For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಚೆನ್ನಾಗಿ ತಿನ್ನಿ, ಆರೋಗ್ಯವಾಗಿರಿ

|
Pregnancy Health And Food
ಮಹಿಳೆಯರು ಗರ್ಭಿಣಿಯಾದಾಗ ಹೆಚ್ಚಿನ ಪೋಷಕಾಂಶಗಳಿರುವ ಆಹಾರವನ್ನು ತಿನ್ನಬೇಕಾಗುತ್ತದೆ. ಏಕೆಂದರೆ ಮಗು ಗರ್ಭದಲ್ಲಿ ಅತಿ ಶೀಘ್ರದಲ್ಲಿ ಬೆಳೆಯುತ್ತಿರುತ್ತದೆ. ಭ್ರೂಣದ ಬೆಳವಣಿಗೆ ಹಾಗೂ ತಾಯಿಯ ದೈಹಿಕ ಬದಲಾವಣೆಗಳನ್ನು ನಿರ್ವಹಿಸಲು ತಾಯಿಗೆ ಹೆಚ್ಚಿನ ಪೋಷಕಾಂಶಗಳ ಅವಶ್ಯಕತೆ ಇದೆ.

ಅಂಡಾಣು ಗರ್ಭಕೋಶಕ್ಕೆ ಅಂಟಿಕೊಂಡಿದ್ದು, ಆಮ್ಲಜನಕ ಮತ್ತು ಪೋಷಕಾಂಶಗಳು ಭ್ರೂಣದ ಬೆಳವಣಿಗೆಗೆ ತಾಯಿಯ ದೇಹದಿಂದ ಸರಬರಾಜಾಗುತ್ತವೆ. ಇದಲ್ಲದೆ, ಈ ಕೆಳಗೆ ಕಾಣಿಸಿರುವ ಕಾರ್ಯಗಳ ನಿರ್ವಹಣೆಗಾಗಿಯೂ ಗರ್ಭಿಣಿಗೆ ಹೆಚ್ಚಿನ ಪೋಷಕಾಂಶಗಳ ಅವಶ್ಯಕತೆ ಇದೆ. ಪೋಷಕಾಂಶದ ಕೊರತೆ ಉಂಟಾದರೆ ಭ್ರೂಣದ ಬೆಳವಣಿಗೆ, ಗರ್ಭಚೀಲದ ಬೆಳವಣಿಗೆ, ಸ್ತನ ಹಾಗೂ ಗರ್ಭಕೋಶದ ಜೀವಕೋಶಗಳ ಅಭಿವೃದ್ಧಿಗೆ ತೊಂದರೆ ಉಂಟಾಗುತ್ತದೆ.

ಅದರಲ್ಲೂ ಈ ಕೆಳಗಿನ ಪೋಷಕಾಂಶಗಳು ಗರ್ಭಿಣಿಯರಿಗೆ ಪೋಷಕಾಂಶಗಳ ಅವಶ್ಯಕ

ಸಾರಜನಕ

ಗರ್ಭಿಣಿಯರಿಗೆ ಸಾಮನ್ಯ ಮಹಿಳೆಯರಿಗಿಂತ ಶೇ. 30ರಷ್ಟು ಹೆಚ್ಚು ಸಾರಜನಕದ ಅವಶ್ಯಕತೆ ಇದೆ. ಹಾಲು ಮತ್ತು ಹಾಲಿನ ಪದಾರ್ಥಗಳನ್ನು ಹೆಚ್ಚಾಗಿ ತಿನ್ನಬೇಕು. ಮೀನು, ಮೊಟ್ಟೆ ಸೇವಿಸುವುದು ಒಳ್ಳೆಯದು. ಸಸ್ಯಾಹಾರಿಗಳಾಗಿದ್ದರೆ ಹಾಲು, ಬೇಳೆಕಾಳು ಹಾಗೂ ಎಣ್ಣೆ ಬೀಜಗಳನ್ನು ಸೇವಿಸಬಹುದು.

ಕ್ಯಾಲೋರಿಗಳು

ದೇಹದ ತೂಕ ಹೆಚ್ಚಾಗುತ್ತದೆ ಎಂದು ಕ್ಯಾಲೋರಿ ಇರುವ ಆಹಾರಗಳಿಂದ ದೂರವಾಗಬೇಡಿ. ಕಾರ್ಬೋಹೈಟ್ರೇಟ್, ಎಣ್ಣೆ, ಕೊಬ್ಬಿನಂಶವಿರುವ ಆಹಾರ ತಿನ್ನಬೇಕು. ಒಮೆಗಾ 3 ಕೊಬ್ಬಿನಂಶವಿರುವ ಆಹಾರವನ್ನು ತಿನ್ನಲು ಮರೆಯಬಾರದು.

ಖನಿಜಾಂಶಗಳು

ಖನಿಜಾಂಶಗಳಲ್ಲಿ ಕ್ಯಾಲ್ಸಿಯಂ ಹಾಗೂ ಕಬ್ಬಿಣಾಂಶ ಅತ್ಯಾವಶ್ಯಕ. ಮಗುವಿನ ಮೂಳೆಗಳು ಹಾಗೂ ಹಲ್ಲಿನ ರಚನೆ ಮತ್ತು ಬಲವರ್ಧನೆಗಾಗಿ ಗರ್ಭಾವಸ್ಥೆಯ ಆರು ತಿಂಗಳ ನಂತರ ಕ್ಯಾಲ್ಸಿಯಂನ ಅವಶ್ಯಕತೆ ಹೆಚ್ಚಾಗುತ್ತದೆ. ಹಾಲು, ಕ್ಯಾಲ್ಸಿಯಂಭರಿತ ಆಹಾರ, ಸೊಪ್ಪನ್ನು ಹೆಚ್ಚಾಗಿ ಉಪಯೋಗಿಸಬೇಕು. ಇದರ ಜೊತೆಗೆ ಕ್ಯಾಲ್ಸಿಯಂ ಮಾತ್ರೆಗಳನ್ನು ಸೇವಿಸಬೇಕು.

ಈ ಸಮಯದಲ್ಲಿ ಹಾಲು, ಸೊಪ್ಪು, ಕಬ್ಬಿಣದ ಅಂಶವಿರುವ ಮಾತ್ರೆಗಳನ್ನು ತಿಂದು ದೇಹಕ್ಕೆ ಫೋಷಕಾಂಶದ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು.

ವಿಟಮಿನ್ ಗಳು

ಜೀವಸತ್ವ ಎ,ಬಿ,ಸಿ, ಮತ್ತು ಡಿ ಅಲ್ಲದೆ ಫಾಲಿಕ್ ಆಮ್ಲವನ್ನು ಗರ್ಭಿಣಿಯರಿಗೆ ಹೆಚ್ಚಾಗಿ ಕೊಡಬೇಕು. ಲಿವರ್, ಮೊಟ್ಟೆಯ ಹಳದಿ ಭಾಗ, ಹಸಿರು ತರಕಾರಿ, ಹಳದಿ ತರಕಾರಿ ಮತ್ತು ಹಣ್ಣುಗಳ ಸೇವನೆಯಿಂದ ವಿಟಮಿನ್ ಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು.

English summary

Pregnancy Health And Food | Tips For Pregnancy Lady | ಗರ್ಭಿಣಿಯರ ಆರೋಗ್ಯ ಮತ್ತು ಆಹಾರ | ಗರ್ಭಿಣಿಯರಿಗೆ ಕೆಲ ಸಲಹೆಗಳು

These nine months may be the most challenging months of your life. With your body undergoing a number of changes, you need to be extra careful about yourself as well as your surroundings. And watching your diet should on top of your list
Story first published: Monday, March 4, 2013, 17:13 [IST]
X
Desktop Bottom Promotion