For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆ ನಡೆಸಬಹುದಾ?

By Super
|

ಹೊಸದಾಗಿ ತಾಯಿಯಾಗುತ್ತಿದ್ದರೆ ಸಂತೋಷದ ಜೊತೆಗೆ ಸಾಕಷ್ಟು ಆತಂಕಗಳು ಎದುರಾಗುವುದು ಸಹಜ.ಯಾವುದು ಸರಿ ಯಾವುದು ತಪ್ಪು ಎಂಬುದರ ಬಗ್ಗೆ ಗೊಂದಲಗಳು ಇದ್ದೇ ಇರುತ್ತವೆ. ತಾಯಿ ಆಗುತ್ತಿದ್ದಂತೆ ತನ್ನ ಜೊತೆಗೆ ಮಗುವಿನ ಬೆಳವಣಿಗೆ ಅದರ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚುತ್ತದೆ. ಸಾಕಷ್ಟು ಮೂಡನಂಬಿಕೆಗಳು ಗರ್ಭಿಣಿ ಮಹಿಳೆಗೆ ಇನ್ನಷ್ಟು ಒತ್ತಡ ತಂದುಬಿಡಬಹುದು. ಅವುಗಳ ಬಗ್ಗೆ ಮೊದಲೇ ತಿಳಿದುಕೊಳ್ಳುವುದು ಒಳಿತು.

ಬಹುಶಃ ಗರ್ಭಿಣಿಯಾದಾಗ ಲೈಂಗಿಕ ಕ್ರಿಯೆ ನಡೆಸುವುದರಿಂದ ಆಗುವ ತೊಂದರೆಗಳ ಬಗ್ಗೆ ಸಾಕಷ್ಟು ಮೂಡನಂಬಿಕೆಗಳನ್ನು ಕೇಳಿರುತ್ತೀರಿ. ಜೊತೆಗೆ ಹಾಸ್ಯವನ್ನು ಕೂಡ ಕೇಳಿರುತ್ತೀರಿ (ಮಗುವಿಗೆ ಲೈಂಗಿಕ ಕ್ರಿಯೆ ಮಾಡುವುದರಿಂದ ಯಾವುದೇ ತೊಂದರೆ ಇಲ್ಲ). ವೈದ್ಯರು ಹೇಳುವ ಸತ್ಯಾಂಶದ ಪ್ರಕಾರ ಲೈಂಗಿಕ ಕ್ರಿಯೆ ನಡೆಸುವುದರಿಂದ ಮಗುವಿಗೆ ಯಾವುದೇ ಅಪಾಯವಾಗುವುದಿಲ್ಲ.

Truth About Having Sex While Pregnant

ನೀವು ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಸಕ್ರಿಯಗೊಳ್ಳಬೇಕು ಎಂದು ಬಯಸುತ್ತೀರಿ ಆದರೆ ನಿಮ್ಮ ಮನಸ್ಸಿನಲ್ಲಿ 'ನಾನು ಗರ್ಭಿಣಿ,ಮಗುವಿಗೆ ಇದರಿಂದ ತೊಂದರೆ ಆದರೆ?, ಹೆರಿಗೆ ನೋವು ಕಾಣಿಸಿಕೊಂಡರೆ?' ಈ ಪ್ರಶ್ನೆಗಳು ನಿಮ್ಮನ್ನು ಕಾಡಬಹುದು ಮತ್ತು ಇದೊಂದು ದೊಡ್ಡ ಸಮಸ್ಯೆ ಎಂದೆನಿಸಬಹುದು. ಆದರೆ ಗರ್ಭ ಧರಿಸಿದ ಸಂದರ್ಭದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದರಿಂದ ಯಾವುದೇ ಸಮಸ್ಯೆ ಇಲ್ಲ ಎನ್ನಲಾಗುತ್ತದೆ. ನಿಮ್ಮ ವೈದ್ಯರ ಬಳಿಯಲ್ಲಿ ಅದರ ಬಗ್ಗೆ ಕೂಲಂಕುಶವಾಗಿ ಮಾತನಾಡಿ ಯಾವುದೇ ಸಮಸ್ಯೆ ಇಲ್ಲ ಎಂಬುದರ ಬಗ್ಗೆ ಖಾತ್ರಿ ಪಡಿಸಿಕೊಳ್ಳಿ. ನಿಮಗೆ ಗರ್ಭಪಾತ ಆಗುವ ಸಂಭವ ಇದ್ದರೆ ಅಥವಾ ಬೇಗ ಹೆರಿಗೆ ನೋವು ಕಾಣಿಸಿಕೊಳ್ಳುವ ಸಂಭವವಿದ್ದರೆ ಬಹುಶಃ ವೈದ್ಯರು ನಿಮಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬಾರದು ಎಂದು ಕೂಡ ಸಲಹೆ ನೀಡಬಹುದು.

ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆ ಇದರ ಬಗ್ಗೆ ಈ ಕೆಳಗಿನ ನಂಬಿಕೆಗಳು ಸತ್ಯಕ್ಕೆ ದೂರವಾದದ್ದು.

ಮಿಥ್ಯೆ - ಲೈಂಗಿಕ ಕ್ರಿಯೆಯಿಂದ ಮಗುವಿಗೆ ನೋವಾಗಬಹುದು

ಗರ್ಭ ಧರಿಸಿದಾಗ ಲೈಂಗಿಕ ಕ್ರಿಯೆ ಮಾಡುವುದರಿಂದ ಮಗುವಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗುವುದಿಲ್ಲ. ನಿಮ್ಮ ಗರ್ಭಧಾರಣೆಯಲ್ಲಿ ಯಾವುದೇ ರೀತಿಯ ತೊಂದರೆ ಇದ್ದರೆ ವೈದ್ಯರು ನಿಮಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳದಂತೆ ಮೊದಲೇ ತಿಳಿಸಿಬಿಡುತ್ತಾರೆ.

ನಿಮಗೆ ಗರ್ಭಪಾತವಾದ ಇತಿಹಾಸ ಇದ್ದರೆ ಅಥವಾ ಯೋನಿ ಸ್ರಾವ ಕಂಡು ಬಂದರೆ,ಆಮ್ನಿಯೋಟಿಕ್ ದ್ರವ ಸೋರಿಕೆ ಕಂಡು ಬಂದರೆ ಅಂತಹ ಸಂದರ್ಭದಲ್ಲಿ ವೈದ್ಯರು ಲೈಂಗಿಕ ಕ್ರಿಯೆ ಮಾಡದಿರುವಂತೆ ಸಲಹೆ ನೀಡಬಹುದು.

ಮಿಥ್ಯೆ - ಮಗುವಿಗೆ ಏನಾಗುತ್ತಿದೆ ಎಂಬುದು ತಿಳಿದುಬಿಡುತ್ತದೆ!

ಮಗುವಿಗೆ ಅಪ್ಪ ಅಮ್ಮ ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಸ್ವಲ್ಪವೂ ಅರಿವಿರುವುದಿಲ್ಲ. ಆಮ್ನಿಯೋಟಿಕ್ ಚೀಲ ಮತ್ತು ಗರ್ಭಾಶಯದ ಸ್ನಾಯುಗಳಿಂದ ಮಗು ರಕ್ಷಿಸಲ್ಪಟ್ಟಿರುತ್ತದೆ. ಗರ್ಭಕಂಠ ಒಂದು ದಪ್ಪ ಲೋಳೆ ಪದರದಿಂದ ಮುಚ್ಚಿರುತ್ತದೆ.

ಮಿಥ್ಯೆ - ಲೈಂಗಿಕ ಕ್ರಿಯೆ ಗರ್ಭಪಾತ ಆಗಲು ಕಾರಣವಾಗಬಹುದು

ಲೈಂಗಿಕ ಕ್ರಿಯೆ ಮತ್ತು ಸಂಬೋಗೋದ್ರೇಕದ ಪರಾಕಾಷ್ಟೆಗಳು ಗರ್ಭಪಾತಕ್ಕೆ ಕಾರಣವಾಗುವುದಿಲ್ಲ. ಪರಾಕಾಷ್ಠೆಯ ಕುಗ್ಗುವಿಕೆ ಮತ್ತು ಗರ್ಭಧಾರಣಾ ಕುಗ್ಗುವಿಕೆ ಸಾಕಷ್ಟು ವಿಭಿನ್ನವಾಗಿರುತ್ತವೆ. ಯಾವುದಕ್ಕೂ ಮೊದಲು ವೈದ್ಯರಲ್ಲಿ ಗರ್ಭಾವಸ್ಥೆಯಲ್ಲಿ ಯಾವುದೇ ಅಪಾಯ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಮಯೊ ಚಿಕಿತ್ಸಾಲಯದ ಪ್ರಕಾರ ಗರ್ಭಪಾತಗಳು ಸಾಮಾನ್ಯವಾಗಿ ಅಸಹಜ ವರ್ಣತಂತು ಮತ್ತು ಮಗುವಿನ ಬೆಳವಣಿಗೆಗೆ ಸಂಬಂಧಪಟ್ಟ ಸಮಸ್ಯೆಗಳಿಂದ ಸಂಭವಿಸುತ್ತವೆ.

ಮಿಥ್ಯೆ- ಗರ್ಭಾವಸ್ಥೆ ಕಾಮಾಸಕ್ತಿಯನ್ನು ಕೊಲ್ಲುತ್ತದೆ

ವಾಸ್ತವವಾಗಿ ಹೆಚ್ಚಿನ ಮಹಿಳೆಯರಿಗೆ ಗರ್ಭಿಣಿಯಾದಾಗ ಕಾಮಾಸಕ್ತಿ ಹೆಚ್ಚುತ್ತದೆ ಎಂದು ಡೈಂ ಮಾರ್ಚ್ ಹೇಳುತ್ತಾರೆ. ಈ ಹಠಾತ್ ಬದಲಾವಣೆಗೆ ಮೂಲ ಹಾರ್ಮೋನ್ ಗಳು.ಗರ್ಭಾವಸ್ಥೆಯ ವಿವಿಧ ಹಂತದಲ್ಲಿ ಹಾರ್ಮೋನುಗಳ ಸಾಮ್ಯತೆ ಬದಲಾಗುವುದರಿಂದ ಕಾಮಾಸಕ್ತಿಯಲ್ಲಿ ಕೂಡ ಬದಲಾವಣೆ ಕಂಡು ಬರುತ್ತದೆ ಎನ್ನಲಾಗುತ್ತದೆ. ಮೊದಲ ಮೂರು ತಿಂಗಳಲ್ಲಿ ಗರ್ಭಿಣಿ ಮಹಿಳೆ ಬೆಳಗಿನ ಸಿಕ್ನೆಸ್ ಮತ್ತು ಆಗಾಗ ಮೂತ್ರ ವಿಸರ್ಜನೆಯಿಂದಾಗಿ ಬಳಲುತ್ತಾಳೆ.

ಆದರೆ ನಂತರ 3 ತಿಂಗಳಲ್ಲಿ ಆಕೆ ಬಳಲಿಕೆಯಿಂದ ಚೇತರಿಸಿಕೊಂಡಿರುತ್ತಾಳೆ ಮತ್ತು ಆ ಸಮಯದಲ್ಲಿ ಲೈಂಗಿಕ ಬಯಕೆ ಅಧಿಕ ಇರಬಹದು. ಮಹಿಳೆ ತನ್ನ ಗರ್ಭಾವಸ್ಥೆಯಲ್ಲಿ 3 ಪೌಂಡ್ ನಷ್ಟು ಹೆಚ್ಚು ರಕ್ತವನ್ನು ಹೊಂದಿರುತ್ತಾಳೆ ಮತ್ತು ಆ ರಕ್ತ ಸೊಂಟದ ರೇಖೆಯ ಕೆಲಭಾಗದಲ್ಲೇ ಸಂಚಲನವಾಗುತ್ತಿರುತ್ತದೆ.

ಮಿಥ್ಯೆ- ಗರ್ಭಧಾರಣೆ STD ಯಿಂದ ರಕ್ಷಿಸುತ್ತದೆ

ಸೆಂಟರ್ ಆಫ್ ಡಿಸೀಸ್ ಕಂಟ್ರೋಲ್ ಹೇಳುವ ಪ್ರಕಾರ ವಾಸ್ತವವಾಗಿ ಗರ್ಭಧಾರಣೆ ಲೈಂಗಿಕ ಸಮಸ್ಯೆಗಳಿಂದ ರಕ್ಷಿಸುವುದಿಲ್ಲ. ನಿಮಗೇನಾದರೂ ಆ ರೀತಿಯ ಸಮಸ್ಯೆಗಳಿದ್ದಲ್ಲಿ ಅದು ಮಗುವಿಗೆ ಹರಡುತ್ತದೆ.

ಈ ಸಮಸ್ಯೆಯನ್ನು ತಡೆಗಟ್ಟಲು ಇರುವ ಒಂದೇ ಉಪಾಯವೆಂದರೆ ನಿಮ್ಮ ಜೊತೆ ಮಾತ್ರ ಲೈಂಗಿಕ ಸಂಪರ್ಕ ಹೊಂದಿರುವವರೊಂದಿಗೆ ಲೈಂಗಿಕತೆ ಹೊಂದುವುದು ಮತ್ತು ಯಾವುದೇ ಸಮಸ್ಯೆ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಮುಂದುವರೆಯುವುದು. ಸೆಂಟರ್ ಆಫ್ ಡಿಸೀಸ್ ಕಂಟ್ರೋಲ್ ಹೇಳುವ ಪ್ರಕಾರ ಕಾಂಡೋಮ್ ಗಳನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿದರೆ ಕೂಡ ಇಂತಹ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬಹುದು.

English summary

Truth About Having Sex While Pregnant

Sex while pregnant is perfectly safe in most situations. Check with your doctor to make sure you do not have a high-risk pregnancy. Your doctor may advise against having sex if there's a threat of having a miscarriage or going into early labor.
X
Desktop Bottom Promotion