For Quick Alerts
ALLOW NOTIFICATIONS  
For Daily Alerts

ಗರ್ಭದಲ್ಲಿ ಗಡ್ಡೆ ಬಂದರೆ ಮಕ್ಕಳಾಗುವುದೇ?

|

Uterine fibroids ಮಹಿಳೆಯರಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆಯಾಗಿದೆ. ಈ ರೀತಿ ಸಾಮಾನ್ಯವಾಗಿ ಮಧ್ಯವಯಸ್ಸು ದಾಟಿದ ಮೇಲೆ ಕಂಡು ಬರುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಪ್ರಾಯದ ಹುಡುಗಿಯರಲ್ಲೂ ಕಂಡು ಬರುತ್ತಿದೆ. ಜೀವನ ಶೈಲಿ, ಆಹಾರಕ್ರಮ ಇವೆಲ್ಲಾ ಕೂಡ ಒಂದು ಕಾರಣವಾಗಿದೆ.

ಈ ಸಮಸ್ಯೆ ಬಂದರೆ ಮಕ್ಕಳಾಗುತ್ತದೆಯೇ? ಎಂಬ ಸಂಶಯ ಹೆಚ್ಚಿನವರಲ್ಲಿರುತ್ತದೆ. ಮಕ್ಕಳಾಗುತ್ತದೆ, ಆದರೆ ಈ ರೀತಿ ಇರುವಾಗ ಗರ್ಭಧರಿಸುವುದು ಸ್ವಲ್ಪ ರಿಸ್ಕ್ .

Is Getting Pregnant With Fibroids Possible?

Uterine fibroid ಎಂದರೆ ಏನು ಎಂದು ಮೊದಲು ತಿಳಿಯೋಣ:
ಗರ್ಭ ಕೋಶದಲ್ಲಿ ಚಿಕ್ಕ-ಚಿಕ್ಕ ಗಡ್ಡೆ ಏಳುವುದು.

ಈ ಸಮಸ್ಯೆ ಇರುವವರಿಗೆ ಗರ್ಭಧಾರಣೆಯ ಸಾಧ್ಯತೆ ಕಡಿಮೆ. ಏಕೆ ಎಂದು ನೋಡೋಣ ಬನ್ನಿ...
* ಈ ಕಾಯಿಲೆ ಬಂದರೆ ಅನಿಯಮಿತ ಮುಟ್ಟು ಉಂಟಾಗುವುದು.
* ಕೆಲವರಿಗಂತೂ 6 ತಿಂಗಳವರೆಗೆ ಮುಟ್ಟಾಗುವುದೇ ಇಲ್ಲ. ಆದ್ದರಿಂದ ಗರ್ಭಧಾರಣೆಯಾಗುವ ಸಾಧ್ಯತೆ ಆಗುವ ಸಾಧ್ಯತೆ ಕಡಿಮೆ.
* ಒಂದು ವೇಳೆ ಗರ್ಭಧಾರಣೆಯಾದರೂ ಗರ್ಭಪಾತವಾಗುವ ಸಾಧ್ಯತೆ ಹೆಚ್ಚು.
* ಈ ಸಮಸ್ಯೆ ಇರುವವರು ಗರ್ಭಧರಿಸಿದರೆ ಅನೇಕ ಸಮಸ್ಯೆಗಳು ಉಂಟಾಗುವುದು, ಗರ್ಭ ಬೆಳೆದಂತೆ ಹಾರ್ಮೋನ್ ಗಳ ವ್ಯತ್ಯಾಸದಿಂದ ಈ ಗಡ್ಡೆಯೂ ಬೆಳಯಬಹುದು. ಇದರಿಂದಾಗಿ ಗರ್ಭಪಾತವಾಗುವ ಸಾಧ್ಯತೆ ಹೆಚ್ಚು, ಹೆರಿಗೆಯಲ್ಲಿ ನಾರ್ಮಲ್ ಡೆಲಿವರಿ ಸಾಧ್ಯವಾಗದೆ, ಶಶ್ತ್ರ ಚಿಕಿತ್ಸೆ ಬೇಕಾಗಬಹುದು.

ಈ ರೀತಿಯಾದರೆ ಬಂಜೆತನ ಉಂಟಾಗುವುದೇ?
ಈ ಗಟ್ಟೆಗಳಿಂದ ಬಂಜೆತನ ಉಂಟಾಗುವುದಿಲ್ಲ, ಗರ್ಭಧಾರಣೆ ಆಗುತ್ತಾರೆ. ಆದರೆ ಗರ್ಭಧಾರಣೆಯ ನಂತರ ತೊಂದರೆ ಕಾಣಿಸಬಹುದು.
Uterine fibroid ಇರುವವರು ಈ ಗಡ್ಡೆಗಳನ್ನು ಚಿಕಿತ್ಸೆಯ ಮುಖಾಂತರ ಸಂಪೂರ್ಣವಾಗಿ ಹೋಗಲಾಡಿಸಿದ ಬಳಿಕ ಮಗುವಿಗೆ ಪ್ಲಾನ್ ಮಾಡುವುದು ಒಳ್ಳೆಯದು.

English summary

Is Getting Pregnant With Fibroids Possible? | Tips For Women | ಗರ್ಭದಲ್ಲಿ ಗಡ್ಡೆ ಬಂದರೆ ಮಕ್ಕಳಾಗುವುದೇ? | ಮಹಿಳೆಯರಿಗೆ ಕೆಲ ಸಲಹೆಗಳು

Getting pregnant when you have fibroids is bit of challenge. Whether conceiving with fibroids is possible or not depends on the intensity of the problem.
X
Desktop Bottom Promotion