ್ಲಾ ಗರ್ಭಧಾರಣೆಯು ಅಷ್ಟು ಸುಲಭವಾಗಿರುವುದಿಲ್ಲ ಎಂಬುವುದು ಸತ್ಯ. ಮಹಿಳೆಯರ ಇತರ ತೊಂದರೆಗಳು ಸಾಮಾನ್ಯವಾಗಿ ಹೆಚ್ಚಿದ್ದರೂ, ಗರ್ಭಧಾರಣೆಯ ತೊಂದರೆಗಳು ಅತ್ಯಂತ ದೊಡ್ಡ ಸಮಸ್ಯೆ ಮತ್ತು ವಿಷಾದಕರ ಸಂಗತಿಯೆಂದರೆ ನೀವು ಅದರ ಬಗ್ಗೆ ಏನೂ ಹೆಚ್ಚು ಮಾಡುವುದಕಾಗುವುದಿಲ್ಲ.

ಗರ್ಭಧಾರಣೆಯ ಸಮಯದಲ್ಲಿ ಕೆಲವು ತೊಂದರೆಗಳು ಬಹಳ ಕ್ಲಿಷ್ಟವಾಗಬಹುದು ಮತ್ತು ಕೆಲವು ಬಹಳ ಗಂಭೀರವಾಗಬಹುದು. ಇಲ್ಲಿ ಗರ್ಭಧಾರಣೆಯ ಸಮಯದಲ್ಲಿ ಮಹಿಳೆಯರು ಸಾಮಾನ್ಯವಾಗಿ ಎದುರಿಸಬಹುದಾದ ಕೆಲವು ಕ್ಲಿಷ್ಟ ತೊಂದರೆಗಳನ್ನು ಚರ್ಚಿಸಿದ್ದೇವೆ: ಗರ್ಭಿಣಿಯರಲ್ಲಿ ಹುಳಿ ತಿನ್ನುವ ಬಯಕೆ; ಏನಿದರ ರಹಸ್ಯ?

ಆರಂಭಿಕ ಗರ್ಭಾವಸ್ಥೆಯಲ್ಲಿ ರಕ್ತಸ್ರಾವ!

ಆರಂಭಿಕ ಗರ್ಭಾವಸ್ಥೆಯಲ್ಲಿ ರಕ್ತಸ್ರಾವ!

ಇದು ಒಂದು ಒಳ್ಳೆಯ ಸೂಚನೆಯಂತೂ ಅಲ್ಲ. ಆದಾಗ್ಯೂ ಕೆಲವು ಮಹಿಳೆಯರಿಗೆ ಹೀಗಾಗುವುದು ಅಷ್ಟೊಂದು ಅಪಾಯಕಾರಿಯಲ್ಲ. ಕಡಿಮೆ ಪ್ರೊಜೆಸ್ಟರಾನ್ (ಹಾರ್ಮೋನುಗಳು) ಇರುವ ಮಹಿಳೆಯರಿಗೆ ಇಂತಹ ತೊಂದರೆಗಳಿಗೆ ಒಳಗಾಗುವ ಸಂಭವ ಹೆಚ್ಚು. ಈ ತೊಂದರೆಗಳನ್ನು ತಕ್ಕ ಔಷಧಿ, ಪರೀಕ್ಷೆಗಳು ಮತ್ತು ವೈದ್ಯರ ಸಲಹೆಗಳಿಂದ ಸರಿಪಡಿಸಬಹುದು. ಹಾಗಿದ್ದರೂ ಕೂಡ ಇಂತಹ ತೊಂದರೆಗಳು ಕಾಣಿಸಿಕೊಂಡಾಗ ಕೆಲವು ಮಹಿಳೆಯರು ತಮ್ಮ ಭ್ರೂಣವನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಮತ್ತು ಆರಂಭದಲ್ಲೇ ರಕ್ತಸ್ರಾವ ಕಾಣಿಸಿಕೊಂಡರೆ ನೀವು ನಿಮ್ಮ ವೈದ್ಯರ ಬಳಿ ಹೋಗಿ ನಿಮ್ಮ ಭ್ರೂಣದಲ್ಲಿ ಹೃದಯಬಡಿತ ಇದೆಯೇ ಅಥವ ಇಲ್ಲವೇ ಎಂದು ಪರೀಕ್ಷಿಸಿಕೊಳ್ಳಲೇ ಬೇಕು.

ಗರ್ಭಪಾತ!

ಗರ್ಭಪಾತ!

ಗರ್ಭಧಾರಣೆಯ ಸಮಯದಲ್ಲಿ ನೂರು ಮಹಿಳೆಯರಲ್ಲಿ ಐವತ್ತೈದು ಮಹಿಳೆಯರಿಗೆ ಹೀಗಾಗುವುದು ಅತ್ಯಂತ ಸಾಮಾನ್ಯ. ಸಾಮಾನ್ಯವಾಗಿ ಗರ್ಭಧಾರಣೆಯ ಮೊದಲ ಮೂರು ತಿಂಗಳು ಬಹಳ ಕಷ್ಟಕರವಾಗಿರುತ್ತದೆ ಮತ್ತು ಗರ್ಭಪಾತವು ಇದೇ ಸಮಯದಲ್ಲಿ ಸಂಭವಿಸುತ್ತದೆ. ನಿಮ್ಮ ಗರ್ಭಧಾರಣೆಯಲ್ಲಿ ಅಭಿವೃದ್ಧಿ ಕಾಣದಿದ್ದರೆ, ಸ್ವಾಭಾವಿಕವಾಗಿ ಭ್ರೂಣವು ಕಳೆದುಹೋಗುವುದು. ಆ ಸಮಯದಲ್ಲಿ ನೀವು ತೀವ್ರ ಸೆಳೆತ ಹೊಂದುವಿರಿ ಮತ್ತು ಗರ್ಭಪಾತವಾದಲ್ಲಿ ರಕ್ತಸ್ರಾವವಾಗುತ್ತದೆ.

ಅಪಸ್ಥಾನೀಯ (ಎಕ್ಟೋಪಿಕ್) ಗರ್ಭಧಾರಣೆ!

ಅಪಸ್ಥಾನೀಯ (ಎಕ್ಟೋಪಿಕ್) ಗರ್ಭಧಾರಣೆ!

ಗರ್ಭಕೋಶದ ಹೊರಗೆ ಗರ್ಭಧರಿಸಿದಾಗ ಈ ತೊಂದರೆಯು ಕಾಣಿಸಿಕೊಳ್ಳುತ್ತದೆ. ಇದು ಬಹಳ ಅಪರೂಪ; ಆದಾಗ್ಯೂ ಇದು ಬಹಳ ಅಪಾಯಕಾರಿಯೂ ಹೌದು. ಇದು ಸಮಯಕ್ಕೆ ಸರಿಯಾಗಿ ಪತ್ತೆಯಾಗಿಲ್ಲವಾದಲ್ಲಿ ತಾಯಿ ಮತ್ತು ಹುಟ್ಟುವ ಮಗುವಿಗೂ ಮಾರಣಾಂತಿಕವಾಗಿರುತ್ತದೆ. ಸಾಮಾನ್ಯವಾಗಿ ತಾಯಿಗೆ ಬಹಳಷ್ಟು ನೋವು ಅನುಭವವಾಗುತ್ತದೆ ಮತ್ತು ಅದನ್ನು ಬಹಳ ಸುಲಭವಾಗಿ ಪತ್ತೆಹಚ್ಚಬಹುದು.

ಅಸಮರ್ಥ ಗರ್ಭಕಂಠ!

ಅಸಮರ್ಥ ಗರ್ಭಕಂಠ!

ಹೆರುವ ಸಮಯಕ್ಕೆ ಮೊದಲು ನಿಮ್ಮ ಗರ್ಭಕಂಠವು ತೆಳ್ಳಗಾದರೆ ನಿಮ್ಮ ಗರ್ಭಧಾರಣೆಯ ಉಳಿದ ಸಮಯದವರೆಗೂ ಸಂಪೂರ್ಣ ವಿಶ್ರಾಂತಿಪಡೆಯಬೇಕೆಂದು ಸಲಹೆಮಾಡಲಾಗುವುದು. ಇಲ್ಲವಾದಲ್ಲಿ ನಿಮಗೆ ಅಕಾಲಿಕ ಹೆರಿಗೆಯ ನೋವು ಕಾಣಿಸುತ್ತದೆ. ಈ ಪರಿಸ್ಥಿತಿ ತೀವ್ರವಾದ್ದರಿಂದ ಲಘುವಾಗಿ ತೆಗೆದುಕೊಳ್ಳಬಾರದು. ವೈದ್ಯರು ಈ ಪರಿಸ್ಥಿತಿಯಲ್ಲಿ ನಿಮಗೆ ಸಹಾಯಮಾಡಿ ನಿಮ್ಮ ಹುಟ್ಟುವ ಮಗುವನ್ನು ಸುದೀರ್ಘ ಆವಧಿಯಲ್ಲಿ ರಕ್ಷಿಸುತ್ತಾರೆ.

ಮಧುಮೇಹ!

ಮಧುಮೇಹ!

ಗರ್ಭಧಾರಣೆಯ ಸಮಯದಲ್ಲಿ ಮಧುಮೇಹ ಕಾಣಿಸಿಕೊಂಡಲ್ಲಿ ನಿಮ್ಮ ಮಗುವಿಗೆ ಮತ್ತು ನಿಮ್ಮ ಆರೋಗ್ಯಕ್ಕೆ ಅತ್ಯಂತ ಕೆಟ್ಟ ಪರಿಣಾಮ ಬೀಳಬಹುದು. ಗರ್ಭಾವಸ್ತೆಯಲ್ಲಿ ಸಕ್ಕರೆ ಅಂಶವು ರಕ್ತದಲ್ಲಿ ಕಡಿಮೆಯಾದರೆ ಇತರ ವಿವಿಧ ತೊಂದರೆಗಳಿಗೆ ಕಾರಣವಾಗಬಹುದು. ಹುಟ್ಟುವ ಮಗುವಿನ ರಕ್ತದಲ್ಲಿ ಕಡಿಮೆ ಸಕ್ಕರೆ, ಶಾಶ್ವತ ನರಗಳ ಸಮಸ್ಯೆಗಳು ಮತ್ತು ಹುಟ್ಟಿದ ನಂತರ ಕಾಮಾಲೆ ರೋಗ ಸಹಿತ ಬೆಳೆಯಬಹುದು. ಆದಾಗ್ಯೂ ತಾಯಿಗೆ ಕೆಲವು ತೊಂದರೆಗಳು ಅಂದರೆ -- ಅಧಿಕ ರಕ್ತದೊತ್ತಡ, ಮೂತ್ರಕೋಶದ ಸೋಂಕುಗಳು, ದೊಡ್ಡಗಾತ್ರದ ಮಗುವಿನ ಪ್ರಸವ ಮತ್ತು ಅಕಾಲಿಕ ಹೆರಿಗೆ -- ಇವುಗಳ ಸಮಸ್ಯೆಗಳು ಬೆಳೆಯಬಹುದು.

ಜರಾಯು ಚಟ್ಟನೆ (Placenta Abruption) ಅಥವ ಜರಾಯು ಪ್ರಾವಿಯ!

ಜರಾಯು ಚಟ್ಟನೆ (Placenta Abruption) ಅಥವ ಜರಾಯು ಪ್ರಾವಿಯ!

ಜರಾಯು ಪ್ರಾವಿಯ ಸ್ಥಿತಿ ಅಂದರೆ ಮಗುವು ಗರ್ಭಕಂಠವನ್ನು ಆವರಿಸುವುದು; ಸ್ವಾಭಾವಿಕವಾಗಿ ನಿಮ್ಮ ಗರ್ಭಕಂಠವು ಪ್ರಸವದ ಸಮಯದಲ್ಲಿ ತೆಳುವಾಗುವುದರಿಂದ ನಿಮಗೆ ಬೃಹುತ್ ರಕ್ತಸ್ರಾವ ಆಗಬಹುದು. ಜರಾಯು ಚಟ್ಟನೆಯಂದರೆ ಹುಟ್ಟುವ ಮಗುವು ಅಕಾಲಿಕವಾಗಿ ಗರ್ಭಕೋಶದ ಒಳ ಪದರದಿಂದ ಬೇರ್ಪಡಿಸುಕೊಳ್ಳುವುದು. ಆ ಸಮಯದಲ್ಲಿ ನಿಮಗೆ ಗಂಭೀರವಾಗಿ ರಕ್ತಸ್ರಾವವಾಗುತ್ತಿದ್ದರೆ ನಿಮಗೆ ಸಿಸೇರಿಯನ್ ಮೂಲಕ ಪ್ರಸವ ಮಾಡಬೇಕಾಗಬಹುದು.

ಅತಿ ರಕ್ತದೊತ್ತಡ!

ಅತಿ ರಕ್ತದೊತ್ತಡ!

ಗರ್ಭಾವಸ್ತೆಯಲ್ಲಿ ನೂರು ಮಹಿಳೆಯರಲ್ಲಿ ಹತ್ತು ಮಹಿಳೆಯರಿಗೆ ಮಿಗಿಲಾಗಿ ಅತಿ ರಕ್ತದೊತ್ತಡದ ತೊಡಕುಗಳಿರುತ್ತವೆ. ಗರ್ಭಾವಸ್ತೆಯಲ್ಲಿ ರಕ್ತದೊತ್ತಡವಿದ್ದರೆ ಟಕ್ಸೇಮಿಯ ಅಥವ ಪ್ರಿಕ್ಲಾಂಪ್ಸಿಯ (ಬಸಿರಿನ ನಂಜು ಅಥವ ಏರುಪೇರು ಅಧಿಕ ರಕ್ತದೊತ್ತಡ) ಎಂದು ಕರೆಯುತ್ತಾರೆ. ಇದು ಹುಟ್ಟುವ ಮಗುವಿಗೆ ಬಹಳ ಗಂಭೀರ ಪರಿಸ್ಥಿತಿಯಾಗಬಹುದು ಮತ್ತು ತಾಯಿ ಮತ್ತು ನೀವು ಇಬ್ಬರೂ ಸಮಯಕ್ಕೆ ಸರಿಯಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮಧುಮೇಹವಿರುವ, ಸ್ಥೂಲಕಾಯವಿರುವ ಅಥವ ಮೂವತ್ತೈದು ವರ್ಷ ಮೀರಿರುವ ಬಹುತೇಕ ಮಹಿಳೆಯರಿಗೆ ಅತಿ ಹೆಚ್ಚಿನ ರಕ್ತದೊತ್ತಡದ ಅಪಾಯಗಳನ್ನು ಎದುರಿಸಬೇಕಾಗಿದೆ.

ಪ್ರಸವಪೂರ್ವ ನೋವು!

ಪ್ರಸವಪೂರ್ವ ನೋವು!

ಸಾಮಾನ್ಯವಾಗಿ ಮಗುವು ಗರ್ಭಧಾರಣೆಯ ಮೂವತ್ತೇಳು ವಾರಗಳ ನಂತರ ಹುಟ್ಟುತ್ತದೆ. ಆದಾಗ್ಯೂ ಮಗುವು ಅದಕ್ಕಿಂತ ಮೊದಲೇ ಹುಟ್ಟಿದರೆ ಆಗ ಅದನ್ನು ಅಕಾಲಿಕ (ಪ್ರಿಮೆಚ್ಯೂರ್) ಎಂದು ಕರೆಯುತ್ತಾರೆ. ಹಾಗೆ ಹುಟ್ಟಿದ ಮಕ್ಕಳಿಗೆ 24 ಗಂಟೆಯ ವಿಶೇಷ ಕಾಳಜಿ ಅಗತ್ಯ. ಆದರೆ ನೀವು ಮಗುವಿನ ಬೆಳವಣಿಗೆಯನ್ನು ಗಮನಿಸಿ ಮತ್ತು ನಿಮ್ಮ ವೈದ್ಯರನ್ನು ಆದಷ್ಟು ಶೀಘ್ರವಾಗಿ ಕಂಡು ನಿಲ್ಲಿಸಬಹುದು.

ಆರ್‌ಹೆಚ್ ರೋಗ (ರೀಸಸ್ ರೋಗ)!

ಆರ್‌ಹೆಚ್ ರೋಗ (ರೀಸಸ್ ರೋಗ)!

ಗರ್ಭಾವಸ್ತೆಯಲ್ಲಿದ್ದಾಗ ತಾಯಿಯು ರಕ್ತಪರಿಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಈ ರಕ್ತಪರೀಕ್ಷೆಯು ಮಗುವಿನ ಆರ್‌ಹೆಚ್ ಅಂಶ ಮತ್ತು ರಕ್ತದ ಗುಂಪು (ಬ್ಲಡ್ ಗ್ರೂಪ್) ತೋರಿಸುತ್ತದೆ. ತಾಯಿಯು ಆರ್‌ಹೆಚ್ ನೆಗಟಿವ್ ಆಗಿದ್ದು ತಂದೆಯು ಆರ್‌ಹೆಚ್ ಪಾಸಿಟಿವ್ ಆಗಿದ್ದು ಮತ್ತು ಹುಟ್ಟುವ ಮಗುವು ಅನುವಂಶಿಕವಾಗಿ ತಂದೆಯ ಪಾಸಿಟಿವ್ ರಕ್ತ ಗುಂಪು ಪಡೆದರೆ ಮಗುವಿಗೆ ಗಂಭೀರ ಸಮಸ್ಯೆಗಳು ಇರುತ್ತವೆ. ನಿಮ್ಮಲ್ಲಿರುವ ನಿರೋಧಕ (Immune) ವ್ಯವಸ್ತೆಯಿಂದ ಮಗುವಿನ ಪಾಸಿಟಿವ್ ರಕ್ತ ಗುಂಪನ್ನು ಗುರುತಿಸುತ್ತದೆ ಮತ್ತು ಮಗುವಿನ ರಕ್ತದಲ್ಲಿರುವ ಕೆಂಪು ರಕ್ತಕಣಗಳನ್ನು ನಾಶಪಡಿಸಲು ಯತ್ನಿಸುತ್ತದೆ. ಆದರೆ ಅದೃಷ್ಟವಶಾತ್ ಇಂತಹ ಪರಿಸ್ಥಿತಿಯನ್ನು ವಿಶೇಷ ಇಂಜೆಕ್ಷನ್ ಮೂಲಕ ತಪ್ಪಿಸಬಹುದಾಗಿದೆ.

ಗ್ರೂಪ್ ಬಿ ಸ್ಟ್ರೆಪ್ಟೊಕೊಕಲ್ ಸೋಂಕು!

ಗ್ರೂಪ್ ಬಿ ಸ್ಟ್ರೆಪ್ಟೊಕೊಕಲ್ ಸೋಂಕು!

ಗರ್ಭಾವಸ್ತೆಯಲ್ಲಿ ಕೆಲವೊಮ್ಮೆ ಕೆಲವು ಮಕ್ಕಳಿಗೆ ಜಿಬಿಎಸ್ (ಗರ್ಭಿಣಿ ಮಹಿಳೆಯ ಯೋನಿಯ ಅಥವಾ ಗುದನಾಳದ ಬ್ಯಾಕ್ಟೀರಿಯಾದ ಸೋಂಕು) ಬರಬಹುದು. ನಿಸ್ಸಂಶಯವಾಗಿ ತಾಯಿಯಿಂದ ಮಗುವಿಗೆ ಸೋಂಕು ತಗುಲುತ್ತದೆ ಮತ್ತು ಇದನ್ನು ತಪ್ಪಿಸಲು ನೀವು ಜಿಬಿಎಸ್ ಬ್ಯಾಕ್ಟೀರಿಯಾ ಕಂಡು ಹಿಡಿಯುವುದಕ್ಕೆ ಪರೀಕ್ಷೆಮಾಡಿಸಿಕೊಳ್ಳಬೇಕು. ನೀವು ಮೂವತ್ತೈದನೇ ಅಥವ ಮೂವತ್ತೇಳನೇ ವಾರದಲ್ಲಿ ಸಂಸ್ಕೃತಿಯ ಪರೀಕ್ಷೆ ಮಾಡಿಸಿಕೊಳ್ಳುವುದನ್ನು ಮರೆಯದೇ ಖಚಿತಪಡಿಸಿಕೊಳ್ಳಿ ಮತ್ತು ಪರೀಕ್ಷೆಯ ಫಲಿತಾಂಶದ ಪ್ರಕಾರ ಔಷಧಿಗಳನ್ನು ತೆಗೆದುಕೊಳ್ಳಿ. ನೀವು ಒಂದು ಉತ್ತಮ ಆರೋಗ್ಯ ರಕ್ಷಣೆ ಕೇಂದ್ರಕ್ಕೆ ಹೋದರೆ ನಿಮಗೆ ನಿಮಗೆ ಸರಿಯಾದ ಮಾರ್ಗದರ್ಶನ ದೊರೆಯುತ್ತದೆ.

English summary

10 Most Common Pregnancy Problems

Giving birth to a child is a terrible gift, a woman is happiest at this time of her life. However, the facts are that all the pregnancies are not easy. Although there are many women problems, Things can get pretty complicated during pregnancies and some of them can be very serious. Here are some complications that are most common among the women.
X
Desktop Bottom Promotion