For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರಿಗೆ ಅವಶ್ಯಕವಾದ ವಿಟಮಿನ್ಸ್ ಆಹಾರಗಳು

|

ಗರ್ಭಧಾರಣೆಯ ಬಳಿಕ ಮಹಿಳೆಯರು ತಮ್ಮ ಆಹಾರಕ್ರಮದಲ್ಲಿ ಸಾಕಷ್ಟು ಬದಲಾವಣೆ ತರಬೇಕಾಗುತ್ತದೆ. ಕೆಲವೊಂದು ಆಹಾರಗಳನ್ನು ತಿನ್ನಬೇಕು, ಕೆಲವೊಂದನ್ನು ತಿನ್ನಬಾರದು. ಈ ಸಮಯದಲ್ಲಿ ವಿಟಮಿನ್ ಮತ್ತು ಪೋಷಕಾಂಶಗಳಿರುವ ಆಹಾರವನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು.

ಕೆಲ ಮಹಿಳೆಯರಿಗೆ ಈ ಸಮಯದಲ್ಲಿ ವಿಟಮಿನ್ ಕೊರತೆ ಉಂಟಾಗುತ್ತದೆ. ವಿಟಮಿನ್ ಕೊರತೆ ಉಂಟಾದಾಗ ವಿಟಮಿನ್ ಮಾತ್ರೆಗಳ ಬದಲು ಆ ವಿಟಮಿನ್ ಇರುವ ಆಹಾರಗಳನ್ನು ತಿನ್ನುವುದು ಒಳ್ಳೆಯದು. ಇಲ್ಲಿ ನಾವು ಗರ್ಭಾವಸ್ಥೆಯಲ್ಲಿ ಅವಶ್ಯಕವಾದ ವಿಟಮಿನ್ ಗಳು ಮತ್ತು ಅವು ಇರುವ ಆಹಾರಗಳ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

ವಿಟಮಿನ್ ಎ-ಹಾಲು

ವಿಟಮಿನ್ ಎ-ಹಾಲು

ಹಾಲು ಹಾಲಿನಲ್ಲಿ ವಿಟಮಿನ್ ಎ ಇರುವುದರಿಂದ ದಿನದಲ್ಲಿ 2 ಗ್ಲಾಸ್ ಹಾಲು ಕುಡಿಯಿರಿ, ಆದರೆ ಕೆನೆರಹಿತ ಹಾಲನ್ನು ಕುಡಿಯಿರಿ.

 ವಿಟಮಿನ್ ಎ-ಸಿಹಿ ಕುಂಬಳಿಕಾಯಿ

ವಿಟಮಿನ್ ಎ-ಸಿಹಿ ಕುಂಬಳಿಕಾಯಿ

ಹೆಚ್ಚು ಖಾರ ಹಾಕದೆ ಸಿಹಿ ಕುಂಬಳ ಖಾದ್ಯವನ್ನು ಮಾಡಿ ತಿನ್ನಿ. ಇದರ ಬೀಜ ಕೂಡ ತುಂಬಾ ಒಳ್ಳೆಯದು.

 ವಿಟಮಿನ್ ಎ-ಮೊಟ್ಟೆ

ವಿಟಮಿನ್ ಎ-ಮೊಟ್ಟೆ

ವಾರಕ್ಕೊಮ್ಮೆ ಅಥವಾ ಎರಡು ಬಾರಿ ಮೊಟ್ಟೆ ತಿನ್ನಿ. ಇದರಿಂದ ನಿಮಗೂ, ನಿಮ್ಮ ಮಗುವಿಗೂ ಅಗತ್ಯವಾದ ವಿಟಮಿನ್ ಎ ದೊರೆಯುವುದು.

 ವಿಟಮಿನ್ ಎ-ಕ್ಯಾರೆಟ್

ವಿಟಮಿನ್ ಎ-ಕ್ಯಾರೆಟ್

ಅರ್ಧ ಬೇಯಿಸಿದ ಕ್ಯಾರೆಟ್ ತುಂಬಾ ಒಳ್ಳೆಯದು. ಕ್ಯಾರೆಟ್ ಜ್ಯೂಸ್ ಕುಡಿಯಿರಿ, ಸುಸ್ತು ಕಡಿಮೆಯಾಗುವುದು.

 ವಿಟಮಿನ್ ಎ-ಲಿವರ್

ವಿಟಮಿನ್ ಎ-ಲಿವರ್

ವಿಟಮಿನ್ ಎ ಅತ್ಯಧಿಕವಾಗಿರುವ ಮತ್ತೊಂದು ಆಹಾರವೆಂದರೆ ಲಿವರ್.

ವಿಟಮಿನ್ ಸಿ-ಸ್ಟ್ರಾಬೆರಿ

ವಿಟಮಿನ್ ಸಿ-ಸ್ಟ್ರಾಬೆರಿ

ಸ್ಟ್ರಾಬೆರಿ ಜ್ಯೂಸ್ ಅನ್ನು ಪ್ರತೀದಿನ ಕುಡಿಯಬಹುದು. ಇದು ನಿಮ್ಮ ಮುಖದ ಕಳೆಯನ್ನು ಹೆಚ್ಚಿಸಿ ಆರೋಗ್ಯವನ್ನು ವೃದ್ಧಿಸುತ್ತದೆ.

ವಿಟಮಿನ್ ಸಿ-ಗ್ರೇಪ್ ಫ್ರೂಟ್

ವಿಟಮಿನ್ ಸಿ-ಗ್ರೇಪ್ ಫ್ರೂಟ್

ಈ ಗ್ರೇಪ್ ಫ್ರೂಟ್ ನಿಮ್ಮ ಮಗುವಿನ ಬೆಳವಣಿಗೆಗೆ ತುಂಬಾ ಒಳ್ಳೆಯದು. ನಿಮ್ಮಲ್ಲಿಯೂ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.

ವಿಟಮಿನ್ ಸಿ-ಸೀಬೆ ಕಾಯಿ

ವಿಟಮಿನ್ ಸಿ-ಸೀಬೆ ಕಾಯಿ

ದಿನಕ್ಕೆ ಒಂದು ಸೀಬೆ ಹಣ್ಣು ತಿನ್ನಿ. ಇದನ್ನು ಸಿಪ್ಪೆ ಸಹಿತ ತಿಂದರೆ ಮತ್ತಷ್ಟು ಒಳ್ಳೆಯದು.

ವಿಟಮಿನ್ ಸಿ-ಟೊಮೆಟೊ

ವಿಟಮಿನ್ ಸಿ-ಟೊಮೆಟೊ

ಟೊಮೆಟೊ ಹಣ್ಣಿನಲ್ಲಿ ವಿಟಮಿನ್ ಸಿ ಇದ್ದು, ಇದರ ಖಾದ್ಯ ಮತ್ತು ಇದರಿಂದ ಜ್ಯೂಸ್ ಮಾಡಿ ಕುಡಿಯುವುದು ಒಳ್ಳೆಯದು.

ವಿಟಮಿನ್ ಸಿ-ಕೆಂಪು ದುಂಡು ಮೆಣಸು

ವಿಟಮಿನ್ ಸಿ-ಕೆಂಪು ದುಂಡು ಮೆಣಸು

ಕೆಂಪು ದುಂಡು ಮೆಣಸನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ.

ವಿಟಮಿನ್ ಸಿ-ಕೆಂಪು ದುಂಡು ಮೆಣಸು

ವಿಟಮಿನ್ ಸಿ-ಕೆಂಪು ದುಂಡು ಮೆಣಸು

ದಿನಕ್ಕೆ ಒಂದು ಕಿತ್ತಳೆ ತಿನ್ನುವುದು ಕೂಡ ಒಳ್ಳೆಯದು.

ವಿಟಮಿನ್ ಡಿ-ಮೊಟ್ಟೆಯ ಹಳದಿ

ವಿಟಮಿನ್ ಡಿ-ಮೊಟ್ಟೆಯ ಹಳದಿ

ಮೊಟ್ಟೆಯ ಹಳದಿಯನ್ನು ತಿನ್ನದಿರಬೇಡಿ, ಏಕೆಂದರೆ ಇದರಲ್ಲಿ ನಿಮ್ಮ ದೇಹಕ್ಕೆ ಅಗತ್ಯವಾದ ವಿಟಮಿನ್ ಡಿ ಇದೆ.

ವಿಟಮಿನ್ ಡಿ-ಕೆಂಪು ಮಾಂಸ

ವಿಟಮಿನ್ ಡಿ-ಕೆಂಪು ಮಾಂಸ

ನಾನ್ ವೆಜ್ ತಿನ್ನುವವರಾದರೆ ವಾರಕ್ಕೊಮ್ಮೆ ಕೆಂಪು ಮಾಂಸ ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ ಡಿಯನ್ನು ಒದಗಿಸಬಹುದು.

ವಿಟಮಿನ್ ಡಿ- ಸಮುದ್ರಾಹಾರ

ವಿಟಮಿನ್ ಡಿ- ಸಮುದ್ರಾಹಾರ

ಸಮುದ್ರಾಹಾರಗಳಲ್ಲಿ ವಿಟಮಿನ್ ಡಿ ಮತ್ತು ಇತರ ಪೋಷಕಾಂಶಗಳು ಹೇರಳವಾಗಿದೆ.

ವಿಟಮಿನ್ ಡಿ- ಅಣಬೆ

ವಿಟಮಿನ್ ಡಿ- ಅಣಬೆ

ವಿಟಮನ್ ಡಿ ಇರುವ ಮತ್ತೊಂದು ಅತ್ಯುತ್ತಮವಾದ ಆಹಾರವೆಂದರೆ ಅಣಬೆ.

ವಿಟಮಿನ್ ಇ- ನಟ್ಸ್

ವಿಟಮಿನ್ ಇ- ನಟ್ಸ್

ನಟ್ಸ್ ನಲ್ಲಿ ವಿಟಮಿನ್ ಇ ಇದೆ. ದಿನದಲ್ಲಿ ಒಂದರಿಂದ ಎರಡು ಬಗೆಯ ನಟ್ಸ್ ತಿನ್ನಿ.

ವಿಟಮಿನ್ ಇ- ಆಲೀವ್ ಎಣ್ಣೆ

ವಿಟಮಿನ್ ಇ- ಆಲೀವ್ ಎಣ್ಣೆ

ಮೈ ತೂಕ ಹೆಚ್ಚದಿರಲು ಅಧಿಕ ಕೊಬ್ಬಿನ ಎಣ್ಣೆ ಬಳಸುವ ಬದಲು ಆಲೀವ್ ಎಣ್ಣೆ ಬಳಸಿ. ಇದರಲ್ಲಿ ವಿಟಮಿನ್ ಇ ಪೋಷಕಾಂಶವಿದೆ.

ವಿಟಮಿನ್ ಇ- ವೆಜಿಟೇಬಲ್ ಆಯಿಲ್

ವಿಟಮಿನ್ ಇ- ವೆಜಿಟೇಬಲ್ ಆಯಿಲ್

ಅಡುಗೆಗೆ ಸ್ವಲ್ಪ ವೆಜಿಟೇಬಲ್ ಆಯಿಲ್ ಬಳಸಿ ಅಡುಗೆ ಮಾಡಿ ತಿನ್ನುವುದು ಒಳ್ಳೆಯದು.

ವಿಟಮಿನ್ ಇ- ಪಾಲಾಕ್

ವಿಟಮಿನ್ ಇ- ಪಾಲಾಕ್

ವಿಟಮಿನ್ ಕೆ ಕೊರತೆ ಉಂಟಾಗದಿರಲು ಪಾಲಾಕ್ ಸೊಪ್ಪನ್ನು ಹೆಚ್ಚಾಗಿ ತಿನ್ನಿ.

ವಿಟಮಿನ್ ಇ- ಬೀನ್ಸ್

ವಿಟಮಿನ್ ಇ- ಬೀನ್ಸ್

ಬೀನ್ಸ್ ನಲ್ಲಿ ಕೂಡ ವಿಟಮಿನ್ ಕೆ ಅಧಿಕವಿದೆ. ಬೀನ್ಸ್ ಅನ್ನು ಬೇಯಿಸಿ ತಿನ್ನುವುದು ಕೂಡ ಒಳ್ಳೆಯದು.

English summary

Vitamin Foods To Be Consumed During Pregnancy

During pregnancy, there are a number of Vitamins one must consume for the baby's health as well as for the mother. Vitamins like A, D, C is a must for a pregnant mother to consume during her pregnancy.
X
Desktop Bottom Promotion