For Quick Alerts
ALLOW NOTIFICATIONS  
For Daily Alerts

ನಿಮ್ಮ ಮಗುವನ್ನೂ ನಿಮ್ಮ ಸಾಕುಪ್ರಾಣಿಯ ಸಂಗಾತಿಯಾಗಿಸಿ!

|

ನಿಮ್ಮ ಮಗುವನ್ನು ಮನೆಗೆ ಕರೆತರುವಾಗ ನೀವೊಬ್ಬ ಹೊಸ ಅತಿಥಿಯನ್ನು ಬರಮಾಡಿಕೊಳ್ಳುವ ಸಿದ್ಧತೆಯಲ್ಲಿರುತ್ತೀರಿ. ಹೊಸ ಸಂಭ್ರಮ ಹೊಸ ಕಳೆಗೆ ಆ ಕ್ಷಣ ಸಾಕ್ಷಿಯಾಗುತ್ತದೆ.

ಗರ್ಭಿಣಿಯರು ಮಾಡಬಾರದ 10 ಕಾರ್ಯಗಳು

ಆದರೆ ನಿಮ್ಮ ಪ್ರೀತಿಯ ಸಾಕುಪ್ರಾಣಿ ಕೂಡ ನಿಮ್ಮ ಮನೆಯ ಒಬ್ಬ ಸದಸ್ಯನಾಗಿರುವಾಗ ನಿಮ್ಮ ಮಗುವನ್ನು ಅವಕ್ಕೆ ಹೇಗೆ ಪರಿಚಯಿಸುತ್ತೀರಿ ಎಂಬುದನ್ನು ನೀವು ಆಲೋಚಿಸಿದ್ದೀರಾ? ಮಗುವು ಅವುಗಳಿಗೆ ಹೊಸ ಅಪರಿಚಿತ. ಆದರೆ ಈ ಅಪರಿಚಿತ ತನವನ್ನು ಪರಿಚಯಕ್ಕೆ ತಿರುಗಿಸುವುದು ಅತೀ ಅಗತ್ಯ.

ಅದಕ್ಕಾಗಿಯೇ ಬೋಲ್ಡ್ ಸ್ಕೈ ಇಂದು ನಿಮ್ಮ ಸಾಕುಪ್ರಾಣಿಗೆ ನಿಮ್ಮ ಮಗುವನ್ನು ಪರಿಚಯಿಸುವುದು ಹೇಗೆ ಎಂಬುದನ್ನು ಕುರಿತು ಇಲ್ಲಿ ಸಮಾಲೋಚಿಸಲಿದೆ. ನಿಮ್ಮದೇ ಜೀವವನ್ನು ನಿಮ್ಮ ಜೀವವಾದ ಇನ್ನೊಂದಕ್ಕೆ ಪರಿಯಿಸುವಾಗ ಹೇಗೆ ಆತ್ಮೀಯತೆ ಸೃಷ್ಟಿಸುವುದು ಎಂಬುದನ್ನು ಕುರಿತು ಈ ಲೇಖನ ಬೆಳಕು ಚೆಲ್ಲಲಿದೆ.

ಮಗು ನಿಮ್ಮ ಮಾತು ಕೇಳುವಂತೆ ಮಾಡೋದು ಹೇಗೆ?

ನಾಯಕತ್ವದ ಮೇಲೆ ಗಮನ ಹರಿಸಿ:

ನಾಯಕತ್ವದ ಮೇಲೆ ಗಮನ ಹರಿಸಿ:

ನಿಮ್ಮ ನಾಯಿ ಹಾಗೂ ಮಗುವನ್ನು ಒಂದೇ ಕೋಣೆಯಲ್ಲಿರಿಸಿ. ಮತ್ತು ನಿಮ್ಮ ನಾಯಿಗೆ ನಿಮ್ಮದೇ ಮಗುವಿನ ಮೇಲೆ ಪ್ರೀತಿ ಉಂಟಾಗುವಂತೆ ಮಾಡಿ. ಅದು ಒಮ್ಮೆ ನಿಮ್ಮ ಮಗುವನ್ನು ಆತ್ಮೀಯವನ್ನಾಗಿಸಿಕೊಂಡರೆ ಮುಗಿಯಿತು ನಿಮಗಿಂತಲೂ ಚೆನ್ನಾಗಿ ಅದನ್ನು ನೋಡಿಕೊಳ್ಳುತ್ತದೆ.

ಚೆನ್ನಾಗಿ ಪರೀಕ್ಷಿಸಲಿ:

ಚೆನ್ನಾಗಿ ಪರೀಕ್ಷಿಸಲಿ:

ನಿಮ್ಮ ಹೊಸ ಮಗುವನ್ನು ಸಾಕುಪ್ರಾಣಿ ಒಮ್ಮೆ ಪರೀಕ್ಷಿಸಲಿ. ಒಂದು ಅಥವಾ ಎರಡು ಬಾರಿ ಮಗುವಿನ ಸುತ್ತಲೂ ಪ್ರದಕ್ಷಿಣೆ ಹಾಕಿ ಮಗುವನ್ನು ತನ್ನ ಗೆಳೆಯನ್ನಾಗಿಸಲು ಅದು ತೀರ್ಮಾನಿಸುತ್ತದೆ.

ಸಾಕುಪ್ರಾಣಿಗೆ ಅರ್ಥವಾಗುವಂತೆ ತಿಳಿಸಿ:

ಸಾಕುಪ್ರಾಣಿಗೆ ಅರ್ಥವಾಗುವಂತೆ ತಿಳಿಸಿ:

ನಿಮ್ಮ ನಾಯಿ ಅಥವಾ ಸಾಕುಪ್ರಾಣಿ ನಿಮ್ಮ ಸಂಜ್ಞೆಯನ್ನು ನಿಮ್ಮ ಮಾತನ್ನು ಆಲಿಸುತ್ತದೆ ಎಂದಾದಲ್ಲಿ ನಿಮ್ಮ ಮಗುವಿನ ಬಗ್ಗೆ ಅದಕ್ಕೆ ತಿಳಿಸಿ.

ನಾಯಿಯ ಬದಲಿಗೆ ಮಗುವಿಗೆ ಹೆಚ್ಚಿನ ಕಾಳಜಿ ಬೇಡ:

ನಾಯಿಯ ಬದಲಿಗೆ ಮಗುವಿಗೆ ಹೆಚ್ಚಿನ ಕಾಳಜಿ ಬೇಡ:

ನಿಮ್ಮ ಮನೆಯ ಮಗು ಆಗಮನವಾದೊಡನೆ ನಾಯಿಯನ್ನು ದೂರಾಗಿಸಿ ಮಗುವನ್ನು ಹೆಚ್ಚು ಮುದ್ದು ಮಾಡಬೇಡಿ. ಇದರಿಂದ ಮೂಕ ಪ್ರಾಣಿಯ ಮನಸ್ಸಿಗೆ ವೇದನೆಯಾಗಬಹುದು ಹಾಗೂ ಅದು ಮಗುವಿನ ಮೇಲೆ ದಾಳಿ ನಡೆಸಬಹುದು.

ನಾಯಿಯ ಅವಶ್ಯಕತೆಯನ್ನೂ ಗಮನಿಸಿ:

ನಾಯಿಯ ಅವಶ್ಯಕತೆಯನ್ನೂ ಗಮನಿಸಿ:

ನಿಮ್ಮ ನಾಯಿಯ ಬೇಕು ಬೇಡದ ಕಡೆಗೂ ಗಮನ ಕೊಡಿ. ಇದರಿಂದ ಅದು ಕೂಡ ನಿಮ್ಮ ಮಗುವಿನ ಆಗಮನವನ್ನು ಹೃತ್ಪೂರ್ವಕವಾಗಿ ಮನದುಂಬಿಕೊಳ್ಳುತ್ತದೆ. ಪ್ರಾಣಿಗೆ ನಿಮ್ಮ ಪ್ರೀತಿ ಅದರತ್ತ ಕೂಡ ಇದೆ ಎಂಬುದನ್ನು ಮನನ ಮಾಡಿಸಿ.

ಆಹಾರ ಉಣಿಸುವುದು:

ಆಹಾರ ಉಣಿಸುವುದು:

ನಿಮ್ಮ ಮಗುವಿಗೆ ಮತ್ತು ನಾಯಿಗೆ ನೀಡುವ ಆಹಾರ ಸಮಯ ಬೇರೆ ಬೇರೆಯಾಗಿರಲಿ. ನಿಮ್ಮ ಮಗುವಿಗೆ ಹಾಲುಣಿಸುತ್ತಿದ್ದೀರಿ ಎಂದಲ್ಲಿ ನಿಮ್ಮ ಮಗುವನ್ನು ಕೋಣೆಯ ಹೊರಗೆ ಕರೆದುಕೊಂಡು ಹೋಗಿ

ಇಬ್ಬರನ್ನು ಮಾತ್ರ ಬಿಡಬೇಡಿ:

ಇಬ್ಬರನ್ನು ಮಾತ್ರ ಬಿಡಬೇಡಿ:

ಇಬ್ಬರನ್ನು ಒಂದೇ ಕೋಣೆಯಲ್ಲಿ ನೀವಿಲ್ಲದೆ ಬಿಡಬೇಡಿ. ನಿಮ್ಮ ಮನೆಯ ನಾಯಿ ಅದಕ್ಕೆ ತೊಂದರೆಯನ್ನುಂಟು ಮಾಡದಿದ್ದರೂ ನಾಯಿ ಆಟವಾಡುವುದು ಮಗುವಿಗೆ ಎಳಸು ಮಗುವಿಗೆ ಹಾನಿ ಉಂಟು ಮಾಡಬಹುದು.

ಸುಮಧುರ ಆತ್ಮೀಯತೆ ಏರ್ಪಡುವಂತೆ ಮಾಡಿ:

ಸುಮಧುರ ಆತ್ಮೀಯತೆ ಏರ್ಪಡುವಂತೆ ಮಾಡಿ:

ನಿಮ್ಮ ಮಗುವನ್ನೂ ನಾಯಿಯನ್ನೂ ಸಮನಾಗಿ ಉಪಚರಿಸಿ. ಮಗುವಿನ ಕೈಯನ್ನು ನಾಯಿಯ ಕೈಗೆ ಕೊಡುವುದು ಮೊದಲಾದ ಪ್ರಕ್ರಿಯೆಗಳನ್ನು ಮಾಡಿ ಇದರಿಂದ ಒಂದು ಸುಮಧುರ ಆತ್ಮೀಯತೆ ಅಲ್ಲಿ ಏರ್ಪಡುತ್ತದೆ.

ಇಬ್ಬರ ಪ್ರಸ್ತುತತೆಯನ್ನು ಪರಿಗಣಿಸಿ:

ಇಬ್ಬರ ಪ್ರಸ್ತುತತೆಯನ್ನು ಪರಿಗಣಿಸಿ:

ಒಂದೇ ಕೋಣೆಯಲ್ಲಿ ನಿಮ್ಮ ಮಗು ಮತ್ತು ನಿಮ್ಮ ನಾಯಿ ಇದ್ದಲ್ಲಿ ಇಬ್ಬರಿಗೂ ಪರಿಗಣನೆ ನೀಡಿ. ಇದರಿಂದ ನಿಮ್ಮ ನಾಯಿಗೂ ಮಗುವಿಗೂ ಅನ್ಯೋನ್ಯತೆ ಉಂಟಾಗುತ್ತದೆ.

ಇಬ್ಬರಿಗೂ ವಿಶೇಷ ಸಮಯ:

ಇಬ್ಬರಿಗೂ ವಿಶೇಷ ಸಮಯ:

ಇಬ್ಬರಿಗೂ ವಿಶೇಷ ಸಮಯವನ್ನು ನೀಡುವುದು ಅತಿ ಮುಖ್ಯವಾದುದು. ಮಗು ಹಾಗೂ ನಿಮ್ಮ ಸಾಕು ಪ್ರಾಣಿ ಇಬ್ಬರೂ ವಿಶೇಷವಾಗಿರುವಂತೆ ನೋಡಿಕೊಳ್ಳಿ.

Story first published: Thursday, May 8, 2014, 14:29 [IST]
X
Desktop Bottom Promotion