For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯಾಗ ಬಯಸುವವರಿಗೆ ಟಿಪ್ಸ್

By ವಿವೇಕ್
|

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಮಕ್ಕಳಾಗದ ನೋವು ಅನುಭವಿಸುತ್ತಿದ್ದಾರೆ. ಮಕ್ಕಳಾಗದಿರಲು ನಾನಾ ಕಾರಣಗಳಿರುತ್ತವೆ. ಲೇಟಾಗಿ ಮದುವೆಯಾಗಿದ್ದು, ಹಾರ್ಮೋನ್ ಗಳಲ್ಲಿ ಬದಲಾವಣೆ, ಮಾನಸಿಕ ಒತ್ತಡ ಹೀಗೆ ಅನೇಕ ಕಾರಣಗಳಿರುತ್ತದೆ.

ಇತ್ತೀಚಿಗೆ ನಾನಾ ವೈದ್ಯಕೀಯ ಸೌಲಭ್ಯಗಳಿವೆ. ಇಲ್ಲಿ ಹೋಗಿ ಚಿಕಿತ್ಸೆ ಪಡೆಯುವುದರ ಜೊತೆಗೆ ಈ ಕೆಳಗಿನ ಅಂಶಗಳನ್ನು ಕೂಡ ಗಮನಿಸಿದರೆ ಗರ್ಭದಾರಣೆಯಾಗಬಹುದು.

Ways To Boost Fertility Among Women

ನಿಮ್ಮ ಓವ್ಯೂಲೇಷನ್ ದಿನ ತಿಳಿದುಕೊಳ್ಳಿ
ಮುಟ್ಟಿನ ಅಂತ 28 ದಿನಗಳಾಗಿದ್ದರೆ ಅಂತಹವರಿಗೆ ಮುಟ್ಟಾಗಿ 14 ನೇ ದಿನ ಓವ್ಯೂಲೇಷನ್ ದಿನವಾಗಿರುತ್ತದೆ. ಈ ಸಮಯದಲ್ಲಿ ಪ್ರಯತ್ನಿಸಿದರೆ ಮಕ್ಕಳಾಗುವ ಸಾಧ್ಯತೆ ಹೆಚ್ಚು.

ಆಹಾರಕ್ರಮ
ಫಾಸ್ಟ್ ಫುಡ್ ಗಳಿಂದ ದೂರವಿರಬೇಕು. ಪೋಷಕಾಂಶಗಳು ಅಧಿಕವಿರುವ ಆಹಾರವನ್ನು ತಿನ್ನಬೇಕು. ಮೊಟ್ಟೆ, ಎಲೆಕೋಸು, ಸೋಯಾ, ಮೊಳಕೆ ಬರಿಸಿದ ಕಾಳುಗಳು, ಬಾಳೆಹಣ್ಣು ಈ ರೀತಿಯ ಆಹಾರಗಳನ್ನು ಆಹಾರಕ್ರಮದಲ್ಲಿ ಸೇರಿಸಬೇಕು.

ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು
ಮಾನಸಿಕ ಒತ್ತಡ ಕೂಡ ಮಗುವಾಗದಿರಲು ಪ್ರಮುಖ ಕಾರಣವಾಗಿದೆ. ವ್ಯಾಯಾಮ, ಯೋಗದಿಂದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಬೇಕು.

ದೇಹದ ತೂಕ
ಒಬೆಸಿಟಿ ಇರುವವರಿಗೆ ಮಕ್ಕಳಾಗುವ ಸಾಧ್ಯತೆ ಕಡಿಮೆ. ಆದ್ದರಿಂದ ದೇಹದ ತೂಕವನ್ನು ಕಮ್ಮಿ ಮಾಡಬೇಕು, ಹಾಗಂತ ಉಪವಾಸವಿದ್ದು ತೂಕ ಕಮ್ಮಿ ಮಾಡಬೇಡಿ, ವ್ಯಾಯಾಮ, ಉತ್ತಮ ಡಯಟ್ ಇವುಗಳಿಂದ ದೇಹದ ತೂಕವನ್ನು ಕಮ್ಮಿ ಮಾಡಿಕೊಳ್ಳಿ.

ಲೈಂಗಿಕ ಕ್ರಿಯೆ
ಲೈಂಗಿಕ ಆಸಕ್ತಿ ಇಲ್ಲದಿರುವುದು, ಕಡಿಮೆ ಲೈಂಗಿಕ ಕ್ರಿಯೆ ಇವುಗಳಿಂದ ಕೂಡ ಸಂತಾನೋತ್ಪತ್ತಿ ಸಾಮರ್ಥ್ಯ ಕಡಿಮೆಯಾಗುವುದು. ಆದ್ದರಿಂದ ಗರ್ಭಿಣಿಯಾಗ ಬಯಸುವವರು ಈ ಎಲ್ಲಾ ಅಂಶಗಳನ್ನು ಗಮನಿಸುವುದು ಒಳ್ಳೆಯದು.

English summary

Ways To Boost Fertility Among Women | Tips For Women | ಮಹಿಳೆಯರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸಲು ಟಿಪ್ಸ್ | ಮಹಿಳೆಯರಿಗೆ ಕೆಲ ಸಲಹೆಗಳು

Women can try these natural ways to boost their fertility. For example, eating foods that increase fertility can help you get over fertility problems.
X
Desktop Bottom Promotion