For Quick Alerts
ALLOW NOTIFICATIONS  
For Daily Alerts

ವೀರ್ಯಾಣುಗಳ ಸಂಖ್ಯೆ ವೃದ್ಧಿಸುವ ವಿಧಾನಗಳು

By Super
|

ಮದುವೆ ಬಳಿಕ ಮಕ್ಕಳನ್ನು ಪಡೆದು ಜೀವನ ಸಾರ್ಥಕಗೊಳಿಸುವುದು ದಂಪತಿಗಳ ಇಚ್ಛೆಯಾಗಿರುತ್ತದೆ. ಕೆಲವೊಮ್ಮೆ ಏನೇ ಪ್ರಯತ್ನ ಪಟ್ಟರೂ ಮಕ್ಕಳೇ ಆಗುವುದಿಲ್ಲ. ಇದರಿಂದ ದಂಪತಿ ನೊಂದುಕೊಳ್ಳುವುದು ಸಾಮಾನ್ಯ. ಇದಕ್ಕೆ ನಾನಾ ರೀತಿಯ ಕಾರಣಗಳಿರಬಹುದು.

ಬಂಜೆತನ ಬರಲು ವೀರ್ಯಾಣು ಕಣಗಳ ಕೊರತೆ ಕೂಡ ಪ್ರಮುಖ ಕಾರಣವೆನ್ನಬಹುದಾಗಿದೆ. ವೀರ್ಯಾಣು ಕಣಗಳ ಕೊರತೆ ಕಾರಣದಿಂದಾಗಿ ಕೆಲವೊಮ್ಮೆ ಬಂಜೆತನ ಬರಬಹುದು. ಇದಕ್ಕಾಗಿ ನೊಂದುಕೊಂಡು ಕಣ್ಣೀರು ಸುರಿಸಬೇಕಾಗಿಲ್ಲ. ವೀರ್ಯಾಣು ಹೆಚ್ಚಿಸಲು ನಿಮ್ಮ ಆಹಾರ ಕ್ರಮದಲ್ಲಿ ಏನೆಲ್ಲಾ ಬದಲಾವಣೆ ಮಾಡಬೇಕು ಮತ್ತು ಯಾವ ಹವ್ಯಾಸಗಳನ್ನು ಅನುಸರಿಸಬೇಕು ಎನ್ನುವ ವಿವರಗಳನ್ನು ನೀಡಲಾಗಿದೆ.

ನೈಸರ್ಗಿಕ ವಿಧಾನ ಮೂಲಕ ವೀರ್ಯಾಣು ಹೆಚ್ಚಿಸಲು ಮತ್ತು ಫಲವತ್ತತೆಯನ್ನು ಹೆಚ್ಚಿಸಲು ಅವಕಾಶವಿದೆ.

ವೀರ್ಯಾಣು ಕಣಗಳ ಕೊರತೆಗೆ ಕೆಲವು ಪ್ರಮುಖ ಕಾರಣಗಳು:

ಸತುವಿನ ಕೊರತೆ

ಸತುವಿನ ಕೊರತೆ

ದೇಹದಲ್ಲಿ ಸತುವಿನ ಕೊರತೆ ಉಂಟಾದರೆ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು. ಆದ್ದರಿಂದ ಸತುವಿನಂಶವಿರುವ ಆಹಾರಗಳನ್ನು ತಿನ್ನಿ.

ಅತಿಯಾದ ಧೂಮಪಾನ ಮತ್ತು ಮದ್ಯಪಾನ

ಅತಿಯಾದ ಧೂಮಪಾನ ಮತ್ತು ಮದ್ಯಪಾನ

ಧೂಮಪಾನ ಮಾಡುವ ಗಂಡಸರಲ್ಲಿ ಉಳಿದವರಿಗಿಂತ ಶೇ 50 ಕ್ಕಿಂತ ಕಡಿಮೆ ವೀರ್ಯಾಣು ಉತ್ಪಾದನಾ ಸಾಮರ್ಥ್ಯವಿರುತ್ತದೆ.

ಬಿಗಿಯಾದ ಒಳ ಉಡುಪು

ಬಿಗಿಯಾದ ಒಳ ಉಡುಪು

ತುಂಬಾ ಬಿಗಿಯಾದ ಒಳ ಉಡುಪುಗಳನ್ನು ಧರಿಸುವುದು ಒಳ್ಳೆಯದಲ್ಲ, ಇದು ವೀರ್ಯಾಣುಗಳ ಸಂಖ್ಯೆಯನ್ನು ಕಮ್ಮಿ ಮಾಡುತ್ತದೆ.

ಅಧಿಕ ತೂಕ

ಅಧಿಕ ತೂಕ

ಅಧಿಕ ತೂಕದಿಂದಾಗಿ ವೀರ್ಯಾಣುಗಳ ಉತ್ಪತ್ತಿ ಕಡಿಮೆಯಾಗುವುದು.

ಒತ್ತಡ

ಒತ್ತಡ

ಪ್ರತಿಯೊಬ್ಬರ ಬದುಕಿನಲ್ಲಿ ಒಂದಲ್ಲಾ ಒಂದು ಒತ್ತಡದ ಪರಿಸ್ಥಿತಿ ಇದ್ದೇ ಇರುತ್ತದೆ, ಆದರೆ ಅದನ್ನು ಮೀರುವ ಪ್ರಯತ್ನ ಮಾಡಬೇಕು. ಒತ್ತಡದ ಬದುಕು ವೀರ್ಯಾಣುಗಳ ಸಂಖ್ಯೆ ಕಡಿಮೆ ಮಾಡುವುದು ಮಾತ್ರವಲ್ಲ, ನಿಮ್ಮ ಒಟ್ಟು ಮೊತ್ತದ ಜೀವನವನ್ನೇ ಹಾಳು ಮಾಡುತ್ತದೆ.

ವೀರ್ಯಾಣು ಕಾಯಿಲೆ

ವೀರ್ಯಾಣು ಕಾಯಿಲೆ

ವೀರ್ಯಾಣು ಕಾಯಿಲೆಯಿಂದ ನಿಮ್ಮ ವೀರ್ಯಾಣು ಕಣಗಳ ಕೊರತೆಯಾಗಬಹುದು, ವೀರ್ಯಾಣುವಿನ ಗುಣಮಟ್ಟ ಮತ್ತು ಅದರ ಚಲನೆ ಮೇಲೆ ಪರಿಣಾಮ ಬೀರಬಹುದು. ವೀರ್ಯಾಣುಗಳನ್ನು ಆಗಾಗ ವೀರಸ್ಖಲನ ಮಾಡದಿದ್ದರೆ ಅದರ ಚಲನಶೀಲತೆಗೆ ಕುಂದು ಬರುತ್ತದೆ. ವೀರ್ಯಾಣು ಕಾಯಿಲೆಯಿಂದ ವೀರ್ಯಾಣುವಿನ ಆಕಾರಕ್ಕೂ ತೊಂದರೆಯಾಗುತ್ತದೆ. ವೀರ್ಯಸ್ಖಲನ ಮತ್ತು ಬಂಜೆತನ, ನಿಮಿರುವಿಕೆಯ ನಿಷ್ಕ್ರೀಯತೆ, ವೀರಸ್ಖಲನ ಮಾಡಲು ವಿಫಲವಾಗುವುದು ಅಥವಾ ಅಕಾಲಿಕ ವೀರ್ಯಸ್ಖಲನ ಲೈಂಗಿಕ ಕ್ರಿಯೆ ಸಮಯದಲ್ಲಿ ಮತ್ತು ಕಲ್ಪಿಸಿಕೊಳ್ಳುವಾಗ ಸಮಸ್ಯೆಯಾಗಬಹುದು.

ಸಾಮಾನ್ಯ ವೀರ್ಯಾಣು ಕಣಗಳ ಎಣಿಕೆ

ವೀರ್ಯಸ್ಖಲನವಾಗುವಾಗ ಸಾಮಾನ್ಯ ಪ್ರಮಾಣ 1.5ರಿಂದ 5.0 ಮಿಲಿ ಲೀಟರ್ ತನಕವಿರುತ್ತದೆ.

ವೀರ್ಯಾಣು ಕಣಗಳು ಪ್ರತೀ 20ರಿಂದ 150 ದಶಲಕ್ಷ ಮಿಲಿ ಲೀಟರ್ ಗೆ ಬದಲಾಗುತ್ತದೆ.

ಕನಿಷ್ಠ ಶೇ.60ರಷ್ಟು ವೀರ್ಯಾಣು ಸಾಮಾನ್ಯ ಆಕಾರ ಹೊಂದಿರುತ್ತದೆ ಮತ್ತು ಸಾಮಾನ್ಯ ಚಲನೆ(ಚತುರತೆ) ತೋರಿಸುತ್ತದೆ.

1) ವಿಟಮಿನ್ ಬಿ

1) ವಿಟಮಿನ್ ಬಿ

ವಿಟಮಿನ್ ಬಿ ಇರುವ ಆಹಾರಗಳು: ಗಿಣ್ಣು, ಮೊಟ್ಟೆ, ಹಾಲು, ಮೊಸರು, ಕವಚವಿರುವ ಧಾನ್ಯಗಳು, ಬಸಳೆ, ಕಾಳುಗಳು, ಇಡೀ ಧಾನ್ಯಗಳು ಮತ್ತು ಬೀಜಗಳು.

2) ಸತು

2) ಸತು

ಸತುವಿರುವ ಆಹಾರಗಳು: ಸಿಂಪಿ ಕೋಳಿ, ಎಳ್ಳು, ಸೂರ್ಯಕಾಂತಿ ಬೀಜಗಳು, ಶುಂಠಿ, ಗೋಧಿ ಮೊಳಕೆ, ಕೆಂಪು ಮಾಂಶ, ಚಾಕಲೇಟ್, ಕಲ್ಲಂಗಡಿ ಬೀಜಗಳು ಮತ್ತು ಕುಂಬಳಕಾಯಿ ಬೀಜಗಳು.

3) ಸೆಲಿನಿಯಂ

3) ಸೆಲಿನಿಯಂ

ಸೆಲಿನಿಯಂ ಇರುವ ಆಹಾರಗಳು: ಚಿಪ್ಪು ಮೀನು, ಲಿವರ್, ಮೀನು, ಸೂರ್ಯಕಾಂತಿ ಬೀಜಗಳು, ಏಡಿಗಳು, ಸೀಗಡಿ, ಕಡಲೆ ಮತ್ತು ಅಕ್ಕಿ, ಗೋಧಿ ಮತ್ತು ಓಟ್ಸ್ ನಂತಹ ಏಕದಳ ಧಾನ್ಯಗಳು

ಲೈಂಗಿಕಕ್ರಿಯೆ

ಲೈಂಗಿಕಕ್ರಿಯೆ

1) ಲೈಂಗಿಕ ಮತ್ತು ಹಸ್ತಮೈಥುನದಲ್ಲಿ ನಿಯಮಿತವಾಗಿ ಪಾಲ್ಗೊಳ್ಳಿ.

ಆಹಾರ

ಆಹಾರ

2) ಸಂಸ್ಕರಿತ ಮತ್ತು ಅನಾರೋಗ್ಯಕರ ಆಹಾರಗಳನ್ನು ಕಡೆಗಣಿಸಿ

ಯೋಗ, ಧ್ಯಾನ

ಯೋಗ, ಧ್ಯಾನ

3) ಯೋಗ ಮಾಡುವ ಮೂಲಕ ಒತ್ತಡ ಕಡಿಮೆ ಮಾಡಿ ಮತ್ತು ಆರೋಗ್ಯ ವೃದ್ಧಿಸಿ.

 ನಿದ್ದೆ

ನಿದ್ದೆ

4) ಜನನಾಂಗಕ್ಕೆ ಉಷ್ಣತೆ ಹೆಚ್ಚುವುದನ್ನು ತಡೆಯಲು ಬಿಗಿಯಾದ ಒಳಉಡುಪನ್ನು ಧರಿಸಬೇಡಿ.

5) ಸರಿಯಾಗಿ ನಿದ್ದೆ ಮಾಡಿ

ತೂಕ ಹೆಚ್ಚಲು ಬಿಡಬೇಡಿ

ತೂಕ ಹೆಚ್ಚಲು ಬಿಡಬೇಡಿ

6) ಹಾರ್ಮೋನ್ ಗಳ ಹೊಂದಾಣಿಕೆಗೆ ಅತಿಯಾದ ತೂಕ ಕಡಿಮೆ ಮಾಡಿ.

ಹೆಚ್ಚು ಹೊತ್ತು ಕೂರುವುದು ಒಳ್ಳೆಯದಲ್ಲ

ಹೆಚ್ಚು ಹೊತ್ತು ಕೂರುವುದು ಒಳ್ಳೆಯದಲ್ಲ

7) ತುಂಬಾ ಸಮಯ ಕುಳಿತುಕೊಳ್ಳಬೇಡಿ: ಕೂತಲ್ಲಿಯೇ ತುಂಬಾ ಹೊತ್ತು ಕೂರಬೇಡಿ, ಎದ್ದು ನಡೆದಾಡಿ.

ಮಸಾಜ್

ಮಸಾಜ್

8) ರಕ್ತ ಪರಿಚಲನೆಗೆ ಉತ್ತಮ ಬಾಡಿ ಮಸಾಜ್ ಮಾಡಿಸಿಕೊಳ್ಳಿ.

ಫಲವತ್ತತೆ ಹೆಚ್ಚಿಸುವ ಯೋಗಾಭ್ಯಾಸಗಳು

ಫಲವತ್ತತೆ ಹೆಚ್ಚಿಸುವ ಯೋಗಾಭ್ಯಾಸಗಳು

1) ಅಗ್ನಿಸಾರ್ ಕ್ರಿಯ

2) ಹಲಾಸನ

3) ಸೇತುಬಂಧಾಸನ

4) ಧನುರಾಸನ

5) ಅಶ್ವಿನಿ ಮುದ್ರಾ

6) ಭಸ್ತ್ರಿಕಾ ಪ್ರಾಣಯಾಮ

English summary

Naturals ways to increase sperm count

Low sperm count is one of the reasons for infertility. We detail out the different ways to increase sperm count, what to include in your diet and which habits to follow.
X
Desktop Bottom Promotion