For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರು ಮಲಗುವ ಭಂಗಿ ಹೇಗಿದ್ದರೆ ಒಳ್ಳೆಯದು

|

ಕೆಲವರಿಗೆ ನೇರವಾಗಿ ಮಲಗಬೇಕು, ಮತ್ತೆ ಕೆಲವರಿಗೆ ಒಂದು ಸೈಡ್ ಗೆ ತಿರುಗಿ ಮಲಗಬೇಕು, ಇನ್ನು ಕೆಲವರಿಗೆ ಕಮುಚಿ ಮಲಗಿದರೆ ಮಾತ್ರ ನಿದ್ದೆ ಬರುವುದು, ಆದರೆ ಗರ್ಭಿಣಿಯಾದ ಮೇಲೂ ಹೊಟ್ಟೆ ಕೆಳಗೆ ಮಾಡಲು ಸಾಧ್ಯವೇ?

ಗರ್ಭಿಣಿಯರು ಆಹಾರಕ್ರಮದಷ್ಟೇ ನಿದ್ದೆಗೂ ಗಮನ ಕೊಡಬೇಕು. ಗರ್ಭಿಣಿ ದಿನದಲ್ಲಿ 8 ಗಂಟೆಗಳ ಕಾಲ ಸುಖ ನಿದ್ದೆ ಮಾಡದಿದ್ದರೆ ಅದು ಅವಳ ಆರೋಗ್ಯ ಮಾತ್ರವಲ್ಲ, ಹೊಟ್ಟೆಯಲ್ಲಿರುವ ಮಗುವಿನ ಆರೊಗ್ಯ ಕೂಡ ಬಾಧಿಸುವುದು. ತಿಂಗಳು ತುಂಬುತ್ತಿದ್ದ ಹಾಗೇ ಹೊಟ್ಟೆಯ ಗಾತ್ರ ದೊಡ್ಡದಾಗುವುದರಿಂದ ಮಲಗುವ ಭಂಗಿ ಸರಿಯಿಲ್ಲದಿದ್ದರೆ ಸೊಂಟ ನೋವು, ಬೆನ್ನು ನೋವಿನ ಸಮಸ್ಯೆಗಳು ಕಂಡು ಬರುವುದು. ಆದ್ದರಿಂದ ಗರ್ಭಿಣಿಯರು ಯಾವ ರೀತಿ ಮಲಗಿದರೆ ಒಳ್ಳೆಯದು ಎಂಬ ಟಿಪ್ಸ್ ನೀಡಿದ್ದೇವೆ ನೋಡಿ:

Right Sleep Positions During Pregnancy

ಎಡ ಭಾಗಕ್ಕೆ ತಿರುಗಿ ಮಲಗಿದರೆ ಒಳ್ಳೆಯದು:
ಗರ್ಭಾವಸ್ಥೆಯಲ್ಲಿ ಎಡಭಾಗಕ್ಕೆ ತಿರುಗಿ ಮಲಗಿದರೆ ಒಳ್ಳೆಯದು ಅನ್ನುವುದು ವೈದ್ಯರ ಸಲಹೆ. ಈ ರೀತಿ ಮಲಗಿದರೆ ನಿದ್ದೆಗೆ ಸಹಕಾರಿ ಮಾತ್ರವಲ್ಲ, ದೇಹದಲ್ಲಿ ರಕ್ತ ಸಂಚಾರಕ್ಕೆ ಒಳ್ಳೆಯದು. ಹೀಗೆ ಮಲಗಿದರೆ ಹೊಟ್ಟೆಯಲ್ಲಿರುವ ಮಗು ಕೂಡ ಕಂಫರ್ಟ್ ಆಗಿ ನಿದ್ದೆ ಮಾಡಬಹುದು. ಹೊಟ್ಟೆ ತುಂಬಾ ಎಳೆದಂತೆ ಅನಿಸಿದರೆ ಈ ರೀತಿ ಮಲಗಿ ವಿಶ್ರಾಂತಿ ತೆಗೆದುಕೊಳ್ಳುವುದು ಒಳ್ಳೆಯದು. ಎಡ ಭಾಗಕ್ಕೆ ತಿರುಗಿ ಮಲಗಿದರೆ ಕಿಡ್ನಿಗೆ ದೇಹದಲ್ಲಿರುವ ಕಶ್ಮಲವನ್ನು ಹೊರಹಾಕಲು ಸಹಾಯ ಮಾಡಿದಂತಾಗುವುದು.

ಹೊಟ್ಟೆ ಮೇಲೆ ಭಾರ ಹಾಕಿ ಮಲಗಬಹುದೇ?
ಗರ್ಭಿಣಿಯಾಗಿ 3-4 ತಿಂಗಳವರೆಗೆ ಈ ರೀತಿ ಮಲಗಿದರೆ ಯಾವುದೇ ಅಪಾಯವಿಲ್ಲ, ಆದರೂ ಎಡ ಬದಿ ತಿರುಗಿ ಮಲಗುವ ಅಭ್ಯಾಸ ಒಳ್ಳೆಯದು. ಹೊಟ್ಟೆ ಬೆಳೆಯುತ್ತಿದ್ದಂತೆ ಹೊಟ್ಟೆ ಮೇಲೆ ಭಾರ ಹಾಕಿ ಮಲಗಲು ಸಾಧ್ಯವಿಲ್ಲ.

ಬೆನ್ನಿನ ಮೇಲೆ ಭಾರ ಹಾಕಿ ಮಲಗಬೇಡಿ
ಬೆನ್ನಿನ ಮೇಲೆ ಭಾರ ಹಾಕಿ ಮಲಗುವುದು ಒಳ್ಳೆಯದೆಂದು ಭಾವಿಸುತ್ತೇವೆ. ಆದರೆ ಬೆನ್ನು ಹಾಸಿಗೆ ತಾಗುವಂತೆ ಮಲಗಿದರೆ ಬೆನ್ನು ಮೂಳೆ, ಹಾಗೂ ಸೊಂಟದ ಮೇಲೆ ಹೆಚ್ಚಿನ ಒತ್ತಡ ಬೀಳುವುದು. ಹೀಗೆ ಮಲಗಿದರೆ ಕೆಲವರಿಗೆ ಉಸಿರಾಟಕ್ಕೂ ತೊಂದರೆ ಉಂಟಾಗುವುದು.

English summary

Right Sleep Positions During Pregnancy | Tips For Pregnant | ಗರ್ಭಾವಸ್ಥೆಯಲ್ಲಿ ಹೇಗೆ ಮಲಗಿದರೆ ಒಳ್ಳೆಯದು | ಗರ್ಭಿಣಿಯರಿಗೆ ಕೆಲ ಸಲಹೆಗಳು

When you are pregnant, at least 8 hours of good restful sleep is very important. You carrying the extra weight of the baby within you and need to give your body some rest. However, sleep positions during pregnancy are also vitally important.
X
Desktop Bottom Promotion