For Quick Alerts
ALLOW NOTIFICATIONS  
For Daily Alerts

ಗರ್ಭಧಾರಣೆ ಯಶಸ್ವಿಯಾಗುವುದು ಹೇಗೆ ?

By Super
|

ಕೆಲವು ದಂಪತಿಗಳು ಮಗುವಾಗುವುದನ್ನು ಸಾಕಷ್ಟು ಮುಂದೆ ಹಾಕುತ್ತಾರೆ. ಕೆಲವು ಹೆಂಗಳೆಯರು ಮದುವೆ ಮಾಡಿಕೊಂಡ ತಕ್ಷಣ ಮಗು ಆಗುವುದರಿಂದ ಜೀವನ ಅನುಭವಿಸಲು ಸಾಧ್ಯವಾಗುವುದಿಲ್ಲ ಎಂದು ಮುಂದೆ ಹಾಕುತ್ತಾರೆ.ಆದರೆ ವಯಸ್ಸು ಹೆಚ್ಚಾದಂತೆ ಮಗು ಆಗುವುದು ಕಷ್ಟವಾಗಬಹುದು.ಇದರ ಬಗ್ಗೆ ಕೂಡ ಗಮನ ಹರಿಸಿ ಮುಂದುವರೆಯುವುದು ಸೂಕ್ತ.ಆದರೆ ಗರ್ಭ ಧರಿಸುವ ಮೊದಲು ಕೆಲವೊಂದು ವಿಷಯಗಳ ಬಗ್ಗೆ ಗಮನವಿರಲಿ.ಅದರ ಬಗ್ಗೆ ಮಾಹಿತಿ ಇಲ್ಲಿದೆ.

ಆರೋಗ್ಯಯುತ ಆಗಿ ಗರ್ಭಿಣಿ ಆಗಲು ಮತ್ತು ಆರೋಗ್ಯಯುತ ಮಗುವನ್ನು ಪಡೆಯಲು ಇಲ್ಲಿ ಕೆಲವು ಟಿಪ್ಸ್ ನೀಡಲಾಗಿದೆ.

ಗರ್ಭಿಣಿ ಆಗಲು ತಯಾರಾಗಿ

ಗರ್ಭಿಣಿ ಆಗಲು ತಯಾರಾಗಿ

ಗರ್ಭಿಣಿ ಆಗುವ ಮೊದಲು ಹೆಚ್ಚಿನ ತೂಕವನ್ನು ಕಡಿಮೆ ಮಾಡಿಕೊಳ್ಳಿ: ತೂಕ ಅಧಿಕವಿದ್ದರೆ ಗರ್ಭಧರಿಸುವುದು ಕಷ್ಟ ಮಾತ್ರವಲ್ಲ,ಗರ್ಭಾವಸ್ಥೆಯಲ್ಲಿ ಕೂಡ ಕಷ್ಟವಾಗುವಂತೆ ಮಾಡುತ್ತದೆ.ಸಾಮಾನ್ಯ ತೂಕ ಹೊಂದಿರುವ ಮಹಿಳೆಗಿಂತ ಅಧಿಕ ತೂಕ ಹೊಂದಿರುವ ಮಹಿಳೆಗೆ ಗರ್ಭಾವಸ್ಥೆಯಲ್ಲಿ ತೊಡಕುಗಳಾಗುವ ಸಂಭವ ಹೆಚ್ಚು.

ವ್ಯಾಯಾಮವನ್ನು ಗರ್ಭದರಿಸಿದ ನಂತರವೂ ಮುಂದುವರೆಸಿ

ವ್ಯಾಯಾಮವನ್ನು ಗರ್ಭದರಿಸಿದ ನಂತರವೂ ಮುಂದುವರೆಸಿ

ನಿಮಗೆ ಯೋಗ ಮಾಡುವುದು ಇಷ್ಟವೇ?ಇಷ್ಟವಾದಲ್ಲಿ ಹೆಚ್ಚು ತೊಡಕುಗಳಿಲ್ಲದ ಯೋಗವನ್ನು ಮಾಡುವುದರಲ್ಲಿ ಯಾವುದೇ ರೀತಿಯ ತಪ್ಪಿಲ್ಲ.

ಕ್ಯಾಲೋರಿಗೋಸ್ಕರ ಆರೋಗ್ಯಯುತವಾದ ಆಹಾರ ಸೇವಿಸಿ

ಕ್ಯಾಲೋರಿಗೋಸ್ಕರ ಆರೋಗ್ಯಯುತವಾದ ಆಹಾರ ಸೇವಿಸಿ

ತಾಯಿಯಾಗುತ್ತಿರುವವರು ಪ್ರತಿದಿನ 300 ಕ್ಯಾಲೋರಿ ಅಧಿಕ ತಿನ್ನಬೇಕು ಎಂದ ಮಾತ್ರಕ್ಕೆ ಕೇವಲ ಕೊಬ್ಬು ಮತ್ತು ಸಕ್ಕರೆ ಅಂಶವಿರುವ ಆಹಾರ ಸೇವಿಸಬೇಕು ಎಂದಲ್ಲ.ತೆಳುವಾದ,ಸ್ವಚ್ಚವಾದ ಪ್ರೋಟಿನ್ ಇರುವ ಆಹಾರವನ್ನು ತೆಗೆದುಕೊಳ್ಳುವುದು ಉತ್ತಮ.ಕೆಲವು ತಾಯಂದಿರು ಕೇವಲ ಪ್ರೋಟಿನ್ ಪೂರಕ ಸೇವಿಸಿ ತಾಯಿಯಾಗುವ ಮೊದಲು ಬಳಸುತ್ತಿದ್ದ ಆಹಾರವನ್ನೇ ಬಳಸುತ್ತಾರೆ.

ಆಹಾರ ನೈರ್ಮಲ್ಯದ ಬಗ್ಗೆ ಹೆಚ್ಚು ಗಮನವಿರಲಿ

ಆಹಾರ ನೈರ್ಮಲ್ಯದ ಬಗ್ಗೆ ಹೆಚ್ಚು ಗಮನವಿರಲಿ

ಕೆಲವು ಅಹಾರಗಳಿವೆ ಅವುಗಳನ್ನು ಗರ್ಭಧಾರಣೆ ಸಂಧರ್ಭದಲ್ಲಿ ತಿನ್ನದಿರುವುದು ಸೂಕ್ತ.ಏಕೆಂದರೆ ಅವು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.Listeriosis ಲಿಸ್ಟೇರಿಯಾ ಬ್ಯಾಕ್ಟೀರಿಯದಿಂದ ಉಂಟಾಗುವ ಸೋಂಕು.ಇದು ಅಪರೂಪ ಮತ್ತು ಸಾಮಾನ್ಯವಾಗಿ ನಿಮ್ಮ ಆರೋಗ್ಯಕ್ಕೆ ಅಪಾಯ ಮಾಡುವುದಿಲ್ಲ.ಆದಾಗ್ಯೂ ಇದು ಗರ್ಭಧಾರಣೆ ಅಥವಾ ಜನನದ ಸಂದರ್ಭದಲ್ಲಿ ತೊಂದರೆ ಆಗಬಹುದು ಮತ್ತು ಗರ್ಭಪಾತ ಕೂಡ ಆಗುವ ಸಂಭವವಿರುತ್ತದೆ.

ವಿಟಮಿನ್ ಡಿ ಪಡೆಯಲು ಹೆಚ್ಚು ನೀರು ಕುಡಿಯಿರಿ

ವಿಟಮಿನ್ ಡಿ ಪಡೆಯಲು ಹೆಚ್ಚು ನೀರು ಕುಡಿಯಿರಿ

ಇದು ನಿಮ್ಮ ಮಗುವಿನ ಹಲ್ಲು ಮತ್ತು ಮೂಳೆಗಳಿಗೆ ಅತಿ ಅಗತ್ಯ.1000 ಎಂ ಜಿ ಬೇಕಾದ ಕ್ಯಾಲ್ಸಿಯಂ ಪ್ರಮಾಣ.ವಿಟಮಿನ್ ಡಿ ನೀಡುವ ಅಹಾರಗಳೆಂದರೆ ಮೊಸರು ಮತ್ತು ಡೈರಿ ಪದಾರ್ಥಗಳು.ಸೂರ್ಯನ ಕಿರಣಗಳಿಗೆ ಮೈಯೊಡ್ಡಿ ಮತ್ತು ಮೀನು ಮತ್ತು ಮೊಟ್ಟೆ ಬಳಸಿ.ನೀವು ಮೀನು ತಿನ್ನುತ್ತೀರಾದರೆ ಮರ್ಕುರಿ ಲೆವೆಲ್ ಕಡಿಮೆ ಇರುವ ಮೀನನ್ನು ಬಳಸಿ.

ಫೋಲಿಕ್ ಆಸಿಡ್ ದೇಹಕ್ಕೆ ಸಿಗುವಂತೆ ನೋಡಿಕೊಳ್ಳಿ

ಫೋಲಿಕ್ ಆಸಿಡ್ ದೇಹಕ್ಕೆ ಸಿಗುವಂತೆ ನೋಡಿಕೊಳ್ಳಿ

ಫೋಲಿಕ್ ಆಸಿಡ್ ಮಗುವಿನ ಬೆನ್ನು ಮೂಳೆ ಮತ್ತು ನರ ನಾಳಗಳನ್ನು ಆರೋಗ್ಯಕರವಾಗಿ ಇರುವಂತೆ ನೋಡಿಕೊಳ್ಳುತ್ತದೆ.ಈ ನ್ಯುಟ್ರಿಶನ್ ಬೆರಳುಗಳ ಉಗುರುಗಳು ಬೆಳೆಯಲು ಮತ್ತು ಕೂದಲು ಆರೋಗ್ಯಯುತವಾಗಿ ಇರಲು ಸಹಾಯ ಮಾಡುತ್ತವೆ.ಫೋಲಿಕ್ ಆಸಿಡ್ ಸಾಮಾನ್ಯವಾಗಿ ಪಾಲಕ್ ಸೊಪ್ಪು,ಕಾಲುಗಳು,ಮೊಟ್ಟೆಗಳಲ್ಲಿ ಇರುತ್ತವೆ.

ಪರಿಸರ ಮತ್ತು ಭಾವನಾತ್ಮಕ ಎರಡೂ ಒತ್ತಡಗಳ ಬಗ್ಗೆ ಗಮನವಿರಲಿ:

ಪರಿಸರ ಮತ್ತು ಭಾವನಾತ್ಮಕ ಎರಡೂ ಒತ್ತಡಗಳ ಬಗ್ಗೆ ಗಮನವಿರಲಿ:

ಸ್ಮೋಕ್,ಕೆಮಿಕಲ್,ವಾಯು ಮಾಲಿನ್ಯ ಇವುಗಳ ಮಧ್ಯೆ ಕೆಲಸ ಮಾಡುವುದರಿಂದ ಮಗು ಮತ್ತು ತಾಯಿ ಇಬ್ಬರಿಗೂ ತೊಂದರೆ.ಹಾಗೆಯೇ ಭಾವನಾತ್ಮಕ ಒತ್ತಡಗಳು ಕೂಡ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.

ಧೂಮಪಾನ ಮತ್ತು ಮಧ್ಯಪಾನ ಬಿಟ್ಟುಬಿಡಿ

ಧೂಮಪಾನ ಮತ್ತು ಮಧ್ಯಪಾನ ಬಿಟ್ಟುಬಿಡಿ

ಗರ್ಭಧಾರಣೆ ಮೊದಲು,ಗರ್ಭ ಧರಿಸಿದಾಗ ಮತ್ತು ನಂತರ ಯಾವಾಗಲಾದರೂ ಸ್ಮೋಕ್ ಮಾಡಿದರೆ ಕ್ಯಾನ್ಸರ್ ಬರುತ್ತದೆ.ಮಗುವನ್ನು ಹೊಟ್ಟೆಯಲ್ಲಿ ಇಟ್ಟುಕೊಂಡಾಗ ಖಂಡಿತವಾಗಿ ಸ್ಮೋಕ್ ಮಾಡಬಾರದು ಇದು ಮಗು ಮತ್ತು ತಾಯಿ ಇಬ್ಬರಿಗೂ ಅಪಾಯ.ಇದರ ಜೊತೆಗೆ ಮಧ್ಯಪಾನ ಭ್ರೂಣಕ್ಕೆ ಮಾರಣಾಂತಿಕ ಹಾನಿಯನ್ನು ಮಾಡುತ್ತದೆ.

ಕೆಫಿನ್ ಕಡಿಮೆ ಮಾಡಿ

ಕೆಫಿನ್ ಕಡಿಮೆ ಮಾಡಿ

ಕಾಫಿ,ಟೀ,ಕೋಲಾ,ಎನೆರ್ಜಿ ಡ್ರಿಂಕ್ಸ್ ಇವುಗಳೆಲ್ಲ ಸೌಮ್ಯ ಉತ್ತೇಜಕಗಳು.ಆದರೆ ಕೆಫಿನ್ ಅಂಶವಿರುವ ಡ್ರಿಂಕ್ಸ್ ಅನ್ನು ಹೆಚ್ಚು ಕುಡಿದರೆ ಗರ್ಭಪಾತ ಆಗುವ ಅಪಾಯವಿರುತ್ತದೆ.ಜೊತೆಗೆ ಹೆಚ್ಚು ಕೆಫೀನ್ ಬಳಸುವುದರಿಂದ ಕಡಿಮೆ ತೂಕದ ಮಗುವಿಗೆ ಜನನ ನೀಡುವ ಸಂಭವ ಹೆಚ್ಚು.

ನೀರು ಒಳ ಸೇರುವುದನ್ನು ಹೆಚ್ಚಿಸಿ

ನೀರು ಒಳ ಸೇರುವುದನ್ನು ಹೆಚ್ಚಿಸಿ

ಹಾರ್ಮೋನ್ ಪ್ರೊಜೆಸ್ಟರಾನ್ ಗರ್ಭಾವಸ್ಥೆಯಲ್ಲಿ ಉಬ್ಬುವುದು ಮತ್ತು ನೀರಿನ್ನು ಹೆಚ್ಚು ಹೀರುತ್ತದೆ.ಇದನ್ನು ಕಡಿಮೆ ಮಾಡಲು ನೀರನ್ನು ಹೆಚ್ಚು ಸೇವಿಸಬೇಕು.ಹೆಚ್ಚು ನೀರು ತೆಗೆದುಕೊಳ್ಳುವುದು ಆರೋಗ್ಯಕ್ಕೆ ಉತ್ತಮ.

ರಾತ್ರಿ ಸರಿಯಾಗಿ ನಿದ್ದೆ ಮಾಡಿ

ರಾತ್ರಿ ಸರಿಯಾಗಿ ನಿದ್ದೆ ಮಾಡಿ

ಮಗು ಬೆಳೆಯಲು ಮತ್ತು ತಾಯಿ ಆರೋಗ್ಯಯುತವಾಗಿ ಇರಲು ತಾಯಿ ಹೆಚ್ಚು ಕೆಲಸ ಮಾಡಿರುತ್ತಾಳೆ.ನಿದ್ದೆ ಇದಕ್ಕೆ ಅತ್ಯವಶ್ಯಕ. ಪ್ರತಿದಿನ 6 -8 ಗಂಟೆ ನಿದ್ದೆ ಮಾಡಬೇಕು. ಮಧ್ಯಾಹ್ನ ಸಣ್ಣ ನಿದ್ದೆ ಮಾಡುವುದು ಕೂಡ ಒಳ್ಳೆಯದು.

ಎಲ್ಲಾ ಜನನ ಪೂರ್ವದ ಎಚ್ಚರಿಕೆಯ ಬಗ್ಗೆ ಗಮನವಿರಲಿ

ಎಲ್ಲಾ ಜನನ ಪೂರ್ವದ ಎಚ್ಚರಿಕೆಯ ಬಗ್ಗೆ ಗಮನವಿರಲಿ

ಮೊದಲು ಇದು ಸಮಯ ವ್ಯರ್ಥ ಎನಿಸುತ್ತದೆ.ಆದರೆ ಆ ಸಣ್ಣ ಹೃದಯ ಬಡಿತ ಮತ್ತು ಯುರಿನ್ ಟೆಸ್ಟ್ ಮಗುವಿನ ಮತ್ತು ತಾಯಿಯ ಆರೋಗ್ಯದ ಬಗ್ಗೆ ತಿಳಿಸುತ್ತದೆ.ಒಂದು ಸಣ್ಣ ಸಮಸ್ಯೆ ಕೂಡ ಇರಬಹುದು ಆದರೆ ಅದು ಪ್ರಸವ ಪೂರ್ವ ಆರೈಕೆ ಇಲ್ಲದೆ ತಿಳಿದುಬರುವುದಿಲ್ಲ.

ಮುನ್ನೆಚ್ಚರಿಕೆಯ ಆರೈಕೆ ಮುಂದುವರಿಸಿ

ಮುನ್ನೆಚ್ಚರಿಕೆಯ ಆರೈಕೆ ಮುಂದುವರಿಸಿ

ಡೆಂಟಲ್ ಮತ್ತು ಕಣ್ಣಿನ ಬಗ್ಗೆ ಮೊದಲೇ ಗಮನ ಹರಿಸುವುದು ಒಳ್ಳೆಯದು.ಮಾನವರ ಗರ್ಭಧಾರಣೆ 10 ತಿಂಗಳು ಇರುತ್ತದೆ ಆದ್ದರಿಂದ ಆ ಸಮಯದಲ್ಲಿ ಮಗುವಿನ ಆರೋಗ್ಯದ ದೃಷ್ಟಿಯಿಂದ ತಾಯಿಯ ಆರೋಗ್ಯವನ್ನು ಕೂಡ ಕಡೆಗಣಿಸಬಾರದು.

ಪ್ರತಿದಿನ ವಿಟಮಿನ್ ಇರಲಿ

ಪ್ರತಿದಿನ ವಿಟಮಿನ್ ಇರಲಿ

ಫೋಲಿಕ್ ಆಸಿಡ್ ಗರ್ಭಿಣಿಯಾದ ಮೊದಲ ದಿನಗಳಲ್ಲಿ ತುಂಬಾ ಅಗತ್ಯ ಆದ್ದರಿಂದ ಹೆಚ್ಚಿನ ಮಹಿಳೆಯರು ವಿಟಮಿನ್ ಮಾತ್ರೆ ಅನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆ.ಪ್ರತಿದಿನ ಅದೇ ಸಮಯದಲ್ಲಿ ಈ ವಿಟಮಿನ್ ಅನ್ನು ತೆಗೆದುಕೊಳ್ಳಬೇಕು ಮತ್ತು ಇದು ಮಗುವಿಗೆ ಅಗತ್ಯವಾದ ಜೀವಸತ್ವವಾಗಿದ್ದು ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತವೆ.

ಧನಾತ್ಮಕವಾಗಿ ಯೋಚಿಸಿ

ಧನಾತ್ಮಕವಾಗಿ ಯೋಚಿಸಿ

ಇತ್ತೀಚಿನ ಆಧಾರದ ಪ್ರಕಾರ ಮಾನಸಿಕ ಯೋಚನೆಯು ಅರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.ಉದಾರಹಣೆಗೆ ಮಹಿಳೆ ತಾನು ದೇಹ ತೂಕ ಕಳೆದುಕೊಳ್ಳುತ್ತೇನೆ ಎಂದು ಯೋಚಿಸಿದರೆ ಆಕೆ ಸ್ವಲ್ಪ ತೂಕ ಕಳೆದುಕೊಂಡಿರುತ್ತಾಳೆ.ಹಾಗೆಯೇ ಇಲ್ಲಿಯೂ ಕೂಡ ಆಕೆ ತನ್ನ ಗರ್ಭಧಾರಣೆ ಯಶಸ್ಸಾಗುತ್ತದೆ ಎಂದು ಯೋಚಿಸಿದರೆ ಯಾವುದೇ ತೊಂದರೆ ಇಲ್ಲದೆ ಯಶಸ್ಸಾಗುತ್ತದೆ.

ಸ್ವಲ್ಪ ವಿಶ್ರಾಂತಿ ಪಡೆಯಿರಿ

ಸ್ವಲ್ಪ ವಿಶ್ರಾಂತಿ ಪಡೆಯಿರಿ

ಮೊದಲ ಕೆಲವು ದಿನಗಳಲ್ಲಿ ಗರ್ಭಾವಸ್ಥೆ ಹಾರ್ಮೋನ್ ನಿಂದಾಗಿ ಆಯಾಸ ಕಂಡು ಬರುತ್ತದೆ.ನಂತರ ಕ್ರಮೇಣ ಆಯಾಸ ಕಡಿಮೆ ಆಗುತ್ತದೆ.

ನಿಮಗೆ ಬೆನ್ನು ನೋವು ತುಂಬಾ ತೊಂದರೆ ನೀಡುತ್ತಿದ್ದಾರೆ ಎಡಮಗ್ಗುಲಿಗೆ ತಿರುಗಿ ಕಾಲನ್ನು ಸ್ವಲ್ಪ ಮಡುಚಿ ಮಲಗಿ.ನಿಮ್ಮ ಸೊಂಟದ ಕೆಳ ಭಾಗದಲ್ಲಿ ಮೆತ್ತನೆ ದಿಂಬು ಇರಿಸಿ ಮಲಗಿದರೆ ಸ್ವಲ್ಪ ಆರಾಮವೆನಿಸಬಹುದು.

English summary

How to Have a Successful Pregnancy

Some mothers will plan for a pregnancy for years in advance. The obstetrician or family planning expert can help the mother to be, plan out the most effective lifestyle changes to optimize the health of mom and baby during gestation.
X
Desktop Bottom Promotion