For Quick Alerts
ALLOW NOTIFICATIONS  
For Daily Alerts

ಗರ್ಭಿಣಿ ಪತ್ನಿಯ ಮನವರಿಯಿರಿ ಪತಿರಾಯರೆ

By Hemanth Amin
|

ಮಗುವಿಗೆ ಜನ್ಮ ನೀಡುವ ಮೂಲಕ ಮಹಿಳೆಯ ಜೀವನ ಸಾರ್ಥಕವಾಗುತ್ತದೆ. ಅದು ಆಕೆಯ ಜೀವನದ ಅತ್ಯಂತ ಸುಂದರ ಪಯಣ. ಮಗುವಿಗೆ ಜನ್ಮ ನೀಡುವ ಎಲ್ಲಾ ಹೊರೆ ಮಹಿಳೆಯ ಮೇಲಿದ್ದರೂ ಪತಿ ಕೂಡ ಮಗುವಿನ ಆಗಮನದ ತನಕ ಕೆಲವೊಂದು ಪ್ರಮುಖ ಪಾತ್ರ ನಿಭಾಯಿಸಬೇಕಾಗುತ್ತದೆ. ಮಗುವಿಗೆ ಜನ್ಮ ನೀಡಲಿರುವ ಪತ್ನಿಗೆ ಪತಿಯಾದವ ಎಲ್ಲಾ ರೀತಿಯ ಬೆಂಬಲ ನೀಡಬೇಕು. ಪತಿಯ ಬೆಂಬಲ ಮತ್ತು ಉಪಸ್ಥಿತಿ ಪತ್ನಿಗೆ ಮಾನಸಿಕ ಬಲ ನೀಡುತ್ತದೆ. ಗರ್ಭಾವಸ್ಥೆಯ ಸಮಯದಲ್ಲಿ ಪತ್ನಿಯಾದವಳು ಪತಿಯಿಂದ ಎಲ್ಲಾ ಸಹಕಾರ ಬಯಸುತ್ತಾಳೆ.

ಪತ್ನಿ ಗರ್ಭಿಣೆಯಾದಾಗ ಹಲವಾರು ಭಾವನೆಗಳನ್ನು ಹೊಂದಿರುತ್ತಾಳೆ. ಈ ಸಮಯದಲ್ಲಿ ಏಕಾಂಗಿಯಾಗಿಯೇ ಹೊರೆಯನ್ನು ಹೊತ್ತುಕೊಳ್ಳುವುದು ಆಕೆಯಲ್ಲಿ ತುಂಬಾ ಹತಾಶೆ ಉಂಟುಮಾಡಬಹುದು. ಅವರು ಈ ಹತಾಶೆಯನ್ನು ನಿಮ್ಮ ಮೇಲೆ ತೋರಿಸಬಹುದು. ಅದು ಪ್ರೀತಿಗಿಂತ ಹೆಚ್ಚಾಗಿ ದ್ವೇಷದ ಮೂಲಕ. ಈ ಸಮಯದಲ್ಲಿ ನೀವು ತುಂಬಾ ತಾಳ್ಮೆ ವಹಿಸಿ, ಪ್ರೀತಿ ಮತ್ತು ಕಾಳಜಿಯಿಂದ ಪರಿಸ್ಥಿತಿ ನಿಭಾಯಿಸಬೇಕು. ಹಾರ್ಮೋನಲ್ ವ್ಯತ್ಯಾಸದಿಂದಾಗಿ ಕೆಲವು ತಿಂಗಳಲ್ಲಿ ನಿಮ್ಮ ಪತ್ನಿಯ ಮನಸ್ಥಿತಿ ಬದಲಾಗಬಹುದು. ಇದನ್ನು ಎದುರಿಸಲು ನೀವು ತಯಾರಾಗಿರಬೇಕು. ಕೆಲವು ಸಲ ಸಣ್ಣ ಕೆಲಸಗಳನ್ನು ಮಾಡಲು ತೊಂದರೆಯಾಗುವ ಕಾರಣ ಪತಿಯ ದೈಹಿಕ ಬೆಂಬಲ ಕೂಡ ಬೇಕಾಗುತ್ತದೆ.

Looking After Moody Pregnant Wife

ಗರ್ಭಿಣೆಯಾಗಿದ್ದಾಗ ಬದಲಾಗುವ ಪತ್ನಿಯ ಮನಸ್ಥಿತಿ ಎದುರಿಸಲು ಹಲವಾರು ಮಾರ್ಗಗಳಿವೆ. ಕಾರಣವಿಲ್ಲದೆ ನಿಮ್ಮ ಬೆಂಬಲ ಮತ್ತು ಕಾಳಜಿ ಬಯಸುವಂತಹ ಹಠಾತ್ ಮತ್ತು ಅನಿಯಮಿತ ಮನಸ್ಥಿತಿ ಬದಲಾವಣೆಗೆ ಮಾನಸಿಕವಾಗಿ ತಯಾರಾಗುವುದು ತುಂಬಾ ಮುಖ್ಯ. 9 ತಿಂಗಳ ತನಕ ಮಗುವಿನ ಹೊರೆ ಹೊರುವ ಪತ್ನಿಗಿಂತ ಸ್ವಲ್ಪ ಕಡಿಮೆ ಜವಾಬ್ದಾರಿ ಅಗತ್ಯವಾಗಿ ವಹಿಸಿಕೊಳ್ಳಬೇಕು. ಪತ್ನಿ ಗರ್ಭಿಣಿಯಾಗಿದ್ದಾಗ ತುಂಬಾ ತಾಳ್ಮೆ ವಹಿಸಿ ಮತ್ತು ಕೆಲವು ವಿಷಯಗಳನ್ನು ತುಂಬಾ ತಾಳ್ಮೆಯಿಂದ ನಿಭಾಯಿಸಿ.

ಬದಲಾಗುವ ಮನಸ್ಥಿತಿಯ ಗರ್ಭಿಣಿ ಪತ್ನಿಯನ್ನು ಎದುರಿಸಲು ಇಲ್ಲಿ ಕೆಲವು ವಿಧಾನಗಳಿವೆ.

1. ಬೆಂಬಲ ಮತ್ತು ಕಾಳಜಿ
ಗರ್ಭಿಣಿ ಪತ್ನಿಗೆ ನೀವು ನೀಡುವ ಬೆಂಬಲ ಮತ್ತು ಕಾಳಜಿಗೆ ಯಾವುದೇ ಮಿತಿ ಇರುವುದಿಲ್ಲ. ಕೆಲವು ಸಲ ಯಾವುದೇ ಕಾರಣವಿಲ್ಲದಿರಬಹುದು. ಆದರೆ 9 ತಿಂಗಳು ಮಗುವಿನ ಹೊರೆಯನ್ನು ಹೊತ್ತುಕೊಳ್ಳುವ ಆಕೆಗೆ ನಿಮ್ಮ ಬೆಂಬಲ ಯಾವಾಗಲೂ ಬೇಕಾಗಿರುತ್ತದೆ ಎಂದು ಮನವರಿಕೆ ಮಾಡಿಕೊಳ್ಳಿ.

2. ಅತಿಯಾಗಿ ಪ್ರೀತಿ ಮಾಡಿ
ಮೂಡ್ ಬದಲಾಗುವ ನಿಮ್ಮ ಗರ್ಭಿಣಿ ಪತ್ನಿಯನ್ನು ಅತಿಯಾಗಿ ಪ್ರೀತಿ ಮಾಡುವುದು ಒಳ್ಳೆಯ ಹಾದಿ. ಆಕೆಗಾಗಿ ಯಾವಾಗಲೂ ಉಡುಗೊರೆ ಖರೀದಿಸಿ. ಅದರ ಗಾತ್ರ ಅಥವಾ ಬೆಲೆ ಅಪ್ರಸ್ತುತ, ಆಕೆಯ ಬಗ್ಗೆ ನೀವು ಯೋಚಿಸುತ್ತಿದ್ದೀರಿ ಎನ್ನುವುದು ತುಂಬಾ ಮುಖ್ಯ. ಕಚೇರಿಯಿಂದ ಬರುವಾಗ ಹೂ, ಚಾಕಲೇಟ್ ಅಥವಾ ಆಕೆಯ ಮೂಡ್ ನ್ನು ಬದಲಾಯಿಸಲು ಕಿವಿಯೋಲೆಯನ್ನು ತರಬಹುದು.

3. ಆಕೆ ಬಯಸುವುದನ್ನು ನೀಡಿ
ಹೌದು. ಆಕೆ ಬಯಸುವುದನ್ನು ನೀಡಿ. ಗರ್ಭಿಣಿ ಮಹಿಳೆಯರ ಕೆಲವು ಬೇಡಿಕೆಗಳು ತುಂಬಾ ವಿಚಿತ್ರವಾಗಿರುತ್ತದೆ ಮತ್ತು ನೀವು ನಿರೀಕ್ಷಿಸದೆ ಇರುವ ಸಮಯದಲ್ಲಿ ಅದು ಬರಬಹುದು. ರಾತ್ರಿ 2 ಗಂಟೆಗೆ ಆಕೆ ಚಾಕಲೇಟ್ ಕೇಳಿದರೆ ಚಾಕಲೇಟ್ ನೀಡಿ. ನೀವು ಮೀಟಿಂಗ್ ನಲ್ಲಿ ಇರುವಾಗ ಕರೆ ಮಾಡಿ ನೂಡಲ್ಸ್ ಬೇಕೆಂದು ಕೇಳಿದರೆ, ಅದಕ್ಕೆ ಇಲ್ಲವೆಂದು ಹೇಳಬೇಡಿ. ಸ್ವಲ್ಪ ತಡವಾದರೂ ಸರಿ ತಂದುಕೊಡಿ.

4. ಆಕೆ ನೆಮ್ಮದಿಯಾಗಿರುವಂತೆ ನೋಡಿಕೊಳ್ಳಿ
ಆಕೆ ಏಕಾಂಗಿಯಾಗಿ 9 ತಿಂಗಳ ಕಾಳ ಮಗುವಿನ ಭಾರ ಹೊತ್ತುಕೊಳ್ಳುತ್ತಾಳೆ. ಏಕಾಂಗಿಯಾಗಿ ಭಾರ ಹೊತ್ತ ಕೆಲವು ಸಮಯದ ಬಳಿಕ ಇದು ಸುಲಭವಾಗುತ್ತದೆ. ಗರ್ಭಿಣೆಯಾಗಿರುವಾಗ ಆಕೆ ನೆಮ್ಮದಿಯಾಗಿ ಮತ್ತು ಆರಾಮವಾಗಿರುವಂತೆ ನೋಡಿಕೊಳ್ಳುವುದು ನಿಮ್ಮ ಕೆಲಸ. ರೋಮ್ಯಾಂಟಿಕ್ ಡಿನ್ನರ್ ಗೆ ಕರೆದುಕೊಂಡು ಹೋಗಿ, ಉದ್ಯಾನದಲ್ಲಿ ಒಂದು ವಾಕ್ ಗೆ ಹೋಗಿ, ಆಕೆಯ ಫೇವರಿಟ್ ತಿಂಡಿ ತಿನ್ನಿಸಲು ಬೀದಿ ಬದಿಯ ಅಂಗಡಿಗಳಿಗೆ ಕರೆದುಕೊಂಡು ಹೋಗಿ. ನಿಮ್ಮ ಬೆಂಬಲ ಮತ್ತು ಕಾಳಜಿಯಿಂದ ಆಕೆ ನೆಮ್ಮದಿಯಾಗಿರುವುದನ್ನು ಖಚಿತಪಡಿಸಿಕೊಳ್ಳಿ.

5. ಆಕೆಗೆ ಭರವಸೆ ನೀಡಿ
ಮಗುವಿನ ಜನನದ ವೇಳೆ ಆಗುವ ನೋವು ಮತ್ತು ಪ್ರಕ್ರಿಯೆಗಳನ್ನು ಯೋಚಿಸಿ ನಿಮ್ಮ ಪತ್ನಿಯ ಮನಸ್ಥಿತಿ ಬದಲಾಗಬಹುದು. ಆಕೆಯಲ್ಲಿ ಭರವಸೆ ಮೂಡಿಸಿ, ಮಗುವಿನ ಜನನದ ತನಕ ಆಕೆಯ ಜತೆಗಿದ್ದು ಎಲ್ಲಾ ಬೆಂಬಲ ನೀಡುವುದಾಗಿ ಆಕೆಗೆ ಭರವಸೆ ನೀಡಿ. ನೀವು ತುಂಬಾ ಗಟ್ಟಿ ಮನಸ್ಸಿನ ವ್ಯಕ್ತಿಯಾಗಿದ್ದರೆ ಪ್ರಸವ ಕೋಣೆಯಲ್ಲಿ ಆಕೆಯ ಕೈ ಹಿಡಿದು ನಿಮ್ಮ ಉಪಸ್ಥಿತಿಯ ಭರವಸೆ ನೀಡಬಹುದು.

English summary

Looking After Moody Pregnant Wife

One of the most beautiful journeys of life is that of giving birth to a child. Even though the burden of child birth is carried solely by the woman, men do have their role to play till such time the child arrives. As the husband, you are entitled to support your wife in the months leading to child birth.
Story first published: Monday, November 25, 2013, 12:43 [IST]
X
Desktop Bottom Promotion