For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರು ಹರ್ಬಲ್ ಮದ್ದು ಬಳಸುವುದು ಸುರಕ್ಷಿತವೇ?

|

ಗರ್ಭಿಣಿಯರಿಗೆ ಭಾರ ಎತ್ತಬೇಡಿ, ದೂರ ಪ್ರಯಾಣ ಮಾಡಬೇಡಿ, ಸ್ವ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ ಹೀಗೆ ಗರ್ಭಿಣಿಯ ಆರೋಗ್ಯಕ್ಕಾಗಿ ಅನೇಕ ನಿರ್ಬಂಧನೆಗಳಿರುತ್ತವೆ. ಆಹಾರದಲ್ಲೂ ಅಷ್ಟೇ.

ಔಷಧಿಯಾದರೆ ಅಲೋಪತಿ ತೆಗೆಯುವುದಾದರೆ ಮಾತ್ರ ವೈದ್ಯರ ಸಲಹೆ ಪಡೆಯಬೇಕು. ಮನೆ ಮದ್ದು ಕುಡಿದರೆ ಏನೂ ತೊಂದರೆ ಉಂಟಾಗುವುದಿಲ್ಲ ಎಂದು ಹೆಚ್ಚಿನವರು ನಂಬಿದ್ದಾರೆ. ಹರ್ಬಲ್ ವಸ್ತುಗಳಿಂದ ತಯಾರಿಸುವ ಎಲ್ಲಾ ಮನೆಮದ್ದನ್ನು ಗರ್ಭಿಣಿಯರು ಸೇವಿಸಲು ಸಾಧ್ಯವಿಲ್ಲ. ಸೇವಿಸಬಹುದಾದ ಹರ್ಬಲ್ ನಲ್ಲೂ ಇಷ್ಟು ಮಿತಿ ಅಂತ ಇರುತ್ತದೆ. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.

Safe Herbal Medications During Pregnancy

ಆದ್ದರಿಂದ ಹರ್ಬಲ್ ವಸ್ತುಗಳನ್ನು ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆಯಬೇಕಾದದು ಅವಶ್ಯಕ. ಇಲ್ಲಿ ನಾವು ಯಾವ ಹರ್ಬಲ್ ಒಳ್ಳೆಯದು, ಎಷ್ಟು ಪ್ರಮಾಣದಲ್ಲಿ ಸೇವಿಸಿದರೆ ಒಳ್ಳೆಯದು, ಯಾವುದನ್ನು ಗರ್ಭಿಣಿಯರು ಉಪಯೋಗಿಸಬಾರದು ಅನ್ನುವುದರ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

ಗರ್ಭಿಣಿಯರು ಈ ಹರ್ಬಲ್ ಗಳನ್ನು ಮದ್ದಿಗೆ ಬಳಸಬಹುದು:

* ಮೆಣಸು- ಇದನ್ನು ಮಿತಿಯಲ್ಲಿ ಬಳಸಿ. ಹೆಚ್ಚಾದರೆ ಬೇಧಿ ಕಾಣಿಸಿಕೊಳ್ಳಬಹುದು.

* 1 ಚಮಚ ತುರಿದ ಶುಂಠಿಯನ್ನು ಒಂದು ದಿನದಲ್ಲಿ ತಿನ್ನಬಹುದು. ಇದರಿಂದ ವಾಂತಿ ಬರುವುದನ್ನು ತಡೆಗಟ್ಟಬಹುದು. ಆದರೆ ಒಂದು ಬಾರಿ ಗರ್ಭಪಾತವಾದವರು ಇದನ್ನು ತಿನ್ನುವ ಮುನ್ನ ವೈದ್ಯರ ಸಲಹೆ ಪಡೆಯಿರಿ.

* ಗರ್ಭಿಣಿಯರಿಗೆ ತಲೆ ನೋವು ಕಾಣಿಸಿದರೆ ನೀಲಗಿರಿ ಎಣ್ಣೆಯ ವಾಸನೆಯನ್ನು ಗ್ರಹಿಸಿದರೆ ತಲೆನೋವು ತಕ್ಷಣ ಕಡಿಮೆಯಾಗುವುದು.

* ವಾಂತಿಯನ್ನು ತಡೆಗಟ್ಟಲು ಪುದೀನಾವನ್ನು ಕೂಡ ಮನೆಮದ್ದಾಗಿ ಬಳಸಬಹುದು. ತುಂಬಾ ಪುದೀನಾ ತಿಂದರೆ ಎದೆ ಉರಿ ಕಾಣಿಸಿಕೊಳ್ಳಬಹುದು.

* ಸುವಾಸನೆಯ ಎಣ್ಣೆಯೂ ಗರ್ಭಿಣಿಗೆ ವಿಶ್ರಾಂತಿಯ ಅನುಭವ ನೀಡುವಲ್ಲಿ ಸಹಕಾರಿಯಾಗಿದೆ.

ಬಳಸಬಾರದ ಹರ್ಬಲ್ ವಸ್ತುಗಳು
* ಕಾಟನ್ ರೂಟ್ ಎಣ್ಣೆಯನ್ನು ಬಳಸಬಾರದು.
* ಜಾಸ್ಮೀನ್ ಆಯಿಲ್ ಅನ್ನು ಅಥವಾ ಅದರಿಂದ ತಯಾರಿಸಿದ ಔಷಧಿಯನ್ನು ಗರ್ಭಿಣಿಯರು ಬಳಸುವುದು ಸುರಕ್ಷಿತವಲ್ಲ.

<blockquote class="twitter-tweet blockquote"><p>ಗರ್ಭಿಣಿಯರು ತಿನ್ನಲೇಬೇಕಾದ ಟಾಪ್ 9 ಹಣ್ಣುಗಳು <a href="http://t.co/dqHY49nAzq" title="/pregnancy-parenting/pre-natal/2013/best-fruits-eat-during-pregnancy-005143.html">kannada.boldsky.com/pregnancy-pare…</a> <a href="https://twitter.com/search/%23Pregnant">#Pregnant</a></p>— Boldsky Kannada (@BoldskyKa) <a href="https://twitter.com/BoldskyKa/status/323749561711607808">April 15, 2013</a></blockquote> <script async src="//platform.twitter.com/widgets.js" charset="utf-8"></script>
English summary

Safe Herbal Medications During Pregnancy | ಗರ್ಭಿಣಿಯರಿಗೆ ಸೂಕ್ತವಾದ ಹರ್ಬಲ್ ಔಷಧಿಗಳು

Herbal medicines do not have chemicals like allopathic medicines, that can create complications in later pregnancy stages.
X
Desktop Bottom Promotion