For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರು ಯಾವಾಗ ಡ್ರೈವ್ ಮಾಡಬಾರದು?

|

ನಗರ ಪ್ರದೇಶದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣ ಮಾಡುವುದೆಂದರೆ ಬಹಳ ಪ್ರಯಾಸದ ಕೆಲಸ ಅದರಲ್ಲೂ ಸಿಟಿ ಬಸ್ ಗಳನ್ನು ಕ್ಯಾಚ್ ಮಾಡಿ ಹೋಗುವಷ್ಟರಲ್ಲಿ ಸಾಕಪ್ಪಾ ಸಾಕು ಅನಿಸಿಬಿಡುತ್ತದೆ. ಆದ್ದರಿಂದ ಹೆಚ್ಚಿನವರು ಸ್ವಂತ ವಾಹನಗಳಲ್ಲಿ ಹೋಗಲು ಇಷ್ಟಪಡುತ್ತಾರೆ.

ಗರ್ಭಿಣಿಯಾಗಿರುವಾಗ ಡ್ರೈವ್ ಮಾಡಬಹುದೇ? ಎಂಬ ಪ್ರಶ್ನೆ ಅನೇಕ ಮಹಿಳೆಯರಲ್ಲಿರುತ್ತದೆ. ಗರ್ಭಿಣಿಯಾಗಿರುವಾಗ ಆಟೋ ಸೇಫ್ ಅಲ್ಲ, ಇನ್ನು ಬಸ್ ನಲ್ಲಿ ಹೋಗೋಣ ಅಂದರೆ ಆ ನೂಕು ನುಗ್ಗಲಿನಿಂದ ಹೊಟ್ಟೆಗೆ ಎಲ್ಲಿ ಪೆಟ್ಟು ಬೀಳಬಹುದೋ ಎಂಬ ಭಯ. ಆಫೀಸ್ ಗೆ ಗಾಡಿಯಲ್ಲಿ ಹೋಗಿ ಬರುವೆ ಎಂಬ ನಿರ್ಧಾರಕ್ಕೆ ಬಂದು ಬಿಡುತ್ತಾರೆ. ನಿಮ್ಮದೇ ಗಾಡಿಯಲ್ಲಿ ಬರುವುದು ಎಂದು ತೀರ್ಮಾನಿಸಿದರೆ ಒಳ್ಳೆಯದೇ ಆದರೆ ನೀವು ಡ್ರೈವ್ ಮಾಡಬೇಡಿ, ಒಬ್ಬ ಡ್ರೈವರ್ ಅನ್ನು ನೇಮಿಸಿಕೊಳ್ಳಿ. ಏಕೆಂದರೆ ಗರ್ಭಿಣಿಯರು ಡ್ರೈವ್ ಮಾಡಬಾರದು. ಏಕೆ ಮಾಡಬಾರದೆನ್ನುವುದಕ್ಕೆ ಕಾರಣಗಳು ನೋಡಿ ಇಲ್ಲಿವೆ:

Is Driving During Pregnancy A Safe Option?

ಗರ್ಭಾವಸ್ಥೆಯ ಮೊದಲನೇ ಹಂತದಲ್ಲಿ
ಏಕೆಂದರೆ ಗರ್ಭಾವಸ್ಥೆಯ ಮೊದಲನೇ ಹಂತದಲ್ಲಿ ತಲೆಸುತ್ತು, ವಾಂತಿ, ಸುಸ್ತು ಮುಂತಾದ ಸಮಸ್ಯೆಗಳು ಕಂಡು ಬರುತ್ತವೆ. ಆದ್ದರಿಂದ ಈ ಸಮಯದಲ್ಲಿ ಡ್ರೈವ್ ಮಾಡಬಾರದು.

ದೇಹದ ತೂಕ ಮತ್ತು ಕಾಲು ಊದುವುದು
ಗರ್ಭಿಣಿಯಾಗಿ 5-6 ತಿಂಗಳಿಗೆ ದೇಹದ ತೂಕ ಹೆಚ್ಚಾಗುತ್ತದೆ. ಕೆಲವರಿಗೆ ಕಾಲು ಊದಿಕೊಳ್ಳುತ್ತದೆ. ಈ ಸಮಯದಲ್ಲಿ ಡ್ರೈವಿಂಗ್ ಮಾಡುವುದು ಸ್ವಲ್ಪ ಕಷ್ಟವಾಗುತ್ತದೆ, ಕೆಳ ಹೊಟ್ಟೆಗೆ ಒತ್ತಡ ಬೀಳುತ್ತದೆ.

ಕಡಿಮೆ ಅಥವಾ ಅಧಿಕ ರಕ್ತದೊತ್ತಡ
ಕಡಿಮೆ ಅಥವಾ ಅಧಿಕ ರಕ್ತದೊತ್ತಡವಿದ್ದರೆ ನೀವು ಯಾವುದೇ ಕಾರಣಕ್ಕೂ ಡ್ರೈವ್ ಮಾಡಬಾರದು ಹಾಗೂ ಮನೆಯವರ ಜೊತೆ ಹೋಗುವುದಾದರೂ ಅತೀ ದೂರ ಟ್ರಿಪ್ ಹೋಗುವುದು ಕೂಡ ಒಳ್ಳೆಯದಲ್ಲ.

ಸ್ವಲ್ಪ ದೂರ ಪ್ರಯಾಣಕ್ಕೆ ಟ್ರೈನ್ ನಲ್ಲಿ ಹೋಗುವುದು ಒಳ್ಳೆಯದು. ಆಟೋ, ಬೈಕ್ ಈ ರೀತಿಯ ಗಾಡಿಗಳಲ್ಲಿ ಕೂರುವುದು ಒಳ್ಳೆಯದಲ್ಲ.

English summary

Is Driving During Pregnancy A Safe Option? | ಗರ್ಭಾವಸ್ಥೆಯಲ್ಲಿ ಡ್ರೈವ್ ಮಾಡುವುದು ಒಳ್ಳೆಯದೇ

Many women do travel in their own vehicles when they are expecting and believe that it is the safest mode of travel during pregnancy. There are many things that are in favour of and against the concept of women driving during pregnancy
X
Desktop Bottom Promotion