For Quick Alerts
ALLOW NOTIFICATIONS  
For Daily Alerts

ಈ ಅಭ್ಯಾಸಗಳು ವೀರ್ಯಾಣು ಸಂಖ್ಯೆ ಕಮ್ಮಿ ಮಾಡುವುದು!

By ವಿವೇಕ್
|

ಹೆಚ್ಚಿನ ಪುರುಷರಲ್ಲಿ ನಪುಂಸಕತ್ವ, ನಿಷ್ಕ್ರಿಯತೆ , ವೀರ್ಯಾಣುಗಳಲ್ಲಿ ಅಲರ್ಜಿ, ಲೈಂಗಿಕ ನಿಶ್ಯಕ್ತಿ ಹೆಚ್ಚಾಗಿ ಕಂಡು ಬರುತ್ತಿದೆ. ಈ ರೀತಿಯೆಲ್ಲಾ ಉಂಟಾಗಲು ಪ್ರಮುಖ ಕಾರಣ ಜೀವನ ಶೈಲಿ. ವೀರ್ಯಾಣುಗಳ ಸಂಖ್ಯೆ ಕಮ್ಮಿಯಿದ್ದರೆ ಮಕ್ಕಳಾಗುವುದಿಲ್ಲ ಮಾತ್ರವಲ್ಲ ದಾಂಪತ್ಯದಲ್ಲಿ ಕೂಡ ವೈಮನಸ್ಸು ಉಂಟಾಗುವುದು.

ಸಾಕಷ್ಟು ಬಾರಿ ನಮ್ಮ ನಿರ್ಲಕ್ಷ್ಯ ಮನೋಪ್ರವೃತ್ತಿಯೇ ಈ ರೀತಿಯ ಸಮಸ್ಯೆ ಬರಲು ಪ್ರಮುಖ ಕಾರಣ. ಉದಾಹರಣೆಗೆ ಪುರುಷರು ಲ್ಯಾಪ್ ಟಾಪ್ ಅನ್ನು ತೊಡೆ ಮೇಲೆ ಇಟ್ಟು ಕೆಲಸ ಮಾಡಬಾರದು, ಆದರೂ ಅದರ ಬಗ್ಗೆ ನಿರ್ಲಕ್ಷ್ಯ ಮಾಡಿ, ಕೊನೆಗೆ ವೀರ್ಯಾಣುಗಳ ಸಂಖ್ಯೆ ಕಮ್ಮಿಯಾದಾಗ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಆಹಾರಕ್ರಮ, ಅಭ್ಯಾಸಗಳು, ಜೀವನ ಶೈಲಿ ಇವುಗಳು ಚೆನ್ನಾಗಿದ್ದರೆ ವೀರ್ಯಾಣುಗಳ ಸಂಖ್ಯೆ ವೃದ್ಧಿಸುವುದು, ಇಲ್ಲದಿದ್ದರೆ ಕುಗ್ಗಿಸುವುದು. ಅದರಲ್ಲಂತೂ ಈ ಕೆಳಗಿನ ಅಭ್ಯಾಸಗಳು ವೀರ್ಯಾಣುಗಳ ಸಂಖ್ಯೆಯನ್ನು ಕಮ್ಮಿ ಮಾಡುವುದು:

ಬಿಸಿ ನೀರಿನಲ್ಲಿ ಸ್ನಾನ ಮಾಡುವುದು

ಬಿಸಿ ನೀರಿನಲ್ಲಿ ಸ್ನಾನ ಮಾಡುವುದು

ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ದೇಹಕ್ಕೆ ಹಿತಾನುಭವಾದರೂ ಈ ರೀತಿ ಬಿಸಿ ನೀರಿನಲ್ಲಿ ಸ್ನಾನ ಮಾಡುವ ಅಭ್ಯಾಸ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯನ್ನು ಕಮ್ಮಿ ಮಾಡುವುದು.

 ಬಿಗಿಯಾದ ಒಳ ಉಡುಪು

ಬಿಗಿಯಾದ ಒಳ ಉಡುಪು

ತುಂಬಾ ಬಿಗಿಯಾದ ಒಳ ಉಡುಪುಗಳು ಕೂಡ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯನ್ನು ಕಮ್ಮಿ ಮಾಡುವುದು. ಆದ್ದರಿಂದ ಬಿಗಿಯಾದ ಒಳ ಉಡುಪು ಧರಿಸಬೇಡಿ.

ಮೊಬೈಲ್ ಫೋನ್

ಮೊಬೈಲ್ ಫೋನ್

ಮೊಬೈಲ್ ಫೋನ್ ಗಳು ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯನ್ನು ಕಮ್ಮಿ ಮಾಡುವಂತೆ ಮಾಡುವುದು. ಮೊಬೈಲ್ ಫೋನ್ ಅನ್ನು ಜೇಬಿನಲ್ಲಿ ಇಡದಿರುವುದು ಒಳ್ಳೆಯದು.

ಮಾನಸಿಕ ಒತ್ತಡ

ಮಾನಸಿಕ ಒತ್ತಡ

ಮಾನಸಿಕ ಒತ್ತಡ ಕೂಡ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯನ್ನು ಕಮ್ಮಿ ಮಾಡುವುದು. ಮಾನಸಿಕ ಒತ್ತಡ ಒಂದಲ್ಲಾ ಒಂದು ಕಾರಣದಿಂದ ಉಂಟಾಗುವುದು, ಆದರೆ ಅವುಗಳನ್ನು ದೂರ ಮಾಡುವ ಮಾರ್ಗವನ್ನು ನಾವೇ ಕಂಡು ಹಿಡಿಯಬೇಕಷ್ಟೇ.

ಲೈಂಗಿಕ ವಿಷಯದಲ್ಲಿ ನಿರಾಸಕ್ತಿ

ಲೈಂಗಿಕ ವಿಷಯದಲ್ಲಿ ನಿರಾಸಕ್ತಿ

ಲೈಂಗಿಕ ಕ್ರಿಯೆ ಮಾನಸಿಕ ಒತ್ತಡವನ್ನು ಹೊರದೂಡುವುದು, ಮತ್ತು ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದೆ. ಕಡಿಮೆ ಲೈಂಗಿಕ ಕ್ರಿಯೆ ನಡೆಸುವವರಿಗೆ ವೀರ್ಯಾಣುಗಳ ಸಂಖ್ಯೆ ಕಮ್ಮಿಯಾಗುವುದು.

ಮದ್ಯಪಾನ

ಮದ್ಯಪಾನ

ಮದ್ಯಪಾನ ಕೂಡ ಪುರುಷರಲ್ಲಿ ಟೆಸ್ಟೋಸ್ಟಿರೋನೆ ಕಮ್ಮಿ ಮಾಡಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು.

ಧೂಮಪಾನ

ಧೂಮಪಾನ

ಧೂಮಪಾನ ಕೂಡ ವೀರ್ಯಾಣುಗಳ ಸಂಖ್ಯೆ ಕಡಿಮೆ ಮಾಡಿ, ಮಕ್ಕಳಾಗದೇ ಇರಬಹುದು. ಧೂಮಪಾನ ದೈಹಿಕ ಆರೋಗ್ಯ ಕೂಡ ಹಾಳು ಮಾಡುವುದು.

ಸೋಯಾ ಉತ್ಪನ್ನಗಳು

ಸೋಯಾ ಉತ್ಪನ್ನಗಳು

ಸೋಯಾ ಉತ್ಪನ್ನಗಳು ಮಹಿಳೆಯರಿಗೆ ಒಳ್ಳೆಯದು, ಆದರೆ ಪುರುಷರಿಗೆ ಅಷ್ಟು ಒಳ್ಳೆಯದಲ್ಲ, ಇದು ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯನ್ನು ಕಮ್ಮಿ ಮಾಡುವುದು.

ಟಿವಿ ನೋಡಿದರೆ

ಟಿವಿ ನೋಡಿದರೆ

ಮಿತಿ ಮೀರಿ ಟಿವಿ ನೋಡುವುದು, ವ್ಯಾಯಾಮ ಮಾಡದಿರುವುದು ಮಾಡುವವರಿಗೆ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು ಎಂದು ಸಂಶೋಧನೆಯಿಂದ ದೃಢ ಪಟ್ಟಿದೆ.

 ಲ್ಯಾಫ್ ಟಾಪ್

ಲ್ಯಾಫ್ ಟಾಪ್

ಲ್ಯಾಪ್ ಟಾಪ್ ಅನ್ನು ತೊಡೆಯ ಮೇಲೆ ಇಟ್ಟು ಕೆಲಸ ಮಾಡಬೇಡಿ. ಒಂದು ಟೇಬಲ್ ಮೇಲೆ ಮಾಡಿ, ಇಲ್ಲದಿದ್ದರೆ ವೀರ್ಯಾಣುಗಳ ಸಂಖ್ಯೆ ಕಮ್ಮಿಯಾಗುವುದು.

English summary

Things That Lower Your Sperm Count

Low sperm count is due to various things. For example, bad habits like smoking and drinking can affect your sperm count and quality.
X
Desktop Bottom Promotion