For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರ ವಾಂತಿ ಸಮಸ್ಯೆಗೆ ಮನೆ ಮದ್ದು

|

ಗರ್ಭಿಣಿಯರಿಗೆ ಮೊದಲು 3 ತಿಂಗಳಿನಲ್ಲಿ ತಲೆಸುತ್ತು, ವಾಂತಿ ಕಂಡು ಬರುತ್ತದೆ. ಬೆಳಗ್ಗೆ ಹೊತ್ತಿನಲ್ಲಿ ಈ ರೀತಿಯ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತದೆ. ಕೆಲವರಿಗೆ ಆಹಾರ ತಿಂದ ತಕ್ಷಣ ವಾಂತಿ ಬರುವುದರಿಂದ ಯಾವ ಆಹಾರವನ್ನು ತಿನ್ನಲು ಸಾಧ್ಯವಾಗುವುದಿಲ್ಲ. ಈ ಸಂದರ್ಭದಲ್ಲಿ ವೈದ್ಯರ ಸಲಹೆಯನ್ನು ಪಡೆದುಕೊಂಡು ಮನೆಮದ್ದು ಕುಡಿದರೆ ವಾಂತಿ ನಿಲ್ಲವುದು.

ಅದರಲ್ಲೂ ಈ ಕೆಳಗಿನ ಮನೆ ಮದ್ದುಗಳು ವಾಂತಿ ತಡೆಗಟ್ಟುವಲ್ಲಿ ತುಂಬಾ ಪರಿಣಾಮಕಾರಿಯಾಗಿವೆ:

Vomiting During Pregnancy

ಸುಟ್ಟ ನಿಂಬೆ: ನಿಂಬೆ ಹಣ್ಣಿನ ತುಂಡನ್ನು ಕಡಿಮೆ ಉರಿಯಲ್ಲಿ ಸುಟ್ಟು ನಂತರ ಅದನ್ನು ಬಿಸಿಲಿನಲ್ಲಿಟ್ಟು ಒಣಗಿಸಿ ಅದನ್ನು ಪುಡಿ ಮಾಡಿ, ಆ ಪುಡಿಯನ್ನು ವಾಂತಿ ಬರುತ್ತಿದೆ ಎಂದು ಅನಿಸುವಾಗ ಕುಡಿಯಿರಿ. ಈ ರೀತಿ ಮಾಡಿದರೆ ಯಾವುದೇ ಅಡ್ಡ ಪರಿಣಾಮವಿಲ್ಲ, ವಾಂತಿ ಕೂಡ ಬರುವುದಿಲ್ಲ.

ಶುಂಠಿ:
ವಾಂತಿ ಬರುವ ರೀತಿ ಅನಿಸದಿರಲು ಚಿಕ್ಕ ತುಂಡು ಶುಂಠಿ ತಿನ್ನಿರಿ. ಒಮ್ಮೆ ತಿಂದರೆ ಆ ದಿನಾವಿಡೀ ವಾಂತಿ ಬರದಂತೆ ತಡೆಯುತ್ತದೆ.

ನಿಂಬೆ ಪಾನಕ: ನಿಂಬೆ ಪಾನಕ ಕುಡಿಯುವುದರಿಂದ ವಾಂತಿ ಬರದಂತೆ ತಡೆಯಬಹುದು, ಸುಸ್ತೂ ಕಡಿಮೆಯಾಗುತ್ತದೆ.

ಏಲಕ್ಕಿ: ಏಲಕ್ಕಿಯನ್ನು ಜಗಿದರೆ ವಾಂತಿ ಮಾಡುವುದು ಕಡಿಮೆಯಾಗುವುದು. ಇದನ್ನು ತಿನ್ನುವ ಮೊದಲು ವೈದ್ಯರ ಸಲಹೆ ಪಡೆಯಿರಿ.

ಹರ್ಬಲ್ ಟೀ: ಶುಂಠಿಯಿಂದ ತಯಾರಿಸಿದ ಹರ್ಬಲ್ ಟೀ ಕುಡಿಯುವುದರಿಂದ ವಾಂತಿ ಬರುವುದನ್ನು ಕಡಿಮೆ ಮಾಡಬಹುದು.

English summary

Vomiting During Pregnancy: Home Remedies | Tips For Pregnancy | ಗರ್ಭಿಣಿಯರಿಗೆ ವಾಂತಿ ಬರದಂತೆ ತಡೆಯಲು ಮನೆ ಮದ್ದು | ಆರೋಗ್ಯಕ್ಕಾಗಿ ಕೆಲ ಸಲಹೆ

Whenever symptoms of vomiting are felt, many pregnant women have something that makes them feel better. You can try some home remedies to cure vomiting during pregnancy. Take a look at some Indian home remedies to cure vomiting during pregnancy.
X
Desktop Bottom Promotion