For Quick Alerts
ALLOW NOTIFICATIONS  
For Daily Alerts

ಗಾಜಿನ ಬಳೆ ಧರಿಸಿದರೆ ನಾರ್ಮಲ್ ಡೆಲಿವರಿಯಾಗುವುದೇ?

|

ಒಂದುಕಾಲದಲ್ಲಿ ಸಿಸೇರಿಯನ್ ಎಂದರೆ ಜನ ಭಯ ಪಡುತ್ತಿದ್ದರು. ಹೆರಿಗೆ ತುಂಬಾ ಕಷ್ಟವಾದಾಗ ಮಾತ್ರ ಸಿಸೇರಿಯನ್ ಮಾಡಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸಿ ಸೆಕ್ಷನ್ ಡೆಲಿವರಿ ಹೆಚ್ಚಾಗಿ ಕಂಡು ಬರುತ್ತಿದೆ. ನಾರ್ಮಲ್ ಡೆಲಿವರಿಯಾದರು, ಆ ಮಹಿಳೆ ತುಂಬಾ ಲಕ್ಕಿ ಪರ್ಸನ್ ಎಂಬಂತೆ ನೋಡುತ್ತೇವೆ!

ಇತ್ತೀಚಿನ ದಿನಗಳಲ್ಲಿ ಸಿಸೇರಿಯನ್ ಹೆಚ್ಚಾಗಲು ಕಾರಣವೇನೆಂದು ಯೋಚಿಸಿದ್ದೀರಾ? ನಮ್ಮ ಜೀವನ ಶೈಲಿ ಇದಕ್ಕೆ ಪ್ರಮುಖ ಕಾರಣವಾಗಿದೆ. ತುಂಬಾ ಲೇಟಾಗಿ ಮದುವೆಯಾಗುವುದು, ಮೈ ತೂಕ ಹೆಚ್ಚಾಗುವುದು, ಅನಾರೋಗ್ಯ, ಪೋಷಕಾಂಶದ ಕೊರತೆ, ಮಗುವಿನ ಬೆಳವಣಿಗೆ ಸರಿಯಾಗಿ ಆಗದಿರುವುದು ಇವೆಲ್ಲಾ ಸಿಸೇರಿಯನ್ ಪ್ರಮಾಣ ಹೆಚ್ಚಾಗುತ್ತಿರಲು ಪ್ರಮುಖ ಕಾರಣಗಳು.

ನೀವು ನಾರ್ಮಲ್ ಡೆಲಿವರಿ ಬಯಸುವುದಾದರೆ ಕೆಲವೊಂದು ಚಟುವಟಿಕೆಗಳನ್ನು ಮಾಡುವುದು ಮತ್ತು ಜೀವನ ಶೈಲಿ ಅವಶ್ಯಕ. ಇಲ್ಲಿ ನಾವು ಕೆಲ ಟಿಪ್ಸ್ ನೀಡಿದ್ದೇವೆ. ಇವು ಅನಾರೋಗ್ಯ ಸ್ಥಿತಿಯನ್ನು ಹೊರತು ಪಡಿಸಿ, ಉಳಿದವರಿಗೆ ನಾರ್ಮಲ್ ಡೆಲಿವರಿಗೆ ಸಹಾಯ ಮಾಡುವುದು.

ಡಯಟ್

ಡಯಟ್

ಗರ್ಭಿಣಿಯರು ಡಯಟ್ ಬಗ್ಗೆ ತುಂಬಾ ಕೇರ್ ತೆಗೆದುಕೊಳ್ಳಬೇಕು, ಮೈ ತೂಕ ಹೆಚ್ಚಬಾರದು, ಆದರೆ ಪೋಷಕಾಂಶದ ಕೊರತೆ ಉಂಟಾಗಬಾರದು. ಆದ್ದರಿಂದ ಹಣ್ಣು-ಹಂಪಲುಗಳನ್ನು ಹೆಚ್ಚಾಗಿ ತಿನ್ನಬೇಕು. ಫಾಸ್ಟ್ ಫುಡ್ಸ್ ತಿನ್ನುವುದರಿಂದ ಯಾವುದೇ ಪೋಷಕಾಂಶ ದೊರೆಯುವುದಿಲ್ಲ. ಆದ್ದರಿಂದ ಅವುಗಳನ್ನು ಕಮ್ಮಿ ಮಾಡಿ ಆರೋಗ್ಯಕರ ಆಹಾರಗಳತ್ತ ಗಮನ ಕೊಡಿ.

ಪ್ರತೀದಿನ ಅರ್ಧ ಗಂಟೆ ನಡೆಯಿರಿ

ಪ್ರತೀದಿನ ಅರ್ಧ ಗಂಟೆ ನಡೆಯಿರಿ

ಗರ್ಭಿಣಿಯರು ಪ್ರತೀದಿನ ನಡೆಯುವ ವ್ಯಾಯಾಮ ಮಾಡಬೇಕು. ದಿನದಲ್ಲಿ ಅರ್ಧ ಗಂಟೆ ವ್ಯಾಯಾಮ ಮಾಡುವುದರಿಂದ ಮೈ ತೂಕ ಕೂಡ ಹೆಚ್ಚುವುದಿಲ್ಲ, ರಕ್ತ ಪರಿಚಲನೆ ಸರಿಯಾಗಿ ನಡೆಯುವುದು.

ತುಂಬಾ ಹೊತ್ತು ನಿಲ್ಲಬೇಡಿ

ತುಂಬಾ ಹೊತ್ತು ನಿಲ್ಲಬೇಡಿ

ಗರ್ಭಿಣಿಯರು ತುಂಬಾ ಹೊತ್ತು ನಿಂತು ಕೆಲಸ ಮಾಡುವುದು ಒಳ್ಳೆಯದಲ್ಲ. ನಾರ್ಮಲ್ ಡೆಲಿವರಿ ಬಯಸುವವರಿಗೆ ಇದು ಪ್ರಮುಖವಾದ ಟಿಪ್ಸ್.

 ಯೋಗ ಮತ್ತು ವ್ಯಾಯಾಮ

ಯೋಗ ಮತ್ತು ವ್ಯಾಯಾಮ

ಯೋಗ ನಿಮ್ಮ ದೇಹ flexible ಆಗಿರುವಂತೆ ಮಾಡುತ್ತದೆ. ನಾರ್ಮಲ್ ಡೆಲಿವರಿಗೆ ಸುಲಭವಾಗಿ ಬಾಗುವಂತಹ ಮೈ ನಿಮ್ಮದಾಗಿಸಿಕೊಳ್ಳುವುದು ಅವಶ್ಯಕ.

ಗರ್ಭಿಣಿಯರಿಗೆ ವಿಶೇಷ ಕ್ಲಾಸ್ (prenatal classes)

ಗರ್ಭಿಣಿಯರಿಗೆ ವಿಶೇಷ ಕ್ಲಾಸ್ (prenatal classes)

ಇಂತಹ ಕ್ಲಾಸ್ ಗಳಲ್ಲಿ ಗರ್ಭಿಣಿಯರಿಗೆ ಆಹಾರಕ್ರಮ, ವ್ಯಾಯಾಮದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುವುದು. ಸಾಧ್ಯವಾದರೆ ಇಂತಹ ಕ್ಲಾಸ್ ಗೆ ಹೋಗಿ, ಇದರಿಂದ ನಾರ್ಮಲ್ ಡೆಲಿವರಿಗೆ ಸಹಾಯಕವಾಗುವುದು.

ನೀರು ಚೆನ್ನಾಗಿ ಕುಡಿಯಿರಿ

ನೀರು ಚೆನ್ನಾಗಿ ಕುಡಿಯಿರಿ

ಗರ್ಭಾವಸ್ಥೆಯಲ್ಲಿ ಅಧಿಕ ನೀರು ಕುಡಿಯಿರಿ, ಹಣ್ಣುಗಳ ಜ್ಯೂಸ್ ಕುಡಿಯಿರಿ. ನೀರು ಚೆನ್ನಾಗಿ ಕುಡಿಯುವುದರಿಂದ ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಕಾಣಿಸುವ ಮಲಬದ್ಧತೆ ಸಮಸ್ಯೆ ತಡೆಯಲು ಅಧಿಕ ನೀರು ಕುಡಿಯಿರಿ.

ಚಟುವಟಿಕೆಯಿಂದ ಇರುವುದು

ಚಟುವಟಿಕೆಯಿಂದ ಇರುವುದು

ಹೆಚ್ಚಿನವರು ಗರ್ಭಿಣಿಯೆಂದು ತಿಳಿದ ತಕ್ಷಣ ಮೈ ಬಗ್ಗಿಸಿ ಏನೂ ಮಾಡದೇ ಆರಾಮವಾಗಿ ಇರುತ್ತಾರೆ. ಇದು ಒಳ್ಳೆಯದಲ್ಲ. ವೈದ್ಯರು ಬೆಡ್ ರೆಸ್ಟ್ ತಗೋಬೇಕು ಎಂದು ಹೇಳಿದ್ದರೆ ಮಾತ್ರ ವಿಶ್ರಾಂತಿ ತೆಗೆಯಿರಿ. ಇಲ್ಲದಿದ್ದರೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ, ನಡೆಯಿರಿ, ಬಗ್ಗಿ ನೆಲೆ ಒರೆಸುವುದು, ಮನೆ ಗುಡಿಸುವುದು ನಾರ್ಮಲ್ ಡೆಲಿವರಿಗೆ ತುಂಬಾ ಸಹಕಾರಿ.

ಅಧಿಕ ಭಾರ ಹೊರುವುದು ಮಾಡಬೇಡಿ.

ಮಾನಸಿಕ ಒತ್ತಡ ಒಳ್ಳೆಯದಲ್ಲ

ಮಾನಸಿಕ ಒತ್ತಡ ಒಳ್ಳೆಯದಲ್ಲ

ಗರ್ಭಿಣಿಯರು ಮಾನಸಿಕ ಒತ್ತಡಕ್ಕೆ ಒಳಗಾಗಬಾರದು. ತುಂಬಾ ಮಾನಸಿಕ ಒತ್ತಡ ಅಕಾಲಿಕ ಹೆರಿಗೆಗೆ ಕಾರಣವಾಗುತ್ತದೆ.

ಗಾಜಿನ ಬಳೆಗಳನ್ನು ಧರಿಸಿ

ಗಾಜಿನ ಬಳೆಗಳನ್ನು ಧರಿಸಿ

ಗಾಜಿನ ಬಳೆ ಧರಿಸಿದರೆ ನಾರ್ಮಲ್ ಡೆಲಿವರಿವಾಗುವುದೆಂದು ಪರಿಣಿತರು ಕೂಡ ಹೇಳುತ್ತಾರೆ. ಅದನ್ನು ಧರಿಸಿದಾಗ ಅದು ಉಂಟು ಮಾಡುವ ಹಿತಕರವಾದ ಶಬ್ದ ಮಗುವ ಚಲನೆಗೆ ಸಹಕಾರಿಯಂತೆ. ಅಲ್ಲದೆ ನರಗಳ ಸೆಳೆತ ಕಡಿಮೆ ಮಾಡುವಲ್ಲಿಯೂ ಈ ಬಳೆಗಳು ಸಹಕಾರಿಯಂತೆ!

ಸಂಬಾರ ಪದಾರ್ಥಗಳನ್ನು ಬಳಸಿ

ಸಂಬಾರ ಪದಾರ್ಥಗಳನ್ನು ಬಳಸಿ

ಎಲ್ಲಾ ಬಗೆಯ ಸಂಬಾರ ಪದಾರ್ಥಗಳನ್ನು ಹಿತಮಿತವಾಗಿ ಬಳಸುವುದು ಒಳ್ಳೆಯದು. ಇದು ದೇಹವನ್ನು ಬೆಚ್ಚಗಾಗಿಸುವುದರ ಜೊತೆಗೆ ನಾರ್ಮಲ್ ಡೆಲಿವರಿಗೆ ಸಹಕಾರಿ.

ಹಗಲಿನಲ್ಲಿ ನಿದ್ದೆ ಮಾಡಬೇಡಿ

ಹಗಲಿನಲ್ಲಿ ನಿದ್ದೆ ಮಾಡಬೇಡಿ

ಕೆಲವರು ಹಗಲಿನಲ್ಲಿ ತುಂಬಾ ನಿದ್ದೆ ಮಾಡುತ್ತಾರೆ. ಹಗಲಿನಲ್ಲಿ ನಿದ್ದೆ ಮಾಡುವುದು ನಾರ್ಮಲ್ ಡೆಲಿವರಿಗೆ ಪೂರಕವಲ್ಲ.

lido pizza

lido pizza

ವಾಷಿಂಗ್ಟನ್ ನಲ್ಲಿ ಒಂದು ನಂಬಿಕೆ ಇದೆ. lido pizza ತಿಂದರೆ ನಾರ್ಮಲ್ ಡೆಲಿವರಿಯಾಗುವುದು ಮತ್ತು ಯಾವುದೇ ಸೈಡ್ ಎಫೆಕ್ಟ್ ಇಲ್ಲವೆಂದು. ಪಿಜ್ಜಾ ಪ್ರಿಯರಿಗೆ ಇದಕ್ಕಿಂತ ಮತ್ತೇನು ಬೇಕು ಅಲ್ವಾ?

English summary

Healthy Pregnancy Tips For Normal Delivery

There are only certain medical cases where it is important to have a C section operation. Otherwise, normal delivery is possible. Lets take a look at some of the healthy pregnancy tips for normal delivery.
X
Desktop Bottom Promotion