For Quick Alerts
ALLOW NOTIFICATIONS  
For Daily Alerts

ಮಕ್ಕಳ ಬೆಳವಣಿಗೆಗೆ ಅವಶ್ಯಕವಾದ ವಿಟಮಿನ್ಸ್

|

ಎಲ್ಲಾ ಪೋಷಕರು ತಮ್ಮ ಮಕ್ಕಳ ಬೆಳವಣಿಗೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ, ಕೆಲವರಂತೂ ಅವಶ್ಯಕತೆಗಿಂತ ಅಧಿಕವೇ ಕಾಳಜಿ ವಹಿಸುತ್ತಾರೆ. ಮಗುವಿಗೆ ಬೆಳವಣಿಗೆಗೆ ಸಹಾಯ ಮಾಡುವುದೆಂದು ಜಾಹೀರಾತುಗಳಲ್ಲಿ ತೋರಿಸುವ ಎಲ್ಲಾ ದುಬಾರಿ ಪ್ರೊಟೀನ್ ಪೌಡರ್ ಗಳನ್ನು ತಂದು ಕೊಡುತ್ತಾರೆ.

ಮಗುವಿನ ಬೆಳವಣಿಗೆಗೆ ಪ್ರೊಟೀನ್ ಮತ್ತು ಪೌಷ್ಟಿಕಾಂಶಗಳು ಅವಶ್ಯಕ ನಿಜ, ಹಾಗಂತ ದುಬಾರಿ ಬೆಲೆಕೊಟ್ಟು ಪ್ರೊಟೀನ್ ಪೌಡರ್ ಗಳನ್ನು ತಂದು ಕೊಡುವುದರಿಂದ ಅವರಿಗೆ ಅವಶ್ಯಕವಾದ ಪೋಷಕಾಂಶಗಳು ದೊರೆಯುವುದಿಲ್ಲ. ಅವರ ಬೆಳವಣಿಗೆಗೆ ಸಹಾಯ ಮಾಡುವುದೆಂದರೆ ಆಹಾರಕ್ರಮ. ಅದೇ ತಿನ್ನಲು ಕುರುಕಲು ತಿಂಡಿಗಳನ್ನು, ಚಿಪ್ಸ್ ನೀಡುತ್ತಾ, ಅವರು ಫಾಸ್ಟ್ ಫುಡ್ ಇಷ್ಟಪಡುತ್ತಾರೆಂದು ಅವರಿಗೆ ಅವರು ಇಷ್ಟಪಟ್ಟ ಆಹಾರವನ್ನು ಕೊಡುತ್ತಿದ್ದು, ಬೆಳವಣಿಗೆಗೆ ಪ್ರೊಟೀನ್ ಪೌಡರ್ ಸಾಕೆಂದು ನೀವು ಭಾವಿಸುವುದಾದರೆ ನಿಮ್ಮ ಭಾವನೆ ತಪ್ಪು.

ಮಗುವಿನ ಬೆಳವಣಿಗೆಗೆ ಈ ಕೆಳಗಿನ ವಿಟಮಿನ್ಸ್ ಅವಶ್ಯಕವಾಗಿದ್ದು, ಈ ವಿಟಮಿನ್ಸ್ ಇರುವ ಆಹಾರ ನಿಮ್ಮ ಮಗುವಿನ ಹೊಟ್ಟೆ ಸೇರುವಂತೆ ಮಾಡುವ ಜವಾಬ್ದಾರಿ ನಿಮ್ಮದು.

ವಿಟಮಿನ್ ಎ

ವಿಟಮಿನ್ ಎ

ನಿಮ್ಮ ಮಗುವಿನ ಬೆಳವಣಿಗೆಗೆ ವಿಟಮಿನ್ ಎ ಅವಶ್ಯಕ. ವಿಟಮಿನ್ ಎ ಇರುವ ಆಹಾರಗಳು ನಿಮ್ಮ ಮಗುವಿನಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ. ಕ್ಯಾರೆಟ್, ಬೀಟ್ ರೂಟ್, ಲೆಟ್ಯೂಸೆಗಳಲ್ಲಿ ವಿಟಮಿನ್ ಎ ಅಧಿಕವಿರುತ್ತದೆ.

ವಿಟಮಿನ್ ಬಿ

ವಿಟಮಿನ್ ಬಿ

ಮಕ್ಕಳ ಬೆಳವಣಿಗೆಗೆ ಅತೀ ಅವಶ್ಯವಾದ ಪೋಷಕಾಂಶವೆಂದರೆ ವಿಟಮಿನ್ ಬಿ. ವಿಟಮಿನ್ ಬಿ ಕೊರತೆ ಉಂಟಾದರೆ ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಕುಂಠಿತವಾಗುವುದು.

ವಿಟಮಿನ್ ಬಿ1

ವಿಟಮಿನ್ ಬಿ1

ಮಕ್ಕಳು ಎತ್ತರವಾಗಿ ಬೆಳೆಯಲು ವಿಟಮಿನ್ ಬಿ1 ಅವಶ್ಯಕ. ಮೀನು, ನಟ್ಸ್ ನಲ್ಲಿ ವಿಟಮಿನ್ ಬಿ1 ಹೇರಳವಾಗಿದೆ.

ವಿಟಮಿನ್ ಬಿ2

ವಿಟಮಿನ್ ಬಿ2

ವಿಟಮಿನ್ ಬಿ2 ಮಕ್ಕಳ ಮೂಳೆಗಳ ಬೆಳವಣಿಗೆಗೆ, ಉಗುರುಗಳು ಬಲವಾಗಲು, ಕೂದಲಿ ಮತ್ತು ತ್ವಚೆಯ ಆರೋಗ್ಯಕ್ಕೆ ಅವಶ್ಯಕ. ಹಸಿರು ತರಕಾರಿಗಳಲ್ಲಿ ಮತ್ತು ಸೊಪ್ಪಿನಲ್ಲಿ ಈ ಪೋಷಕಾಂಶವಿರುತ್ತದೆ.

ವಿಟಮಿನ್ ಬಿ5

ವಿಟಮಿನ್ ಬಿ5

ವಿಟಮಿನ್ ಬಿ5 ಮಕ್ಕಳ ದೇಹದಲ್ಲಿ ಹಾರ್ಮೋನ್ ಗಳನ್ನು ಸಮತೋಲನದಲ್ಲಿಡುವ ಕೆಲಸವನ್ನು ಮಾಡುತ್ತದೆ.

ಚೀಸ್, ಲಿವರ್, ಅಣಬೆ, ಅವಕಾಡೊ ಈ ರೀತಿಯ ಆಹಾರಗಳಲ್ಲಿ ಈ ವಿಟಮಿನ್ ಇದೆ.

ವಿಟಮಿನ್ ಬಿ 12

ವಿಟಮಿನ್ ಬಿ 12

ವಿಟಮಿನ್ ಬಿ12 ಮಕ್ಕಳ ಬೆಳವಣಿಗೆಗೆ ಅವಶ್ಯಕ. ಕುಂಬಳಕಾಯಿ ಬೀಜ, ಅಗಸೆದ ಬೀಜ, ವಾಲ್ ನಟ್ಸ್ , ಮೊಟ್ಟೆ, ಸಮುದ್ರಾಹಾರಗಳಲ್ಲಿ ವಿಟಮಿನ್ ಬಿ12 ಅಂಶವಿದೆ.

ವಿಟಮಿನ್ ಸಿ

ವಿಟಮಿನ್ ಸಿ

ಹೆಚ್ಚಿನವರು ಶೀತವಾಗುತ್ತದೆಯೆಂದು ಕಿತ್ತಳೆ, ಮೂಸಂಬಿ ಈ ರೀತಿಯ ಸಿಟ್ರಸ್ ಹಣ್ಣುಗಳನ್ನು ಕೊಡುವುದಿಲ್ಲ. ಆದರೆ ಸಿಟ್ರಸ್ ಅಂಶವಿರುವ ಹಣ್ಣುಗಳು ದೇಹಕ್ಕೆ ರೋಗಾಣುಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ತುಂಬುವುದು.

ವಿಟಮಿನ್ ಡಿ

ವಿಟಮಿನ್ ಡಿ

ವಿಟಮಿನ್ ಡಿ ಸೂರ್ಯನ ಕಿರಣಗಳಲ್ಲಿರುತ್ತದೆ. ಅದಲ್ಲದೆ ವಿಟಮಿನ್ ಡಿ ಇರುವ ಆಹಾರಗಳೆಂದರೆ ಅಣಬೆ, ಮೀನು, ಲಿವರ್.

ವಿಟಮಿನ್ ಇ

ವಿಟಮಿನ್ ಇ

ಮಕ್ಕಳ ತ್ಚಚೆ ರಕ್ಷಣೆ ಮಾಡುವಲ್ಲಿ ವಿಟಮಿನ್ ಇ ತುಂಬಾ ಪರಿಣಾಮಕಾರಿ.

ಕ್ಯಾಲ್ಸಿಯಂ

ಕ್ಯಾಲ್ಸಿಯಂ

ಪ್ರತೀದಿನ ಎರಡು ಲೋಟ ಹಾಲು ಕುಡಿದರೆ ಮಕ್ಕಳಲ್ಲಿ ಕ್ಯಾಲ್ಸಿಯಂ ಕೊರತೆ ಕಂಡು ಬರುವುದಿಲ್ಲ, ಮಕ್ಕಳ ಮೂಳೆಗಳು ಕೂಡ ಬಲವಾಗುತ್ತವೆ.

English summary

Growth Enhancer Vitamins That Kids Need

As a parent, it is your responsibility to see to it that your child gets all these vitamins through their diet. This is because there is no replacement from natural nutrients. However, if your kid is particularly fussy about food, consider some multi-vitamin replacements.
X
Desktop Bottom Promotion